UPSC Aspirants: UPSC ಆಕಾಂಕ್ಷಿಗಳಿಗೆ ತಜ್ಞರ ಸಲಹೆ; ಮೊದಲನೇ ಪ್ರಯತ್ನದಲ್ಲಿ ಪರೀಕ್ಷೆ ಭೇದಿಸಲು ಮಹಿಳಾ ಅಭ್ಯರ್ಥಿಗಳಿಂದ 5 ಸಲಹೆ

|

Updated on: Apr 04, 2023 | 12:42 PM

ಮಹಿಳಾ ಅಭ್ಯರ್ಥಿಗಳಿಂದ ಕೆಲವು ತಯಾರಿ ಸಲಹೆಗಳು ಇಲ್ಲಿವೆ, ಇದು ಸಾವಿರಾರು UPSC ಆಕಾಂಕ್ಷಿಗಳಿಗೆ ನಿಮ್ಮ ತಯಾರಿ ಹಂತದಲ್ಲಿ ಕಂಡಿತಾ ಸಹಾಯ ಮಾಡುತ್ತದೆ.

UPSC Aspirants: UPSC ಆಕಾಂಕ್ಷಿಗಳಿಗೆ ತಜ್ಞರ ಸಲಹೆ; ಮೊದಲನೇ ಪ್ರಯತ್ನದಲ್ಲಿ ಪರೀಕ್ಷೆ ಭೇದಿಸಲು ಮಹಿಳಾ ಅಭ್ಯರ್ಥಿಗಳಿಂದ 5 ಸಲಹೆ
UPSC Exam tips for aspirants
Image Credit source: India today
Follow us on

ಯುಪಿಎಸ್‌ಸಿ (UPSC) ಎಂದು ಜನಪ್ರಿಯವಾಗಿರುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Services Commission) ಪರೀಕ್ಷೆಯನ್ನು ಬರೆಯಲು ಪ್ರತಿ ವರ್ಷ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅತ್ಯಂತ ಸವಾಲಿನ ಮತ್ತು ಪ್ರತಿಷ್ಠಿತ ಪರೀಕ್ಷೆಗಳಲ್ಲಿ UPSC ಯೂ ಒಂದಾಗಿದ್ದು, ಇದೀಗ ಈ ಪರೀಕ್ಷೆಯಲ್ಲಿ ಮಹಿಳಾ (Female Candidates) ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ, ಅಷ್ಟೇ ಅಲ್ಲದೆ ಬಹಳಷ್ಟು ಮಹಿಳೆಯರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಅರ್ಹತೆ ಪಡೆದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 2000 ರಲ್ಲಿ ಕೇವಲ 85 ಆಗಿತ್ತು ಆದರೆ 2019 ರಲ್ಲಿ 220 ಮಹಿಳೆಯರು ಈ ಸೇವೆಗಳಿಗೆ ಸೇರಿದ್ದಾರೆ.

2021 ಅತ್ಯಂತ ಪ್ರಮುಖವಾದ ವರ್ಷಗಳಲ್ಲಿ ಒಂದಾಗಿದೆ, ಅಗ್ರ ಮೂರು ಮಹಿಳಾ ಅಭ್ಯರ್ಥಿಗಳು UPSC IAS 2021 ಗೆ ಅರ್ಹತೆ ಪಡೆದಿದ್ದಾರೆ. ಮಹಿಳೆಯರ ಯಶಸ್ಸು ಮತ್ತು ವಿಜಯವನ್ನು ಆಚರಿಸಲು ಇದು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ.

ಉತ್ತರ ಪ್ರದೇಶದ ಬಿಜ್ನೋರ್‌ನ ಶ್ರುತಿ ಶರ್ಮಾ ಅವರು 1105 ಅಂಕಗಳೊಂದಿಗೆ ಅಖಿಲ ಭಾರತ 1 ರ‍್ಯಾಂಕ್ (AIR) 54.57 ಅಂಕಗಳನ್ನು ಗಳಿಸಿದ್ದಾರೆ. ಮಹಿಳಾ ಅಭ್ಯರ್ಥಿಯ ಮತ್ತೊಂದು ಅತ್ಯುತ್ತಮ ಉದಾಹರಣೆಯೆಂದರೆ ಅಂಕಿತಾ ಅಗರ್ವಾಲ್, ಅವರು AIR 2 ಅನ್ನು ಪಡೆಡಿದ್ದಾರೆ. ಇವರು 1050 ಅಂಕಗಳನ್ನು ಮತ್ತು ಶೇ.51.85 ಗಳಿಸಿ ಎರಡನೇ ಸ್ಥಾನವನ್ನು ಪಡೆದರು. ಗಾಮಿನಿ ಸಿಂಗ್ಲಾ ಅವರು UPSC IAS 2021 ರಲ್ಲಿ ಮೂರನೇ ಸ್ಥಾನ (AIR 3) ಗಳಿಸಿದ್ದಾರೆ, 1045 ಅಂಕಗಳನ್ನು ಗಳಿಸಿದ್ದಾರೆ ಮತ್ತು ಶೇ.51.೬೦ ಪಡೆದಿದ್ದಾರೆ. ಶ್ರುತಿ, ಅಂಕಿತಾ ಮತ್ತು ಗಾಮಿನಿಯಂತಹ ಮಹಿಳಾ ಟಾಪರ್‌ಗಳು ಅಧ್ಯಯನ ಮತ್ತು ಪರೀಕ್ಷೆಗಳಿಗೆ ತಯಾರಿ ಮಾಡಲು ವಿಶಿಷ್ಟ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ವರದಿಯ ಪ್ರಕಾರ,

ಮಹಿಳಾ ಅಭ್ಯರ್ಥಿಗಳ ಕೆಲವು ತಯಾರಿ ತಂತ್ರಗಳು ಇಲ್ಲಿವೆ,

1. ಸ್ವಯಂ-ನಿರ್ಮಿತ ಟಿಪ್ಪಣಿಗಳನ್ನು ಸಿದ್ಧಪಡಿಸುವುದು:

ಮಹಿಳಾ ಐಎಎಸ್ ಅಧಿಕಾರಿಗಳ ಪ್ರಕಾರ, UPSC ತಯಾರಿ ಸಮಯದಲ್ಲಿ ಶಾರ್ಟ್ ನೋಟ್ ಮಾಡುವ ಮೂಲಕ ಸ್ಮಾರ್ಟ್ ಕೆಲಸ ಮಾಡುವವರು ತೀವ್ರವಾದ ಅಧ್ಯಯನವಿಲ್ಲದೆ ಮೇನ್ಸ್ ಸುತ್ತಿನಲ್ಲಿ ಯಶಸ್ಸನ್ನು ಗಳಿಸಬಹುದು. ಇದಲ್ಲದೆ, ಸ್ವಯಂ-ನಿರ್ಮಿತ ಟಿಪ್ಪಣಿಗಳು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

2. ಪರೀಕ್ಷಾ ಸರಣಿಗಳು ಮತ್ತು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು:

ಮಾದರಿ ಉತ್ತರಗಳನ್ನು ಸಿದ್ಧಪಡಿಸುವ ಅಭ್ಯಾಸ ಮತ್ತು ಉತ್ತರಗಳನ್ನು ಬರೆಯುವುದು, ಪರೀಕ್ಷಾ ಸರಣಿಗಳು ಮತ್ತು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು UPSC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನುಗಳಿಸಲು ಸಹಾಯಕವಾದ ಮಾರ್ಗವಾಗಿದೆ ಎಂದು ಟಾಪರ್‌ಗಳು ನಂಬುತ್ತಾರೆ. ಈ ಆರೋಗ್ಯಕರ ಅಭ್ಯಾಸಗಳು ಅಭ್ಯರ್ಥಿಗಳ ಬರವಣಿಗೆಯ ಕೌಶಲ್ಯವನ್ನು ಸುಧಾರಿಸಲು ಸಹ ಅನುಕೂಲವಾಗುತ್ತದೆ.

3. ಸಾಮಾಜಿಕ ಮಾಧ್ಯಮದಿಂದ ದೂರವಿರುವುದು:

UPSC ಪರೀಕ್ಷೆಗೆ ಸಂಬಂಧಿಸಿದಂತೆ, ಈ ಮಹಿಳಾ ಟಾಪರ್‌ಗಳು ಆಕಾಂಕ್ಷಿಗಳಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಮಯ ಪ್ರಜ್ಞೆ ಇಲ್ಲದೆ ಸ್ಕ್ರೋಲ್ ಮಾಡುವುದನ್ನು ನಿಲ್ಲಿಸಬೇಕೆಂದು ಸಲಹೆ ನೀಡುತ್ತಾರೆ. ಸಾಮಾಜಿಕ ಮಾಧ್ಯಮವು ಧನಾತ್ಮಕ ಮತ್ತು ಋಣಾತ್ಮಕ ಮಾಹಿತಿಯ ಒಂದು ದೊಡ್ಡ ಸಂಗ್ರಹವಾಗಿದೆ, ಇದು UPSC ತಯಾರಿಯಲ್ಲಿ ದೊಡ್ಡ ಅಡಚಣೆಯಾಗಲಿದೆ ಎಂಬುದು ಅವರ ಅಭಿಪ್ರಾಯ.

4. ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಹರಿಸುವುದು:

ತಮ್ಮ ಕಠಿಣ ಅಧ್ಯಯನದ ಕಟ್ಟುಪಾಡುಗಳಿಂದಾಗಿ ಆಕಾಂಕ್ಷಿಗಳು ಹೆಚ್ಚಿನ ಸಮಯವನ್ನು ಅತಿಯಾಗಿ ಯೋಚಿಸುವುದರಲ್ಲಿ ಕಳೆಯುತ್ತಾರೆ. ಅವರು ವೈಫಲ್ಯದ ಭಯ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದ್ದಾರೆ, ಕಠಿಣ ಪ್ರಶ್ನೆಗಳು ಬಂದರೆ ಏನು, ಪರೀಕ್ಷೆಯ ಮೊದಲು ವಿಶಾಲವಾದ ಪಠ್ಯಕ್ರಮವನ್ನು ಹೇಗೆ ಮುಗಿಸಬೇಕು ಮತ್ತು ಹೇಗೆ ಅತ್ಯುತ್ತಮ ತಯಾರಿ ಮಾಡಬೇಕು ಎಂದು ಯೋಚಿಸುತ್ತಾರೆ. ಆದ್ದರಿಂದ, ಆಕಾಂಕ್ಷಿಗಳು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕುಟುಂಬ ಮತ್ತು ಸ್ನೇಹಿತರಿಂದ ಸುತ್ತುವರೆದಿರುವ ಬೆಂಬಲದ ವಾತಾವರಣದಲ್ಲಿ ಉಳಿಯಬೇಕು.

ಇದನ್ನೂ ಓದಿ: NEET UG 2023 ನೋಂದಣಿ ಶೀಘ್ರದಲ್ಲೇ ಕೊನೆಗೊಳ್ಳುಲಿದೆ; ಅರ್ಜಿ ಶುಲ್ಕ, ಅರ್ಹತಾ ಮಾನದಂಡಗಳನ್ನು ಇಲ್ಲಿ ಪರಿಶೀಲಿಸಿ

ಯಶಸ್ವಿ ಮಹಿಳಾ ನಾಗರಿಕ ಸೇವಕರು ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹವಿದ್ದರೆ ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದು ನಂಬುತ್ತಾರೆ. ಆರೋಗ್ಯವಂತ ಜನರು ಒತ್ತಡ, ಉದ್ವೇಗ ಮತ್ತು ಆತಂಕಕ್ಕೆ ಕಡಿಮೆ ಒಳಗಾಗುತ್ತಾರೆ ಮತ್ತು ತಮ್ಮ ಸಮಯವನ್ನು ಉತ್ತಮವಾಗಿ ಬಳಸಬಹುದು. ಹೀಗಾಗಿ, ಆಕಾಂಕ್ಷಿಗಳು ಪೌಷ್ಟಿಕ ಆಹಾರಗಳನ್ನು ಸೇವಿಸಲು, ಸಾಕಷ್ಟು ನಿದ್ರೆ ಪಡೆಯಲು ಮತ್ತು ವಾಕಿಂಗ್/ಜಾಗಿಂಗ್ ಮತ್ತು ಯೋಗದಂತಹ ವ್ಯಾಯಾಮದ ದಿನಚರಿಗಳಲ್ಲಿ ತೊಡಗಿಸಿಕೊಳ್ಳಲು ಶಿಫಾರಸು ಮಾಡಲಾಗುತ್ತದೆ.

5. ಹೊಂದಿಕೊಳ್ಳುವ ಅಧ್ಯಯನ ವೇಳಾಪಟ್ಟಿಯನ್ನು ನಿರ್ವಹಿಸುವುದು:

UPSC ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದರೂ, ಆಕಾಂಕ್ಷಿಗಳು ಇಡೀ ದಿನ ಮತ್ತು ರಾತ್ರಿಯನ್ನು ಅಧ್ಯಯನಕ್ಕಾಗಿ ಮೀಸಲಿಡಬೇಕು ಎಂದು ಸೂಚಿಸುವುದಿಲ್ಲ. ಮಹಿಳಾ ಟಾಪರ್‌ಗಳು ಆಕಾಂಕ್ಷಿಗಳಿಗೆ ನಿರಂತರವಾಗಿ ಅಧ್ಯಯನ ಮಾಡದೆಯೇ ಅಧ್ಯಯನ ವಿರಾಮಗಳು ಅಥವಾ ಒಂದು ದಿನ ರಜೆಯನ್ನು ಶಿಫಾರಸು ಮಾಡುತ್ತಾರೆ. ವಿರಾಮ ಅಥವಾ ಒಂದು ದಿನದ ರಜೆಯನ್ನು ಹೊಂದುವುದು ಆಕಾಂಕ್ಷಿಗಳಿಗೆ ಹೆಚ್ಚು ಉತ್ಪಾದಕ ಮತ್ತು ಪ್ರೇರಣೆಯಿಂದಿರಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ.