ಬೆಂಗಳೂರು: ಇಂದು (ಅ.11) ಎಸ್ಎಸ್ಎಲ್ಸಿ (SSLC) ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಇಲಾಖೆ ಸಚಿವ ಬಿ ಸಿ ನಾಗೇಶ್ (BC Nagesh) ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಫಲಿತಾಂಶ ಪ್ರಕಟವಾಗಿದೆ. ಪೂರಕ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 599 ಅಂಕಗಳೊಂದಿಗೆ ಉತ್ತೀರ್ಣ ಹೊಂದಿರುವ ಗ್ರೀಷ್ಮಾ ನಾಯ್ಕ್ ಪೂರಕ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಮೂಡಬಿದರಿಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಗ್ರೀಷ್ಮಾ ನಾಯ್ಕ್ 599 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಫೀಸ್ ಕಟ್ಟಿಲ್ಲ ಅಂತಾ ವಿದ್ಯಾರ್ಥಿನಿಗೆ ಎಕ್ಸಾಂ ನೋಂದಣಿ ಮಾಡಿರಲಿಲ್ಲ. ಮೂಡಬಿದರಿಯ ಆಳ್ವಾಸ್ ಕಾಲೇಜು ಪರೀಕ್ಷೆಗೆ ನೋಂದಣಿ ಮಾಡದ ಹಿನ್ನೆಲೆ ಮೊದಲ ಪ್ರಯತ್ನದ ಪರೀಕ್ಷೆಯಿಂದ ವಿದ್ಯಾರ್ಥಿನಿ ಗ್ರೀಷ್ಮಾ ನಾಯ್ಕ್ ವಂಚಿತಳಾಗಿದ್ದರು. ಆದರೆ ಪೂರಕ ಪರೀಕ್ಷೆಯಲ್ಲಿ 599 ಅಂಕಗಳೊಂದಿಗೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಪರೀಕ್ಷೆ ಬರೆಯಲು ಅವಕಾಶ ಸಿಗದ ಹಿನ್ನೆಲೆ ವಿದ್ಯಾರ್ಥಿನಿ ಗ್ರೀಷ್ಮಾ ನಾಯ್ಕ್ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಸುರೇಶ್ ಕುಮಾರ್ ವಿದ್ಯಾರ್ಥಿನಿ ಮನೆಗೆ ಹೋಗಿದ್ದರು. ಗ್ರೀಷ್ಮಾಗೆ ಸಮಾಧಾನ ಹೇಳಿ ಬಂದಿದ್ದರು. ಹೀಗಾಗಿ ಪೂರಕ ಪರೀಕ್ಷೆ ಬರೆದಿದ್ದರು.
ಸೆಪ್ಟೆಂಬರ್ 27, 29ರಂದು ನಡೆದಿದ್ದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆದಿತ್ತು. ಒಟ್ಟು 53,155 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 29,522 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಶೇ.55.54ರಷ್ಟು ಫಲಿತಾಂಶ ಬಂದಿದೆ. ಸುದ್ದಿಗೋಷ್ಠಿ ಮೂಲಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ವೇಳೆ ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕಿ ಸುಮಂಗಲಾ ಭಾಗಿಯಾಗಿದ್ದರು.
ಇದನ್ನೂ ಓದಿ
ಹೇಮಾವತಿ ನಾಲೆ -ಮುಂಗಾರು ಮಳೆಯ ಪ್ರಭಾವ ತನ್ನಷ್ಟಕ್ಕೆ ತಾನೇ ಉಕ್ಕುತ್ತಿದೆ ಬೋರ್ವೆಲ್ ನೀರು
MS Dhoni: ಕಳೆದ ವರ್ಷ ಮೊದಲ ತಂಡವಾಗಿ ಹೊರಕ್ಕೆ, ಈ ಬಾರಿ ಫೈನಲ್ಗೆ: ಪಂದ್ಯ ಮುಗಿದ ಬಳಿಕ ಧೋನಿ ಆಡಿದ ಮಾತು ಕೇಳಿ
Published On - 10:30 am, Mon, 11 October 21