ಬೆಂಗಳೂರು, ಮೇ.24: ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು COMEDK UGET ಫಲಿತಾಂಶ 2024 ಇಂದು ಪ್ರಕಟಿಸಿದೆ. COMEDK ಅಂಡರ್ ಗ್ರಾಜುಯೇಟ್ ಪ್ರವೇಶ ಪರೀಕ್ಷೆ 2024 ಫಲಿತಾಂಶಗಳು ಇಲ್ಲಿ ನೀಡಿರುವ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ರ್ಯಾಂಕ್ ಕಾರ್ಡ್‌ಗಳ ಸಂಖ್ಯೆಯನ್ನು COMEDK ನ ಅಧಿಕೃತ ವೆಬ್‌ಸೈಟ್ comedk.org ನಲ್ಲಿ ಪರಿಶೀಲನೆ ಮಾಡಬಹುದು. ಇನ್ನು ಪರೀಕ್ಷೆಯಲ್ಲಿ ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರು. ಮೊದಲ ರ‍್ಯಾಂಕ್ ಬೆಂಗಳೂರಿನ ಬಾಲಸತ್ಯ ಸರವಣನ್ ಪಡೆದುಕೊಂಡಿದ್ದಾರೆ.
ಈ ವರ್ಷ ಮೇ 12 ರಂದು COMEDK UGET 2024 ಪರೀಕ್ಷೆಯನ್ನು ನಡೆಸಲಾಯಿತು, ಇದರಲ್ಲಿ ಸುಮಾರು 1.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ವರ್ಷದ ಫಲಿತಾಂಶದ ಅಂಕಿಅಂಶಗಳಿಗೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕಳೆದ ವರ್ಷ 96,607 ಅಭ್ಯರ್ಥಿಗಳು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, 77,232 ಮಂದಿ ಹಾಜರಾಗಿದ್ದರು. ಅಂತಿಮ ಉತ್ತರದ ಕೀಗಳನ್ನು ಮೇ 21ರಂದು ಬಿಡುಗಡೆ ಮಾಡಲಾಗಿತ್ತು.
1. COMEDK, comedk.org ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
2. ‘COMEDK UGET 2024 ಫಲಿತಾಂಶ’ ಎಂಬ ಅಧಿಸೂಚನೆ ಲಿಂಕ್ನ್ನು ಕ್ಲಿಕ್ ಮಾಡಿ.
3. ಇದು ಲಾಗಿನ್ ವಿಂಡೋಗೆ ಮರುನಿರ್ದೇಶಿಸುತ್ತದೆ, ಅಲ್ಲಿ ನೀವು ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನು ನೀಡಿ.
4. COMEDK UGET 2024 ಫಲಿತಾಂಶವು ಪರದೆಯ ಮೇಲೆ ಕಾಣುತ್ತದೆ.
5. COMEDK UGET 2024 ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲಿ.
ಇದನ್ನೂ ಓದಿ: 1ನೇ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿಗದಿ: ಶಿಕ್ಷಣ ಇಲಾಖೆ ಆದೇಶ
COMEDK UGET 2024 ಸ್ಕೋರ್‌ಕಾರ್ಡ್ ಹೆಸರು ಜೊತೆಗೆ ಅರ್ಜಿ ಅಥವಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಪರೀಕ್ಷಾ ಪ್ರವೇಶ ಟಿಕೆಟ್ ಸಂಖ್ಯೆ, ವರ್ಗ, ಆಯ್ದ ಕೋರ್ಸ್, ಫೋಟೋ ಐಡಿ, ಇತರ ವಿವರಗಳು, ಪಡೆದ ಸ್ಕೋರ್ ಮತ್ತು ಪಡೆದ ಶ್ರೇಣಿಯಂತಹ ವಿವರಗಳನ್ನು ಒಳಗೊಂಡಿರುತ್ತದೆ. ಫಲಿತಾಂಶಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ, ಅಭ್ಯರ್ಥಿಗಳು ತಕ್ಷಣದ ತಿದ್ದುಪಡಿಗಾಗಿ ಪರೀಕ್ಷಾ ಪ್ರಾಧಿಕಾರವನ್ನು ತಕ್ಷಣವೇ ಸಂಪರ್ಕಿಸಬಹುದು.
1) ಬಾಲಸತ್ಯ ಸರವಣನ್- ಕರ್ನಾಟಕ
2) ದೇವಾಂಶ್ ತ್ರಿಪಾಠಿ – ಕರ್ನಾಟಕ
3) ಸನಾ ತಬಸ್ಸುಮ್ – ಕರ್ನಾಟಕ
4) ಪ್ರಕೇತ್ ಗೋಯೆಲ್- ಕರ್ನಾಟಕ
5)ಮಾನಸ್ ಸಿಂಗ್ ರಜಪೂತ- ಹಿಮಾಚಲ ಪ್ರದೇಶ
6)ಗಾನಿಪಿಸೆಟ್ಟಿ ನಿಸ್ಚಲ್- ಆಂಧ್ರಪ್ರದೇಶ
7)ನಿಕೇತ್ ಪ್ರಕಾಶ್ ಅಚಂತಾ- ಕರ್ನಾಟಕ
8) ನೇಹಾ ಪ್ರಭು -ಕರ್ನಾಟಕ
9)ಜಗದೀಶ್ ರೆಡ್ಡಿ ಮಾರ್ಲ -ಕರ್ನಾಟಕ
10) ಈಶ್ವರ್ ಚಂದ್ರ ರೆಡ್ಡಿ ಮುಲ್ಕಾ- ಕರ್ನಾಟಕ
2023ರಲ್ಲಿ ನಡೆದ ಪರೀಕ್ಷೆಯಲ್ಲಿ 8,130 ಅಭ್ಯರ್ಥಿಗಳು 90 ರಿಂದ 100 ಪರ್ಸೆಂಟೈಲ್, 7,719 ಅಭ್ಯರ್ಥಿಗಳು 80 ರಿಂದ 90 ಪರ್ಸೆಂಟೈಲ್ ಮತ್ತು 8,036 ಅಭ್ಯರ್ಥಿಗಳು 70 ಮತ್ತು 80 ಪರ್ಸೆಂಟೈಲ್ ನಡುವೆ ಅಂಕ ಗಳಿಸಿದ್ದಾರೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Fri, 24 May 24