Medical courses: ಕೆಇಎ ವೈದ್ಯಕೀಯ ಪ್ರವೇಶಾತಿ; ಸಿಇಟಿ ಅರ್ಜಿಗೆ ನೀಟ್ ರೋಲ್ ನಂಬರ್ ಸೇರಿಸಲು ಆ.03 ಕೊನೆ ದಿನ

ನೀಟ್ ಅರ್ಹತೆ ಪಡೆದ ಅಭ್ಯರ್ಥಿಗಳು ವೈದ್ಯಕೀಯ, ದಂತವೈದ್ಯಕೀಯ ಹಾಗೂ ಆಯುಷ್ ಕೋರ್ಸ್‌ಗಳ ಪ್ರವೇಶಾತಿಗೆ ತಮ್ಮ ಸಿಇಟಿ ಅರ್ಜಿಗೆ ನೀಟ್ ರೋಲ್ ನಂಬರ್ ಸೇರಿಸಲು ಕೆಇಎ ಅವಕಾಶ ನೀಡಿದೆ. ರಾಜ್ಯ ಮೆರಿಟ್ ಪಟ್ಟಿ ಪ್ರಕಟವಾಗಿದ್ದು, ಆಗಸ್ಟ್ 3ರೊಳಗೆ ರೋಲ್ ನಂಬರ್ ನಮೂದಿಸುವುದು ಕಡ್ಡಾಯ. ಲಿಂಕ್ ಚಾಲನೆಯಾದ ಮೊದಲ ದಿನವೇ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಯಶಸ್ವಿಯಾಗಿ ನೋಂದಾಯಿಸಿರುವುದು ವರದಿಯಾಗಿದೆ.

Medical courses: ಕೆಇಎ ವೈದ್ಯಕೀಯ ಪ್ರವೇಶಾತಿ; ಸಿಇಟಿ ಅರ್ಜಿಗೆ ನೀಟ್ ರೋಲ್ ನಂಬರ್ ಸೇರಿಸಲು ಆ.03 ಕೊನೆ ದಿನ
ಕೆಇಎ ವೈದ್ಯಕೀಯ ಪ್ರವೇಶಾತಿ

Updated on: Aug 01, 2026 | 9:37 AM

ಬೆಂಗಳೂರು: ನೀಟ್ (NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದು ವೈದ್ಯಕೀಯ (MBBS), ದಂತವೈದ್ಯಕೀಯ (BDS) ಹಾಗೂ ಆಯುಷ್ (AYUSH) ಕೋರ್ಸ್‌ಗಳ ಪ್ರವೇಶಾತಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಮುಖ ಸೂಚನೆಯೊಂದನ್ನು ನೀಡಿದೆ. ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಸಿಇಟಿ (CET) ಅರ್ಜಿಯೊಂದಿಗೆ ನೀಟ್ ರೋಲ್ ನಂಬರ್ ಅನ್ನು ನಮೂದಿಸಲು ವೆಬ್‌ಸೈಟ್‌ನಲ್ಲಿ ಲಿಂಕ್ ಲಭ್ಯಗೊಳಿಸಲಾಗಿದೆ.

ಆಗಸ್ಟ್ 3ರೊಳಗೆ ರೋಲ್ ನಂಬರ್ ನಮೂದಿಸುವುದು ಕಡ್ಡಾಯ:

ಅರ್ಹ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ಯಾವುದೇ ತಪ್ಪುಗಳಿಲ್ಲದೆ ಅತ್ಯಂತ ನಿಖರವಾಗಿ ನಮೂದಿಸಬೇಕು. ರೋಲ್ ನಂಬರ್ ನಮೂದಿಸಿದ ನಂತರ, ಅಭ್ಯರ್ಥಿಗಳು ನವೀಕರಿಸಿದ ಅರ್ಜಿ (Updated Application Form) ಹಾಗೂ ಪರಿಶೀಲನಾ ಚೀಟಿಯನ್ನು (Verification Slip) ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ 3 ಕೊನೆಯ ದಿನಾಂಕವಾಗಿದೆ. ಲಿಂಕ್ ಚಾಲನೆಯಾದ ಮೊದಲ ದಿನವೇ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಯಶಸ್ವಿಯಾಗಿ ನೋಂದಾಯಿಸಿದ್ದಾರೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ವೆಬ್‌ಸೈಟ್‌ನಲ್ಲಿ ರಾಜ್ಯ ಮೆರಿಟ್ ಪಟ್ಟಿ ಪ್ರಕಟ:

ಮತ್ತೊಂದೆಡೆ, ರಾಜ್ಯ ಮೆರಿಟ್ ಪಟ್ಟಿ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿರುವ ಅರ್ಜಿ ವಿವರಗಳನ್ನು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಒಟ್ಟು 69,170 ಅರ್ಹ ಅಭ್ಯರ್ಥಿಗಳ ಅಂಕಗಳ ಪಟ್ಟಿಯನ್ನು ಮೆರಿಟ್ ಆಧಾರದಲ್ಲಿ (ಇಳಿಕೆ ಕ್ರಮದಲ್ಲಿ) ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಸನ್ನ ಹೆಚ್. ತಿಳಿಸಿದ್ದಾರೆ.

ಆಲ್ ಇಂಡಿಯಾ ರ‍್ಯಾಂಕ್ 20 ಪಡೆದ ವಿದ್ಯಾರ್ಥಿಯೇ ರಾಜ್ಯಕ್ಕೆ ಪ್ರಥಮ:

ಈ ಬಾರಿಯ ರಾಜ್ಯ ಮೆರಿಟ್ ಪಟ್ಟಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 20ನೇ ರ‍್ಯಾಂಕ್ (AIR 20) ಗಳಿಸಿರುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ತಕ್ಷಣವೇ KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಮಾಹಿತಿಯನ್ನು ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 am, Sat, 1 August 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us