ಜನವರಿ 2023 ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ ಆನ್ಸರ್ ಕೀಯ ಆಕ್ಷೇಪಣೆ ನೋಂದಾಯಿಸಲು ಇಂದು (ಸಂಜೆ 7:50) ಕೊನೆಯ ದಿನ. ಜನವರಿ 24 – ಫೆಬ್ರವರಿ 1 ರ ನಡುವೆ ನಡೆದ ಜೆಇಇ ಮೇನ್ 2023 ಸೆಷನ್ 1 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪ್ರತಿ ಪ್ರಶ್ನೆಗೆ 200 ರೂ ಮರುಪಾವತಿಸಲಾಗದ ಶುಲ್ಕವನ್ನು ಪಾವತಿಸುವ ಮೂಲಕ ಆನ್ಸರ್ ಕೀ ಆಕ್ಷೇಪಣೆಗೆ ನೋಂದಾಯಿಸಬಹುದು . jeemain.nta.nic.in ವೆಬ್‌ಸೈಟ್ ಪೇಪರ್ 1 ಬಿಇ, ಬಿಟೆಕ್ ಪೇಪರ್ ಮತ್ತು ಪೇಪರ್ 2 ಬಿಪ್ಲಾನಿಂಗ್ ಮತ್ತು ಬಿಆರ್ಚ್ ಪೇಪರ್‌ಗಳಿಗೆ ಜೆಇಇ ಮುಖ್ಯ ಆನ್ಸರ್ ಕೀಯನ್ನು ಕೂಡ ಒದಗಿಸುತ್ತಿದೆ.
ಈ ವರ್ಷ, 9 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಜೆಇಇ ಮೇನ್ ಸೆಷನ್ 1 ಗೆ ನೋಂದಾಯಿಸಿಕೊಂಡಿದ್ದರು ಅದರಲ್ಲಿ 95.8% ರಷ್ಟು ಹಾಜರಾತಿ ದಾಖಲಾಗಿದೆ. ಅದರಲ್ಲಿ 8.6 ಲಕ್ಷ ಜನರು ಪೇಪರ್ 1 ಬಿಇ , ಬಿಟೆಕ್ ಮತ್ತು 0.46 ಲಕ್ಷ ಪೇಪರ್ 2 ಬಿಆರ್ಚ್ ಮತ್ತು ಬಿಪ್ಲಾನಿಂಗ್ ಗೆ ನೋಂದಾಯಿಸಿಕೊಂಡಿದ್ದರು. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪ್ರೋವಿಷಿನಲ್ ಜೆಇಇ 2023 ಸೆಷನ್ 2 ಆನ್ಸರ್ ಕೀಯ ಆಕ್ಷೇಪಣೆ ನೋಂದಣಿ ಮಾಡಬಹುದು. ಜೆಇಇ ಮೇನ್ 2023 ಸೆಷನ್ 2 ಆನ್ಸರ್ ಕೀಯನ್ನು ಪರಿಶೀಲಿಸಲು ಅಭ್ಯರ್ಥಿಗಳು, ಜೆಇಇ ಮೇನ್ ಅಪ್ಲಿಕೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಪಾಸ್‌ವರ್ಡ್‌ನ ಬಳಸಬೇಕು.
ಜೆಇಇ ಮೇನ್ ಫಲಿತಾಂಶವನ್ನು ಆಕ್ಷೇಪಣೆ ನೋಂದಣಿಗಳನ್ನ ಪರಿಗಣಿಸಿದ ನಂತರ ನೀಡಲಾಗುತ್ತದೆ. ಜೆಇಇ ಮೇನ್ 2023 ಸೆಷನ್ 1 ಫಲಿತಾಂಶವನ್ನು ಫೆಬ್ರವರಿ 6 ರಂದು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಜೆಇಇ ಮೇನ್ 2023 ಸೆಷನ್ 1 ಅಪ್ಲಿಕೇಶನ್ ಅರ್ಹತೆ ಮತ್ತು ವರ್ಗದ ಸ್ಟೇಟ್ ಕೋಡ್ ಅನ್ನು ತಿದ್ದುಪಡಿ ಮಾಡಲು NTA ಅಪ್ಲಿಕೇಶನ್ ಕರೆಕ್ಷನ್ ವಿಂಡೋ ತೆರೆದಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ – jeemain.nta.nic.in ನಲ್ಲಿ ಕೋಡ್ ಅನ್ನು ಮಾರ್ಪಡಿಸಲು ಸಾಧ್ಯವಾಗುತ್ತದೆ. ತಿದ್ದುಪಡಿಗಳನ್ನು ಮಾಡಲು ಕೊನೆಯ ದಿನಾಂಕ ಫೆಬ್ರವರಿ 5 (ಸಂಜೆ 5:00 )
Published On - 2:58 pm, Sat, 4 February 23