ನೀವು ಬೆಳವಣಿಗೆಯನ್ನು ಕಾಣುತ್ತಿಲ್ಲ ಎಂದಾದರೆ ಉಳಿದುಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ: ಬೈಜೂಸ್​​ ಬಗ್ಗೆ ಸುನೀಲ್​​​ ಶೆಟ್ಟಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 18, 2022 | 7:39 PM

ವಿಶ್ವ ಆರ್ಥಿಕ ಕುಸಿತವನ್ನು ಉಲ್ಲೇಖಿಸಿ ನಟ, "ಇತರ ಕೆಲವು ಪ್ರಮುಖ ಆರ್ಥಿಕತೆಗಳಂತೆಯೇ ಜಾಗತಿಕ ಮಂದಗತಿಯ ತೀವ್ರತೆಯಿಂದ ಭಾರತವು ಪರಿಣಾಮ ಬೀರಬಹುದು ಅಥವಾ ಪರಿಣಾಮ ಬೀರದೇ ಇರಬಹುದು" ಎಂದು ಹೇಳಿಕೊಂಡಿದ್ದಾರೆ.

ನೀವು ಬೆಳವಣಿಗೆಯನ್ನು ಕಾಣುತ್ತಿಲ್ಲ ಎಂದಾದರೆ ಉಳಿದುಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ: ಬೈಜೂಸ್​​ ಬಗ್ಗೆ ಸುನೀಲ್​​​ ಶೆಟ್ಟಿ
Follow us on

ನಷ್ಟದ ಸುಳಿಯಿಂದ ಪಾರಾಗಲು ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಹಲವಾರು ಇಲಾಖೆಗಳಿಂದ 2,500 ಉದ್ಯೋಗಿಗಳನ್ನು ವಜಾಗೊಳಿಸುವ ಆನ್ ಲೈನ್ ಶಿಕ್ಷಣ ವಲಯದ ದಿಗ್ಗಜ ಬೈಜೂಸ್ (Byju’s) ನಿರ್ಧಾರದ ಬಗ್ಗೆ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ ಸುನೀಲ್ ಶೆಟ್ಟಿ (Suniel Shetty) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದಿರುವ ಸುನೀಲ್ ಶೆಟ್ಟಿ ಪ್ರಸ್ತುತ ಸಂಸ್ಥೆ, ಶೀಘ್ರದಲ್ಲೇ ಹಿಂದಿನ ದಿನಗಳಿಗೆ ಮರಳಲಿ ಎಂದು ತಾನು ಪ್ರಾರ್ಥಿಸುತ್ತಿರುವುದಾಗಿ ಬರೆದಿದ್ದಾರೆ. ಅದೇ ವೇಳೆ ಕಂಪನಿಗೆ ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭ ಆಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಬೈಜೂಸ್ ಬಗ್ಗೆ ಉಲ್ಲೇಖಿಸದೆಯೇ ಪೋಸ್ಟ್ ಬರೆದಿರುವ ಶೆಟ್ಟಿ”ಕಂಪೆನಿಯೊಂದು ತನ್ನ 2500 ಉದ್ಯೋಗಿಗಳನ್ನು ವಜಾಗೊಳಿಸಿದ ಬಗ್ಗೆ ಇತ್ತೀಚಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅದು 10000 ಜೀವಗಳನ್ನು ಬಾಧಿಸಿತು.  ಇದು ಸುಲಭವಾದ ನಿರ್ಧಾರವಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಆದಷ್ಟು ಬೇಗ ತಮ್ಮ ಹಿಂದಿನ ದಿನಗಳಿಗೆ ಮರಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕಳೆದ ಕೆಲವು ವರ್ಷಗಳಿಂದ ಮೌಲ್ಯಮಾಪನಗಳು ಮತ್ತು ನಿಧಿಸಂಗ್ರಹಣೆ ಚಟುವಟಿಕೆಯು ತೀವ್ರ ಏರಿಕೆ ಕಂಡಿದೆಯಾದರೂ, ತಡವಾಗಿ ಜಾಗತಿಕ ಭಾವನೆಯು ಸ್ವಲ್ಪಮಟ್ಟಿಗೆ ಸಂಪ್ರದಾಯಬದ್ಧವಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ.

ವಿಶ್ವ ಆರ್ಥಿಕ ಕುಸಿತವನ್ನು ಉಲ್ಲೇಖಿಸಿ ನಟ, “ಇತರ ಕೆಲವು ಪ್ರಮುಖ ಆರ್ಥಿಕತೆಗಳಂತೆಯೇ ಜಾಗತಿಕ ಮಂದಗತಿಯ ತೀವ್ರತೆಯಿಂದ ಭಾರತವು ಪರಿಣಾಮ ಬೀರಬಹುದು ಅಥವಾ ಪರಿಣಾಮ ಬೀರದೇ ಇರಬಹುದು” ಎಂದು ಹೇಳಿಕೊಂಡಿದ್ದಾರೆ.

ಯಶಸ್ವಿ ರೆಸ್ಟೊರೆನ್ಯೂರ್ ಆಗಿರುವ ಶೆಟ್ಟಿ ಭಾರತದ ಬಗ್ಗೆ ನಂಬಿಕೆ ಇಟ್ಟು ಕೊಡಿದ್ದೇನೆ ಎಂದಿದ್ದಾರೆ. ನಾನು ಭಾರತದ ಬಗ್ಗೆ ನಂಬಿಕೆಯನ್ನು ಮುಂದುವರಿಸುತ್ತೇನೆ. ಇತರ ಅಂಶಗಳ ಜೊತೆಗೆ, ನಮ್ಮ ಜನಸಂಖ್ಯೆ ಮತ್ತು ಅದರ ಆಕಾಂಕ್ಷೆಗಳು ತಮ್ಮ ಬೆಳವಣಿಗೆಯನ್ನು ಮುಂದುವರಿಸಲು ದೊಡ್ಡ ಅವಕಾಶದೊಂದಿಗೆ ಉತ್ತಮ ವ್ಯವಹಾರಗಳನ್ನು ಪ್ರಸ್ತುತಪಡಿಸುತ್ತವೆ.  ಇದು ಮೊದಲಿಗಿಂತ ನಿಧಾನಗತಿಯಲ್ಲಿದ್ದರೂ ಸಹ, ಆರಂಭಿಕ ಹಂತ, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಕೆಲವು ಕಾರ್ಯಾಚರಣಾ ತತ್ವಗಳನ್ನು ಸ್ಥಾಪಿಸಲು ಇದು ಉತ್ತಮ ಸಮಯವಾಗಿದೆ ಎಂದು ಅವರು ಹೇಳಿದ್ದಾರೆ.

ಮಾಜಿ ಭಾರತೀಯ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅವರ ಉದಾಹರಣೆಯನ್ನು ನೀಡಿದ ಸುನೀಲ್ ಶೆಟ್ಟಿ “ದೀರ್ಘಾವಧಿಯ ಬಗ್ಗೆ ಯೋಚಿಸಿ sprint vs marathon ಅನ್ನು ಯೋಚಿಸಿ. ರಾಹುಲ್ ದ್ರಾವಿಡ್ ಅನ್ನು ಯೋಚಿಸಿ. ಸ್ಥಿರ ಮತ್ತು ನಿಧಾನವು ಅಷ್ಟೇ ಶ್ರೇಷ್ಠವಾಗಿದೆ ಎಂದು ಹೇಳಿದರು.

ಕಳೆದ ವಾರ ಬೈಜೂಸ್ ತನ್ನ ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಅತ್ಯುತ್ತಮವಾಗಿಸಲು ಮಾರ್ಚ್ 2023 ರೊಳಗೆ ಲಾಭದಾಯಕವಾಗಲು ಯೋಜನೆಯನ್ನು ರೂಪಿಸಿದೆ, ಇದು ಮುಂದಿನ ಆರು ತಿಂಗಳಲ್ಲಿ 5 ಪ್ರತಿಶತದಷ್ಟು ಉದ್ಯೋಗಿಗಳನ್ನು ಅಥವಾ ಸುಮಾರು 2,500 ಜನರನ್ನು ವಜಾ ಮಾಡಲಿದೆ. ಕಂಪನಿಯು ಹೊಸ ಪಾಲುದಾರಿಕೆಗಳ ಮೂಲಕ ಸಾಗರೋತ್ತರ ಬ್ರ್ಯಾಂಡ್ ಜಾಗೃತಿಯನ್ನು ನಿರ್ಮಿಸಲು ಗಮನಹರಿಸುತ್ತದೆ ಮತ್ತು ಭಾರತ ಮತ್ತು ಸಾಗರೋತ್ತರ ವ್ಯಾಪಾರಕ್ಕಾಗಿ 10,000 ಶಿಕ್ಷಕರನ್ನು ನೇಮಿಸಿಕೊಳ್ಳುತ್ತದೆ ಎಂದು ಬೈಜೂಸ್ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಪಿಟಿಐಗೆ ತಿಳಿಸಿದ್ದಾರೆ.

Published On - 6:15 pm, Tue, 18 October 22