AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka 2nd PU Board Exam 2023: ಕೆಲವೇ ವಾರಗಳಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ; ನೀವು ಈ ರೀತಿ ಓದಿದರೆ ಒಳ್ಳೆ ಅಂಕ ಗ್ಯಾರಂಟಿ!

ಕೆಲವು ಅಣಕು ಪರೀಕ್ಷಾ ಪ್ರತ್ರಿಕೆಯನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿ. ಹಲವು ಬಾರಿ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ನೋಡಿ ಗಾಬರಿಗೊಂಡು ಉತ್ತರಗಳು ಮರೆತು ಹೋಗುವ ಸಾಧ್ಯತೆಗಳಿವೆ. ಅಣಕು ಪರೀಕ್ಷೆ ನಿಮಗೆ ಧೈರ್ಯವನ್ನು ನೀಡುತ್ತದೆ.

Karnataka 2nd PU Board Exam 2023: ಕೆಲವೇ ವಾರಗಳಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ; ನೀವು ಈ ರೀತಿ ಓದಿದರೆ ಒಳ್ಳೆ ಅಂಕ ಗ್ಯಾರಂಟಿ!
ದ್ವೀತಿಯ ಪಿಯುಸಿ ಪರೀಕ್ಷೆಗೆ ಸಲಹೆಗಳುImage Credit source: DNA India
TV9 Web
| Edited By: |

Updated on: Feb 08, 2023 | 5:34 PM

Share

ಬೋರ್ಡ್ ಪರೀಕ್ಷೆಗೆ ತಯಾರಾಗಲು ನೀವು ಕೆಲವು ವಿಷಯಗಳನ್ನು ಕಾಲೇಜಿನಲ್ಲಿ ಪಾಠ ಮಾಡುವಾಗ ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು. ಆದರೆ ನಿಮಗೆ ಯಾವ ವಿಷಯದ ಬಗ್ಗೆಯೂ ಏನು ತಿಳಿಯದಾದಲ್ಲಿ ಮತ್ತು ಸಮಯವು ಕೇವಲ ಒಂದು ತಿಂಗಳು ಅಥವಾ 3 ವಾರಗಳು ಮಾತ್ರ ಲಭ್ಯವಿದ್ದಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕ ಪಡೆಯುವುದು ಕಷ್ಟ. ಆದರೆ ಕೆಲವೊಂದು ಓದುವ ವಿಧಾನವನ್ನು ಅಳವಡಿಸಿಕೊಂಡರೆ ನೀವು ಉತ್ತೀರ್ಣರಾಗಬಹುದು. ನೀವು ಉತ್ತೀರ್ಣರಾಗಬೇಕಾದರೆ ಅಥವಾ ಸುಮಾರು 60-70 ಅಂಕಗಳನ್ನು ಗಳಿಸಬೇಕಾದರೆ ಈ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿ

  1. ನಿಮ್ಮ ಸಂಪೂರ್ಣ ಸಿಲೆಬಸ್’ನಲ್ಲಿ ಮುಖ್ಯವಾದ ಭಾಗಗಳ ಮೇಲೆ ಮಾತ್ರ ಗಮನ ಹರಿಸಿ. ಅನಗತ್ಯ ಭಾಗಗಳ ಮೇಲೆ ಸಮಯ ಹಾಳು ಮಾಡಬೇಡಿ.
  2. ಮೊದಲಿಗೆ ಸಣ್ಣ ಸಣ್ಣ ಅಧ್ಯಾಯಗಳನ್ನು ಓದಿ ಮುಗಿಸಿ. ಒಂದು ಅಧ್ಯಾಯಕ್ಕೆ ಇಷ್ಟು ಹೊತ್ತು ಎಂದು ನಿಗದಿ ಪಡಿಸಿಕೊಳ್ಳಿ.

ಉದಾಹರಣೆಗೆದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ

ಎಲೆಕ್ಟ್ರೋಕೆಮಿಸ್ಟ್ರಿ

ಸೊಲ್ಯೂಷನ್

ಕೆಮಿಕಲ್ ಕೈನೆಟಿಕ್

ಪಿಬ್ಲಾಕ್

ಡಿ ಮತ್ತು ಎಫ್ ಬ್ಲಾಕ್

ಕಾರ್ಡಿನೇಷನ್

ಆಲ್ಕೋಹಾಲ್, ಫೀನಾಲ್ ಮತ್ತು ಈಥರ್

ಆಲ್ಡಿಹೈಡ್ಸ್, ಕೀಟೋನ್‌ಗಳು ಮತ್ತು ಕಾರ್ಬಾಕ್ಸಿಲಿಕ್ ಆಸಿಡ್

ಅಮೈನ್ಸ್

ಇದಿಷ್ಟು ಅಧ್ಯಾಯಗಳನ್ನು ನೀವು ಸಂಪೂರ್ಣವಾಗಿ ಓದಿ ಮುಗಿಸಿದರೆ ಲಿಖಿತ ಪರೀಕ್ಷೆಯಲ್ಲಿ ನಿಮಗೆ 70 ರಲ್ಲಿ 50-60 ಅಂಕಗಳನ್ನು ಗಳಿಸಲು ಸಾಧ್ಯವಿದೆ.

ಇದನ್ನೂ ಓದಿ: ಫೆ. 15ರಿಂದ ಸಿಬಿಎಸ್​ಇ ಪರೀಕ್ಷೆಗಳು; ಅಡ್ಮಿಶನ್ ಕಾರ್ಡ್ ಬಿಡುಗಡೆ

  1. ಹಿಂದಿನ ವರ್ಷದ ಪ್ರಶ್ನೆಗಳನ್ನು ಅಭ್ಯಾಸ ಮಾಡಲು ಮರೆಯದಿರಿ, ಇವುಗಳಲ್ಲಿ ಪುನರಾವರ್ತಿಸಿದ ಪ್ರಶ್ನೆಗಳ ಮೇಲೆ ಗಮನ ಹರಿಸಿ.
  2. ಕೆಲವು ಅಣಕು ಪರೀಕ್ಷಾ ಪ್ರತ್ರಿಕೆಯನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿ. ಹಲವು ಬಾರಿ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ನೋಡಿ ಗಾಬರಿಗೊಂಡು ಉತ್ತರಗಳು ಮರೆತು ಹೋಗುವ ಸಾಧ್ಯತೆಗಳಿವೆ. ಅಣಕು ಪರೀಕ್ಷೆ ನಿಮಗೆ ಧೈರ್ಯವನ್ನು ನೀಡುತ್ತದೆ.
  3. ಟಾಪರ್‌ಗಳು ಅಥವಾ ಕಡಿಮೆ ಅಂಕಗಳಿಸುವವರೊಡನೆ ಮಾತನಾಡಬೇಡಿ, ನಿಮ್ಮಷ್ಟೇ ಅಂಕಗಳನ್ನು ಸ್ಕೋರ್ ಮಾಡುವವರ ಜೊತೆ ಮಾತನಾಡಿ ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ. ಟಾಪರ್ ಅಥವಾ ಕಡಿಮೆ ಅಂಕಗಳಿಸುವವರು ಓದುವ ರೀತಿ ಬೇರೆಯಾಗಿರಬಹುದು ಇದರಿಂದ ನಿಮ್ಮ ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಒಂದೇ ಮನಸ್ಕರ ಬಳಿ ಚರ್ಚಿಸಿ.
  4. ಅನಗತ್ಯ ಚರ್ಚೆ ಮತ್ತು ಕಾಲಹರಣ ಮಾಡುವುದನ್ನು ಇಂದೇ ಬಿಟ್ಟುಬಿಡಿ, ಹೆಚ್ಚಿನ ಅಧ್ಯಯನಕ್ಕೆ ಗಮನ ಕೊಡಿ.
  5. ನಿಮ್ಮ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಯನ್ನು ಬಿಡಬೇಡಿ ಎಲ್ಲವನ್ನೂ ಉತ್ತರಿಸಲು ಪ್ರಯತ್ನಿಸಿ. ಮುಖ್ಯವಾಗಿ ಮೊದಲು ನಿಮಗೆ ತಿಳಿದಿರುವ ಸುಲಭ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಕಷ್ಟದ ಪ್ರಶ್ನೆಗಳತ್ತ ನೋಡಿ.
  6. ಕೊನೆಯದಾಗಿ, ಒತ್ತಡವಿರುವುದು ಸಾಮಾನ್ಯ, ಗಾಬರಿಯಾಗಬೇಡಿ, ಓದಿದ್ದನ್ನೇ ಪುನಃ ಪುನಃ ಓದಿ, ಅತಿಯಾಗಿ ಯೋಚಿಸಬೇಡಿ, ಎಲ್ಲವೂ ನಿಮ್ಮ ಕೈಯಲ್ಲಿಯೇ ಇದೆ. ನೆನಪಿರುವ ಉತ್ತರಗಳನ್ನು ಬರೆಯುತ್ತಾ ಹೋದ ಹಾಗೆ ಉಳಿದ ಉತ್ತರಗಳೂ ನೆನಪಾಗುತ್ತದೆ. ಉತ್ತರಗಳು ನೆನಪಾಗದಿದ್ದರೆ ಕಾಲಹರಣ ಮಾಡದೆ ಮುಂದಿನ ಪ್ರಶ್ನೆಗೆ ಹೋಗಿ, ಕೊನೆಯಲ್ಲಿ ಉಳಿದ ಪ್ರಶ್ನೆಗೆ ಉತ್ತರಿಸಬಹುದು.
  7. ದೇವರನ್ನು ಪ್ರಾರ್ಥಿಸಿ ಮತ್ತು ನಿಮ್ಮ ಶಕ್ತಿ ಮೀರಿ ಉತ್ತರಗಳನ್ನು ಬರೆಯಲು ಪ್ರಯತ್ನಿಸಿ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!