AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಕಾಲ್ಬೆರಳುಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ

ಪತ್ರಿಯೊಬ್ಬರದ್ದು ಕಾಲ್ಬೆರಳು ಒಂದೇ ರೀತಿಯಾಗಿರುವುದಿಲ್ಲ. ನಿಮ್ಮ ಕಾಲ್ಬೆರಳುಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಬಹುದು. ಕಾಲ್ಬೆರಳುಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಇವುಗಳ ಪ್ರಕಾರ ನೀವು ಯಾವ ರೀತಿಯ ವ್ಯಕ್ತಿತ್ವವನ್ನು ಹೊಂದಿರುವವರು ಎಂದು ತಿಳಿದುಕೊಳ್ಳಬಹುದಾಗಿದೆ.

Personality Test: ನಿಮ್ಮ ಕಾಲ್ಬೆರಳುಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ
Personality Test
Follow us
ಅಕ್ಷತಾ ವರ್ಕಾಡಿ
|

Updated on: May 01, 2024 | 10:42 AM

ಪ್ರತಿಯೊಬ್ಬರ ಆಲೋಚನಾ ಕ್ರಮವೂ ವಿಭಿನ್ನವಾಗಿರುತ್ತದೆ. ಆದರೆ ವಿದ್ವಾಂಸರು ವ್ಯಕ್ತಿಗಳ ವ್ಯಕ್ತಿತ್ವವನ್ನು ಹಲವು ವಿಧಗಳಲ್ಲಿ ನಿರ್ಣಯಿಸಬಹುದು ಎಂದು ಹೇಳುತ್ತಾರೆ. ದೇಹದ ಭಾಗಗಳು ವ್ಯಕ್ತಿಯ ಬಗ್ಗೆ ಹೇಳುತ್ತವೆ ಎಂದು ಹೇಳಲಾಗುತ್ತದೆ. ಇವುಗಳಲ್ಲಿ ಒಂದು ಕಾಲ್ಬೆರಳುಗಳು. ಹೌದು, ಎಲ್ಲರ ಕಾಲ್ಬೆರಳುಗಳು ಒಂದೇ ಆಗಿರುವುದಿಲ್ಲ. ಕಾಲ್ಬೆರಳುಗಳನ್ನು ಆಧರಿಸಿ ವ್ಯಕ್ತಿಯ ಪ್ರಕಾರವನ್ನು ಹೇಗೆ ಊಹಿಸುವುದು . ಇದಕ್ಕಾಗಿ, ಕಾಲ್ಬೆರಳುಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಇವುಗಳ ಪ್ರಕಾರ ನಿಮ್ಮ ಆಲೋಚನೆಗಳು ಹೇಗೆ? ನೀವು ಯಾವ ರೀತಿಯ ವ್ಯಕ್ತಿತ್ವವನ್ನು ಹೊಂದಿರುವವರು ಎಂದು ತಿಳಿದುಕೊಳ್ಳಬಹುದಾಗಿದೆ.

ಹೆಬ್ಬೆರಳುಗಳಿಗೆ ಸಮನಾಗಿರುವ ಕಾಲ್ಬೆರಳುಗಳು:

ಕಾಲಿನ ಹೆಬ್ಬೆರಳಿಗೆ ಇತರ ಎರಡು ಬೆರಳುಗಳು ಸಮಾನವಾಗಿದ್ದರೆ, ಅದನ್ನು ರೋಮನ್ ಕಾಲು ಎಂದು ಕರೆಯಲಾಗುತ್ತದೆ. ಅಂತಹ ಕಾಲ್ಬೆರಳುಗಳನ್ನು ಹೊಂದಿರುವ ಜನರು ಸಮಸ್ಯೆಯನ್ನು ಯಾರ ಸಹಾಯವಿಲ್ಲದೆ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಜೊತೆಗೆ ಜೀವನದಲ್ಲಿ ಯಶಸ್ಸನ್ನು ಪಡೆದು ಉನ್ನತ ಮಟ್ಟವನ್ನು ತಲುಪುತ್ತಾರೆ.

ಹೆಬ್ಬೆರಳು ಇತರ ಬೆರಳುಗಳಿಗಿಂತ ಉದ್ದ:

ಹೆಬ್ಬೆರಳು ಇತರ ಕಾಲ್ಬೆರಳುಗಳಿಗಿಂತ ದೊಡ್ಡದಾಗಿದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯಿರಿ. ಈ ರೀತಿಯ ಕಾಲ್ಬೆರಳುಗಳನ್ನು ಹೊಂದಿರುವ ಜನರು ಬುದ್ಧಿವಂತರು ಎಂದು ಹೇಳಲಾಗುತ್ತದೆ. ಅಂತಹ ಜನರು ತಮ್ಮ ಅಧಿಕಾರವನ್ನು ತೋರಿಸಲು ಬಯಸುತ್ತಾರೆ. ಯಾವಾಗಲೂ ತಮ್ಮ ಅಧಿಕಾರವನ್ನು ಪಡೆಯಲು ಶ್ರಮವಹಿಸುತ್ತಿರುತ್ತಾರೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್ ರೀಲ್ಸ್ ವಿಚಾರವಾಗಿ ನಡು ಬೀದಿಯಲ್ಲೇ ಹೆಣ್ಮಕ್ಕಳ ಬಿಗ್​​​ ಫೈಟ್​​; ವಿಡಿಯೋ ವೈರಲ್

ಹೆಬ್ಬೆರಳಿಗಿಂತ ಇತರ ಬೆರಳುಗಳು ಉದ್ದ:

ಕಾಲಿನ ಇತರ ಬೆರಳುಗಳು ಹೆಬ್ಬೆರಳಿಗಿಂತ ದೊಡ್ಡದಾಗಿದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯಿರಿ. ಈ ರೀತಿಯ ಪಾದಗಳನ್ನು ಹೊಂದಿರುವ ಜನರು ತುಂಬಾ ಒಳ್ಳೆಯ ಸ್ವಭಾವದವರು. ಯಾವಾಗಲೂ ಇತರರೊಂದಿಗೆ ಸ್ನೇಹದಿಂದ ಇರುತ್ತಾರೆ ಮತ್ತು ಜಗಳಗಳನ್ನು ತಪ್ಪಿಸುತ್ತಾರೆ. ತನ್ನ ಪ್ರೀತಿಯಿಂದ ಎಲ್ಲರನ್ನೂ ಆಕರ್ಷಿಸುತ್ತಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ