ಅಧಿಕಾರ ಮುಗಿದರೂ ಡಾ.ಯತೀಂದ್ರ ಕಾರಿನಲ್ಲಿ ಎಂಎಲ್ಎ ಸ್ಟಿಕರ್; ಮೈಸೂರು ಭಾಗದಲ್ಲಿ ಶ್ಯಾಡೋ ಸಿಎಂ ಆದ್ರಾ ಮುಖ್ಯಮಂತ್ರಿ ಪುತ್ರ?
ಅಧಿಕಾರ ಮುಗಿದರೂ ಕಾರಿನಲ್ಲಿ ಎಂಎಲ್ಎ ಪಾಸ್ ಜೊತೆ ಡಾ.ಯತೀಂದ್ರ ಅವರು ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮೈಸೂರು ಭಾಗದಲ್ಲಿ ಶ್ಯಾಡೋ ಸಿಎಂ ಆಗಿದ್ದಾರಾ?

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪುತ್ರ ಮೈಸೂರು ಭಾಗದಲ್ಲಿ ಶ್ಯಾಡೋ ಸಿಎಂ ಆಗಿದ್ದಾರಾ? ಅಧಿಕಾರ ಮುಗಿದರೂ ಕಾರಿನಲ್ಲಿ ಎಂಎಲ್ಎ ಪಾಸ್ ಜೊತೆ ಡಾ.ಯತೀಂದ್ರ (Dr. Yathindra) ಅವರು ಓಡಾಡುತ್ತಿದ್ದಾರೆ. ಅಲ್ಲದೆ, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿದೆ. ಕಾರು ಚಲಿಸುತ್ತಿದ್ದರೂ ಕಾರ್ಯಕರ್ತರು ಮುಗಿಬಿದ್ದು ಮನವಿ ಪತ್ರ ಕೊಟ್ಟಿದ್ದಾರೆ.
ನಂತರ ಮಾತನಾಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಕರ್ನಾಟಕದ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಯೋಜನೆ ಜಾರಿ ಮಾಡಲಾಗುವುದು. ಆದರೆ ಯೋಜನೆ ಜಾರಿಗೆ ಬಿಜೆಪಿಯವರು ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಬಿಜೆಪಿ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದರು.
9 ವರ್ಷವಾದರೂ ಕೇಂದ್ರದಲ್ಲಿ ಬಿಜೆಪಿ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದ ಮಾಜಿ ಶಾಸಕರು, ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಹೆಚ್ಚು ಸ್ಥಾನ ಗೆದ್ದರೆ ಸಿಎಂ ಹಾಗೂ ಡಿಸಿಎಂಗೆ ಹೆಚ್ಚು ಶಕ್ತಿ ಬರುತ್ತದೆ ಎಂದರು.
ಯತೀಂದ್ರರನ್ನು ಸನ್ಮಾನಿಸಲು ಮುಗಿಬಿದ್ದ ಮಹಿಳೆಯರು
ಮೈಸೂರು: ದೇವರಾಜ ಮೊಹಲ್ಲಾದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ನಡೆಸಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಮಹಿಳೆಯರು ಸನ್ಮಾನಿಸಲು ಮುಗಿಬಿದ್ದರು. ಶಾಲು ಹಾಗೂ ಸನ್ಮಾನ ಮಾಡಲು ನೂಕು ನುಗ್ಗಲು ಉಂಟಾಯಿತು. ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಸೇರಿದಂತೆ ಹಲವರು ಭಾಗಿಯಾದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 pm, Tue, 20 June 23