ICSE ISC 2021 Result 2021: ಸಿಐಎಸ್​ಸಿಇ 10 ಮತ್ತು 12ನೇ ತರಗತಿಗಳ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ನೋಡುವ ವಿಧಾನ ಹೀಗಿದೆ..

| Updated By: Lakshmi Hegde

Updated on: Jul 24, 2021 | 4:19 PM

CICSE ಅಧಿಕೃತ ವೆಬ್​ಸೈಟ್​ಗಳಾದ​ www.cisce.org and results.cisce.org. ನಲ್ಲಿ ಇಂದು ಮಧ್ಯಾಹ್ನ 3ಗಂಟೆಗೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಈ ವೆಬ್​ಸೈಟ್​ಗೆ ಹೋಗುವ ಮೂಲಕ ಅಥವಾ ಎಸ್​ಎಂಎಸ್​ ಮೂಲಕವೂ ಫಲಿತಾಂಶ ಪಡೆಯಬಹುದು.

ICSE ISC 2021 Result 2021: ಸಿಐಎಸ್​ಸಿಇ 10 ಮತ್ತು 12ನೇ ತರಗತಿಗಳ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ನೋಡುವ ವಿಧಾನ ಹೀಗಿದೆ..
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಇಂಡಿಯನ್​ ಸ್ಕೂಲ್ ಸರ್ಟಿಫಿಕೇಟ್​ ಪರೀಕ್ಷೆಗಳ ಮಂಡಳಿ (CISCE) 10 ನೇ ತರಗತಿ (​ICSE) ಮತ್ತು 12ನೇ ತರಗತಿ (ISC) ಪರೀಕ್ಷೆಗಳ ಫಲಿತಾಂಶವನ್ನು ಅದರ ಅಧಿಕೃತ ವೆಬ್​ಸೈಟ್​ಗಳಾದ​ www.cisce.org and results.cisce.org. ನಲ್ಲಿ ಇಂದು ಮಧ್ಯಾಹ್ನ 3ಗಂಟೆಗೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಈ ವೆಬ್​ಸೈಟ್​ಗೆ ಹೋಗುವ ಮೂಲಕ ಅಥವಾ ಎಸ್​ಎಂಎಸ್​ ಮೂಲಕವೂ ಫಲಿತಾಂಶ ಪಡೆಯಬಹುದು ಎಂದು ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿಯಾಗಿರುವ ಗೆರಿ ಅರಾಥೂನ್​ ಶುಕ್ರವಾರವೇ ತಿಳಿಸಿದ್ದರು.

ಕೋಷ್ಟಕ ದಾಖಲಾತಿಗಳನ್ನು ಕರಿಯರ್ಸ್​ ಪೋರ್ಟಲ್​​ (Careers Portal)ಗಳ ಮೂಲಕ ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಆಯಾ ಶಾಲೆಗಳು ಈ ಕರಿಯರ್ಸ್​ ಪೋರ್ಟಲ್​​ನಲ್ಲಿ ಪ್ರಿನ್ಸಿಪಲ್​​​ಗಳ ಲಾಗಿನ್ ಐಡಿ, ಪಾಸ್​ವರ್ಡ್​ ಬಳಸಿ, ಪಡೆಯಬಹುದಾಗಿದೆ ಎಂದೂ ಅವರು ಹೇಳಿದ್ದರು.

ಫಲಿತಾಂಶ ತಿಳಿಯುವ ವಿಧಾನ ಇಲ್ಲಿದೆ..
1.ಮೊದಲು results.cisce.org. ಗೆ ಭೇಟಿ ನೀಡಿ
2. ಅಲ್ಲಿ ಕಾಣಿಸುವ Results 2021ಲಿಂಕ್​ ಮೇಲೆ ಕ್ಲಿಕ್​ ಮಾಡಿ
3. ICSE (Class X) ಎಂಬಲ್ಲಿ ಕ್ಲಿಕ್​ ಮಾಡಿ
4. ಅಲ್ಲಿ ನಿಮ್ಮ ತರಗತಿ, ಐಡಿ, ಇಂಡೆಕ್ಸ್ ನಂಬರ್​ ಹಾಗೂ ಅಟೋ ಜನರೇಟೆಡ್​ ಕೋಡ್​ಗಳನ್ನು ನಮೂದಿಸಿ..ಸಬ್​ಮಿಟ್ ಮಾಡಿದರೆ ಫಲಿತಾಂಶ ಕಾಣಿಸುತ್ತದೆ. 12ನೇ ತರಗತಿಯ ಫಲಿತಾಂಶವನ್ನೂ ಹೀಗೇ ನೋಡಬಹುದಾಗಿದೆ.

ಇದನ್ನೂ ಓದಿ: ಯಾದಗಿರಿ: ಕಷ್ಟಕಾಲದಲ್ಲಿ ಒದಗದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಂತ್ರಸ್ತರ ತೀವ್ರ ಆಕ್ರೋಶ

CSE ISC 2021 Result 2021 declared today and Here is process how to check scores