ಸಿಬಿಎಸ್ಇ (CBSE) 10ನೇ ತರಗತಿಯ ಫಲಿತಾಂಶವನ್ನು cbseresults.nic.in ಮತ್ತು cbse.gov.in ನಲ್ಲಿ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಮಂಡಳಿಯು ಟರ್ಮ್ 1 ಮತ್ತು ಟರ್ಮ್ 2 ಪರೀಕ್ಷೆಗಳ ಒಟ್ಟು ಅಂಕಗಳನ್ನು ಸಂಯೋಜಿಸಿ, ಒಂದೇ ಮಾರ್ಕ್ಸ್ ಶೀಟ್ ಅನ್ನು ನೀಡುತ್ತಿದೆ ಎಂದು CBSE ಅಧಿಕಾರಿಗಳು ತಿಳಿಸಿದ್ದಾರೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, CBSE ನಡೆಸಿದ 2022ನೇ ಶೈಕ್ಷಣಿಕ ವರ್ಷದ 10ನೇ ತರಗತಿ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ತಾಜಾ ಅಪ್‌ಡೇಟ್ ಪ್ರಕಾರ, CBSE 10 ನೇ ತರಗತಿಯ ಫಲಿತಾಂಶದ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಅಂತಿಮ ಸಂಕಲನಕ್ಕಾಗಿ ಅಂಕಗಳನ್ನು ಕಳುಹಿಸಲಾಗಿದೆ. ಫಲಿತಾಂಶಗಳನ್ನು ಘೋಷಿಸಿದ ನಂತರ ಅಧಿಕೃತ ವೆಬ್‌ಸೈಟ್ cbseresults.nic.in ಮತ್ತು cbse.gov.in ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಗಮನಾರ್ಹವೆಂದರೆ ಫಲಿತಾಂಶ ಪ್ರಕಟಣೆ ದಿನಾಂಕದ ಬಗ್ಗೆ CBSE ಅಧಿಕಾರಿಗಳು ವಾಡಿಕೆಯಂತೆ ಯಾವುದೇ ದಿನಾಂಕ ನೀಡಲು ನಿರಾಕರಿಸಿದರು. ಆದಾಗ್ಯೂ, 10ನೇ ಫಲಿತಾಂಶವು ದಿನಾಂಕ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇದೇ ವೇಳೆ CBSE 12 ನೇ ತರಗತಿ ಫಲಿತಾಂಶಗಳನ್ನು ಸಹ ತ್ವರಿತವಾಗಿ ನೀಡಬೇಕಿರುವುದರಿಂದ CBSE 10 ನೇ ಫಲಿತಾಂಶ ವಿಳಂಬವಾಗಬಹುದು ಎಂದು ಮಂಡಳಿಯ ಒಳ ಮೂಲಗಳು ತಿಳಿಸಿವೆ. “CBSE 12th ಗಾಗಿ ಮೌಲ್ಯಮಾಪನ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ, CBSE 12 ನೇ ತರಗತಿ ಫಲಿತಾಂಶಗಳನ್ನು ಮೊದಲು ಪ್ರಕ್ರಿಯೆಗೊಳಿಸುವ ಸಲುವಾಗಿ, 10 ನೇ ತರಗತಿ ಫಲಿತಾಂಶವನ್ನು ತಡೆಹಿಡಿಯಬಹುದು ಅಥವಾ ಎರಡೂ ಫಲಿತಾಂಶಗಳನ್ನು ಒಂದೇ ಸಮಯದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ” ಎಂದು ಮೂಲಗಳು ತಿಳಿಸಿವೆ.
CBSE 10 ನೇ ಫಲಿತಾಂಶ 2022 ಟರ್ಮ್ 1 ಮತ್ತು ಟರ್ಮ್ 2 ಗಾಗಿ ಸಂಯೋಜಿತ ಮಾರ್ಕ್ ಶೀಟ್
ಮತ್ತೊಂದು ಸಂಬಂಧಿತ ಅಪ್‌ಡೇಟ್‌ನಲ್ಲಿ, CBSE ಟರ್ಮ್ 1 ಮತ್ತು ಟರ್ಮ್ 2 ಫಲಿತಾಂಶಕ್ಕಾಗಿ ಒಂದೇ ಅಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದು ಸಂಯೋಜಿತ ಅಂದರೆ ಎರಡೂ ಒಟ್ಟು ಮಾಡಿದ ಮಾರ್ಕ್ಸ್ ಶೀಟ್ ಆಗಿರುತ್ತದೆ. CBSE ಟೆನ್ತ್ಗೆ ಎರಡೂ ಟರ್ಮ್ನ ಸಂಯೋಜಿತ ಮತ್ತು ಅಂತಿಮ ಫಲಿತಾಂಶವನ್ನು ನೀಡುತ್ತೇವೆ. ಡಿಸ್ಟಿಂಕ್ಷನ್ ಗಳನ್ನು ವಿಂಗಡಿಸಲಾಗಿಲ್ಲ ಎಂದೂ ಮೂಲಗಳಿಂದ ತಿಳಿದುಬಂದಿದೆ.
Published On - 7:45 pm, Tue, 28 June 22