IPL 2021 Eliminator, RCB vs KKR: ಎಲಿಮಿನೇಟರ್ ಪಂದ್ಯಕ್ಕೆ ಕೊಹ್ಲಿ ಮಾಸ್ಟರ್ ಪ್ಲಾನ್: ಪ್ಲೇಯಿಂಗ್ XI ನಲ್ಲಿ ಎರಡು ಬದಲಾವಣೆ ನಿರೀಕ್ಷೆ

RCB Playing XI vs KKR IPL 2021 Eliminator: ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೆ ಆರ್​ಸಿಬಿ ಪರ ಓಪನರ್​ಗಳಾಗಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಕಣಕ್ಕಿಳಿಯುವುದು ಖಚಿತ. ಆದರೆ, ಪಡಿಕ್ಕಲ್ ಕಳೆದ ಎರಡು ಪಂದ್ಯದಲ್ಲಿ ಕಳಪೆ ಆಟವಾಡುತ್ತಿದ್ದಾರೆ.

IPL 2021 Eliminator, RCB vs KKR: ಎಲಿಮಿನೇಟರ್ ಪಂದ್ಯಕ್ಕೆ ಕೊಹ್ಲಿ ಮಾಸ್ಟರ್ ಪ್ಲಾನ್: ಪ್ಲೇಯಿಂಗ್ XI ನಲ್ಲಿ ಎರಡು ಬದಲಾವಣೆ ನಿರೀಕ್ಷೆ
RCB Playing XI vs KKR IPL 2021 Eliminator
Follow us
TV9 Web
| Updated By: Vinay Bhat

Updated on: Oct 11, 2021 | 11:03 AM

ಕಳೆದ ಆವೃತ್ತಿಯಲ್ಲಿ ಪ್ಲೇಆಫ್ (IPL Playoffs) ಹಂತಕ್ಕೇರಿ ವೈಫಲ್ಯ ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡ ಈ ಬಾರಿ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಇಳಿಯುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಿರುವ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವನ್ನು ಆರ್​ಸಿಬಿ (RCB vs KKR) ಐಪಿಎಲ್ 2021ರ (IPL 2021) ಎಲಿಮಿನೇಟರ್ ಕದನದಲ್ಲಿ ಕಾದಾಟ ನಡೆಸಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕಷ್ಟೆ ಉಳಿಗಾಲ. ಸೋತರೆ ಟೂರ್ನಿಯಿಂದ ಹೊರ ಬೀಳಲಿದೆ. ಹೀಗಾಗಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವಕ್ಕೆ ಟ್ರೋಫಿಯೊಂದಿಗೆ ವಿದಾಯ ಹೇಳಬೇಕಾದರೆ ಈ ಪಂದ್ಯ ಗೆಲ್ಲಲೇ ಬೇಕಿದೆ. ಇದಕ್ಕಾಗಿ ಕೆಕೆಆರ್ ವಿರುದ್ಧ ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಕಣಕ್ಕಿಳಿಸುವ ಅಂದಾಜಿದೆ. ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ (RCB Playing XI) ಇಲ್ಲಿದೆ.

ಆರ್​ಸಿಬಿ ಪರ ಓಪನರ್​ಗಳಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಕಣಕ್ಕಿಳಿಯುವುದು ಖಚಿತ. ಆದರೆ, ಪಡಿಕ್ಕಲ್ ಕಳೆದ ಎರಡು ಪಂದ್ಯದಲ್ಲಿ ಕಳಪೆ ಆಟವಾಡುತ್ತಿದ್ದಾರೆ. ಹೀಗಾಗಿ ಬಿರುಸಿನ ಆಟದ ಮೊರೆಹೋಗಬೇಕಿದೆ. ಗ್ಲೆನ್ ಮ್ಯಾಕ್ಸ್​ವೆಲ್ ಅಂತೂ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. ಶ್ರೀಕರ್ ಭರತ್ ಕಳೆದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು.

ಆರ್​ಸಿಬಿಗೆ ಎಬಿ ಡಿವಿಲಿಯರ್ಸ್ ಕೊಡುಗೆ ಇನ್ನಷ್ಟು ಬೇಕಿದೆ. ಡ್ಯಾನಿ ಕ್ರಿಸ್ಟಿಯನ್ ಬ್ಯಾಟಿಂಗ್​ನಲ್ಲಿ ತಂಡಕ್ಕೆ ನೆರವಾಗುತ್ತಿಲ್ಲ. ಹೀಗಾಗಿ ಇವರ ಜಾಗಕ್ಕೆ ಟಿಮ್ ಡೇವಿಡ್ ಬರುವ ಸಂಭವವಿದೆ. ಇನ್ನೂ ಬೌಲಿಂಗ್​ನಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಜಾರ್ಜ್ ಗಾರ್ಟನ್ ಬದಲು ಕೈಲ್ ಜೇಮಿಸನ್ ತಂಡಕ್ಕೆ ಕಮ್​ಬ್ಯಾಕ್ ಮಾಡುವ ಸಾಧ್ಯತೆ ಇದೆ.

ಶಹ್ಬಾಜ್ ಅಹ್ಮದ್ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದು ಆಲ್ರೌಂಡರ್ ಜವಾಬ್ದಾರಿ ವಹಿಸಲಿದ್ದಾರೆ. ಹರ್ಷಲ್ ಪಟೇಲ್ ಹಾಗೂ ಯುಜ್ವೇಂದ್ರ ಚಹಾಲ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಇವರಿಗೆ ಸಾಥ್ ನೀಡಬೇಕಷ್ಟೆ.

ಮಳೆ ಸಾಧ್ಯತೆ?:

ಶಾರ್ಜಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ಸರಾಸರಿ ತಾಪಮಾನ 34 ಡಿಗ್ರಿ ಸೆಲ್ಷಿಯಸ್‌ ನಷ್ಟಿರಲಿದೆ. ಹೀಗಾಗಿ ಆಟಗಾರರು ಬಿಸಿಯ ಹವಾಗುಣದಲ್ಲಿ ಬೆವರಿಳಿಸುವುದು ನಿಶ್ಚಿತ.

ಪಿಚ್ ಹೇಗಿದೆ?:

ಶಾರ್ಜಾ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ ಬರ ಎದುರಿಸಿದ್ದಾರೆ. ಆದರೆ, ಈ ಪಿಚ್‌ನಲ್ಲೂ ಕೆಕೆಆರ್‌ ತಂಡ ತನ್ನ ಕೊನೇ ಲೀಗ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು 170ಕ್ಕೂ ಹೆಚ್ಚರು ರನ್‌ ಗಳಿಸಿತ್ತು. ಈ ಬಾರಿ ಶಾರ್ಜಾದಲ್ಲಿ ದಾಖಲಾದ ಗರಿಷ್ಠ ಮೊತ್ತದ ದಾಖಲೆ ಕೆಕೆಆರ್‌ ತಂಡದ್ದಾಗಿದೆ. ಹೀಗಾಗಿ ಇಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 160ಕ್ಕೂ ಹೆಚ್ಚು ರನ್‌ ಗಳಿಸಿದರೆ ಗೆಲ್ಲುವ ಅತ್ಯುತ್ತಮ ಅವಕಾಶ ಪಡೆಯಲಿದೆ. ಟಾಸ್ ಗೆದ್ದ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಮುಖಾಮುಖಿ:

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಪಂದ್ಯಗಳಲ್ಲಿ ಗೆದ್ದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

RCB vs KKR, IPL 2021 Eliminator: ಪಂದ್ಯ ಆರಂಭಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಶಾಕ್: ಇಬ್ಬರು ಸ್ಟಾರ್ ಪ್ಲೇಯರ್ಸ್ ಟೂರ್ನಿಯಿಂದ ಔಟ್

MS Dhoni: ಕಳೆದ ವರ್ಷ ಮೊದಲ ತಂಡವಾಗಿ ಹೊರಕ್ಕೆ, ಈ ಬಾರಿ ಫೈನಲ್​ಗೆ: ಪಂದ್ಯ ಮುಗಿದ ಬಳಿಕ ಧೋನಿ ಆಡಿದ ಮಾತು ಕೇಳಿ

(Royal Challengers Bangalore RCB likely playing XI against Kolkata Knight Riders KKR for IPL 2021 Eliminator)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ