ಬೆಂಗಳೂರು: ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಆ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಜತೆಗೆ ಸ್ಪೋಕನ್ ಇಂಗ್ಲಿಷ್ (spoken English) ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಸಚಿವ ಬಿ ಸಿ ನಾಗೇಶ್ (BC Nagesh) ಹೇಳಿದರು. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಬೋಧನೆ ಗುಣಮಟ್ಟವನ್ನು ಹೆಚ್ಚಿಸಿ, ಸದರಿ ಶಾಲೆಗಳನ್ನು ಉಳಿಸಿ ಬೆಳೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾಗೇಶ್ ಅವರು ಹೇಳುವ ಪ್ರಕಾರ ಉದ್ದೇಶಿತ ಕನ್ನಡ ಮಾಧ್ಯಮ ಮಾದರಿ ಶಾಲೆಗಳಲ್ಲಿ (model schools) ಪ್ರಾಥಮಿಕ ಹಂತದಿಂದಲೇ ಸ್ಪೋಕನ್ ಇಂಗ್ಲಿಷ್ ಕಲಿಕೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಬೋಧಿಸಲು ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಮತ್ತು ಈ ಪ್ರದೇಶಗಳಲ್ಲಿ ಒಂದು ಮಾದರಿ ಶಾಲೆ ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದ ಅನೇಕ ಸರ್ಕಾರೀ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದನ್ನು ಮನಗಂಡಿರುವ ಸಚಿವಾ ನಾಗೇಶ ಅವರು ಶಾಲೆಯ ಎಲ್ಲಾ ತರಗತಿಗಳಿಗೂ ಅಗತ್ಯ ಕೊಠಡಿಗಳ ವ್ಯವಸ್ಥೆ ಮಾಡುವ ಕೆಲಸ ಶೀಘ್ರದಲ್ಲೇ ಅರಂಭಿಸಲಾಗುವುದೆಂದು ಹೇಳಿದರು.
ಮಂಗಳವಾರದಂದು ಕನ್ನಡ ಸಾಹಿತ್ಯ ಪರಿಷತ್ ನಗರದಲ್ಲಿ ಆಯೋಜಿಸಿದ್ದ ದುಂಡು ಮೇಜಿನ ಪರಿಷತನ್ ನಲ್ಲಿ ಭಾಗವಹಿಸಿದ್ದ ಸಚಿವರು ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಪ್ರಯೋಗಳನ್ನು ನಡೆಸಲಾಗಿದೆ, ಮತ್ತು ಸದರಿ ಪ್ರಯೋಗ ಮತ್ತಷ್ಟು ವಿಸ್ತರಿಸಲು ಯೋಗ್ಯವಾಗಿದೆ ಆಂತ ಹೇಳಿದರು.
‘ಹಿಂದಿನ ಸರಕಾರಗಳು ಈ ದಿಶೆಯಲ್ಲಿ ಸತತವಾಗಿ ಕಾರ್ಯೋನ್ಮುಖಗೊಂಡಿದ್ದು ನಿಜವಾದರೂ, ಕೋರ್ಟ್ಗಳ ಹಲವಾರು ಅದೇಶಗಳಿಂದಾಗಿ ಹಿನ್ನಡೆ ಅನುಭವಿಸಬೇಕಾಯಿತು. ಹಾಗೆಯೇ, ಸರ್ಕಾರೀ ಕನ್ನಡ ಶಾಲೆಗಳಲ್ಲಿ ತೀವ್ರವಾಗಿ ಕ್ಷೀಣಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ನಮ್ಮನ್ನು ಆತಂಕ ಮತ್ತು ಚಿಂತೆಗೀಡು ಮಾಡಿದೆ. ಇತ್ತೀಚಿನ ಪ್ರಯೋಗವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಿರುವುದರಿಂದ ಅವು ಸಾಕಷ್ಟು ಯಶ ಕಂಡಿವೆ. ಸದರಿ ಅಲೆಯನ್ನು ಮತ್ತಷ್ಟು ಬಲಪಡಿಸಲು ನಾವೆಲ್ಲ ಒಟ್ಟಾಗಿ ಶ್ರಮಿಸಬೇಕಿದೆ,’ ಎಂದು ಸಚಿವ ನಾಗೇಶ್ ಹೇಳಿದರು.
ಹಿರಿಯ ಸಾಹಿತಿ ಮತ್ತು ಕನ್ನಡದ ಸುಪ್ರಸಿದ್ಧ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರು ಕನ್ನಡ ಮಾಧ್ಯಮ ಶಾಲೆಳಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ತಲಾ ಸುಮಾರು ರೂ. 3,000 ಗಳ ಹಣಕಾಸಿನ ನೆರವು ಒದಗಿಸಲು ಪ್ರತಿವರ್ಷದ ಬಜೆಟ್ನಲ್ಲಿ ರೂ. 200 ಕೋಟಿಗಳನ್ನು ತೆಗೆದಿರಿಸಬೇಕೆಂದು ನೀಡಿದ ಸಲಹೆಗೆ ಸಚಿವ ನಾಗೇಶ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.