ವೇಳಾಪಟ್ಟಿಯ ಪ್ರಕಾರ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (NEET-UG) ನೋಂದಣಿ (Registrations) ಪ್ರಕ್ರಿಯೆ ನಡೆಯುತ್ತಿದೆ ಮತ್ತು ಏಪ್ರಿಲ್ 6, 2023 ರಾತ್ರಿ 9.00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಅಭ್ಯರ್ಥಿಗಳು (Candidates) ಇದೇ ದಿನಾಂಕದಂದು ರಾತ್ರಿ 11.50 ರವರೆಗೆ ಅರ್ಜಿ ಶುಲ್ಕವನ್ನು ಪಾವತಿಸಬಹುದು. ಅಧಿಕಾರಿಗಳು ಯಾವುದೇ ವಿಸ್ತರಣೆಗಳನ್ನು ಒದಗಿಸದ ಕಾರಣ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ನೋಂದಾಯಿಸಿಕೊಳ್ಳಲು ಅಧಿಕೃತ ವೆಬ್‌ಸೈಟ್ ಅಂದರೆ neet.nta.nic.in ಗೆ ಭೇಟಿ ನೀಡಬಹುದು.
ಅಧಿಕಾರಿಗಳು ಇದುವರೆಗೆ ಅರ್ಜಿ ತಿದ್ದುಪಡಿ ದಿನಾಂಕಗಳನ್ನು ಪ್ರಕಟಿಸಿಲ್ಲ. NEET UG 2023 ಪರೀಕ್ಷೆಯನ್ನು ಮೇ 7, 2023 ರಂದು ನಡೆಸಲಾಗುವುದು. ಪರೀಕ್ಷೆಯು ಮಧ್ಯಾಹ್ನ 2.00 ರಿಂದ 5.20 ರವರೆಗೆ 3 ಗಂಟೆ 20 ನಿಮಿಷಗಳ ಅವಧಿಯನ್ನು ಹೊಂದಿರುತ್ತದೆ. ಉಳಿದ ಪ್ರಮುಖ ದಿನಾಂಕಗಳನ್ನು ಅಧಿಕಾರಿಗಳು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
ಅರ್ಹ ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು NEET UG ಅರ್ಹತಾ ಮಾನದಂಡ 2023 ಅನ್ನು ಇಲ್ಲಿ ಪರಿಶೀಲಿಸಬಹುದು-
NEET UG 2023 ನೋಂದಣಿ-ನೇರ ಲಿಂಕ್ (ಈಗ ಲಭ್ಯವಿದೆ)
ಇದನ್ನೂ ಓದಿ: CBSE ಬೋರ್ಡ್ 10, 12 ತರಗತಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ, ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್
ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಗಡುವಿನ ಮೊದಲು ನೋಂದಾಯಿಸಿಕೊಳ್ಳಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು-