NEET MDS 2023 ಪರೀಕ್ಷೆಯ ಫಲಿತಾಂಶವನ್ನು ಮಾರ್ಚ್ 10 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. NEET MDS 2023 ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಬಹುದು. ರಾಷ್ಟ್ರೀಯ ಪರೀಕ್ಷಾ ಮಂಡಳಿಯು (NTA) NEET MDS 2023 ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳ ಹೆಸರನ್ನು ಒಳಗೊಂಡಿರುವ pdf ದಾಖಲೆಯಾಗಿ ಪ್ರಕಟಿಸಿದೆ.
ಅಭ್ಯರ್ಥಿಗಳು ತಮ್ಮ NEET MDS 2023 ಫಲಿತಾಂಶವನ್ನು ನೀಡಲಾದ ಫಲಿತಾಂಶದ ಹಾಳೆಯಲ್ಲಿ ಅವರ ರೋಲ್ ನಂಬರ್ ಸಹಾಯದಿಂದ ಪರಿಶೀಲಿಸಬಹುದು. NEET MDS 2023 ಫಲಿತಾಂಶದ ಹಾಳೆಯು ರೋಲ್ ನಂಬರ್, ID, ಸ್ಕೋರ್ ಮತ್ತು NEET MDS ಶ್ರೇಣಿಯನ್ನು ಒಳಗೊಂಡಿದೆ. ಒದಗಿಸಿದ ಮಾಹಿತಿಯ ಪ್ರಕಾರ, NEET MDS 2023 ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳಿಗೆ ಅಗತ್ಯವಿರುವ ಕನಿಷ್ಠ ಅಂಕಗಳು; ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ. 50 ಮತ್ತು SC/ST ವಿದ್ಯಾರ್ಥಿಗಳಿಗೆ ಶೇ. 40 ಮತ್ತು ಸಾಮಾನ್ಯ PwD ಅಭ್ಯರ್ಥಿಗಳಿಗೆ ಶೇ. 45.
NEET MDS 2023 ಫಲಿತಾಂಶವು ಅಧಿಕೃತ ವೆಬ್‌ಸೈಟ್ – natboard.edu.in ನಲ್ಲಿ ಲಭ್ಯವಿದೆ. ಕೆಳಗೆ ನೀಡಲಾದ ಲಿಂಕ್ ಮೂಲಕ ಅಭ್ಯರ್ಥಿಗಳು NEET MDS 2023 ಫಲಿತಾಂಶವನ್ನು ಸಹ ಪರಿಶೀಲಿಸಬಹುದು.
NEET MDS 2023 ಫಲಿತಾಂಶ – ಇಲ್ಲಿ ಕ್ಲಿಕ್ ಮಾಡಿ
NEET MDS 2023 ಫಲಿತಾಂಶವು PDF ಡಾಕ್ಯುಮೆಂಟ್ ಆಗಿ ಲಭ್ಯವಿದೆ. ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
ಇದನ್ನೂ ಓದಿ: ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ; ಮೋದಿ ಭೇಟಿ ನೀಡಲಿರುವ ಈ ಕ್ಯಾಂಪಸ್ ಸ್ಪೆಷಾಲಿಟಿ ಏನು ಗೊತ್ತಾ?
NEET MDS 2023 ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ಅಗತ್ಯವಿರುವ ಕನಿಷ್ಠ ಅಂಕಗಳನ್ನು ಕೆಳಗೆ ನೀಡಲಾಗಿದೆ.
ವರ್ಗ | ಶೇಕಡ | ಸ್ಕೋರ್ |
ಜನರಲ್ /EWS | ಶೇ. 50 | 272 |
SC/ST/OBC (PwBD ಸೇರಿದಂತೆ SC/ST/OBC) | ಶೇ. 40 | 238 |
ಜನರಲ್ PwBD | ಶೇ. 45 | 255 |
Published On - 12:34 pm, Sun, 12 March 23