Video Viral: ಅತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ; ಮದುವೆ ಮಾಡಿಸಿದ ಮಾವ

ಪತ್ನಿಯನ್ನು ಕಳೆದುಕೊಂಡಿದ್ದ ಸಿಕಂದರ್ ಯಾದವ್​​ ಕೆಲ ತಿಂಗಳುಗಳಿಂದ ಅತ್ತೆಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದ. ಈ ಅವಧಿಯಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಹತ್ತಿರವಾಗಿದ್ದಾರೆ. ಈ ವೇಳೆ ಅತ್ತೆ ಗೀತಾದೇವಿಯ ಪತಿಗೆ ಅನುಮಾನ ಬಂದಿದೆ. ತನಿಖೆ ನಡೆಸಿದಾಗ ಇವರಿಬ್ಬರ ಅಕ್ರಮ ಸಂಬಂಧ ಬಯಲಾಗಿದೆ.

Video Viral: ಅತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ; ಮದುವೆ ಮಾಡಿಸಿದ ಮಾವ
ಅತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ
Follow us
ಅಕ್ಷತಾ ವರ್ಕಾಡಿ
|

Updated on:Apr 30, 2024 | 12:50 PM

ಬಿಹಾರ: ತನ್ನ ಹೆಂಡತಿಯ ತಾಯಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಅಳಿಯನನ್ನು ಮಾವ ಮತ್ತು ಗ್ರಾಮಸ್ಥರು ಸೇರಿ ಮದುವೆ ಮಾಡಿಸಿರುವ ಘಟನೆ ಬಿಹಾರದ ಬಂಕಾದಲ್ಲಿ ನಡೆದಿದೆ. ವರದಿಗಳ ಪ್ರಕಾರ, 55 ವರ್ಷದ ದಿಲೇಶ್ವರ್ ದರ್ವೆ ಅವರ ಪತ್ನಿ ಗೀತಾ ದೇವಿ (45), ಅವರ ಅಳಿಯ ಸಿಕಂದರ್ ಯಾದವ್​​ನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದರು. ಇತ್ತೀಚಿಗಷ್ಟೇ ಇವರಿಬ್ಬರ ಏಕಾಂತದ ಸಮಯದಲ್ಲಿ ರೆಡ್​​ ಹ್ಯಾಂಡ್​​ ಆಗಿ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರ ಪ್ರೇಮ ಕಹಾನಿ ಊರೆಲ್ಲಾ ಸುದ್ದಿಯಾಗುತ್ತಿದ್ದಂತೆ ಗ್ರಾಮಸ್ಥರು ಒಟ್ಟಾಗಿ ಸೇರಿ ಅಳಿಯನೊಂದಿಗೆ ಅತ್ತೆಗೆ ಮದುವೆ ಮಾಡಿಸಿದ್ದಾರೆ.

ಪತ್ನಿಯನ್ನು ಕಳೆದುಕೊಂಡಿದ್ದ ಸಿಕಂದರ್ ಯಾದವ್​​ ಕೆಲ ತಿಂಗಳುಗಳಿಂದ ಅತ್ತೆಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದನು. ಈ ಅವಧಿಯಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಹತ್ತಿರವಾಗಿದ್ದಾರೆ. ಈ ವೇಳೆ ಅತ್ತೆ ಗೀತಾದೇವಿಯ ಪತಿಗೆ ಅನುಮಾನ ಬಂದಿದೆ. ತನಿಖೆ ನಡೆಸಿದಾಗ ಇವರಿಬ್ಬರ ಅಕ್ರಮ ಸಂಬಂಧ ಬಯಲಿಗೆ ಬಂದಿದೆ. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ಬಗ್ಗೆ ದಿಲೇಶ್ವರ್ ಪಂಚಾಯಿತಿಗೆ ಮಾಹಿತಿ ನೀಡಿದ್ದರು. ಇದಲ್ಲದೇ ಸಿಕಂದರ್ ಯಾದವ್ ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಪಂಚಾಯತ್ ಮತ್ತು ಗ್ರಾಮಸ್ಥರ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ತರುವಾಯ, ದಿಲೇಶ್ವರ್ ಮತ್ತು ಗ್ರಾಮಸ್ಥರ ಒಪ್ಪಿಗೆಯೊಂದಿಗೆ, ಸಿಕಂದರ್ ಮತ್ತು ಗೀತಾದೇವಿ ವಿವಾಹ ಮಾಡಿಸಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 27 ಬಾರಿ ಗರ್ಭಿಣಿಯಾಗಿ 69 ಮಕ್ಕಳನ್ನು ಹೆತ್ತು ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದ ಮಹಿಳೆ

ಸದ್ಯ ಇವರಿಬ್ಬರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. @HalchalPriya ಎಂಬ ಟ್ವಿಟರ್​​ ಖಾತೆಯಲ್ಲಿ ಏಪ್ರಿಲ್​​ 28ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಜೊತೆಗೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿರುವುದನ್ನು ಕಾಣಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:49 pm, Tue, 30 April 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್