Ind W vs Aus W: ಸ್ಮೃತಿ ಅರ್ಧಶತಕ ಹೋರಾಟ ವ್ಯರ್ಥ; ಭಾರತ ವನಿತ ತಂಡಕ್ಕೆ 14 ರನ್‌ ಸೋಲು! ಆಸ್ಟ್ರೇಲಿಯಾಗೆ ಟಿ20 ಸರಣಿ

Ind W vs Aus W: ಆಸ್ಟ್ರೇಲಿಯಾ ಕೊನೆಯ ಮೂರು ಓವರ್‌ಗಳಲ್ಲಿ 36 ರನ್ ಗಳಿಸಿತು. ಭಾರತದ ಪರವಾಗಿ ರಾಜೇಶ್ವರಿ ನಾಲ್ಕು ಓವರ್‌ಗಳಲ್ಲಿ 37 ಕ್ಕೆ 2 ವಿಕೆಟ್ ಪಡೆದರೆ, ರೇಣುಕಾ, ವಸ್ತ್ರಕರ್ ಮತ್ತು ದೀಪ್ತಿ ತಲಾ ಒಂದು ವಿಕೆಟ್ ಪಡೆದರು.

Ind W vs Aus W: ಸ್ಮೃತಿ ಅರ್ಧಶತಕ ಹೋರಾಟ ವ್ಯರ್ಥ; ಭಾರತ ವನಿತ ತಂಡಕ್ಕೆ 14 ರನ್‌ ಸೋಲು! ಆಸ್ಟ್ರೇಲಿಯಾಗೆ ಟಿ20 ಸರಣಿ
ಸ್ಮೃತಿ ಮಂಧಾನ
Follow us
TV9 Web
| Updated By: ಪೃಥ್ವಿಶಂಕರ

Updated on: Oct 10, 2021 | 5:47 PM

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಭಾನುವಾರ ನಡೆದ ಮೂರನೇ ಟಿ 20 ಪಂದ್ಯದಲ್ಲಿ ಭಾರತ ತಂಡವನ್ನು 14 ರನ್ ಗಳಿಂದ ಸೋಲಿಸಿತು. ಭಾರತ ತಂಡ 150 ರನ್​ಗಳ ಗುರಿಯನ್ನು ಪಡೆದುಕೊಂಡಿತ್ತು ಆದರೆ 20 ಓವರ್​ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲು ಸಾಧ್ಯವಾಯಿತು. ಸ್ಮೃತಿ ಮಂಧಾನ ಭಾರತದ ಪರ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು 52 ರನ್ ಗಳಿಸಿದರು. ಆದರೆ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್​ಗಳು ತಂಡಕ್ಕೆ ದೊಡ್ಡ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ತಂಡದ ವೇಗದ ಬ್ಯಾಟರ್​ ಶೆಫಾಲಿ ವರ್ಮಾ ಒಂದು ರನ್ ಗಳಿಸಿ ಔಟಾದರು. ಇದರ ನಂತರ, ಜೆಮಿಮಾ ರೊಡ್ರಿಗಸ್ ಮಂಧನ ಜೊತೆ ಇನ್ನಿಂಗ್ಸ್ ಅನ್ನು ಮುಂದಕ್ಕೆ ತೆಗೆದುಕೊಂಡರು. ಈ ಜೋಡಿ ಮೈದಾನದಲ್ಲಿ ಇರುವವರೆಗೂ, ತಂಡದ ಗೆಲುವಿನ ಭರವಸೆ ಜೀವಂತವಾಗಿತ್ತು. ರೊಡ್ರಿಗಸ್ 11 ನೇ ಓವರ್​ನಲ್ಲಿ ಔಟಾದರು. ಅವರು 26 ಎಸೆತಗಳಲ್ಲಿ ಒಂದು ಬೌಂಡರಿ ಸಹಾಯದಿಂದ 23 ರನ್ ಗಳಿಸಿದರು. ಅವರ ನಂತರ, ಮಂಧನಾ ಕೂಡ ಔಟಾದರು. 15 ನೇ ಓವರ್‌ನ ಐದನೇ ಎಸೆತದಲ್ಲಿ ಅವರ ವಿಕೆಟ್ ಪತನಗೊಂಡಿತು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 49 ಎಸೆತಗಳನ್ನು ಎದುರಿಸಿದರು ಮತ್ತು ಎಂಟು ಬೌಂಡರಿಗಳನ್ನು ಹೊಡೆದರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮಹಿಳಾ ತಂಡ ತಹ್ಲಿಯಾ ಮೆಕ್‌ಗ್ರಾತ್ ಅಜೇಯ 44 ರನ್​ಗಳ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು, ನಂತರ ಆರಂಭಿಕ ಆಟಗಾರ್ತಿ ಬೆತ್ ಮೂನಿ (61) ಅರ್ಧಶತಕ ಗಳಿಸಿದರು. ಮೂನಿ ತನ್ನ 43 ಎಸೆತಗಳಲ್ಲಿ 10 ಬೌಂಡರಿಗಳನ್ನು ಹೊಡೆದರು, ಆದರೆ ಹಿಂದಿನ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಮೆಕ್‌ಗ್ರಾತ್ ಮತ್ತೊಮ್ಮೆ ತಮ್ಮ 31 ಎಸೆತಗಳಲ್ಲಿ ಅಜೇಯ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಮತ್ತು ಆರು ಬೌಂಡರಿಗಳನ್ನು ಹೊಡೆದು ಬ್ಯಾಟ್‌ನೊಂದಿಗೆ ಉಪಯುಕ್ತ ಕೊಡುಗೆ ನೀಡಿದರು. ಇಬ್ಬರೂ ಕೂಡ ಐದನೇ ವಿಕೆಟ್ ಗೆ 44 ರನ್​ಗಳ ಮಹತ್ವದ ಜೊತೆಯಾಟ ಆಡಿದರು. ಆಸ್ಟ್ರೇಲಿಯಾ ತಂಡವು ಈ ಮೊದಲು ಶನಿವಾರ ನಡೆದ ಎರಡನೇ ಟಿ 20 ಪಂದ್ಯವನ್ನು ಗೆದ್ದುಕೊಂಡಿತು ಮತ್ತು ಏಕದಿನ ಸ್ವರೂಪದಲ್ಲಿ ಸರಣಿಯನ್ನು ಗೆದ್ದಿತ್ತು. ಭಾರತ ತಂಡದ ಈ ಪ್ರವಾಸದಲ್ಲಿ ಸರಣಿ ವಿಜೇತರನ್ನು ಏಕದಿನ (ಮೂರು ಪಂದ್ಯಗಳು), ಟೆಸ್ಟ್‌ (ಒಂದು ಪಂದ್ಯ) ಮತ್ತು ಟಿ 20 ಅಂತರಾಷ್ಟ್ರೀಯ ಪಂದ್ಯಗಳ (ಮೂರು ಪಂದ್ಯಗಳು) ಒಟ್ಟಾರೆ ಫಲಿತಾಂಶದ ಆಧಾರದ ಮೇಲೆ ನಿರ್ಧರಿಸಲಾಗಿದೆ.

ಟಾಸ್ ಗೆದ್ದ ಭಾರತ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು, ವೇಗದ ಬೌಲರ್ ರೇಣುಕಾ ಸಿಂಗ್ ಎರಡನೇ ಓವರ್‌ನಲ್ಲಿ ಅಲಿಸ್ಸಾ ಹೀಲಿಯನ್ನು ಬಲಿ ಪಡೆದರು. ಕ್ಯಾಪ್ಟನ್ ಮೆಗ್ ಲೆನ್ನಿಂಗ್ ತನ್ನ ಲಯವನ್ನು ಕಂಡುಕೊಳ್ಳುತ್ತಿದ್ದರು ಆದರೆ ಏಳನೇ ಓವರ್​ನಲ್ಲಿ ರಾಜೇಶ್ವರಿ ಗಾಯಕ್ವಾಡ್ ಬೌಲ್ಡ್ ಮಾಡಿದರು. ಇದರ ನಂತರ, ಪೂಜಾ ವಸ್ತ್ರಕರ್ ಆಶ್ಲೇ ಗಾರ್ಡ್ನರ್ (1 ರನ್) ರಿಚಾಗೆ ಪೆವಿಲಿಯನ್ ದಾರಿ ತೋರಿಸಿದರು. ತಂಡವು 12 ನೇ ಓವರ್​ನಲ್ಲಿ ನಾಲ್ಕನೇ ವಿಕೆಟ್​ಗೆ 73 ರನ್ ಗಳಿಸಿ ಕಷ್ಟಪಡುತ್ತಿತ್ತು. ಆದರೆ ಹಿಂದಿನ ಪಂದ್ಯದಂತೆ, ಮೂನಿ ಮತ್ತು ಮೆಕ್‌ಗ್ರಾತ್ ಒಮ್ಮೆ ಟ್ರಬಲ್ಶೂಟರ್‌ಗಳ ಪಾತ್ರವನ್ನು ನಿರ್ವಹಿಸಿದರು. ಇವರಿಬ್ಬರು ನಿರ್ಣಾಯಕ 44 ರನ್ ಜತೆಯಾಟದಲ್ಲಿ ಮೂನಿ ತ್ವರಿತ ರನ್ ಗಳಿಸಿದರು.

18 ನೇ ಓವರ್​ನಲ್ಲಿ ಮೂನಿ ಇನ್ನಿಂಗ್ಸ್ ಅಂತ್ಯ ರಾಜೇಶ್ವರಿ ಪಂದ್ಯದ 18 ನೇ ಓವರ್‌ನಲ್ಲಿ ಮೂನಿ ವಿಕೆಟ್​ ಪಡೆದರು. ಆದರೆ ಮೆಕ್‌ಗ್ರಾತ್ ಒಂದೇ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಹೊಡೆದು 16 ರನ್ ಗಳಿಸಿದರು. ಮೆಕ್‌ಗ್ರಾತ್ 19 ನೇ ಓವರ್‌ನಲ್ಲಿ ಶಿಖಾ ಪಾಂಡೆ ವಿರುದ್ಧ ಒಂದು ಬೌಂಡರಿ ಬಾರಿಸಿದರೆ, ಜಾರ್ಜಿಯಾ ವೇರ್‌ಹ್ಯಾಮ್ 20 ನೇ ಓವರ್‌ನಲ್ಲಿ ದೀಪ್ತಿ ಓವರ್​ನಲ್ಲಿ ಹೆಚ್ಚು ರನ್ ಗಳಿಸಿದರು. ಈ ಎರಡು ಓವರ್‌ಗಳಿಂದ 10-10 ರನ್ ಗಳಿಸಲಾಯಿತು. ಈ ರೀತಿಯಾಗಿ, ಆಸ್ಟ್ರೇಲಿಯಾ ಕೊನೆಯ ಮೂರು ಓವರ್‌ಗಳಲ್ಲಿ 36 ರನ್ ಗಳಿಸಿತು. ಭಾರತದ ಪರವಾಗಿ ರಾಜೇಶ್ವರಿ ನಾಲ್ಕು ಓವರ್‌ಗಳಲ್ಲಿ 37 ಕ್ಕೆ 2 ವಿಕೆಟ್ ಪಡೆದರೆ, ರೇಣುಕಾ, ವಸ್ತ್ರಕರ್ ಮತ್ತು ದೀಪ್ತಿ ತಲಾ ಒಂದು ವಿಕೆಟ್ ಪಡೆದರು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್