DC vs CSK, IPL 2021 Qualifier 1: ಸೂಪರ್ ಗೆಲುವಿನೊಂದಿಗೆ ಫೈನಲ್​ಗೆ ಎಂಟ್ರಿಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್

TV9 Web
| Updated By: ಝಾಹಿರ್ ಯೂಸುಫ್

Updated on:Oct 10, 2021 | 11:31 PM

Delhi Capitals vs Chennai Super Kings Qualifier 1: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16 ಬಾರಿ ಜಯ ಸಾಧಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳನ್ನು ಗೆದ್ದುಕೊಂಡಿದೆ.

DC vs CSK, IPL 2021 Qualifier 1: ಸೂಪರ್ ಗೆಲುವಿನೊಂದಿಗೆ ಫೈನಲ್​ಗೆ ಎಂಟ್ರಿಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್
DC vs CSK

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2021) ಮೊದಲ ಕ್ವಾಲಿಫೈಯರ್​ನಲ್ಲಿ (Qualifier 1) ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ತಂಡ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸಿಎಸ್​ಕೆ ತಂಡವು ಐಪಿಎಲ್ ಸೀಸನ್ 14ನಲ್ಲಿ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸಿಎಸ್​ಕೆ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೃಥ್ವಿ ಶಾ ಹಾಗೂ ರಿಷಭ್ ಪಂತ್ ಅವರ ಅರ್ಧಶತಕದ ನೆರವನಿಂದ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸಿಎಸ್​ಕೆ ಪರ ರುತುರಾಜ್ ಗಾಯಕ್ವಾಡ್ (70) ಹಾಗೂ ರಾಬಿನ್ ಉತ್ತಪ್ಪ (63) ಭರ್ಜರಿ ಬ್ಯಾಟಿಂಗ್ ಮಾಡಿದರು. ಅದರಂತೆ ಕೊನೆಯ ಓವರ್​ನಲ್ಲಿ ಸಿಎಸ್​ಕೆಗೆ ಗೆಲ್ಲಲು 13 ರನ್​ಗಳ ಅವಶ್ಯಕತೆಯಿತ್ತು. ಟಾಮ್ ಕರನ್ ಎಸೆದ ಅಂತಿಮ ಓವರ್​ನಲ್ಲಿ  ಮೂರು ಬೌಂಡರಿ ಬಾರಿಸುವ ಮೂಲಕ ಧೋನಿ ಸಿಎಸ್​ಕೆ ತಂಡಕ್ಕೆ 4 ವಿಕೆಟ್​ಗಳ ಜಯ ತಂದುಕೊಟ್ಟರು.

 ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16 ಬಾರಿ ಜಯ ಸಾಧಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳನ್ನು ಗೆದ್ದುಕೊಂಡಿದೆ.

DC 172/5 (20)

CSK 173/6 (19.4)

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ (ನಾಯಕ), ಶ್ರೇಯಸ್ ಅಯ್ಯರ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಟಾಮ್ ಕರ್ರನ್, ಅವೇಶ್ ಖಾನ್, ಅನ್ರಿಕ್ ನೋಕಿಯಾ

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

LIVE NEWS & UPDATES

The liveblog has ended.
  • 10 Oct 2021 11:16 PM (IST)

    ಫೈನಲ್​ ಸಿಎಸ್​ಕೆ

    DC 172/5 (20)

    CSK 173/6 (19.4)

     

  • 10 Oct 2021 11:15 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಟಾಮ್ ಕರನ್ ಎಸೆತದಲ್ಲಿ ಧೋನಿ ಬ್ಯಾಟ್ ಎಡ್ಜ್​…ಫೋರ್

    DC 172/5 (20)

    CSK 168/6 (19.3)

     

  • 10 Oct 2021 11:13 PM (IST)

    ಧೋನಿ ರಾಕೆಟ್

    ಟಾಮ್ ಕರನ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಧೋನಿ ಭರ್ಜರಿ ಬೌಂಡರಿ

    DC 172/5 (20)

    CSK 164/6 (19.2)

     

  • 10 Oct 2021 11:12 PM (IST)

    ಮೊಯೀನ್ ಅಲಿ ಔಟ್

    ಟಾಮ್ ಕರನ್ ಎಸೆತದಲ್ಲಿ ಮೊಯೀನ್ ಅಲಿ ಬಿಗ್ ಹಿಟ್…ಬೌಂಡರಿ ಲೈನ್​ನಲ್ಲಿ ರಬಾಡಗೆ ಕ್ಯಾಚ್

    ಸಿಎಸ್​ಕೆಗೆ 5 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ

    DC 172/5 (20)

    CSK 160/6 (19.1)

     

  • 10 Oct 2021 11:10 PM (IST)

    6 ಬಾಲ್​ನಲ್ಲಿ 13 ರನ್​ಗಳ ಅವಶ್ಯಕತೆ

    CSK 160/5 (19)

    ಕ್ರೀಸ್​ನಲ್ಲಿ ಮೊಯೀನ್ ಅಲಿ-ಧೋನಿ ಬ್ಯಾಟಿಂಗ್

      

  • 10 Oct 2021 11:09 PM (IST)

    ವಾಟ್ ಎ ಶಾಟ್….ಧೋನಿ ಸಿಕ್ಸ್

    ಅವೇಶ್ ಖಾನ್ ಎಸೆತವನ್ನು ಮಿಡ್ ವಿಕೆಟ್​ನತ್ತ ಬಾರಿಸಿದ ಧೋನಿ…ಭರ್ಜರಿ ಸಿಕ್ಸ್

    CSK 160/5 (18.5)

      

  • 10 Oct 2021 11:07 PM (IST)

    ರಾಕೆಟ್ ಹಿಟ್

    ಅವೇಶ್ ಖಾನ್ ಫುಲ್​ ಟಾಸ್ ಎಸೆತ… ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿ ಮೊಯೀನ್ ಅಲಿ

    CSK 154/5 (18.3)

      

  • 10 Oct 2021 11:05 PM (IST)

    ವಾಟ್ ಎ ಕ್ಯಾಚ್ ಅಕ್ಷರ್

    ಅವೇಶ್ ಖಾನ್ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ (70) ಭರ್ಜರಿ ಹೊಡೆತ…ಬೌಂಡರಿ ಲೈನ್​ನಿಂದ ಓಡಿ ಬಂದು ಅದ್ಭುತವಾಗಿ ಕ್ಯಾಚ್ ಹಿಡಿದ ಅಕ್ಷರ್ ಪಟೇಲ್

    CSK 149/5 (18.1)

      

  • 10 Oct 2021 11:03 PM (IST)

    2 ಓವರ್​ನಲ್ಲಿ 24 ರನ್​ಗಳ ಅವಶ್ಯಕತೆ

    CSK 149/4 (18)

    ಕ್ರೀಸ್​ನಲ್ಲಿ ಮೊಯೀನ್ ಅಲಿ-ರುತುರಾಜ್ ಬ್ಯಾಟಿಂಗ್

      

  • 10 Oct 2021 11:02 PM (IST)

    ಫ್ಯಾಬಲಸ್ ಶಾಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ರುತುರಾಜ್

    CSK 148/4 (17.5)

      

  • 10 Oct 2021 10:59 PM (IST)

    ರುತು-ಹಿಟ್

    ಅನ್ರಿಕ್ ನೋಕಿಯಾ ಎಸೆತಕ್ಕೆ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ರುತುರಾಜ್

    CSK 142/4 (17.1)

      

  • 10 Oct 2021 10:57 PM (IST)

    3 ಓವರ್​ನಲ್ಲಿ 35 ರನ್​ಗಳ ಅವಶ್ಯಕತೆ

    CSK 138/4 (17)

      

  • 10 Oct 2021 10:56 PM (IST)

    ಫುಲ್ ಟಾಸ್

    ಅವೇಶ್ ಖಾನ್ ಫುಲ್ ಟಾಸ್ ಎಸೆತವನ್ನು ಲೆಗ್​ ಸೈಡ್​ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡ ರುತುರಾಜ್

  • 10 Oct 2021 10:52 PM (IST)

    ವೆಲ್ಕಂ ಬೌಂಡರಿ

    ಅನ್ರಿಕ್ ನೋಕಿಯಾ ಎಸೆತವನ್ನು ಬೌಂಡರಿಗಟ್ಟಿದ ಮೊಯೀನ್ ಅಲಿ…ಫೋರ್

    CSK 129/4 (16)

      

  • 10 Oct 2021 10:48 PM (IST)

    15 ಓವರ್ ಮುಕ್ತಾಯ

    CSK 121/4 (15)

     

    ಕ್ರೀಸ್​ನಲ್ಲಿ ಮೊಯೀನ್ ಅಲಿ-ರುತುರಾಜ್ ಬ್ಯಾಟಿಂಗ್

  • 10 Oct 2021 10:45 PM (IST)

    ರಾಯುಡು ರನೌಟ್

    ಶ್ರೇಯಸ್ ಅಯ್ಯರ್ ಉತ್ತಮ ಫೀಲ್ಡಿಂಗ್ ಅಂಬಾಟಿ ರಾಯುಡು ರನೌಟ್

    CSK 119/4 (14.4)

      

  • 10 Oct 2021 10:42 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    ಟಾಮ್ ಕರನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಶಾರ್ದೂಲ್ ಠಾಕೂರ್ (0)

    CSK 117/3 (14)

      

  • 10 Oct 2021 10:38 PM (IST)

    ರಾಬಿನ್ ಉತ್ತಪ್ಪ ಔಟ್

    ಟಾಮ್ ಕರನ್ ಎಸೆತದಲ್ಲಿ ಶ್ರೇಯಸ್ ಅಯ್ಯರ್​ಗೆ ಕ್ಯಾಚ್ ನೀಡಿ ಹೊರ ನಡೆದ ರಾಬಿನ್ ಉತ್ತಪ್ಪ (63)

    CSK 113/2 (13.3)

      

  • 10 Oct 2021 10:33 PM (IST)

    CSK 111/1 (13)

    ಕ್ರೀಸ್​ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್

  • 10 Oct 2021 10:30 PM (IST)

    ಉತ್ತಪ್ಪ ಭರ್ಜರಿ ಬ್ಯಾಟಿಂಗ್

    ಅಶ್ವಿನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಬಿನ್ ಉತ್ತಪ್ಪ

  • 10 Oct 2021 10:28 PM (IST)

    12 ಓವರ್ ಮುಕ್ತಾಯ: ಸಿಎಸ್​ಕೆ ಭರ್ಜರಿ ಬ್ಯಾಟಿಂಗ್

    CSK 99/1 (12)

      

    ಕ್ರೀಸ್​ನಲ್ಲಿ ಉತ್ತಪ್ಪ (52) ಹಾಗೂ ರುತುರಾಜ್ (45) ಬ್ಯಾಟಿಂಗ್

  • 10 Oct 2021 10:18 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಅಕ್ಷರ್ ಪಟೇಲ್ ಎಸೆತದಲ್ಲಿ ಸಿಕ್ಸ್ ಹಾಗೂ ಫೋರ್ ಬಾರಿಸಿದ ರುತುರಾಜ್

    DC 172/5 (20)

    CSK 93/1 (10.4)

     

  • 10 Oct 2021 10:11 PM (IST)

    CSK 75/1 (9)

    ಕ್ರೀಸ್​ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್

  • 10 Oct 2021 10:00 PM (IST)

    7 ಓವರ್ ಮುಕ್ತಾಯ

    CSK 64/1 (7)

      

  • 10 Oct 2021 09:57 PM (IST)

    ಪವರ್​ಪ್ಲೇ ಮುಕ್ತಾಯ

    CSK 59/1 (6)

      

    ಕ್ರೀಸ್​ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್

  • 10 Oct 2021 09:56 PM (IST)

    ರಾಬಿನ್ ಸಿಡಿಲಬ್ಬರ

    ಅವೇಶ್ ಖಾನ್ ಎಸೆತಕ್ಕೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಉತ್ತಪ್ಪ

    ಒಂದೇ ಓವರ್​ನಲ್ಲಿ 20 ರನ್ ಕಲೆಹಾಕಿದ ರಾಬಿನ್ ಉತ್ತಪ್ಪ

    CSK 59/1 (6)

      

  • 10 Oct 2021 09:54 PM (IST)

    ಉತ್ತಪ್ಪ ಅಬ್ಬರ

    ಸಿಕ್ಸ್ ಬೆನ್ನಲ್ಲೇ ಭರ್ಜರಿ ಬೌಂಡರಿ ಬಾರಿಸಿದ ಉತ್ತಪ್ಪ…ಫೋರ್

  • 10 Oct 2021 09:53 PM (IST)

    ರಾಬಿನ್ ರಾಕೆಟ್

    ಅವೇಶ್ ಖಾನ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ರಾಬಿನ್ ಉತ್ತಪ್ಪ ರಾಕೆಟ್ ಶಾಟ್…ಸಿಕ್ಸ್​

  • 10 Oct 2021 09:52 PM (IST)

    ರುತುರಾಜ್ ಪ್ಲೇಸ್​ಮೆಂಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಕವರ್ಸ್​​ನತ್ತ ಭರ್ಜರಿ ಬೌಂಡರಿ ಬಾರಿಸಿದ ರುತುರಾಜ್

    CSK 39/1 (5)

      

  • 10 Oct 2021 09:49 PM (IST)

    ರಾಬಿನ್ ರಾಕೆಟ್

    ರಬಾಡ ಎಸೆತಕ್ಕೆ ಲೆಗ್​ ಸೈಡ್​ನಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಉತ್ತಪ್ಪ

    CSK 34/1 (4)

      

  • 10 Oct 2021 09:46 PM (IST)

    ವಾಟ್ ಎ ಶಾಟ್

    ಕಗಿಸೊ ರಬಾಡ ಎಸೆತದಲ್ಲಿ ರುತುರಾಜ್ ಸೂಪರ್ ಸ್ಟ್ರೈಟ್ ಹಿಟ್​…ಸಿಕ್ಸ್

  • 10 Oct 2021 09:45 PM (IST)

    3 ಓವರ್ ಮುಕ್ತಾಯ

    CSK 20/1 (3)

    ಕ್ರೀಸ್​ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್

  • 10 Oct 2021 09:40 PM (IST)

    CSK 16/1 (2)

    ಕ್ರೀಸ್​ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್

  • 10 Oct 2021 09:38 PM (IST)

    ಉತ್ತಪ್ಪ ಫೋರ್

    ಅವೇಶ್ ಖಾನ್ ಎಸೆತದಲ್ಲಿ ಸ್ಲಿಪ್​ ಮೂಲಕ ಬೌಂಡರಿಗಟ್ಟಿಸಿಕೊಂಡ ರಾಬಿನ್ ಉತ್ತಪ್ಪ

  • 10 Oct 2021 09:35 PM (IST)

    ಫಾಫ್ ಬೌಲ್ಡ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಫಾಫ್ ಡುಪ್ಲೆಸಿಸ್​ ಬೌಲ್ಡ್​

    CSK 8/1 (1)

     

  • 10 Oct 2021 09:22 PM (IST)

    ಟಾರ್ಗೆಟ್- 173

  • 10 Oct 2021 09:16 PM (IST)

    ಕೊನೆಯ ಎಸೆತದಲ್ಲಿ ಅರ್ಧಶತಕ ಪೂರೈಸಿದ ಪಂತ್

    20ನೇ ಓವರ್​ನ ಕೊನೆಯ ಎಸೆತದಲ್ಲಿ 2 ರನ್​ ಕಲೆಹಾಕುವ ಮೂಲಕ ರಿಷಭ್ ಪಂತ್ 35 ಎಸೆತಗಳಲ್ಲಿ 51 ರನ್ ಬಾರಿಸಿದರು.

    DC 172/5 (20)

     

  • 10 Oct 2021 09:13 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಇನಿಂಗ್ಸ್ ಅಂತ್ಯ

    DC 172/5 (20)

     

  • 10 Oct 2021 09:12 PM (IST)

    ಪಂತ್ ಪವರ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಪಂತ್ ಬ್ಯಾಟ್​ ಎಡ್ಜ್​…ಫೋರ್

  • 10 Oct 2021 09:09 PM (IST)

    ಕೊನೆಯ ಓವರ್ ಬಾಕಿ

    DC 164/5 (19)

     

  • 10 Oct 2021 09:06 PM (IST)

    ಹೆಟ್ಮೆಯರ್ ಔಟ್

    ಬ್ರಾವೊ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹೆಟ್ಮೆಯರ್ (37)…ಬೌಂಡರಿ ಲೈನ್​ನಿಂದ ಓಡಿ ಬಂದು ಸುಲಭ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ…ಹೆಟ್ಮೆಯರ್ ಔಟ್

    DC 163/5 (18.4)

     

  • 10 Oct 2021 09:03 PM (IST)

    ಪಂಟರ್ ಪಂತ್

    ಡ್ವೇನ್ ಬ್ರಾವೊ ಎಸೆತದಲ್ಲಿ ಪಂತ್ ಬಿಗ್ ಹಿಟ್​….ಸಿಕ್ಸ್

    DC 161/4 (18.2)

     

  • 10 Oct 2021 09:01 PM (IST)

    DC 153/4 (18)

    ಕ್ರೀಸ್​ನಲ್ಲಿ ಪಂತ್ ಹಾಗೂ ಹೆಟ್ಮೆಯರ್ ಬ್ಯಾಟಿಂಗ್

  • 10 Oct 2021 08:56 PM (IST)

    ಕೊನೆಯ 3 ಓವರ್

    DC 141/4 (17)

     

    ಬ್ರಾವೊ ಓವರ್​ನಲ್ಲಿ 2 ಬೌಂಡರಿಯೊಂದಿಗೆ 13 ರನ್ ಕಲೆಹಾಕಿದ ಪಂತ್-ಹೆಟ್ಮೆಯರ್

  • 10 Oct 2021 08:53 PM (IST)

    ಡೀಪ್ ಫೋರ್

    ಬ್ರಾವೊ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಬೌಂಡರಿ ಬಾರಿಸಿದ ಹೆಟ್ಮೆಯರ್

    DC 133/4 (16.2)

     

  • 10 Oct 2021 08:46 PM (IST)

    ಪಂತ್ ಪವರ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲಾಂಗ್​ ಆನ್​ನತ್ತ ರಿಷಭ್ ಪಂತ್ ಭರ್ಜರಿ ಸಿಕ್ಸ್

    DC 125/4 (15.4)

     

  • 10 Oct 2021 08:40 PM (IST)

    ವೆಲ್ಕಂ ಬೌಂಡರಿ

    ಬ್ರಾವೊ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಹೆಟ್ಮೆಯರ್

    DC 113/4 (14.4)

     

  • 10 Oct 2021 08:37 PM (IST)

    DC 107/4 (14)

    ಕ್ರೀಸ್​ನಲ್ಲಿ ರಿಷಭ್ ಪಂತ್-ಹೆಟ್ಮೆಯರ್ ಬ್ಯಾಟಿಂಗ್

  • 10 Oct 2021 08:35 PM (IST)

    ಹಿಟ್​-ಮೆಯರ್

    ಮೊಯೀನ್ ಅಲಿ ಎಸೆತದಲ್ಲಿ ಆಕರ್ಷಕ ಸಿಕ್ಸ್ ಸಿಡಿಸಿದ ಹೆಟ್ಮೆಯರ್

    DC 104/4 (13.3)

     

  • 10 Oct 2021 08:28 PM (IST)

    12 ಓವರ್ ಮುಕ್ತಾಯ

    DC 90/4 (12)

     

    ಕ್ರೀಸ್​ನಲ್ಲಿ ರಿಷಭ್ ಪಂತ್-ಹೆಟ್ಮೆಯರ್ ಬ್ಯಾಟಿಂಗ್

  • 10 Oct 2021 08:20 PM (IST)

    ಡುಪ್ಲೆಸಿಸ್​ ಸೂಪರ್ ಕ್ಯಾಚ್

    ಜಡೇಜಾ ಎಸೆತದಲ್ಲಿ ಎಕ್ಸ್​ಟ್ರಾ ಕವರ್ಸ್​ನತ್ತ ಬಾರಿಸುವ ಯತ್ನ…ಡುಪ್ಲೆಸಿಸ್​ ಅಧ್ಭುತ ಕ್ಯಾಚ್…ಪೃಥ್ವಿ ಶಾ (60) ಔಟ್

    DC 80/4 (10.2)

     

  • 10 Oct 2021 08:16 PM (IST)

    ಅಕ್ಷರ್ ಪಟೇಲ್ ಔಟ್

    ಮೊಯೀನ್ ಅಲಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಅಕ್ಷರ್ ಪಟೇಲ್ (10)

    DC 77/3 (9.4)

     

  • 10 Oct 2021 08:14 PM (IST)

    9 ಓವರ್ ಮುಕ್ತಾಯ

    DC 74/2 (9)

     

  • 10 Oct 2021 08:09 PM (IST)

    ಅರ್ಧಶತಕ ಪೂರೈಸಿದ ಪೃಥ್ವಿ ಶಾ

    ಜಡೇಜಾ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೃಥ್ವಿ ಶಾ

    DC 69/2 (8.3)

     

  • 10 Oct 2021 08:01 PM (IST)

    ಪವರ್​ಪ್ಲೇ ಮುಕ್ತಾಯ

    DC 51/2 (6)

     

    ಕ್ರೀಸ್​ನಲ್ಲಿ ಪೃಥ್ವಿ ಶಾ-ಅಕ್ಷರ್ ಪಟೇಲ್ ಬ್ಯಾಟಿಂಗ್

  • 10 Oct 2021 07:59 PM (IST)

    ಶ್ರೇಯಸ್ ಅಯ್ಯರ್ ಔಟ್

    ಹ್ಯಾಝಲ್​ವುಡ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ (1) ಬಿಗ್ ಹಿಟ್​ಗೆ ಯತ್ನ…ರುತುರಾಜ್ ಉತ್ತಮ ಕ್ಯಾಚ್-ಔಟ್

    DC 50/2 (5.3)

     

  • 10 Oct 2021 07:55 PM (IST)

    ವಾಟ್ ಎ ಪೃಥ್ವಿ ಶಾ-ಟ್

    ಶಾರ್ದೂಲ್ ಠಾಕೂರ್ ಸ್ಲೋ ಡೆಲಿವರಿ…ನೇರವಾಗಿ ಆಕರ್ಷಕ ಸಿಕ್ಸ್​ ಸಿಡಿಸಿದ ಪೃಥ್ವಿ ಶಾ

    DC 50/1 (5)

     

  • 10 Oct 2021 07:53 PM (IST)

    ವಾಟ್ ಎ ಶಾಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿದ ಪೃಥ್ವಿ ಶಾ

  • 10 Oct 2021 07:50 PM (IST)

    4 ಓವರ್ ಮುಕ್ತಾಯ

    DC 36/1 (4)

     

    ಕ್ರೀಸ್​ನಲ್ಲಿ ಪೃಥ್ವಿ ಶಾ-ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 10 Oct 2021 07:47 PM (IST)

    ಧವನ್ ಔಟ್

    ಜೋಶ್ ಹ್ಯಾಝಲ್​ವುಡ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಶಿಖರ್ ಧವನ್ (7)

    DC 36/1 (3.2)

     

  • 10 Oct 2021 07:46 PM (IST)

    ಧವನ್ ಧಮಾಲ್

    ಹ್ಯಾಝಲ್​ವುಡ್ ಎಸೆತಕ್ಕೆ ಶಿಖರ್ ಧವನ್ ಸ್ಟ್ರೈಟ್ ಹಿಟ್​…ಫೋರ್

  • 10 Oct 2021 07:45 PM (IST)

    4=ಫೋರ್

    ದೀಪಕ್ ಚಹರ್ ಎಸೆತದಲ್ಲಿ ನಾಲ್ಕು ಬೌಂಡರಿ ಬಾರಿಸಿದ ಪೃಥ್ವಿ ಶಾ

    DC 32/0 (3)

      

  • 10 Oct 2021 07:43 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಚಹರ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ…ಪೃಥ್ವಿ ಶಾ ಬ್ಯಾಟ್​ನಿಂದ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ

    DC 24/0 (2.4)

      

  • 10 Oct 2021 07:42 PM (IST)

    ಮತ್ತೊಂದು ಬೌಂಡರಿ

    ದೀಪಕ್ ಚಹರ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಪೃಥ್ವಿ ಶಾ

  • 10 Oct 2021 07:40 PM (IST)

    ಪೃಥ್ವಿ ಶಾ-ಟ್

    ಹ್ಯಾಝಲ್​ವುಡ್​ ಎಸೆತಕ್ಕೆ ಪೃಥ್ವಿ ಶಾ ಬಿರುಸಿನ ಹೊಡೆತ…ಚೆಂಡು ಸಿಕ್ಸರ್​ಗೆ

    DC 15/0 (2)

      

  • 10 Oct 2021 07:38 PM (IST)

    ಮೊದಲ ಬೌಂಡರಿ

    ಜೋಶ್ ಹ್ಯಾಝಲ್​ವುಡ್​ ಎಸೆತದಲ್ಲಿ ಪೃಥ್ವಿ ಶಾ ಬ್ಯಾಟ್ ಎಡ್ಜ್​…ವಿಕೆಟ್ ಕೀಪರ್​ ತಲೆಯ ಮೇಲಿಂದ ಚೆಂಡು ಬೌಂಡರಿಗೆ..ಫೋರ್

  • 10 Oct 2021 07:35 PM (IST)

    ಮೊದಲ ಓವರ್ ಮುಕ್ತಾಯ

    DC 3/0 (1)

      

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 10 Oct 2021 07:33 PM (IST)

    ಮೊದಲ ಓವರ್

    ಆರಂಭಿಕರು: ಪೃಥ್ವಿ ಶಾ, ಶಿಖರ್ ಧವನ್

    ಬೌಲಿಂಗ್: ದೀಪಕ್ ಚಹರ್

  • 10 Oct 2021 07:15 PM (IST)

    ಕಣಕ್ಕಿಳಿಯುವ ಕಲಿಗಳು

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ (ನಾಯಕ), ಶ್ರೇಯಸ್ ಅಯ್ಯರ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಟಾಮ್ ಕರ್ರನ್, ಅವೇಶ್ ಖಾನ್, ಅನ್ರಿಕ್ ನೋಕಿಯಾ

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 10 Oct 2021 07:14 PM (IST)

    ಟಾಸ್ ವಿಡಿಯೋ

  • 10 Oct 2021 07:05 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ (ನಾಯಕ), ಶ್ರೇಯಸ್ ಅಯ್ಯರ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಟಾಮ್ ಕರ್ರನ್, ಅವೇಶ್ ಖಾನ್, ಅನ್ರಿಕ್ ನೋಕಿಯಾ

  • 10 Oct 2021 07:03 PM (IST)

    ಸಿಎಸ್​ಕೆ ಪ್ಲೇಯಿಂಗ್ ಇಲೆವೆನ್

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 10 Oct 2021 07:02 PM (IST)

    ಟಾಸ್ ಗೆದ್ದ ಸಿಎಸ್​ಕೆ: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಸಿಎಸ್​ಕೆ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 10 Oct 2021 06:43 PM (IST)

    ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು

  • 10 Oct 2021 06:42 PM (IST)

    ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ದುಬೈ ಸ್ಟೇಡಿಯಂ ಸಜ್ಜು

  • Published On - Oct 10,2021 6:30 PM

    Follow us
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
    ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
    ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
    ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
    ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
    ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
    ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ