27 ಬಾರಿ ಗರ್ಭಿಣಿಯಾಗಿ 69 ಮಕ್ಕಳನ್ನು ಹೆತ್ತು ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದ ಮಹಿಳೆ

ಮಹಿಳೆಯೊಬ್ಬಳು 27 ಬಾರಿ ಗರ್ಭಿಣಿಯಾಗಿ 69 ಮಕ್ಕಳನ್ನು ಹೆತ್ತು ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದರು. 27 ಬಾರಿ ಗರ್ಭಿಣಿಯಾಗಿದ್ದು 69 ಮಕ್ಕಳನ್ನು ಹೆತ್ತಿದ್ದಾರೆ, ಅದರಲ್ಲಿ 16 ಅವಳಿ ಮಕ್ಕಳು 7 ಬಾರಿ ತ್ರಿವಳಿ ಮಕ್ಕಳು ಜನಿಸಿದ್ದಾರೆ. ಇಷ್ಟೇ ಅಲ್ಲ ನಾಲ್ಕು ಬಾರಿ ಒಟ್ಟಿಗೆ ನಾಲ್ಕು ಮಕ್ಕಳು ಜನಿಸಿದ್ದಾರೆ.

27 ಬಾರಿ ಗರ್ಭಿಣಿಯಾಗಿ 69 ಮಕ್ಕಳನ್ನು ಹೆತ್ತು  ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದ ಮಹಿಳೆ
Follow us
|

Updated on: Apr 30, 2024 | 10:52 AM

ಇಂದಿನ ದಿನಗಳಲ್ಲಿ ಮಗು(Baby)ವನ್ನು ಬೆಳೆಸುವುದು ತುಂಬಾ ಕಷ್ಟಕರ ಸಂಗತಿ, ಒಂದು ಮಗುವನ್ನು ಹೆತ್ತು ಅದರ ಬೇಕು ಬೇಡಗಳನ್ನು ನೋಡಿಕೊಂಡು ದೊಡ್ಡವರನ್ನಾಗಿ ಮಾಡುವವರೆ ಸಾಕಪ್ಪಾ ಸಾಕು ಎಂದೆನಿಸುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ 69 ಮಕ್ಕಳನ್ನು ಹೆತ್ತು ಗಿನ್ನಿಸ್ ದಾಖಲೆ ಗೆ ಪಾತ್ರರಾಗಿದ್ದರು. 27 ಬಾರಿ ಗರ್ಭಿಣಿಯಾಗಿದ್ದು 69 ಮಕ್ಕಳನ್ನು ಹೆತ್ತಿದ್ದಾರೆ, ಅದರಲ್ಲಿ 16 ಅವಳಿ ಮಕ್ಕಳು 7 ಬಾರಿ ತ್ರಿವಳಿ ಮಕ್ಕಳು ಜನಿಸಿದ್ದಾರೆ. ಇಷ್ಟೇ ಅಲ್ಲ ನಾಲ್ಕು ಬಾರಿ ಒಟ್ಟಿಗೆ ನಾಲ್ಕು ಮಕ್ಕಳು ಜನಿಸಿದ್ದಾರೆ.

ಇದು ಕಥೆಯಲ್ಲ ಮಹಿಳೆಯೊಬ್ಬರು 69 ಮಕ್ಕಳಿಗೆ ಜನ್ಮ ನೀಡಿ ಗಿನ್ನಿಸ್ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ಗೆ ಸೇರ್ಪಡೆಯಾಗಿದ್ದಾರೆ. ರಷ್ಯಾದ ಶುಯಾ ಪ್ರದೇಶದ ನಿವಾಸಿಯಾಗಿದ್ದು ಅವರ ಹೆಸರು ವ್ಯಾಲೆಂಟಿನಾ ವ್ಯಾಸೆಲಿನಾ. ವೈದ್ಯಕೀಯ ವಿಜ್ಞಾನದ ಪ್ರಕಾರ, ಇಲ್ಲಿಯವರೆಗೆ ಯಾರೂ 16 ಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತಿಲ್ಲ. ಆದುದರಿಂದ ಮಹಿಳೆಯೊಬ್ಬಳು ಇಷ್ಟೊಂದು ಮಕ್ಕಳಿಗೆ ಜನ್ಮ ನೀಡುತ್ತಾಳೆ ಎಂಬ ಕಲ್ಪನೆಗೆ ನಿಲುಕದ್ದಾಗಿದೆ.

ಫಿಯೋಡರ್ ವಾಸಿಲೀವ್ ಅವರ ಪತ್ನಿ 1725 ಮತ್ತು 1765 ರ ನಡುವೆ 27 ಬಾರಿ ಗರ್ಭಿಣಿಯಾದರು. ಒಂದೇ ಮಹಿಳೆಯ ಗರ್ಭದಿಂದ ಒಟ್ಟು 69 ಮಕ್ಕಳು ಜನಿಸಿದವು. ಫಿಯೋಡರ್ ವಾಸಿಲೀವ್ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ. ಅವರೂ ಕೂಡ ಅಲ್ಲದೇ 8 ಬಾರಿ ಗರ್ಭಿಣಿಯಾಗಿ 18 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಮತ್ತಷ್ಟು ಓದಿ:Guinness World Records: ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತೀ ಚಿಕ್ಕ ಎಸ್ಕಲೇಟರ್; ವಿಡಿಯೋ ಇಲ್ಲಿದೆ ನೋಡಿ

ಈ ಪೈಕಿ 6 ಬಾರಿ ಅವಳಿ ಮಕ್ಕಳು ಜನಿಸಿದ್ದಾರೆ. ಈ ರೀತಿ ನೋಡಿದರೆ ವಾಸಿಲೀವ್ ಅವರ ಇಬ್ಬರು ಹೆಂಡತಿಯರಿಗೆ ಒಟ್ಟು 87 ಮಕ್ಕಳು ಜನಿಸಿದರು. ಅವರಲ್ಲಿ 84 ಮಂದಿ ಜೀವಂತವಾಗಿ ಉಳಿದಿದ್ದಾರೆ ಎಂದು ಹೇಳಲಾಗುತ್ತದೆ, ಉಳಿದ 7 ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದವು.

ಆದರೆ ಮೊದಲ ಹೆಂಡತಿಯ ಹೆಸರು ವ್ಯಾಲೆಂಟಿನಾ ವಾಸಿಲೀವ್ ಮತ್ತು ಅವಳು 76 ವರ್ಷಗಳ ಕಾಲ ಬದುಕಿದ್ದರು ಎನ್ನಲಾಗಿದೆ ಎರಡನೇ ಪತ್ನಿಯ ಹೆಸರು ಬಹಿರಂಗಗೊಂಡಿಲ್ಲ.

ಮಹಿಳೆ 60ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಸಾಧ್ಯವೇ? ವಿಜ್ಞಾನಿಗಳು ಇಂದಿಗೂ ಇದನ್ನು ನಂಬುವುದಿಲ್ಲ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂತಾನೋತ್ಪತ್ತಿ ವಿಭಾಗದ ನಿರ್ದೇಶಕ ಜೇಮ್ಸ್ ಸೆಗರ್ಸ್ ಪ್ರಕಾರ, ಇದು ಸಾಧ್ಯವಿಲ್ಲ. ಮೊದಲನೆಯದಾಗಿ, 40 ವರ್ಷಗಳಲ್ಲಿ ಮಹಿಳೆ 27 ಬಾರಿ ಗರ್ಭಿಣಿಯಾಗುವುದು ಹೇಗೆ ಎಂದು ಯೋಚಿಸಿ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು