MS Dhoni: ಕಳೆದ ವರ್ಷ ಮೊದಲ ತಂಡವಾಗಿ ಹೊರಕ್ಕೆ, ಈ ಬಾರಿ ಫೈನಲ್​ಗೆ: ಪಂದ್ಯ ಮುಗಿದ ಬಳಿಕ ಧೋನಿ ಆಡಿದ ಮಾತು ಕೇಳಿ

DC vs CSK Qualifier 1 IPL 2021: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಬಳಿಕ ಮಾತನಾಡಿದ ಧೋನಿ ತಂಡದ ಪ್ರದರ್ಶನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

MS Dhoni: ಕಳೆದ ವರ್ಷ ಮೊದಲ ತಂಡವಾಗಿ ಹೊರಕ್ಕೆ, ಈ ಬಾರಿ ಫೈನಲ್​ಗೆ: ಪಂದ್ಯ ಮುಗಿದ ಬಳಿಕ ಧೋನಿ ಆಡಿದ ಮಾತು ಕೇಳಿ
MS Dhoni DC vs CSK Qualifier 1 IPL 2021
Follow us
TV9 Web
| Updated By: Vinay Bhat

Updated on: Oct 11, 2021 | 9:09 AM

ಐಪಿಎಲ್ 2020 ರಲ್ಲಿ (Indian Premier League) ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2021 ರಲ್ಲಿ (IPL 2021) ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಕಳೆದ ವರ್ಷ ಟೂರ್ನಿಯಿಂದ ಹೊರಬೀಳುವ ಹೊತ್ತಿಗೆ ನಾಯಕ ಎಂ ಎಸ್ ಧೋನಿ (MS Dhoni) ಮುಂದಿನ ಆವೃತ್ತಿಯಲ್ಲಿ ಖಂಡಿತಾ ಕಮ್​ಬ್ಯಾಕ್ ಮಾಡುತ್ತೇವೆ ಎಂಬ ಮಾತು ನೀಡಿದ್ದರು. ಇದನ್ನು ಚಾಚೂತಪ್ಪದೆ ಪಾಲಿಸಿದ್ದಾರೆ. ಐಪಿಎಲ್‌ನಲ್ಲಿ ಮೂರು ಬಾರಿ ಚಾಂಪಿಯನ್ಸ್ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಫೈನಲ್‌ಗೆ ಪ್ರವೇಶಿಸಿರುವುದು ಇದು 9ನೇ ಬಾರಿ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯದಲ್ಲಿ ಚೆನ್ನೈ 4 ವಿಕೆಟ್​ಗಳ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ ತಂಡದ ಪ್ರದರ್ಶನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಈ ಪಂದ್ಯದಲ್ಲಿ ನನ್ನ ಬ್ಯಾಟಿಂಗ್ ತುಂಬಾನೇ ಮುಖ್ಯವಾಗಿತ್ತು. ಡೆಲ್ಲಿ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿದೆ. ಅವರು ಸಂದರ್ಭಕ್ಕೆ ತಕ್ಕಂತೆ ಬೌಲಿಂಗ್ ಮಾಡುತ್ತಾರೆ ಎಂಬ ಅರಿವು ನಮಗಿತ್ತು. ನಾನು ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ ಇದು ನನ್ನ ಪಾಲಿಗೆ ತುಂಬಾನೇ ಪ್ರಮುಖವಾಗಿತ್ತು. ನೆಟ್​ನಲ್ಲಿ ನಾನು ಉತ್ತಮ ಬ್ಯಾಟಿಂಗ್ ನಡೆಸಿದ್ದೆ. ಆದರೆ, ಈ ಬಗ್ಗೆ ಹೆಚ್ಚಿನ ಯೋಚನೆಗೆ ಇಳಿಯಬಾರದು. ಯೋಚನೆ ಮಾಡುತ್ತಾ ಕೂತರೆ ನಿಮ್ ಪ್ಲಾನ್ ಕಾರ್ಯರೂಪಕ್ಕೆ ಬರುವುದಿಲ್ಲ” ಎಂದು ಧೋನಿ ಹೇಳಿದ್ದಾರೆ.

ಇನ್ನೂ ಶಾರ್ದೂಲ್ ಠಾಕೂರ್​​ರನ್ನು ಅಪ್ ಆರ್ಡರ್​ನಲ್ಲಿ ಕಣಕ್ಕಿಳಿಸಿದ ಬಗ್ಗೆ ಮಾತನಾಡಿದ ಧೋನಿ, “ಶಾರ್ದೂಲ್ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮೊದಲ ಎಸೆತದಲ್ಲೇ ಬಿಗ್ ಶಾಟ್ ಹೊಡೆಯಲು ಯತ್ನಿಸುತ್ತಾರೆ. ಹೀಗಾಗಿ ಠಾಕೂರ್​ರನ್ನು ಪ್ರಮೋಟ್ ಮಾಡಲು ಮುಂದಾದೆವು” ಎಂದರು.

ರಾಬಿನ್ ಉತ್ತಪ್ಪ ಆಟದ ಬಗ್ಗೆ ಮಾತನಾಡಿದ ಧೋನಿ, “ರಾಬಿನ್ ಟಾಪ್ ಆರ್ಡರ್​​ನಲ್ಲಿ ಬ್ಯಾಟಿಂಗ್ ಮಾಡುವುದನ್ನು ಎಂಜಾಯ್ ಮಾಡುತ್ತಾರೆ. ನಂ. 3 ರಲ್ಲಿ ಮೊಯೀನ್ ಅಲಿ ಕೂಡ ಅದ್ಭುತವಾಗಿ ಬ್ಯಾಟ್ ಬೀಸುತ್ತಾರೆ. ಆದರೆ, ನಾವು ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಆರ್ಡರ್ ಬದಲಿಸಬೇಕಾಗುತ್ತದೆ. ರುತುರಾಜ್ ಕೂಡ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ನಾನು ಮತ್ತು ರುತುರಾಜ್ ಕೆಲ ಸಮಯ ಗೇಮ್ ಪ್ಲಾನ್ ಬಗ್ಗೆ ಮಾತನಾಡಿಕೊಂಡೆವು. ಅವರಿಗೆ 20 ಓವರ್ ಆಡುವ ಸಾಮರ್ಥ್ಯವಿದೆ. ದಿನದಿಂದ ದಿನಕ್ಕೆ ಸಾಕಷ್ಟು ಸುಧಾರಣೆಯಾಗುತ್ತಿದ್ದಾರೆ” ಎಂದು ಹೇಳಿದರು.

ಐಪಿಎಲ್‌ನಲ್ಲಿ ಯಶಸ್ವಿ ತಂಡ ಎನಿಸಿಕೊಂಡಿರುವ ಸಿಎಸ್‌ಕೆ ಒಟ್ಟು 9 ಬಾರಿ ಫೈನಲ್‌ಗೆ ಪ್ರವೇಶಿಸಿದೆ. ಆ ವರ್ಷಗಳೆಂದರೆ 2008, 2010, 2011, 2012, 2013, 2015, 2018, 2019, 2021. ಮೊದಲ ಕ್ವಾಲಿಫೈಯರ್​ನಲ್ಲಿ ಡೆಲ್ಲಿ ತಂಡ ಸೋತರೂ ಫೈನಲ್‌ಗೇರಲು ಇನ್ನೊಂದು ಅವಕಾಶವಿದೆ. ಇಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಆರ್‌ಸಿಬಿ-ಕೆಕೆಆರ್ ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಬುಧವಾರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿಯನ್ನಯ ಎದುರಿಸಲಿದೆ.

Virat Kohli: ಧೋನಿ ಫಿನಿಶಿಂಗ್ ಆಟ ಕಂಡು ಬೆರಗಾದ ವಿರಾಟ್ ಕೊಹ್ಲಿ: ಏನಂದ್ರು ಗೊತ್ತೇ?

IPL 2021 Eliminator, RCB vs KKR: ಇಂದು ಆರ್​ಸಿಬಿ-ಕೆಕೆಆರ್ ನಡುವೆ ಎಲಿಮಿನೇಟರ್ ಪಂದ್ಯ: ಸೋತರೆ ಟೂರ್ನಿಯಿಂದ ಔಟ್

(MS Dhoni said during the post-match presentation in DC vs CSK Qualifier 1 IPL 2021 My innings was a crucial one)