ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ಮಾತಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಗಳಿಸುವ ಅಭಿರುಚಿ ಭವಿಷ್ಯದಲ್ಲಿ ಅವರ ವ್ಯಕ್ತಿತ್ವ ರೂಪುಗೊಳಿಸಲು ನೆರವಾಗುತ್ತದೆ. ಈಗೀಗ ಮಕ್ಕಳನ್ನು ಕೋಡಿಂಗ್ ಕ್ಲಾಸ್ಗಳಿಗೆ ಸೇರಿಸುವ ಪರಿಪಾಠ ಶುರುವಾಗಿದೆ. ಈಗಲೇ ಕೋಡಿಂಗ್ (coding) ಕಲಿತರೆ ಮುಂದೆ ಈ ಮಗು ನುರಿತ ತಂತ್ರಜ್ಞನಾಗಬಹುದು ಎನ್ನುವ ಆಸೆ. ಎಂಐಟಿ ನಡೆಸಿದ ಇತ್ತೀಚಿನ ಸಂಶೋಧನೆ ಬೇರೆಯೇ ಸಂಗತಿಯನ್ನು ತಿಳಿಸುತ್ತದೆ. ಮಕ್ಕಳು ಬುದ್ಧಿವಂತರಾಗಲು ಮತ್ತು ಯಶಸ್ವಿಯಾಗಲು ಕೋಡಿಂಗ್ ಕಲಿಯುವುದು ಬೇಕಿಲ್ಲ, ಬದಲಾಗಿ ಮ್ಯೂಸಿಕ್ ಕಲಿಯಬೇಕಂತೆ. ನ್ಯೂರೋಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ ಎಳೆಯ ವಯಸ್ಸಿನಲ್ಲಿ ಮಕ್ಕಳು ಸಂಗೀತ ಕಲಿಯುವುದರಿಂದ ಅವರು ಸ್ಮಾರ್ಟ್ ಆಗುತ್ತಾರಂತೆ. ಕೋಡಿಂಗ್ ಕಲಿಯುವುದರಿಂದ ಮಕ್ಕಳ ಗಣಿತ ಮತ್ತು ಭಾಷಾ ಕಲೆ ವೃದ್ಧಿಯಾಗಬಹುದು. ಮ್ಯೂಸಿಕ್ ಕಲಿತರೆ (learning music) ಮಗುವಿನ ಮೆದುಳಿನ ಸಮಗ್ರ ಬೆಳವಣಿಗೆ ಆಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಮಗು ಸಂಗೀತ ಕಲಿಯುವುದರಿಂದ ಮಿದುಳು ಹಲವು ವಿಷಯಗಳಲ್ಲಿ ಸಹಕಾರಿ ಆಗುತ್ತದೆ. ಹೆಚ್ಚು ರಚನಾತ್ಮಕ ಮತ್ತು ಕಾರ್ಯಾತ್ಮಕ ಸಂಪರ್ಕಗಳನ್ನು ಮಿದುಳು ಹೊಂದುತ್ತದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.
ಕುತೂಹಲ ಎಂದರೆ ಈ ರೀತಿ ಮಿದುಳಿನ ಸ್ಟ್ರಕ್ಚರಲ್ ಮತ್ತು ಫಂಕ್ಷನಲ್ ಕನೆಕ್ಷನ್ ಹೊಂದಲು ಇತರ ದಾರಿಗಳೂ ಇವೆ. ಬ್ಯಾಲೆ (ಡ್ಯಾನ್ಸ್ ವಿಧ), ಗಾಲ್ಫ್ ಮತ್ತು ಚೆಸ್ ಕ್ರೀಡೆಗಳೂ ಕೂಡ ಈ ರೀತಿಯ ಬ್ರೈನ್ ಕನೆಕ್ಷನ್ಸ್ಗೆ ಸಹಕಾರಿ ಆಗುತ್ತವೆ ಎಂದು ಎಂಐಟಿ ಸಂಶೋಧಕರು ಹೇಳುತ್ತಾರೆ.
ಇದನ್ನೂ ಓದಿ: Personality Test: ನಿಮ್ಮ ಕಾಲ್ಬೆರಳುಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ
ಎಂಐಟಿ ಸಂಶೋಧಕರು 150ಕ್ಕೂ ಹೆಚ್ಚು ಜನರನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿದ್ದರು. 103 ವೃತ್ತಿಪರ ಸಂಗೀತಜ್ಞರು ಮತ್ತು ಇತರ 50 ಮಂದಿಗೆ ಬ್ರೈನ್ ಸ್ಕ್ಯಾನ್ ಮಾಡಿಸಲಾಯಿತು. ಅದನ್ನು ತುಲನೆ ಮಾಡಿದಾಗ, ಎಲ್ಲಾ ಮ್ಯೂಸಿಶಿಯನ್ಗಳೂ ಕೂಡ ಸಮಾನ ರೀತಿಯ ಬ್ರೈನ್ ನೆಟ್ವರ್ಕ್ ಹೊಂದಿದ್ದು ಗೊತ್ತಾಗಿದೆ. ಸಂಗೀತ ಕಲಿಯದ ಜನರಿಗಿಂತ ಮ್ಯೂಸಿಶಿಯನ್ಗಳ ಮಿದುಳು ಹೆಚ್ಚು ರಚನಾತ್ಮಕ ಮತ್ತು ಕಾರ್ಯಾತ್ಮಕ ಸಂಪರ್ಕಗಳನ್ನು ಹೊಂದಿದ್ದವು. ಅದರಲ್ಲೂ ಮಾತು ಮತ್ತು ಶಬ್ದಕ್ಕೆ ಸಂಬಂಧ ಇರುವ ಜಾಗದಲ್ಲಿ ಇದು ಇನ್ನೂ ಸ್ಪಷ್ಟವಾಗಿ ತೋರಿತ್ತು ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ