AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇನ್ಸ್ಟಾಗ್ರಾಮ್  ರೀಲ್ಸ್ ವಿಚಾರವಾಗಿ ನಡು ಬೀದಿಯಲ್ಲೇ ಹೆಣ್ಮಕ್ಕಳ ಬಿಗ್​​​ ಫೈಟ್​​; ವಿಡಿಯೋ ವೈರಲ್

ಈ ಸೋಷಿಯಲ್ ಮೀಡಿಯಾ, ರೀಲ್ಸ್ ಹುಚ್ಚು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಹೌದು  ರೀಲ್ಸ್ ವಿಚಾರವಾಗಿ  ಜಗಳ, ಕೊಲೆ, ಅತ್ಮಹತ್ಯೆಯೂ  ಸಂಭವಿಸಿದ್ದುಂಟು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರೀಲ್ಸ್ ವಿಚಾರವಾಗಿ ನಾಲ್ಕು ಹುಡುಗಿಯರು ನಡು ರಸ್ತೆಯಲ್ಲೇ ಜಗಳವಾಡಿದ್ದಾರೆ. ಈ ಜಡೆ ಜಗಳದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  

Viral Video: ಇನ್ಸ್ಟಾಗ್ರಾಮ್  ರೀಲ್ಸ್ ವಿಚಾರವಾಗಿ ನಡು ಬೀದಿಯಲ್ಲೇ ಹೆಣ್ಮಕ್ಕಳ ಬಿಗ್​​​ ಫೈಟ್​​; ವಿಡಿಯೋ ವೈರಲ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 30, 2024 | 2:20 PM

ಸೋಷಿಯಲ್ ಮೀಡಿಯಾ (Social Media) ಇಲ್ಲದೆ ಜೀವನಾನೇ ಇಲ್ಲ ಅನ್ನೋ ಕಾಲ ಇದು. ಈಗಂತೂ ಸಣ್ಣ ಮಕ್ಕಳಿಂದು ಹಿಡಿದು ವಯಸ್ಸಾದವರವರೆಗೂ ಹೆಚ್ಚಿನವರು  ರೀಲ್ಸ್ ಮಾಡುತ್ತಾ, ಯೂಟ್ಯೂಬ್ ವಿಡಿಯೋ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ಸೂಕ್ತ ವೇದಿಕೆಯಾಗಿದ್ದರೂ ಕೂಡಾ  ಈ ಸೋಷಿಯಲ್ ಮೀಡಿಯಾ, ರೀಲ್ಸ್  ಹುಚ್ಚು  ಸೃಷ್ಟಿಸುವ ಅನಾಹುತಗಳು ಒಂದೆರಡಲ್ಲ. ಹೌದು ರೀಲ್ಸ್ ವಿಚಾರಕ್ಕೆ ಪತ್ನಿ ಪತಿಯನ್ನೇ ಕೊಂದಿರುವ, ಪತ್ನಿಯ ರೀಲ್ಸ್ ಹುಚ್ಚಿಗೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರೀಲ್ಸ್ ವಿಚಾರವಾಗಿ 4 ಹುಡುಗಿಯರು ನಡು ಬೀದಿಯಲ್ಲೇ ಜಗಳವಾಡಿದ್ದಾರೆ.  ಈ ಜಡೆ ಜಗಳದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಇನ್ಸ್ಟಾಗ್ರಾಮ್ ರೀಲ್ಸ್ ವಿಚಾರವಾಗಿ ನಾಲ್ವರು ಹುಡುಗಿಯರ ನಡುವೆ ಜಗಳ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಜನರಿರುತ್ತಾರೆ, ಸಭ್ಯ ರೀತಿಯಲ್ಲಿ ವರ್ತಿಸಬೇಕು ಎಂಬ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಈ ನಾಲ್ವರು ಹುಡುಗಿಯರು ನಡು ಬೀದಿಯಲ್ಲೇ ಜಡೆ ಜಗಳವಾಡಿದ್ದಾರೆ. ನಂತರ ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇನ್ಸ್ಟಾಗ್ರಾಮ ರೀಲ್ಸ್ ನಲ್ಲಿ ಮಾಡಿದ ಕಾಮೆಂಟ್ಸ್ ವಿಚಾರವಾಗಿ ನಾಲ್ವರ ನಡುವೆ ಜಗಳ ನಡೆದಿದೆ, ವಿಚಾರಣೆಯಲ್ಲಿ ಈ ನಾಲ್ವರು ಹುಡುಗಿಯರೂ ಕೂಡಾ 18 ವರ್ಷಕ್ಕಿಂತ ಕೆಳಗಿನವರು ಎಂದು ತಿಳಿದು ಬಂದಿದೆ  ಎಂದು ನೋಯ್ಡಾ  ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ; ಮದುವೆ ಮಾಡಿಸಿದ ಮಾವ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಜಡೆ ಜಗಳಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಹಾರ್ದಿಕ್ ತಿವಾರಿ (@user_hardik) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನಾಲ್ವರು ಹುಡುಗಿಯರು ನಡು ರಸ್ತೆಯಲ್ಲಿಯೇ ಪರಸ್ಪರ ಕೂದಲನ್ನು ಎಳೆಯುತ್ತಾ ಜಡೆ ಜಗಳವಾಡುವಂತಹ ದೃಶ್ಯವನ್ನು ಕಾಣಬಹುದು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಇವರ ಜಗಳ WWE ಫೈಟ್ ಗಿಂತ ಕಡಿಮೆಯಿಲ್ಲ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ