ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯ ನೋಂದಣಿ ದಿನಾಂಕ ಜನವರಿ 15 ರವರೆಗೆ ವಿಸ್ತರಣೆ

|

Updated on: Jan 13, 2024 | 7:13 PM

ಇಂಡಿಯಾಸ್ಕಿಲ್ಸ್ ನಮ್ಮ ದೇಶವನ್ನು ನಿಜಕ್ಕೂ ವಿಶಿಷ್ಟವಾಗಿಸುವ ವೈವಿಧ್ಯತೆಯನ್ನು ಸಂಭ್ರಮಿಸುವ ವೇದಿಕೆಯಾಗಿದೆ ಮತ್ತು ನಮ್ಮ ಕೌಶಲ್ಯದ ಚಾಂಪಿಯನ್ನರಿಗೆ ವೇದಿಕೆ ಒದಗಿಸುತ್ತದೆ. ಈ ಸ್ಪರ್ಧೆಯು `ಕುಶಲ ಭಾರತ ವಿಕಸಿತ ಭಾರತ’ಕ್ಕೆ ಸೌಲಭ್ಯ ಕಲ್ಪಿಸಲಿದ್ದು ಅದು ತಡೆರಹಿತವಾಗಿ ವೃತ್ತಿಶಿಕ್ಷಣವನ್ನು ಸುಸಜ್ಜಿತ ತರಬೇತಿಯೊಂದಿಗೆ ಏಕೀಕರಿಸುತ್ತದೆ ಮತ್ತು ಸ್ವಯಂ-ಸಬಲೀಕರಣ, ಆವಿಷ್ಕಾರ ಮತ್ತು ವೃತ್ತಿಗಳಲ್ಲಿ ಪ್ರವರ್ಧಮಾನಕ್ಕೆ ಬರುವ ಯುವಜನರ ಪ್ರಯಾಣ ರೂಪಿಸುತ್ತದೆ.

ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯ ನೋಂದಣಿ ದಿನಾಂಕ ಜನವರಿ 15 ರವರೆಗೆ ವಿಸ್ತರಣೆ
NSDC
Follow us on

ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೊರೇಷನ್(ಎನ್.ಎಸ್.ಡಿ.ಸಿ) ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ಸಚಿವಾಲಯದ ಆಶ್ರಯದಲ್ಲಿ ಅಖಿಲ ಭಾರತದ ಸ್ಪರ್ಧೆ ಇಂಡಿಯಾಸ್ಕಿಲ್ಸ್ 2023-24 ಆಯೋಜಿಸುತ್ತಿದ್ದು ಲಕ್ಷಾಂತರ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಹೊಂದಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವು ಅಸಂಖ್ಯ ಕೌಶಲ್ಯಗಳ ಸಂಭ್ರಮಿಸಲು ಬಯಸುತ್ತದೆ, ವ್ಯಕ್ತಿಗಳಿಗೆ ಅವಕಾಶಗಳನ್ನು ತುಂಬಿದ ಭವಿಷ್ಯ ಒದಗಿಸುವ ಮೂಲಕ ಸಬಲೀಕರಿಸಲಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಭಾಗವಹಿಸುವವರಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದ ಈ ಸ್ಪರ್ಧೆಯ ಅಂತಿಮ ದಿನಾಂಕವನ್ನು ಜನವರಿ 15, 2024ರವರೆಗೆ ವಿಸ್ತರಿಸಲಾಯಿತು.

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾರತವನ್ನು ವಿಶ್ವದಲ್ಲಿ ತೃತೀಯ ಅತ್ಯಂತ ದೊಡ್ಡ ಅರ್ಥವ್ಯವಸ್ಥೆಯಾಗಿಸುವ ಧ್ಯೇಯಕ್ಕೆ ಪೂರಕವಾಗಿ ಈ ಸ್ಪರ್ಧೆಯು `ಅಮೃತ್ ಪೀಧಿ’ಗೆ ವಿಶಿಷ್ಟ ಅವಕಾಶ ಒದಗಿಸಲಿದ್ದು ಸಾಂಪ್ರದಾಯಿಕ/ಹೊಸ ಉದ್ಯೋಗದ ಜವಾಬ್ದಾರಿಗಳನ್ನು ಉದ್ಯೋಗಾರ್ಹತೆ ಮತ್ತು ಕ್ಷೇತ್ರದ ಕೌಶಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ವಿಶಿಷ್ಟ ಅವಕಾಶ ನೀಡುತ್ತದೆ. ಈ ಸ್ಪರ್ಧೆಯು ಕೌಶಲ್ಯಗಳು ಮತ್ತು ಕರಕುಶಲತೆಯ ಉಜ್ವಲ ಸಂಭ್ರಮವಾಗಿದ್ದು ಕೌಶಲ್ಯದ ಅಂತರ ತುಂಬಲು ಸದೃಢ ವೇದಿಕೆಯಾಗಿದೆ ಮತ್ತು ಯುವಜನರಿಗೆ ಸಾಮರ್ಥ್ಯ, ಶ್ರೇಷ್ಠತೆ ಮತ್ತು ಉತ್ಪಾದಕತೆಯ ವಿಶ್ವಮಟ್ಟದ ಮಾನದಂಡಗಳನ್ನು ಸಾಧಿಸಲು ನೆರವಾಗುತ್ತದೆ.

ಈ ವಿಸ್ತರಿಸಿದ ಗಡುವಿನಿಂದ ಅಭ್ಯರ್ಥಿಗಳಿಂದ ಹೆಚ್ಚಿನ ಆಸಕ್ತಿಗೆ ಅವಕಾಶ ಕಲ್ಪಿಸಲಿದೆ ಮತ್ತು ಇದು ಎಲ್ಲ ಸಂಭವನೀಯ ಅಭ್ಯರ್ಥಿಗಳಿಗೆ ಅವರ ನೋಂದಣಿಗಳನ್ನು ಪೂರೈಸಲು ಮತ್ತು ಈ ಪ್ರತಿಷ್ಠಿತ ಕಾರ್ಯಕ್ರಮದ ಭಾಗವಾಗಲು ತಕ್ಕಷ್ಟು ಸಮಯ ನೀಡುತ್ತದೆ.

ಈ ಅದ್ಧೂರಿ ಕಾರ್ಯಕ್ರಮಕ್ಕೆ ನೋಂದಣಿಯು ಸ್ಕಿಲ್ ಇಂಡಿಯಾ ಪೋರ್ಟಲ್ ನಲ್ಲಿ ಪ್ರಾರಂಭವಾಗಿದ್ದು ದೇಶದ ಮೂಲೆ ಮೂಲೆಯಿಂದ ಆಕಾಂಕ್ಷಿಗಳಿಗೆ ಅವರ ಪ್ರತಿಭೆಗಳನ್ನು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತದೆ. ಈ ಸ್ಪರ್ಧೆಯು ಜಿಲ್ಲೆ, ರಾಜ್ಯ,

ವಲಯ ಮತ್ತು ರಾಷ್ಟ್ರ ಮಟ್ಟಗಳ ಮೂಲಕ ನಡೆಯಲಿದ್ದು ಅಂತಿಮ ಪುರಸ್ಕಾರವು ಭಾರತವನ್ನು ಫ್ರಾನ್ಸ್ ನ ಲೈಯಾನ್ ನಲ್ಲಿ 2024ರಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್ ಕಾಂಪಿಟಿಷನ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಹೊಂದಿರುತ್ತದೆ.

ಎನ್.ಎಸ್.ಡಿ.ಸಿ.ಯ ಸಿಇಒ ಮತ್ತು ಎನ್.ಎಸ್.ಡಿ.ಸಿ. ಇಂಟರ್ನ್ಯಾಷನಲ್ ಎಂ.ಡಿ. ವೇದ್ ಮಣಿ ತಿವಾರಿ, ಉದಯೋನ್ಮುಖ ವೃತ್ತಿಪರರಲ್ಲಿ ವೃತ್ತಿಗಳ ಮುಂದುವರಿಕೆಯಲ್ಲಿ ಇಂಡಿಯಾಸ್ಕಿಲ್ಸ್ ಪಾತ್ರವನ್ನು ಎತ್ತಿ ತೋರಿಸಿದರು. ಅವರು ಈ ಸ್ಪರ್ಧೆಯ ಪ್ರಾಮುಖ್ಯತೆಯು ಭಾಗವಹಿಸುವವರಿಗೆ ಅವರ ಕೌಶಲ್ಯಗಳನ್ನು ಪರಿಪೂರ್ಣವಾಗಿ ಪ್ರದರ್ಶಿಸಲು ಅವಕಾಶ ನೀಡುವುದರಲ್ಲಿದೆ ಎಂದರು.

ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ವಿಭಾಗಗಳಿದ್ದು ಅದರಲ್ಲಿ ನಿರ್ಮಾಣ ಮತ್ತು ಕಟ್ಟಡ ತಂತ್ರಜ್ಞಾನ, ವಾಹನ ತಂತ್ರಜ್ಞಾನ, ಫ್ಯಾಷನ್ ಡಿಸೈನಿಂಗ್, ಹೇರ್ ಡ್ರೆಸ್ಸಿಂಗ್, ಬೇಕಿಂಗ್, ಇಂಡಸ್ಟ್ರಿ 4.0, ಸೈಬರ್ ಸೆಕ್ಯುರಿಟಿ ಮತ್ತಿತರ ಒಳಗೊಂಡಿವೆ. ಈ ಒಳಗೊಳ್ಳುವಿಕೆಯು ವ್ಯಕ್ತಿಗಳ ಶ್ರೇಷ್ಠತೆಯ ವ್ಯಾಪ್ತಿ ಹೆಚ್ಚಿಸಿರುವುದೇ ಅಲ್ಲದೆ ಹಲವಾರು ವಲಯಗಳ ನಡುವೆ ಸಹಯೋಗವನ್ನೂ ಉತ್ತೇಜಿಸುತ್ತದೆ.

ಇಂಡಿಯಾಸ್ಕಿಲ್ಸ್ ನಮ್ಮ ದೇಶವನ್ನು ನಿಜಕ್ಕೂ ವಿಶಿಷ್ಟವಾಗಿಸುವ ವೈವಿಧ್ಯತೆಯನ್ನು ಸಂಭ್ರಮಿಸುವ ವೇದಿಕೆಯಾಗಿದೆ ಮತ್ತು ನಮ್ಮ ಕೌಶಲ್ಯದ ಚಾಂಪಿಯನ್ನರಿಗೆ ವೇದಿಕೆ ಒದಗಿಸುತ್ತದೆ. ಈ ಸ್ಪರ್ಧೆಯು `ಕುಶಲ ಭಾರತ ವಿಕಸಿತ ಭಾರತ’ಕ್ಕೆ ಸೌಲಭ್ಯ ಕಲ್ಪಿಸಲಿದ್ದು ಅದು ತಡೆರಹಿತವಾಗಿ ವೃತ್ತಿಶಿಕ್ಷಣವನ್ನು ಸುಸಜ್ಜಿತ ತರಬೇತಿಯೊಂದಿಗೆ ಏಕೀಕರಿಸುತ್ತದೆ ಮತ್ತು ಸ್ವಯಂ-ಸಬಲೀಕರಣ, ಆವಿಷ್ಕಾರ ಮತ್ತು ವೃತ್ತಿಗಳಲ್ಲಿ ಪ್ರವರ್ಧಮಾನಕ್ಕೆ ಬರುವ ಯುವಜನರ ಪ್ರಯಾಣ ರೂಪಿಸುತ್ತದೆ.

ವರ್ಲ್ಡ್ ಸ್ಕಿಲ್ಸ್ ವಿಶ್ವದ ಅತ್ಯಂತ ದೊಡ್ಡ ಕೌಶಲ್ಯ ಸ್ಪರ್ಧೆಯಾಗಿದ್ದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿದ್ದು 86 ಸದಸ್ಯ ದೇಶಗಳನ್ನು ಹೊಂದಿರುವ ವರ್ಲ್ಡ್ ಸ್ಕಿಲ್ಸ್ ಇಂಟರ್ನ್ಯಾಷನಲ್ ಆಯೋಜಿಸುತ್ತದೆ.