
ಸಿಬಿಎಸ್‌ಇ ‘ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್ ಸ್ಕಾಲರ್‌ಶಿಪ್’ ಯೋಜನೆಗೆ ಆನ್‌ಲೈನ್ ಅರ್ಜಿಗಳನ್ನು ತೆರೆದಿದೆ. ಈ ವಿದ್ಯಾರ್ಥಿವೇತನ ಯೋಜನೆಯು ನಿರ್ದಿಷ್ಟವಾಗಿ ಸಿಬಿಎಸ್‌ಇ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾದ ಮತ್ತು ಈಗ 11 ಮತ್ತು 12 ನೇ ತರಗತಿಗಳಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿರುವ ಪ್ರತಿಭಾನ್ವಿತ ಬಾಲಕಿಯರಿಗೆ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 23 ಎಂದು ನಿಗದಿಪಡಿಸಲಾಗಿದೆ.
ಇರುವ ಓರ್ವ ಮಗಳನ್ನು ಉತ್ತಮ ವಿದ್ಯೆ ಕೊಡಿಸಿ, ಆಕೆಯನ್ನು ಸಬಲರಾನ್ನಾಗಿ ಮಾಡಬೇಕು ಎಂದು ಯೋಚಿಸುವ ಅನೇಕ ಪೋಷಕರಿಗೆ ಆಸರೆಯಾಗಿರುವುದು ಸಿಇಬಿಎಸ್ಸಿಯ ಸಿಂಗಲ್ ಗರ್ಲ್ ಚೈಲ್ಡ್’ ಮೆರಿಟ್ ಸ್ಕಾಲರ್‌ಶಿಪ್. ಈ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯಲು, ಹುಡುಗಿಯರು 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ ಶೇ.70 ಅಂಕಗಳನ್ನು ಗಳಿಸಿರಬೇಕು.
ಇದನ್ನೂ ಓದಿ: SBIನಿಂದ ಬಡ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; 20 ಲಕ್ಷ ರೂ.ಗಳವರೆಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶ
ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಮಾಸಿಕ 500ರೂ, ವರೆಗೆ ವಿದ್ಯಾರ್ಥಿವೇತನ ದೊರೆಯುತ್ತದೆ. ಈ ವಿದ್ಯಾರ್ಥಿವೇತನವು ಗರಿಷ್ಠ ಎರಡು ವರ್ಷಗಳವರೆಗೆ ಇರುತ್ತದೆ. ಆರಂಭಿಕ ವಿದ್ಯಾರ್ಥಿವೇತನದ ನಂತರ, ಅವರು 11 ನೇ ತರಗತಿಯಲ್ಲಿ ಶೇ. 70 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ 12 ನೇ ತರಗತಿಗೆ ಬಡ್ತಿ ಪಡೆದರೆ ಮಾತ್ರ ಅದನ್ನು ನವೀಕರಿಸಲಾಗುತ್ತದೆ.
ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ವಿದ್ಯಾರ್ಥಿ ಓದುತ್ತಿರುವ ಶಾಲೆಯು ಅರ್ಜಿಯನ್ನು ಪರಿಶೀಲಿಸುತ್ತದೆ. ಅರ್ಜಿಯು ಅಪೂರ್ಣವಾಗಿದ್ದರೆ ಅಥವಾ ಶಾಲೆಯಿಂದ ಪರಿಶೀಲಿಸದಿದ್ದರೆ, ಅದನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಪೋಷಕರು ತಮ್ಮ ಆದಾಯದ ಅಫಿಡವಿಟ್ (ನೋಟರೈಸ್ಡ್ ಸ್ಟಾಂಪ್ ಪೇಪರ್‌ನಲ್ಲಿ) ಮತ್ತು ಶುಲ್ಕ ಚೀಟಿಗಳನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ