ICAI CA Foundation Result: ಸಿಎ ಫೌಂಡೇಶನ್ ಡಿಸೆಂಬರ್ 2022 ಪರೀಕ್ಷೆಯ ಫಲಿತಾಂಶ ಪ್ರಕಟ

| Updated By: Digi Tech Desk

Updated on: Feb 03, 2023 | 5:45 PM

ICAI CA Foundation Result: CA ಫೌಂಡೇಶನ್ ಪರೀಕ್ಷೆಯ ಡಿಸೆಂಬರ್​ ತಿಂಗಳ ಫಲಿತಾಂಶವನ್ನು icaiexam.icai.org ಅಥವಾ icai.nic.in ನಲ್ಲಿ ನೋಡಬಹುದು. CA ಫೌಂಡೇಶನ್​ ಪರೀಕ್ಷೆಯ ಅರ್ಹತೆ ಪಡೆಯಲು, ಅಭ್ಯರ್ಥಿಯು ಪ್ರತಿ ಪತ್ರಿಕೆಯಲ್ಲಿ ಕನಿಷ್ಠ 40% ಅಂಕಗಳನ್ನು ಮತ್ತು ಎಲ್ಲಾ ನಾಲ್ಕು ಪತ್ರಿಕೆಗಳಲ್ಲಿ ಒಟ್ಟು 55% ಅಂಕಗಳನ್ನು ಗಳಿಸಬೇಕು. ICAI ನಿರ್ದಿಷ್ಟಪಡಿಸಿದ ಉತ್ತೀರ್ಣ ಮಾನದಂಡಗಳಿಗಿಂತ ಕಡಿಮೆ ಪಡೆದ ಅಭ್ಯರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲಾಗುವುದಿಲ್ಲ.

ICAI CA Foundation Result: ಸಿಎ ಫೌಂಡೇಶನ್ ಡಿಸೆಂಬರ್ 2022 ಪರೀಕ್ಷೆಯ ಫಲಿತಾಂಶ ಪ್ರಕಟ
ಸಿಎ ಫೌಂಡೇಶನ್ ಪರೀಕ್ಷೆ ಫಲಿತಾಂಶ ಪ್ರಕಟ
Image Credit source: World Bank
Follow us on

ICAI CA ಫೌಂಡೇಶನ್ ಡಿಸೆಂಬರ್ 2022 ಪರೀಕ್ಷೆಯ ಫಲಿತಾಂಶವನ್ನು ಇಂದು ಫೆಬ್ರವರಿ 3, 2023 ರಂದು ಬಿಡುಗಡೆ ಮಾಡಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ICAI icaiexam.icai.org ಅಥವಾ icai.nic.in ನಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ  ಲಿಂಕ್ ಕ್ಲಿಕ್ಕಿಸಿದರೆ ಫಲಿತಾಂಶದ ಸೂಚನೆಯನ್ನು ಪರಿಶೀಲಿಸಬಹುದು. ಡಿಸೆಂಬರ್ 14 ಮತ್ತು ಡಿಸೆಂಬರ್ 2022 ನಡುವೆ ನಡೆಸಲಾದ ICAI CA ಫೌಂಡೇಶನ್ ಪರೀಕ್ಷೆಗಳ ಎಲ್ಲಾ ಫಲಿತಾಂಶ ಇಲ್ಲಿ ಸಿಗುತ್ತದೆ.

ಸಿಎ ಫೌಂಡೇಶನ್ ಫಲಿತಾಂಶ ನೋಡುವ ಹಂತಗಳು:

  • ಮೊದಲಿಗೆ ಮೇಲಿರುವ ಲಿಂಕ್ ಕ್ಲಿಕ್ಕಿಸಿ
  • ಬಲ ಬದಿಯಲ್ಲಿ ‘ಯೂಸ್ ಫುಲ್ ಲಿಂಕ್ಸ್’ ಆಯ್ಕೆಯನ್ನು ಒತ್ತಿ
  • ‘ಯೂಸ್ ಫುಲ್ ಲಿಂಕ್ಸ್’ ಕೆಳಗಿರುವ ಅಂನೌನ್ಸಮೆಂಟ್ಸ್(ಸ್ಟೂಡೆಂಟ್ಸ್) ಅನ್ನ ಆಯ್ಕೆ ಮಾಡಿ
  • ನಂತರ, ರಿಸಲ್ಟ್ಸ್ ಆಫ್ ದಿ ಚಾರ್ಟರ್ಡ್ ಅಕೌಂಟೆಂಟ್ಸ್ ಫೌಂಡೇಶನ್ ಎಕ್ಸಾಮಿನೇಷನ್ ಹೆಲ್ಡ್ ಇನ್ ಡಿಸೆಂಬರ್ 2022 ಡಿಕ್ಲೇರ್ಡ್ – (03-02-2023) ಕ್ಲಿಕ್ಕಿಸಿ
  • ಈ ವಿಭಾಗದಲ್ಲಿ ಮೊದಲಿಗೆ ಕ್ರಮ ಸಂಖ್ಯೆ ತುಂಬಿ ನಂತರ ರಿಜಿಸ್ಟ್ರೇಷನ್ ನಂಬರ್ ಹಾಕಬೇಕು
  • ಅದಾದ ನಂತರ ಕೇಳಿದ ಪದವನ್ನು ಅದೇ ರೀತಿ ಬರೆದು(captcha ) ಸಬ್ಮಿಟ್ ಕೊಟ್ಟರೆ ನಿಮ್ಮ ಫಲಿತಾಂಶ ದೊರೆಯುತ್ತದೆ
  • ಫಲಿತಾಂಶವು ಅಭ್ಯರ್ಥಿಯ ಹೆಸರು, ಪಡೆದ ಅಂಕ, ಕ್ರಮ ಸಂಖ್ಯೆ, ಒಟ್ಟಾರೆ ಅಂಕಗಳು, ಅವರ ಉತ್ತೀರ್ಣ ಸ್ಥಿತಿಯನ್ನು ಉಲ್ಲೇಖಿಸುತ್ತದೆ

ICAI CA ಫೌಂಡೇಶನ್ ಪರೀಕ್ಷೆಯನ್ನು ಭಾರತದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು. CA ಫೌಂಡೇಶನ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು, ಅಭ್ಯರ್ಥಿಯು ಪ್ರತಿ ಪತ್ರಿಕೆಯಲ್ಲಿ ಕನಿಷ್ಠ 40% ಅಂಕಗಳನ್ನು ಮತ್ತು ಎಲ್ಲಾ ನಾಲ್ಕು ಪತ್ರಿಕೆಗಳಲ್ಲಿ ಒಟ್ಟು 55% ಅಂಕಗಳನ್ನು ಗಳಿಸಬೇಕು. ICAI ನಿರ್ದಿಷ್ಟಪಡಿಸಿದ ಉತ್ತೀರ್ಣ ಮಾನದಂಡಗಳಿಗಿಂತ ಕಡಿಮೆ ಪಡೆದ ಅಭ್ಯರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲಾಗುವುದಿಲ್ಲ.

Published On - 5:38 pm, Fri, 3 February 23