JEE Mains Result 2023: ಜೆಇಇ ಮೇನ್ 2023 ಸೆಶನ್ 1 ಫಲಿತಾಂಶ ಪ್ರಕಟ
ಜೆಇಇ ಮೇನ್ಸ್ ರಿಸಲ್ಟ್ 2023: ಎನ್'ಟಿಎ (NTA) ವರದಿ ಪ್ರಕಾರ, ಪೇಪರ್ 1 ಗಾಗಿ 8.6 ಲಕ್ಷ ಅರ್ಜಿದಾರರಲ್ಲಿ, ಒಟ್ಟು 8.22 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದು 95.79 ಶೇಕಡಾ ಹಾಜರಾತಿಯಾಗಿದೆ. ಏನ್'ಟಿಎ ಪರೀಕ್ಷೆಗಳನ್ನು ನಡೆಸಲು ಆರಂಭಿಸಿದಾಗಿನಿಂದ ಇದು ಜೆಇಇ ಮೇನ್ ಪೇಪರ್ 1 ಕ್ಕೆ ಅತ್ಯಧಿಕ ಹಾಜರಾತಿಯಾಗಿದೆ ಎಂದು ಎನ್'ಟಿಎ ವರದಿ ತಿಳಿಸಿದೆ.
ಎನ್’ಟಿಎ (National Testing Agency) 2023 ರ ಜನವರಿ–ಫೆಬ್ರವರಿ ತಿಂಗಳಲ್ಲಿ ನಡೆದ ಜೆಇಇ ಮೇನ್ 2023 ಸೆಶನ್ 1 ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಪೇಪರ್ 1 ಬಿಇ / ಬಿ.ಟೆಕ್ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಇದೀಗ jeemain.nta.nic.in ಅಧಿಕೃತ ವೆಬ್ಸೈಟ್‘ನಲ್ಲಿ ನೋಡಬಹುದು.
ಜೆಇಇ ಮೇನ್ 2023 ಪೇಪರ್ 1 ಫಲಿತಾಂಶ ನೋಡುವುದು:
- jeemain.nta.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಹೋಂ ಪೇಜ್‘ನಲ್ಲಿರುವ ಜೆಇಇ ಮೇನ್ (2023): ಪೇಪರ್ 1 – ಬಿ.ಇ. / ಬಿ.ಟೆಕ್ ಆಯ್ಕೆಯನ್ನು ಕ್ಲಿಕ್ ಮಾಡಿ
- ಇಲ್ಲಿ ಏನ್ ಟಿಎ (NTA) ಎರಡು ಲಿಂಕ್‘ಗಳನ್ನು ನೀಡಿದೆ
- ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಸೆಕ್ಯೂರಿಟಿ ಪಿನ್ ತುಂಬಿ
- ಸಬ್ಮಿಟ್ ಒಪ್ಶನ್ ಒತ್ತಿ
- ನಿಮ್ಮ ಜೆಇಇ ಮೇನ್ 2023 ಪೇಪರ್ 1 ಫಲಿತಾಂಶ ನೋಡಲು ಸಿಗುತ್ತದೆ.
- ನಂತರ ಫಲಿತಾಂಶವನ್ನು ಡೌನ್ಲೋಡ್ ಮಾಡಿ
ಎನ್’ಟಿಎ (NTA) ವರದಿ ಪ್ರಕಾರ, ಪೇಪರ್ 1 ಗಾಗಿ 8.6 ಲಕ್ಷ ಅರ್ಜಿದಾರರಲ್ಲಿ, ಒಟ್ಟು 8.22 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದು 95.79 ಶೇಕಡಾ ಹಾಜರಾತಿಯಾಗಿದೆ. ಏನ್’ಟಿಎ ಪರೀಕ್ಷೆಗಳನ್ನು ನಡೆಸಲು ಆರಂಭಿಸಿದಾಗಿನಿಂದ ಇದು ಜೆಇಇ ಮೇನ್ ಪೇಪರ್ 1 ಕ್ಕೆ ಅತ್ಯಧಿಕ ಹಾಜರಾತಿಯಾಗಿದೆ ಎಂದು ಎನ್’ಟಿಎ ವರದಿ ತಿಳಿಸಿದೆ. ಜೆಇಇ ಮೇನ್ ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಹೀಗೆ 13 ಭಾಷೆಗಳಲ್ಲಿ ನಡೆಸಲಾಗುತ್ತದೆ.
ಇದನ್ನೂ ಓದಿ: ಸಿಎ ಫೌಂಡೇಶನ್ ಡಿಸೆಂಬರ್ 2022 ಪರೀಕ್ಷೆಯ ಫಲಿತಾಂಶ ಪ್ರಕಟ
ಜೆಇಇ (ಮೇನ್) 2023 ರ ಮಾಹಿತಿ ಬುಲೆಟಿನ್ ಪ್ರಕಾರ ಆಲ್ ಇಂಡಿಯಾ ರಾಂಕಿಂಗ್ ಆಧರಿಸಿ ಎನ್‘ಐಟಿ, ಐಐಐಟಿ, ಸಿಎಫ್‘ಟಿ ಗಳಲ್ಲಿ ಬಿಇ/ಬಿಟೆಕ್/ ಬಿಆರ್ಚ್/ಬಿಪ್ಲಾನಿಂಗ್ ಕೋರ್ಸ್‘ಗಳ ಸೀಟ್ ಹಂಚಿಕೆ ಮಾಡುವಾಗುತ್ತದೆ. ಇದರ ಜೊತೆಗೆ ಅಭ್ಯರ್ಥಿಗಳು 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 75 ಶೇ. ಫಲಿತಾಂಶ ಹೊಂದಿರುವುದನ್ನು ಹೆಚ್ಚುವರಿ ಅರ್ಹತೆ ಪಟ್ಟಿಗೆ ಸೇರಿಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ 65 ಶೇ. ಫಲಿತಾಂಶ ಹೊಂದಿರತಕ್ಕದ್ದು. ಆದರೆ 2020, 2021 ಮತ್ತು 2022 ಪ್ಯಾಂಡೆಮಿಕ್ ಸಮಯದಲ್ಲಿ ಈ ಅರ್ಹತಾ ಮಾನದಂಡಗಳನ್ನು ತಡೆಹಿಡಿಯಲಾಗಿತ್ತು.
ಇದೀಗ ಜೆಇಇ ಮೇನ್ ಪರೀಕ್ಷೆಯ ಸೆಷನ್ 2 ರ ನೋಂದಣಿ ಪ್ರಾರಂಭವಾಗಿದೆ. ಸೆಷನ್ 2 ಪರೀಕ್ಷೆಗಳು 6-12 ಏಪ್ರಿಲ್ 2023 ರಿಂದ ನಡೆಯಲಿದೆ.