IPL 2021 Eliminator, RCB vs KKR: ಇಂದು ಆರ್​ಸಿಬಿ-ಕೆಕೆಆರ್ ನಡುವೆ ಎಲಿಮಿನೇಟರ್ ಪಂದ್ಯ: ಸೋತರೆ ಟೂರ್ನಿಯಿಂದ ಔಟ್

Royal Challengers Bangalore vs Kolkata Knight Riders: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆರ್​ಸಿಬಿ ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದು ನೋಡಬೇಕಿದೆ. ಜೊತೆಗೆ ಆರ್‌ಸಿಬಿ ಕೊನೆಯ ಸಲ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿದೆ.

IPL 2021 Eliminator, RCB vs KKR: ಇಂದು ಆರ್​ಸಿಬಿ-ಕೆಕೆಆರ್ ನಡುವೆ ಎಲಿಮಿನೇಟರ್ ಪಂದ್ಯ: ಸೋತರೆ ಟೂರ್ನಿಯಿಂದ ಔಟ್
IPL 2021 Eliminator RCB vs KKR
Follow us
| Updated By: Vinay Bhat

Updated on: Oct 11, 2021 | 7:11 AM

ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) ಫೈನಲ್​ಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಕಾಲಿಟ್ಟಾಗಿದೆ. ಇನ್ನೊಂದು ತಂಡ ಯಾವುದು ಎಂಬುದ ಅಗ್ನಿ ಪರೀಕ್ಷೆ ಇಂದಿನಿಂದ ಶುರುವಾಗಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ಈ ಪಂದ್ಯದಲ್ಲಿ ಗೆದ್ದರಷ್ಟೆ ಉಳಿಗಾಲ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳು ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.

ಅಂಕಪಟ್ಟಿಯಲ್ಲಿ 18 ಅಂಕ ಸಂಪಾದಿಸಿದರೂ 3ನೇ ಸ್ಥಾನ ಪಡೆದ ಆರ್‌ಸಿಬಿಗೆ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಪ್ಲೇ ಆಫ್ಸ್‌ಗೆ ಕಾಲಿಟ್ಟ ಕೆಕೆಆರ್‌ ತಂಡದ ಕಠಿಣ ಸವಾಲು ಎದುರಾಗಿದೆ. ಇದೇ ಕೆಕೆಆರ್‌ ಎದುರು ಯುಎಇ ಚರಣದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹೀನಾಯವಾಗಿ ಸೋತಿತ್ತು. ಆದರೆ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸಿಕ್ಕಂತಹ 7 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿರುವ ಆರ್‌ಸಿಬಿ ಎಲಿಮಿನೇಟರ್‌ ಪಂದ್ಯ ಗೆಲ್ಲುವ ಫೇವರಿಟ್‌ ಎನಿಸಿದೆ.

ಇತ್ತ ಕೆಕೆಆರ್ ತಂಡವನ್ನೂ ಕಡೆಗಣಿಸುವಂತಿಲ್ಲ. ಕೋಲ್ಕತ್ತಾ ತಂಡ ಪ್ಲೇ ಆಫ್ ಪ್ರವೇಶಿಸಲು ನಡೆಸಿದ ಹೋರಾಟ ಮರೆಯುವಂತಿಲ್ಲ. ರಾಯಲ್ಸ್‌ ತಂಡವನ್ನು 85ಕ್ಕೆ ಆಲ್‌ಔಟ್‌ ಮಾಡಿ 86 ರನ್‌ಗಳ ಭರ್ಜರಿ ಜಯದೊಂದಿಗೆ ಪ್ಲೇ ಆಫ್ಸ್‌ ರೇಸ್‌ನಲ್ಲಿದ್ದ ಮುಂಬೈ ಇಂಡಿಯನ್ಸ್‌ಗೆ ನಾಕ್‌ಔಟ್‌ ಪಂಚ್‌ ಕೊಟ್ಟು ಆರ್‌ಸಿಬಿ ವಿರುದ್ಧದ ಎಲಿಮಿನೇಟರ್‌ ಪಂದ್ಯಕ್ಕೆ ಕಾಲಿಟ್ಟಿದೆ.

ಆರ್​ಸಿಬಿ ಕಳೆದ ಎರಡು ಪಂದ್ಯಗಳಿಂದ ಉತ್ತಮ ಆರಂಭ ಪಡೆದುಕೊಳ್ಳಲು ಎಡವುತ್ತಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಪವರ್ ಪ್ಲೇನಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಗ್ಲೆನ್ ಮ್ಯಾಕ್ಸ್​ವೆಲ್ ಅಂತೂ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. ಶ್ರೀಕರ್ ಭರತ್ ಕಳೆದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಆರ್​ಸಿಬಿಗೆ ಎಬಿ ಡಿವಿಲಿಯರ್ಸ್ ಕೊಡುಗೆ ಇನ್ನಷ್ಟು ಬೇಕಿದೆ.

ಡ್ಯಾನ್ ಕ್ರಿಸ್ಟಿಯನ್ ಮತ್ತು ಜಾರ್ಜ್ ಗಾರ್ಟನ್ ಅವರಿಂದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ಬರುತ್ತಿಲ್ಲ. ಹೀಗಾಗಿ ಇವರ ಜಾಗಕ್ಕೆ ಹೊಸ ಆಟಗಾರನ ಆಯ್ಕೆಯನ್ನು ಕಾಣಬಹುದು. ಉಳಿದಂತೆ ಶಹ್ಬಾಜ್ ಅಹ್ಮದ್ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಚಹಾಲ್ ಸ್ಪಿನ್ ಮೋಡಿ ಭರ್ಜರಿ ವರ್ಕೌಟ್ ಆಗುತ್ತಿದೆ. ಸಿರಾಜ್ ಹಾಗೂ ಹರ್ಷಲ್ ಪಟೇಲ್ ಕೂಡ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಇತ್ತ ಕೆಕೆಆರ್ ತಂಡಕ್ಕೆ ಓಪನರ್​ಗಳೇ ಪ್ರಮುಖ ಆಸ್ತಿ. ಶುಬ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಪವರ್ ಪ್ಲೇನಲ್ಲಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಇದು ಗೆಲ್ಲಲೇ ಬೇಕಾದ ಪಂದ್ಯವಾದ್ದರಿಂದ ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಅನ್ನು ಕಡೆಗಣಿಸುವಂತಿಲ್ಲ. ಕೋಲ್ಕತ್ತಾ ತನ್ನ ಶಕ್ತಿ ಹೊಂದಿರುವುದೇ ಬೌಲಿಂಗ್​ನಲ್ಲಿ. ವರುಣ್ ಚಕ್ರವರ್ತಿ, ಶಿವಂ ಮಾವಿ, ಲೂಕಿ ಫರ್ಗುಸನ್ ಹಾಗೂ ಸುನೀಲ್ ನರೈನ್ ವಿಕೆಟ್ ಟೇಕಿಂಗ್ ಬೌಲರ್​ಗಳಾಗಿದ್ದಾರೆ.

ಒಟ್ಟಾರೆ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದು ನೋಡಬೇಕಿದೆ. ಜೊತೆಗೆ ಆರ್‌ಸಿಬಿ ಕೊನೆಯ ಸಲ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿದೆ. ಈ ಕೂಟದ ಬಳಿಕ ಅವರು ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಅವರಿಗೆ ಚೊಚ್ಚಲ ಟ್ರೋಫಿಯೊಂದಿಗೆ ಗೌರವಪೂರ್ಣ ವಿದಾಯ ಲಭಿಸೀತೇ ಎಂಬುದೊಂದು ನಿರೀಕ್ಷೆ.

DC vs CSK, IPL 2021 Qualifier 1: ಸೂಪರ್ ಗೆಲುವಿನೊಂದಿಗೆ ಫೈನಲ್​ಗೆ ಎಂಟ್ರಿಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್

(Royal Challengers Bangalore are set to lock horns with Kolkata Knight Riders in the Eliminator of the IPL 2021)

ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ