ಮುದ್ದಿನ ತಂಗಿ ಪ್ರೀತಿಯ ಬಲೆಗೆ ಬಿದ್ದಳು, ಅದರಿಂದ ಹೆಣ ಬಿದ್ದಿದ್ದು ಎಂಜಿನಿಯರಿಂಗ್ ಓದಿಸುತ್ತಿದ್ದ​​ ಅಣ್ಣನದು! ಏನಿದು ಮೈಸೂರಿನ ಪ್ರೇಮ್ ಕಹಾನಿ

ಹಿಂದೆಮುಂದೆ ನೋಡದೆ ಪ್ರೀತಿ ಎಂಬ ಹುಚ್ಚು ಮಾಯೆಗೆ‌ ಸಿಲುಕಿದ್ರೆ ಏನೆಲ್ಲಾ ಅನಾಹುತಗಳಾಗಬಹುದು ಅನ್ನೋದಕ್ಕೆ ಈ ಕೊಲೆ ಬೆಸ್ಟ್ ಉದಾಹರಣೆಯಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಣಯ ಪಕ್ಷಿಗಳ ಅವಿವೇಕತನಕ್ಕೆ ಬಲಿಯಾಗಿದ್ದು ಒಬ್ಬಂಟಿ ಅಣ್ಣ.

ಮುದ್ದಿನ ತಂಗಿ ಪ್ರೀತಿಯ ಬಲೆಗೆ ಬಿದ್ದಳು, ಅದರಿಂದ ಹೆಣ ಬಿದ್ದಿದ್ದು ಎಂಜಿನಿಯರಿಂಗ್ ಓದಿಸುತ್ತಿದ್ದ​​ ಅಣ್ಣನದು! ಏನಿದು ಮೈಸೂರಿನ ಪ್ರೇಮ್ ಕಹಾನಿ
ಮೈಸೂರಿನ ಪ್ರೇಮ್​ ಕಹಾನಿಯಲ್ಲಿ ಅವಿವೇಕತನಕ್ಕೆ ಬಲಿಯಾಗಿದ್ದು ಒಬ್ಬಂಟಿ ಅಣ್ಣ, ಕೆಳ ಚಿತ್ರದಲ್ಲಿ ಆರೋಪಿ
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on: Jun 20, 2023 | 10:30 AM

ಪ್ರೀತಿ ಪ್ರೇಮದಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಅದರಲ್ಲೂ ಹದಿಹರೆಯದ ಪ್ರಣಯ ಪಕ್ಷಿಗಳ ಹುಚ್ಚಾಟ ತರುವ ಸಮಸ್ಯೆಗಳು ಹೇಳತೀರದು. ಅಂತಹುದ್ದೇ ಒಂದು ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಅದು ಮೈಸೂರಿನ ಹೊರವಲಯದಲ್ಲಿರುವ ಬೆಳವಾಡಿ ಗ್ರಾಮ. ರಾತ್ರಿಯಾಗುತ್ತಿದ್ದಂತೆ ಎಲ್ಲರೂ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದ್ರು. ಅಲ್ಲಲ್ಲಿ ಇದ್ದ ಅಂಗಡಿಗಳಲ್ಲಿ ವ್ಯಾಪಾರ ನಡೆಯುತಿತ್ತು. ಈ ವೇಳೆ ಅಲ್ಲಿಗೆ ಬೈಕ್‌ನಲ್ಲಿ ಒಬ್ಬ ಬಂದಿದ್ದ. ಆತ ಬರುತ್ತಿದ್ದಂತೆ ಮತ್ತೊಂದು ಬೈಕ್‌ನಲ್ಲಿದ್ದ ಮೂವರು ಅಲರ್ಟ್ ಆದರು. ನೋಡನೋಡುತ್ತಿದ್ದಂತೆ ಆ ಒಬ್ಬಂಟಿ ಬೈಕ್ ಸವಾರನನ್ನು ಅಡ್ಡಗಟ್ಟಿದ ಮೂವರು ಆತನನ್ನು ಕೆಳಗೆ ಬೀಳಿಸಿದರು. ಕೆಳಗೆ ಬಿದ್ದವನಿಗೆ ಒಬ್ಬ ಚಾಕುವಿನಿಂದ ಇರಿದರೆ ಉಳಿದವರು ಅಲ್ಲೇ ಇದ್ದ ಕಲ್ಲನ್ನು ಕೆಳಗೆ ಬಿದ್ದವನ ಮೇಲೆ ಎತ್ತಿ ಹಾಕಿದ್ರು. ಅಷ್ಟೇ… ರಕ್ತದ ಮಡುವಿನಲ್ಲಿ ವಿಲವಿಲ‌ನೆ ಒದ್ದಾಡಿದ ಆತ ಅಲ್ಲೇ ಕೊನೆಯುಸಿರೆಳೆದ (murder). ಬಂದವರು ರಣೋತ್ಸಹ ತೋರುತ್ತಾ ಕ್ಷಣಾರ್ಧದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿದರು. ಅಂದ್ಹಾಗೆ ಅವತ್ತು ಅಲ್ಲಿ ಕೊಲೆಯಾದವನು ಹೇಮಂತ್ ಅಲಿಯಾಸ್ ಸ್ವಾಮಿ. ಸ್ವಾಮಿ‌ ಮೈಸೂರಿನ (mysore) ಬೆಳವಾಡಿ ಗ್ರಾಮದ ನಿವಾಸಿ. ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ. ತಂದೆ ತಾಯಿ ತಂಗಿಯ (sister) ಜೊತೆ ವಾಸವಾಗಿದ್ದ. ಸ್ವಾಮಿ ಹಾಗೂ ಅತನ ಮನೆಯವರಿಗೆ ತಂಗಿ ಅಂದ್ರೆ ಪಂಚಪ್ರಾಣ. ಆಕೆಯನ್ನು ತುಂಬಾ ಮುದ್ದಾಗಿ ಬೆಳೆಸಿದ್ರು. ಇಂಜಿನಿಯರಿಂಗ್ ಓದಿಸುತ್ತಿದ್ದರು. ಸ್ವಾಮಿ ತಾನು ಕಷ್ಟಪಟ್ಟಾದರೂ ಸರಿ ಇದ್ದೊಬ್ಬ ತಂಗಿ ಕಷ್ಟಪಡಬಾರದು ಅಂತಾ ಆಕೆಯನ್ನು ನೋಡಿಕೊಂಡಿದ್ದ..

ಇನ್ನು ಸ್ವಾಮಿ ಜೊತೆ ಅದೇ ಗ್ರಾಮದ ಸಾಗರ್ ಎಂಬಾತ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ. ಆಗಾಗ ಸಾಗರ್ ಸ್ವಾಮಿಯ ಮನೆಗೆ ಬರುತ್ತಿದ್ದ. ಸಾಗರ್ ಬೇರೆವ ಯಾರೋ ಅಲ್ಲ; ಸ್ವಾಮಿಯ ಸಂಬಂಧಿಕರೇ ಆಗಿದ್ದರು. ಈ ವೇಳೆ ಸಾಗರ್‌ಗೆ ಸ್ವಾಮಿ‌ ಸಹೋದರಿಯ ಜೊತೆ ಸಲುಗೆ ಬೆಳೆದಿದೆ. ಸಲುಗೆ ಸ್ನೇಹವಾಗಿ ನಂತರ ಪ್ರೀತಿಯಾಗಿದೆ. ಸ್ವಾಮಿ ಮನೆಯವರಿಗೆ ಗೊತ್ತಿಲ್ಲದೆ ಇಬ್ಬರ ಪ್ರೀತಿ ಬೆಳೆದಿದೆ. ಅದೊಂದು ದಿನ ಇವರ ಪ್ರೀತಿ ಬಗ್ಗೆ ಸ್ವಾಮಿ ಹಾಗೂ ಅವರ ಮನೆಯವರಿಗೆ ಗೊತ್ತಾಗಿದೆ. ಆಗ ಸ್ವಾಮಿ ಹಾಗೂ ಅವರ ಮನೆಯವರು ಕೆಂಡಾಮಂಡಲರಾಗಿದ್ದಾರೆ. ಸಾಗರ್‌‌ಗೆ ತಂಗಿಯ ಸಹವಾಸಕ್ಕೆ ಬರದಂತೆ ವಾರ್ನ್ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾಗರ್, ಸ್ವಾಮಿ ಕೊಲೆ ಮಾಡಿದ್ದಾನೆ ಅಂತಲೇ ಎಲ್ಲರೂ ಭಾವಿಸಿದ್ದರು.

ಸಾಗರ್ ಸ್ವಾಮಿಯನ್ನು ಕೊಲೆ ಮಾಡಿದ್ದು ಸತ್ಯ. ಆದ್ರೆ ಆ ಕೊಲೆಗೆ ಕಾರಣ ಸ್ವಾಮಿ ಧಮ್ಕಿ ಹಾಕಿದ್ದಲ್ಲ. ಬದಲಿಗೆ ಸಾಗರ್, ಸ್ವಾಮಿ‌ ಸಹೋದರಿಗೆ ಕಟ್ಟಿದ್ದ ತಾಳಿಯನ್ನು ಕಿತ್ತು ಹಾಕಿದ್ದ ಅನ್ನೋದು. ಹೌದು ಇದೇ ಈ ಕಹಾನಿಯಲ್ಲಿರುವ ಟ್ವಿಸ್ಟ್. ಅಸಲಿಗೆ ಸಾಗರ್ ಹಾಗೂ ಸ್ವಾಮಿ ಸಹೋದರಿಯನ್ನು ಕೇವಲ ಪ್ರೀತಿ ಮಾಡಿರಲಿಲ್ಲ. ಬದಲಿಗೆ ಇಬ್ಬರೇ ಹೋಗಿ ದೇವಸ್ಥಾನದಲ್ಲಿ ಮದುವೆ ಸಹಾ ಆಗಿದ್ದರು. ಸ್ವಾಮಿ ಸಹೋದರಿಯ ಪ್ರಕಾರ ಸಾಗರ್ ಹಾಗೂ ಆಕೆ ಇಬ್ಬರೇ ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿ ಬಂದಿದ್ದರು.

ಮದುವೆ ಆದ ಮೇಲೆ ಎಲ್ಲವೂ ಸರಿಯಾಗುತ್ತದೆ ಅಂತಲೇ ಸಾಗರ್ ಸೇರಿ ಎಲ್ಲರೂ ಭಾವಿಸಿದ್ದರು. ಆದ್ರೆ ಅಸಲಿಗೆ ಸಮಸ್ಯೆ ಆರಂಭವಾಗಿದ್ದೇ ಅಲ್ಲಿಂದ. ಮದುವೆಯಾಗಿ‌ ಬಂದ ನಂತರ ಸ್ವಾಮಿಯ ಸಹೋದರಿ ಉಲ್ಟಾ ಹೊಡಿದಿದ್ದಳು. ತನಗೆ ಈ ಮದುವೆ ಇಷ್ಟವಿರಲಿಲ್ಲ. ‌ಸಾಗರ್ ಬಲವಂತವಾಗಿ ನನಗೆ ತಾಳಿ ಕಟ್ಟಿದ ಅಂತಾ ಅಲವತ್ತುಕೊಂಡಿದ್ದಳು.‌ ನಂತರ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಠಾಣೆಗೆ ಸಾಗರ್ ಹಾಗೂ ಅವರು ಮನೆಯವರು, ಸ್ವಾಮಿ ಆಕೆಯ ಸಹೋದರಿ ಮತ್ತು ಅವರ ಮನೆಯವರನ್ನು ಕರೆಸಿದ್ದಾರೆ. ಈ ವೇಳೆಯೂ ಆಕೆ ತನಗೆ ಈ ಮದುವೆ ಇಷ್ಟವಿಲ್ಲ. ಸಾಗರ್ ನನಗೆ ಬಲವಂತವಾಗಿ ತಾಳಿ ಕಟ್ಟಿದ್ದಾನೆ ಅಂತಾನೇ ಹೇಳಿದ್ದಾಳೆ. ಇದರಿಂದ ಸಹಜವಾಗಿ ಪೊಲೀಸರು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಂಡು ವಾಪಸ್ಸು ಕಳುಹಿಸಿದ್ದಾರೆ.

ಸಾಗರ್ ಸ್ವಾಮಿ ಆಕೆಯ ಸಹೋದರಿ ತಂಟೆಗೆ ಹೋಗಬಾರದು ಸ್ವಾಮಿ ಆಗಲಿ ಅವರ ಮನೆಯವರಾಗಲಿ ಸಾಗರ್ ಹಾಗೂ ಅವರ ಮನೆಯವರ ತಂಟೆಗೆ ಹೋಗಬಾರದು ಅಂತಾ ಪೊಲೀಸರು ಇಬ್ಬರಿಗೂ ವಾರ್ನ್ ಮಾಡಿದ್ರು. ಇದರಿಂದ ಸ್ವಾಮಿ‌ ಹಾಗೂ ಮನೆಯವರು ನಿರಾಳರಾಗಿದ್ದರು. ಏಕಂದ್ರೆ ಇಂಜಿನಿಯರಿಂಗ್ ಓದುತ್ತಿದ್ದವಳನ್ನು ಬಣ್ಣ ಬಳಿಯುವವನಿಗೆ ಹೇಗೆ ಕೊಡೋದು ಅನ್ನೋದು ಅವರ ಅಭಿಪ್ರಾಯವಾಗಿತ್ತು. ಇದನ್ನು ಸ್ವಾಮಿ ಸಹೋದರಿ ಬಳಿಯೂ ಹೇಳಿದ್ದ.

ಆದರೆ ಇತ್ತ ಸಾಗರ್ ಮಾತ್ರ ಈ ಎಲ್ಲಾ ಬೆಳವಣಿಗೆಯಿಂದ ಕುದ್ದು ಹೋಗಿದ್ದ. ಅದರಲ್ಲೂ ಸ್ವಾಮಿ ತಾನು‌ ಕಟ್ಟಿದ್ದ ತಾಳಿ ಕಿತ್ತು ಹಾಕಿದ ಅನ್ನೋ ವಿಚಾರ ಆತನಿಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ತಾನು ಪ್ರೀತಿಸಿ ಮದುವೆಯಾದರೂ ಆಕೆ ತನಗೆ ಸಿಗಲಿಲ್ಲ ಅನ್ನೋದನ್ನು ಸಾಗರ್ ಗೆ ಸಹಿಸಲು ಸಾಧ್ಯವಾಗಲಿಲ್ಲ. ಹೇಗಾದರೂ ಮಾಡಿ ಇದಕ್ಕೆ ಸೇಡು ತೀರಿಸಿಕೊಳ್ಳಲೇಬೇಕು ಅಂತಾ ಪಣ ತೊಟ್ಟಿದ್ದ. ಅದಕ್ಕಾಗಿ ಸ್ಕೆಚ್ ಹಾಕಿಕೊಂಡು ಕಾಯುತ್ತಿದ್ದ. ಇಷ್ಟಕೆಲ್ಲಾ‌ ಕಾರಣ ಸ್ವಾಮಿನೇ ಅಂತಾ ಸಾಗರ್ ನಿರ್ಧರಿಸಿದ್ದ. ಅದಕ್ಕೆ ಹೇಗಾದರೂ ಮಾಡಿ ಸ್ವಾಮಿಯನ್ನು ಮುಗಿಸಲು‌ ನಿರ್ಧರಿಸಿದ್ದ.

ಅದಕ್ಕಾಗಿ ಒಂದು ಟೀಂ ರೆಡಿ ಮಾಡಿದ. ಸ್ನೇಹಿತರಾದ‌ ಪ್ರತಾಪ್ ಹಾಗೂ ಮಂಜುರನ್ನು ತನ್ನ ಜೊತೆಗೆ ಸೇರಿಸಿಕೊಂಡ. ತನಗೆ ಆದ ಅನ್ಯಾಯವನ್ನು ಅವರಿಗೆ ವಿವರಿಸಿದ. ಇದಕ್ಕೆಲ್ಲಾ ಕಾರಣನಾದ ಸ್ವಾಮಿಯನ್ನು ಮುಗಿಸಿಯೇ ಬಿಡೋಣ ಅಂತಾ ಅವರೆಲ್ಲಾ ನಿರ್ಧರಿಸಿದರು. ಅದಕ್ಕಾಗಿ ಆತನ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಈ ವೇಳೆ ಸ್ವಾಮಿ ಕೆಲಸ ಮುಗಿಸಿಕೊಂಡು ವಾಪಸ್ಸು ಬರುವಾಗ ಒಬ್ಬನೇ ಇರುತ್ತಾನೆ. ಆತನನ್ನು ಮುಗಿಸಲು ಅದೇ ಸೂಕ್ತ ಸಮಯ ಅಂತಾ ನಿರ್ಧರಿಸಿದ್ರು. ಅದರಂತೆ ಅವತ್ತು ಕೆಲಸ‌ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ಸಾಗರ್ ತನ್ನ ಸ್ನೇಹಿತರ ಜೊತೆಗೆ ಸೇರಿಕೊಂಡು ಭೀಕರವಾಗಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಮೂವರೂ ತಲೆಮರಿಸಿಕೊಂಡಿದ್ದರು. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂವರೂ ಕೊಲೆ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಿದ್ದ ಮೈಸೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಇನ್ನು ಈ ಜಗತ್ತಿನಲ್ಲಿ ಅಣ್ಣ ತಂಗಿಯ ಬಂಧಕ್ಕೆ ತನ್ನದೇ ಆದಂತಹ ಮಹತ್ವವಿದೆ. ತಂಗಿಗಾಗಿ ಅಣ್ಣ ಸಾಕಷ್ಟು ತ್ಯಾಗಗಳನ್ನು ಮಾಡಿದ ಉದಾಹರಣೆಗಳಿವೆ. ಅದೇ ರೀತಿ ತಂಗಿ ಸಹ ಅಣ್ಣನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗುತ್ತಾಳೆ. ಆದರೆ ಮೈಸೂರಿನಲ್ಲಿ ಪ್ರೀತಿಯ ತಂಗಿಯೇ ಅಣ್ಣನ ಕೊಲೆಗೆ ಕಾರಣವಾಗಿ ಹೋಗಿದ್ದು ಮಾತ್ರ ದುರಂತ. ಜೊತೆಗೆ ಸ್ವಾಮಿ ತಾನು ಮಾಡದ ತಪ್ಪಿಗೆ ಬೀದಿ ಹೆಣವಾಗಿದ್ದಾನೆ. ಪ್ರೀತಿಯ ತಂಗಿಯೇ ಸ್ವಾಮಿ ಕೊಲೆಗೆ ಕಾರಣವಾಗಿದ್ದಾಳೆ. ಒಟ್ಟಾರೆ ಹಿಂದೆಮುಂದೆ ನೋಡದೆ ಪ್ರೀತಿ ಎಂಬ ಹುಚ್ಚು ಮಾಯೆಗೆ‌ ಸಿಲುಕಿದ್ರೆ ಏನೆಲ್ಲಾ ಅನಾಹುತಗಳಾಗಬಹುದು ಅನ್ನೋದಕ್ಕೆ ಈ ಕೊಲೆ ಬೆಸ್ಟ್ ಉದಾಹರಣೆಯಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?