ಮದರಸಾಗಳಲ್ಲಿ ಉಗ್ರ ಚಟುವಟಿಕೆ ಆರೋಪ: ಅಲರ್ಟ್ ಆದ ರಾಜ್ಯ ಸರ್ಕಾರ, ವರದಿ ನೀಡಲು ಸಮಿತಿ ರಚನೆ

| Updated By: ಸಾಧು ಶ್ರೀನಾಥ್​

Updated on: Sep 30, 2022 | 2:57 PM

ಮದರಸಾಗಳಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ. ಹಾಗಾಗಿ ಮದರಸಾಗಳ ಬ್ಯಾನ್ ಮಾಡುವಂತೆ ಶಿಕ್ಷಣ ಇಲಾಖೆಗೆ ದೂರುಗಳು ಬಂದ ಹಿನ್ನೆಲೆ ಸರ್ಕಾರ ಅಲರ್ಟ್ ಆಗಿದೆ. ರಾಜ್ಯದ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಶಿಕ್ಷಣ ಇಲಾಖೆಯ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ.

ಮದರಸಾಗಳಲ್ಲಿ ಉಗ್ರ ಚಟುವಟಿಕೆ ಆರೋಪ: ಅಲರ್ಟ್ ಆದ ರಾಜ್ಯ ಸರ್ಕಾರ, ವರದಿ ನೀಡಲು ಸಮಿತಿ ರಚನೆ
ಮದರಸಾಗಳಲ್ಲಿ ಉಗ್ರ ಚಟುವಟಿಕೆ ಆರೋಪ: ಅಲರ್ಟ್ ಆದ ರಾಜ್ಯ ಸರ್ಕಾರ, ವರದಿ ನೀಡಲು ಸಮಿತಿ ರಚನೆ
Follow us on

ಬೆಂಗಳೂರು: ಕೇಂದ್ರ ಸರ್ಕಾರವು ಪಿಎಫ್ಐ ಸಂಘಟನೆಯ ಮಹಾ ಬ್ಯಾನ್ ಬಳಿಕ ಇದೀಗ ಕರ್ನಾಟಕ ಸರ್ಕಾರವು (karnataka government) ರಾಜ್ಯದಲ್ಲಿರುವ 960 ಮದರಸಾಗಳ ಚಟುವಟಿಕೆ (Madrasa center) ಮೇಲೆ ಕಣ್ಣು ನೆಟ್ಟಿದೆ. ರಾಜ್ಯದಲ್ಲಿರುವ 960 ಮದರಸಾಗಳ ಚಟುವಟಿಕೆ ಕುರಿತು ಅಧ್ಯಯನ ವರದಿ ಸಲ್ಲಿಸುವಂತೆ ರಾಜ್ಯ ಶಿಕ್ಷಣ ಇಲಾಖೆಗೆ ಸರ್ಕಾರ ಸೂಚಿಸಿದೆ. ಮದರಸಾ ಸಹ ಬ್ಯಾನ್ ಮಾಡುಬೇಕು ಎಂಬ ಒತ್ತಾಯದ ಬೆನ್ನಲ್ಲೇ ಅಧ್ಯಯನಕ್ಕೆ ಶಿಕ್ಷಣ ಇಲಾಖೆ (education) ಪ್ರಕ್ರಿಯೆಗೆ ಮುಂದಾಗಿದೆ.

ಉತ್ತರ ಪ್ರದೇಶ ಮಾದರಿ ಜಾರಿಯಾದ್ರೆ ಏನಾಗುತ್ತೆ…?
ಮದರಸಾಗಳಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ. ಹಾಗಾಗಿ ಮದರಸಾಗಳ ಬ್ಯಾನ್ ಮಾಡುವಂತೆ ಶಿಕ್ಷಣ ಇಲಾಖೆಗೆ ದೂರುಗಳು ಬಂದ ಹಿನ್ನೆಲೆ ಸರ್ಕಾರ ಅಲರ್ಟ್ ಆಗಿದೆ. ರಾಜ್ಯದ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಶಿಕ್ಷಣ ಇಲಾಖೆಯ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿಯು ಮದರಸಾಗಳ ಕಂಪ್ಲೀಟ್ ಚಟುವಟಿಕೆ ಕುರಿತು ವರದಿ ನೀಡಲಿದೆ. ವರದಿ ಬಳಿಕ ಮದರಸಾಗಳ ಬ್ಯಾನ್ ಮಾಡಬೇಕಾ ಅಥವಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕಾ ಅಂತಾ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಮದರಸಾಗಳ ವಿರುದ್ಧ ಕ್ರಮ ಜಾರಿಯಾಗುವ ಸಾಧ್ಯತೆಯಿದೆ.