AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CBSE Exams: ಫೆ. 15ರಿಂದ ಸಿಬಿಎಸ್​ಇ ಪರೀಕ್ಷೆಗಳು; ಅಡ್ಮಿಶನ್ ಕಾರ್ಡ್ ಬಿಡುಗಡೆ

Admit Card Released For CBSE Examinations- ಸಿಬಿಎಸ್​ಇಯ ಅಧಿಕೃತ ವೆಬ್​ಸೈಟ್​ಗಳಾದ cbse.nic.in ಮತ್ತು cbse.gov.in ನಿಂದ ಹಾಲ್ ಟಿಕೆಟ್​ಗಳನ್ನು ಡೌನ್​ಲೋಡ್ ಮಾಡಬಹುದಾಗಿದೆ.

CBSE Exams: ಫೆ. 15ರಿಂದ ಸಿಬಿಎಸ್​ಇ ಪರೀಕ್ಷೆಗಳು; ಅಡ್ಮಿಶನ್ ಕಾರ್ಡ್ ಬಿಡುಗಡೆ
ವಿದ್ಯಾರ್ಥಿಗಳ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 08, 2023 | 10:37 AM

Share

ನವದೆಹಲಿ: ಪ್ರಸಕ್ತ ವರ್ಷದ ಸಿಬಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಪ್ರವೇಶ ಪತ್ರಗಳನ್ನು (Admit Card: ಹಾಲ್ ಟಿಕೆಟ್, ಅಡ್ಮಿಟ್ ಕಾರ್ಡ್) ಬಿಡುಗಡೆ ಮಾಡಲಾಗಿದೆ. ಸಿಬಿಎಸ್​ಇಯ ಅಧಿಕೃತ ವೆಬ್​ಸೈಟ್​ಗಳಾದ cbse.nic.in ಮತ್ತು cbse.gov.in ನಿಂದ ಹಾಲ್ ಟಿಕೆಟ್​ಗಳನ್ನು ಡೌನ್​ಲೋಡ್ (CBSE Exam hall ticket download) ಮಾಡಬಹುದಾಗಿದೆ. ಸಿಬಿಎಸ್​ಇಗೆ ಜೋಡಿತವಾಗಿರುವ ಶಾಲೆಗಳಿಗೆ ಮಾತ್ರ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್​ಗಳನ್ನು ಶಾಲೆಗಳಿಗೆ ಹೋಗಿಯೇ ಪಡೆದುಕೊಳ್ಳಬೇಕಾಗುತ್ತದೆ.

ಸಿಬಿಎಸ್​ಇ ಜಾಲತಾಣಗಳಲ್ಲಿ ಡೌನ್​ಲೋಡ್ ಮಾಡಿಕೊಳ್ಳಲಾಗುವ ಹಾಲ್ ಟಿಕೆಟ್​ಗಳಲ್ಲಿ ಅಭ್ಯರ್ಥಿಗಳ ಹೆಸರು, ತಂದೆ ತಾಯಿ ಹೆಸರು, ರೋಲ್ ನಂಬರ್, ಜನ್ಮ ದಿನಾಂಕ, ಪರೀಕ್ಷಾ ವಿಷಯ, ಪರೀಕ್ಷಾ ಕೇಂದ್ರದ ಹೆಸರು, ಅಡ್ಮಿಟ್ ಕಾರ್ಡ್ ಐಡಿ ಇತ್ಯಾದಿ ಮಾಹಿತಿ ಇರುತ್ತದೆ ಎಂದು ಅಧಿಕೃತ ಮಾಹಿತಿ ಇದೆ.

ಪರೀಕ್ಷಾ ವೇಳಾಪಟ್ಟಿ

ಸಿಬಿಎಸ್​ಇ ಮಂಡಳಿಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಫೆಬ್ರುವರಿ 15ರಂದು ಆರಂಭವಾಗುತ್ತವೆ. ಈಗಾಗಲೇ ಪ್ರಾಕ್ಟಿಕಲ್, ಪ್ರಾಜೆಕ್ಟ್, ಇಂಟರ್ನಲ್ ಅಸೆಸ್ಮೆಂಟ್​ಗಳು ಜನವರಿ 2ರಿಂದಲೇ ನಡೆಯುತ್ತಿದ್ದು, ಫೆಬ್ರುವರಿ 14ಕ್ಕೆ ಮುಗಿಯುತ್ತವೆ. ಮರುದಿನ ಪರೀಕ್ಷೆಗಳು ಆರಂಭವಾಗುತ್ತವೆ. 10ನೇ ತರಗತಿ ಪರೀಕ್ಷೆ ಮಾರ್ಚ್ 21ರಂದು ಮುಗಿಯಲಿದೆ. 12ನೇ ತರಗತಿ ಪರೀಕ್ಷೆ ಏಪ್ರಿಲ್ 5ರವರೆಗೂ ನಡೆಯುತ್ತದೆ.

ಇದನ್ನೂ ಓದಿ: NEET PG 2023 Fake Notice: ನಿಮಗೂ ಬಂದಿದೆಯಾ ನೀಟ್ ಪಿಜಿ 2023 ಪರೀಕ್ಷೆ ಮುಂದೂಡಿಕೆ ನೋಟೀಸ್? ಇದು ಫೇಕ್ ಇರದಹು ಎಚ್ಚರ!

ಇನ್ನು, ವೇಳಾಪಟ್ಟಿ ಪ್ರಕಾರ 10 ಮತ್ತು 12ನೇ ತರಗತಿ ಪರೀಕ್ಷೆಗಳು ಬೆಳಗ್ಗೆ 10:30ಕ್ಕೆ ಆರಂಭಗೊಂಡು ಮಧ್ಯಾಹ್ನ 1:30ಕ್ಕೆ ಮುಗಿಯುತ್ತದೆ. ಕೆಲ ಪರೀಕ್ಷೆಗಳು 12:30ಕ್ಕೆ ಮುಗಿಯುತ್ತವೆ.

ಸಿಬಿಎಸ್​ಇ ಅಡ್ಮಿಟ್ ಕಾರ್ಡ್ ಡೌನ್​ಲೋಡ್ ಮಾಡುವುದು ಹೀಗೆ:

* ಸಿಬಿಎಸ್​ಇ ಅಧಿಕೃತ ವೆಬ್​ಸೈಟ್ cbse.nic.in ಪ್ರವೇಶಿಸಿ

* ಮುಖ್ಯಪುಟದಲ್ಲಿ ನೀಡಲಾಗಿರುವ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ

* ರೋಲ್ ನಂಬರ್, ಜನ್ಮದಿನಾಂಕ ಇತ್ಯಾದಿ ವಿವರವನ್ನು ತುಂಬಿ ಸಬ್ಮಿಟ್ ಕ್ಲಿಕ್ ಮಾಡಿ

* ನಂತರ ಸಿಗುವ ಅಡ್ಮಿಟ್ ಕಾರ್ಡನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

Published On - 10:37 am, Wed, 8 February 23

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ