ಭಾರತದಲ್ಲಿ ಐಟಿಯೇತರ ವಲಯವು ಡೇಟಾ ಸೈನ್ಸ್ ಉದ್ಯೋಗಗಳಲ್ಲಿ ಮುಂಚೂಣಿಯಲ್ಲಿದೆ- ಅಧ್ಯಯನ

|

Updated on: Sep 16, 2023 | 3:14 PM

ಗ್ರೇಟ್ ಲರ್ನಿಂಗ್ ಸಂಸ್ಥೆ ನಡೆಸಿದ ‘Analytics and Data Science Jobs Report 2023’ ಅಧ್ಯಯನದ ಪ್ರಕಾರ BFSI ಕ್ಷೇತ್ರದಲ್ಲಿ 1/3 ಉದ್ಯೋಗ ಸೃಷ್ಟಿಸಿದೆ ಎಂಬುದು ತಿಳಿದುಬಂದಿದೆ. `ಬ್ಯುಸಿನೆಸ್ ಅನಾಲಿಸ್ಟ್’ ಈ ವರ್ಷ ಹೆಚ್ಚು ಬೇಡಿಕೆ ಇರುವ ಹುದ್ದೆಯಾಗಿ ಮುಂದುವರಿದಿದೆ. 2022 ದಿಂದ AI/ML ಎಂಜಿನಿಯರ್​ಗಳು, ಬಿಗ್ ಡೇಟಾ ಅನಾಲಿಟಿಕ್ಸ್, ಡೇಟಾ ಆರ್ಕಿಟೆಕ್ಟ್ ಗಳು, ಕಂಪ್ಯೂಟರ್ ವಿಷನ್ ಮತ್ತು NLP ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.

ಭಾರತದಲ್ಲಿ ಐಟಿಯೇತರ ವಲಯವು ಡೇಟಾ ಸೈನ್ಸ್ ಉದ್ಯೋಗಗಳಲ್ಲಿ ಮುಂಚೂಣಿಯಲ್ಲಿದೆ- ಅಧ್ಯಯನ
ಗ್ರೇಟ್ ಲರ್ನಿಂಗ್
Follow us on

ವೃತ್ತಿಪರ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ Great Learning ಭಾರತದಲ್ಲಿ 2023 ರಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಗಳ ಕುರಿತಾದ ವರದಿಯನ್ನು ಪ್ರಕಟಿಸಿದೆ. ಡೇಟಾ-ಚಾಲಿತ ನಿರ್ಧಾರಗಳಿಗೆ ಸಂಸ್ಥೆಗಳಿಗೆ ಯಾವಾಗಲೂ ನಿರ್ಣಾಯಕವಾಗಿರುತ್ತವೆಯಾದರೂ, ಡೇಟಾ ವಿಜ್ಞಾನ ಮತ್ತು ವಿಶ್ಲೇಷಣೆಯಲ್ಲಿರುವ ಒಟ್ಟಾರೆ ಉದ್ಯೋಗಗಳ ಸಂಖ್ಯೆಯು ಕಳೆದ 12 ತಿಂಗಳುಗಳಲ್ಲಿ ಕುಸಿತ ಕಂಡಿದೆ. ಹಾಲಿ ಇರುವ ಜಾಗತಿಕ ಸ್ಥೂಲ ಅನಿಶ್ಚಿತತೆಯನ್ನು ಒಳಗೊಂಡಂತೆ ಕೆಲವು ಪ್ರಮುಖ ಅಂಶಗಳ ಸಂಯೋಜನೆಯು ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿನ ಈ ಪಾತ್ರಗಳ ಮೇಲೆ ಪ್ರಭಾವವನ್ನು ಬೀರುತ್ತಿದೆ. ಈ ಡೊಮೇನ್ ನಲ್ಲಿ ಬದಲಾಗುತ್ತಿರುವ ಉದ್ಯೋಗಗಳ ಲ್ಯಾಂಡ್ ಸ್ಕೇಪ್ ಕುರಿತು ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ. ಇದರಲ್ಲಿನ ಅಂಶಗಳು ಲಭ್ಯವಿರುವ ಅವಕಾಶಗಳನ್ನು ಉತ್ತಮವಾದ ರೀತಿಯಲ್ಲಿ ಬಳಸಿಕೊಳ್ಳಲು ವೃತ್ತಿಪರರಿಗೆ ನೆರವಾಗುತ್ತದೆ.

AIM ರೀಸರ್ಚ್ ನ ಜಾಬ್ ಟ್ರ್ಯಾಕರ್ ನ ಡೇಟಾ ಅಥವಾ ಅಂಕಿಅಂಸಗಳೊಂದಿಗೆ ಈ ವರದಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ವಿವಿಧ ಉದ್ಯೋಗ ಸೈಟ್ ಗಳಿಂದ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಒಟ್ಟುಗೂಡಿಸುತ್ತದೆ.

2023 ರಲ್ಲಿ ಡೇಟಾ ಅನಾಲಿಟಿಕ್ಸ್ ಉದ್ಯೋಗದಲ್ಲಿ BFSI ಕ್ಷೇತ್ರಕ್ಕೆ ಸಿಂಹಪಾಲು

2023 ರಲ್ಲಿ BFSI ಕ್ಷೇತ್ರವು ಭಾರತದ ಅತಿದೊಡ್ಡ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗ ಸೃಷ್ಟಿ ಮಾಡಿದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಾರೆ, ಇಂತಹ ಉದ್ಯೋಗಗಳಲ್ಲಿ 1/3 ರಷ್ಟು ಪಾಲು ಈ ಕ್ಷೇತ್ರದ್ದಾಗಿದೆ. ಅಪಾಯ ನಿರ್ವಹಣೆ, ವಂಚನೆ ಪತ್ತೆ ಮತ್ತು ಗ್ರಾಹಕ ಸೇವೆಯಂತಹ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ AI/ML ಮತ್ತು ದೊಡ್ಡ ಡೇಟಾ ವಿಶ್ಲೇಷಣೆಗಳ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಈ ಪ್ರಗತಿಯನ್ನು ಸಾಧಿಸಲಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಡೇಟಾ ಸೈನ್ಸ್ ಅನ್ನು ಬಳಕೆ ಮಾಡುವುದರಿಂದ ಹಣಕಾಸು ಸಂಸ್ಥೆಗಳು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಆರಂಭಿಸುತ್ತಿವೆ.

ಕಳೆದ ವರ್ಷ ಐಟಿ ಕ್ಷೇತ್ರದಲ್ಲಿ ಒಟ್ಟಾರೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಪ್ರಮುಖವಾಗಿ ಐಟಿ ಕ್ಷೇತ್ರ ಹೆಚ್ಚಾಗಿರುವ ಯುಎಸ್ ಮತ್ತು ಯೂರೋಪ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಿಂಜರಿಕೆ ಕಂಡು ಬಂದಿರುವುದರಿಂದ ಈ ಇಳಿಕೆಯಾಗಿದೆ ಎಂದೇ ಹೇಳಬಹುದಾಗಿದೆ. ಅದೇ ರೀತಿ 2022 ಕ್ಕೆ ಹೋಲಿಕೆ ಮಾಡಿದರೆ ಶಕ್ತಿ ಮತ್ತು ಉಪಯುಕ್ತತೆಗಳಲ್ಲಿರುವ ಉದ್ಯೋಗಗಳು ಒಟ್ಟಾರೆಯಾಗಿ ಶೇಕಡಾವಾರು ಕಡಿಮೆಯಾಗಿದೆ. ಆದರೆ, ರೀಟೇಲ್, ಸಿಪಿಜಿ ಮತ್ತು ಫಾರ್ಮಾ ಹಾಗೂ ಆರೋಗ್ಯ ಸೇವೆಗಳ ಕ್ಷೇತ್ರಗಳಲ್ಲಿ ಈ ವರ್ಷ ಹೆಚ್ಚಳ ಕಂಡುಬಂದಿದೆ.

MNC IT & KPO ಗಳು ಈ ವರ್ಷದಲ್ಲಿನ ಉದ್ಯೋಗಗಳಲ್ಲಿ ಇನ್ನೂ ಹೆಚ್ಚಿನ ಪಾಲು ಹೊಂದಿವೆ; ದೇಶೀಯ ಐಟಿಯೇತರ ಸಂಸ್ಥೆಗಳು 2022 ಕ್ಕೆ ಹೋಲಿಕೆ ಮಾಡಿದರೆ ಉದ್ಯೋಗಾವಕಾಶಗಳಲ್ಲಿ ಹೆಚ್ಚು ಪ್ರಮಾಣದ ಏರಿಕೆಯನ್ನು ವರದಿ ಮಾಡಿದೆ

2023 ರಲ್ಲಿ ಭಾರತದ MNC IT & KPO ಗಳಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಗರಿಷ್ಠ ಮಟ್ಟದಲ್ಲಿ ಅವಕಾಶಗಳು ಸೃಷ್ಟಿಯಾಗಿವೆ. ಏಕೆಂದರೆ, ಈ ಸಂಸ್ಥೆಗಳು ದೊಡ್ಡ ಮಟ್ಟದ ಗ್ರಾಹಕರೊಂದಿಗೆ ಕಾರ್ಯನಿರ್ವಹಣೆ ಮಾಡುತ್ತವೆ ಮತ್ತು ದೊಡ್ಡ ಪ್ರಮಾಣದ ದತ್ತಾಂಶಗಳನ್ನು ನಿರ್ವಹಣೆ ಮಾಡುತ್ತವೆ. ಆದಾಗ್ಯೂ, ಪಾಶ್ಚಿಮಾತ್ಯ ಜಗತ್ತಿನ ರಾಷ್ಟ್ರಗಳಲ್ಲಿ ಉಂಟಾದ ಆರ್ಥಿಕ ಹಿಂಜರಿತದಿಂದಾಗಿ ಹಿಂದಿನ ವರ್ಷದಿಂದ ಡೇಟಾ ಉದ್ಯೋಗಗಳ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮ ಈ ಕ್ಷೇತ್ರದ ಮೇಲೆ ಉಂಟಾಗಿದೆ. 2022 ಕ್ಕೆ ಹೋಲಿಸಿದರೆ ಈ ವರ್ಷ MNC IT & KPO ಗಳಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಅವಕಾಶ ಶೇ.21 ಅಂಕದಷ್ಟು ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶೀಯ ಐಟಿಯೇತರ ಸಂಸ್ಥೆಗಳು ಮತ್ತು ದೇಶೀಯ IT & KPO ಸಂಸ್ಥೆಗಳು ಈ ವರ್ಷ ಕ್ರಮವಾಗಿ ಶೇ.20 ಮತ್ತು ಶೇ.8 ಪಾಯಿಂಟ್ ಗಳ ಹೆಚ್ಚಳ ಕಂಡಿವೆ.

ಮಧ್ಯಮ ಕ್ರಮಾಂಕದ ವೃತ್ತಿಪರ ಉದ್ಯೋಗಗ ಲಭ್ಯತೆ ಹೆಚ್ಚಿದ್ದರೆ, ಹಿರಿಯ ಮಟ್ಟದ ವೃತ್ತಿಪರ ಉದ್ಯೋಗ ಲಭ್ಯತೆಯಲ್ಲಿ ಕುಸಿತ

ಸಾಮಾನ್ಯವಾಗಿ ಡೇಟಾ ಸೈನ್ಸ್ & ಅನಾಲಿಟಿಕ್ಸ್ ಉದ್ಯೋಗಗಳಿಗೆ 2-5 ವರ್ಷಗಳು ಮತ್ತು 5-7 ವರ್ಷಗಳ ವೃತ್ತಿಪರ ಅನುಭವವನ್ನು ನೋಡಲಾಗುತ್ತದೆ. ಈ ಎರಡು ವರ್ಕ್-ಎಕ್ಸ್ ವರ್ಗಗಳು ಐತಿಹಾಸಿಕವಾಗಿ ಒಲವು ಹೊಂದಿವೆ. ಏಕೆಂದರೆ, ಅವುಗಳ ಹೊಂದಾಣಿಕೆ ಮತ್ತು ಹೆಚ್ಚು ಹಿರಿಯ ವಯಸ್ಸಿನ ಗುಂಪುಗಳಿಗೆ ಹೋಲಿಕೆ ಮಾಡಿದರೆ ಸಂಸ್ಥೆಗಳಿಗೆ ಕಡಿಮೆ ವೆಚ್ಚ ಉಂಟಾಗುತ್ತದೆ. ಇದಲ್ಲದೇ, ಇಂತಹ ವೃತ್ತಿಪರರು ಸಂಬಂಧಿತ ಕೌಶಲ್ಯ ಮತ್ತು ಪ್ರಾಯೋಗಿಕ ಅನುಭವವನ್ನು ಹೊಂದಿರುತ್ತಾರೆ. 2022 ರಲ್ಲಿ 2-5 ವರ್ಷಗಳು ಮತ್ತು 5-7 ವರ್ಷಗಳ ವರ್ಕ್-ಎಕ್ಸ್ ಉದ್ಯೋಗಗಳ ಪಾಲು ಒಂದೇ ರೀತಿ ಇತ್ತು. ಅಂದಿನಿಂದ ಈ ವರ್ಗಗಳಲ್ಲಿನ ಸ್ಥಾನಗಳಲ್ಲಿ ಹೆಚ್ಚಳ ಕಂಡುಬಂದಿದೆ. 2-5 ವರ್ಷದ ಅನುಭವವ ಹೊಂದಿರುವವರಲ್ಲಿ ಶೇ.13 ಅಂಕದಷ್ಟು ಹೆಚ್ಚಳ ಕಂಡುಬಂದಿರುವುದನ್ನು ಗಮನಿಸಿದರೆ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ವೆಚ್ಚ ಕಡಿತದ ಪರಿಣಾಮ ಗೋಚರಿಸುತ್ತದೆ.
ಆದರೆ, ಇದೇ ವೇಳೆ 7 ಮತ್ತು ಅದಕ್ಕಿಂತ ಹೆಚ್ಚು ವರ್ಷಗಳ ಅನುಭವ ಇರುವವರಿಗೆ ಬೇಡಿಕೆ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಸ್ಥೂಲ ಆರ್ಥಿಕತೆ ಅಂದರೆ, ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲದಿರುವುದು. ಇದರ ಪರಿಣಾಮ ಸಂಸ್ಥೆಗಳು ದುಬಾರಿ ಸಂಬಳ ನೀಡಿ ಅನುಭವಿಗಳನ್ನು ನೇಮಕ ಮಾಡಿಕೊಳ್ಳುವುದರ ಬದಲಾಗಿ ತಮ್ಮಲ್ಲಿರುವ ನೌಕರರಿಗೇ ಆಂತರಿಕವಾಗಿ ಕೌಶಲ್ಯವನ್ನು ಮೇಲ್ದರ್ಜೆಗೇರಿಸುವುದಕ್ಕೆ ಆದ್ಯತೆ ನೀಡುತ್ತಿವೆ.

ಅನಾಲಿಟಿಕ್ಸ್ & ಡೇಟಾ ಸೈನ್ಸ್ ಪರಿಣಿತರಿಗೆ ವಾರ್ಷಿಕ 6-10 ಲಕ್ಷ ರೂಪಾಯಿಗಳ ಹೆಚ್ಚು ಹುದ್ದೆಗಳು ಲಭ್ಯ

2023 ರಲ್ಲಿ ವಾರ್ಷಿಕ 6-10 ಲಕ್ಷ ಮತ್ತು 10-15 ಲಕ್ಷ ರೂಪಾಯಿ ವೇತನದ ಡೇಟಾ ಸೈನ್ಸ್ & ಅನಾಲಿಟಿಕ್ಸ್ ಹುದ್ದೆಗಳು ಲಭ್ಯವಿದ್ದು, ಇವುಗಳೆಲ್ಲವೂ ಶೇ.60 ರಷ್ಟು ಡೇಟಾ ಸಂಬಂಧಿತ ಉದ್ಯೋಗಗಳಾಗಿವೆ. 2-5 ವರ್ಷ ಮತ್ತು 5-7 ವರ್ಷಗಳ ಅನುಭವವಿರುವ ಉದ್ಯೋಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಈ ಅಂಕಿಅಂಶ ಹೊರಬಿದ್ದಿದೆ. ಈ ಮಾಹಿತಿಯನ್ನು ಗಮನಿಸಿದರೆ ಈ ವರ್ಷ ಕಂಪನಿಗಳು ಹೊಸಬರನ್ನು ಮತ್ತು ಹೆಚ್ಚು ಅನುಭವ ಇರುವವರನ್ನು ನೇಮಕ ಮಾಡಿಕೊಳ್ಳಲು ಆಸಕ್ತಿ ತೋರಿಸಿಲ್ಲ ಎಂಬುದು ಗೊತ್ತಾಗುತ್ತದೆ.
ಚೆನ್ನೈ ಮತ್ತು ಹೈದ್ರಾಬಾದ್ ನಂತಹ ಪ್ರಮುಖ ಮೆಟ್ರೋ ನಗರಗಳಲ್ಲಿ ಡೇಟಾ ಉದ್ಯೋಗಗಳಲ್ಲಿ ಹೆಚ್ಚಳವಾಗುತ್ತಿದೆ; ಬೆಂಗಳೂರು ನಗರಕ್ಕೆ ಅತಿ ಹೆಚ್ಚು ಪಾಲು

2022 ರಲ್ಲಿ ಸ್ವಲ್ಪ ಕುಂಠಿತ ಕಂಡುಬಂದಿದ್ದರೂ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ಅತಿ ಹೆಚ್ಚು ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳನ್ನು ಹೊಂದಿರುವ ನಗರದ ಎಂಬ ಹಿರಿಮೆಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ದೆಹಲಿ ಎನ್ ಸಿಆರ್, ಹೈದ್ರಾಬಾದ್ ಮತ್ತು ಚೆನ್ನೈನಂತಹ ನಗರಗಳು ತಮ್ಮ ಪಾಲನ್ನು ಹೆಚ್ಚು ಮಾಡಿಕೊಂಡಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಚೆನ್ನೈನಲ್ಲಿ ಆಟೋಮೋಟಿವ್ ಮತ್ತು ಉತ್ಪಾದನಾ ವಲಯಗಳು, ಹೈದ್ರಾಬಾದ್ ನಲ್ಲಿ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳು ಹೆಚ್ಚುವರಿಯಾಗಿ ಡೇಟಾ ಸೈನ್ಸ್ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುತ್ತಿವೆ. ಏಕೆಂದರೆ, ಈ ವಲಯಗಳು ಹೆಚ್ಚು ಡೇಟಾ –ಚಾಲಿತ ವಿಧಾನಗಳನ್ನು ಅಳವಡಿಸಿಕೊಂಡಿವೆ.

ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಎಂಬಿಎ ಪದವಿ ಅಗತ್ಯವಾಗಿದೆ, ಇದು ಕ್ಷೇತ್ರದ ಬಲವಾದ ವ್ಯವಹಾರ ಸಮಗ್ರತೆಯನ್ನು ಸೂಚಿಸುತ್ತದೆ

ಸ್ಥೂಲ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಉದ್ಯಮಗಳಾದ್ಯಂತ ಎಂಜಿನಿಯರಿಂಗ್ ಪದವಿ ಮಾಡಿದವರಿಗೆ ಡೇಟಾ ಸೈನ್ಸ್ ಡೊಮೇನ್ ನಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಅಂದರೆ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಹೊಸಬರಿಗೆ ಹೆಚ್ಚು ಅವಕಾಶಗಳು ಈ ಕ್ಷೇತ್ರದಲ್ಲಿ ಸಿಗುತ್ತಿಲ್ಲ. ಹೊಸಬರನ್ನು ನೇಮಕ ಮಾಡಿಕೊಂಡರೆ ಅವರಿಗೆ ಯೋಜನೆಗಳಿಗೆ ನಿಯೋಜನೆ ಮಾಡುವ ಮುನ್ನ ತರಬೇತಿ ನೀಡಬೇಕಾದ ಅಗತ್ಯವಿರುತ್ತದೆ. ಇದಕ್ಕಾಗಿ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಆದಾಗ್ಯೂ, ಎಂಬಿಎ ಪದವೀಧರರಿಗೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಹುದ್ದೆಗಳಿಗೆ ಅವಕಾಶಗಳು ಹೆಚ್ಚಾಗಿವೆ. ಏಕೆಂದರೆ, ಉದ್ಯಮಗಳು ಕೇವಲ ಡೇಟಾ ಸೈನ್ಸ್ ಕೌಶಲ್ಯಗಳಲ್ಲದೇ ಹಾಲಿ ಇರುವ ತಂಡಗಳನ್ನು ನಿರ್ವಹಣೆ ಮಾಡಲು ಮತ್ತು ನಿರ್ವಹಣಾ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದರ ಗಮನಹರಿಸುತ್ತಿವೆ. ಈ ಮೂಲಕ ಉದ್ಯಮಗಳು ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ನಲ್ಲಿ ಎಂಬಿಎ ಪದವಿ ಪಡೆದವರನ್ನು ನೇಮಕ ಮಾಡಿಕೊಂಡು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಿಕೊಳ್ಳುತ್ತಿವೆ.

`ಬ್ಯುಸಿನೆಸ್ ಅನಾಲಿಸ್ಟ್’ ಬೇಡಿಕೆ ಹೆಚ್ಚಳ ಮುಂದುವರಿಕೆ; 2023 ರಲ್ಲಿ NLP ಡೇಟಾ ಆರ್ಕಿಟೆಕ್ಟ್ ಮತ್ತು AI/ML ಎಂಜಿನಿಯರ್ ಹುದ್ದೆಗಳಲ್ಲಿ ಏರಿಕೆ

`ಬ್ಯುಸಿನೆಸ್ ಅನಾಲಿಸ್ಟ್’ ಈ ವರ್ಷ ಹೆಚ್ಚು ಬೇಡಿಕೆ ಇರುವ ಹುದ್ದೆಯಾಗಿ ಮುಂದುವರಿದಿದೆ. 2022 ದಿಂದ AI/ML ಎಂಜಿನಿಯರ್ ಗಳು, ಬಿಗ್ ಡೇಟಾ ಅನಾಲಿಟಿಕ್ಸ್, ಡೇಟಾ ಆರ್ಕಿಟೆಕ್ಟ್ ಗಳು, ಕಂಪ್ಯೂಟರ್ ವಿಷನ್ ಮತ್ತು NLP ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. NLP ಹುದ್ದೆಗಳು ವಿಶೇಷವಾಗಿ ಕಳೆದ ವರ್ಷ ವರ್ಚುವಲ್ ಸಹಾಯಕರು ಮತ್ತು ಸೆಂಟಿಮೆಂಟ್ ಅನಾಲಿಸಿಸ್ ನಂತಹ ಅಪ್ಲಿಕೇಷನ್ ಗಳಿಗಾಗಿ ಹೆಚ್ಚು ಬೇಡಿಕೆ ಇರುವ ಹುದ್ದೆಗಳಾಗಿವೆ. ಆದರೆ, ಡೀಪ್ ಲರ್ನಿಂಗ್ ಮತ್ತು ಡೇಟಾ ಎಂಜಿನಿಯರಿಂಗ್ ಹುದ್ದೆಗಳಲ್ಲಿ ಇಳಿಕೆ ಕಂಡುಬಂದಿದೆ.

ಗ್ರೇಟ್ ಲರ್ನಿಂಗ್ ನ ಸಹ-ಸಂಸ್ಥಾಪಕ ಹರಿ ಕೃಷ್ಣನ್ ನಾಯರ್ ಅವರು ಈ ವರದಿ ಬಗ್ಗೆ ಮಾತನಾಡಿ, ‘ಪ್ರಸ್ತುತ ಜಾಗತಿಕವಾಗಿ ವ್ಯಾಪಾರ ಕಾರ್ಯಾಚರಣೆಗಳನ್ನು ಬೆಂಬಲಿಸುವ ಬೃಹತ್ ಡಿಜಿಟಲ್ ರೂಪಾಂತರದ ಮಧ್ಯಭಾಗದಲ್ಲಿ ಭಾರತವಿದೆ. ಇದಲ್ಲದೇ, ಹೆಚ್ಚು ಪರಿಣಾಮಕಾರಿ ವ್ಯಾಪಾರ ಕಾರ್ಯಾಚರಣೆಗಳನ್ನು ಸಾಧಿಸುವ ನಿಟ್ಟಿನಲ್ಲಿ ಡೇಟಾ-ಚಾಲಿತ ನಿರ್ಣಯಗಳನ್ನು ಅಳವಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಈ ವಿಚಾರದಲ್ಲಿ ಈ ವರ್ಷದ ವರದಿಯು ಕೆಲವು ಆಶ್ಚರ್ಯಗಳನ್ನು ಹುಟ್ಟು ಹಾಕಿದೆ.

ಆದರೆ, ಆರ್ಥಿಕತೆಯು ಅತ್ಯುತ್ತಮ ಸ್ಥಿತಿಗೆ ತಲುಪಿದರೆ ಭಾರತದಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು ಇನ್ನಷ್ಟು ಬೆಳೆಯುತ್ತವೆ ಮತ್ತು ಹೆಚ್ಚು ವಿಶಿಷ್ಟವಾದ ರೀತಿಯ ಉದ್ಯೋಗ ಪ್ರೊಫೈಲ್ ಗಳು ಅವಕಾಶಗಳನ್ನು ತೆರೆಯುವಂತೆ ಮಾಡುತ್ತವೆ ಎಂಬುದನ್ನು ನಾವು ನಿರೀಕ್ಷಿಸಬಹುದಾಗಿದೆ. `ಭಾರತದಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಹುದ್ದೆಗಳು- 2023’ ವರದಿಯು ಕಂಪನಿಗಳು ಮತ್ತು ವ್ಯಕ್ತಿಗಳು ತಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಅವರಿಗೆ ದೇಶದಲ್ಲಿ ಹಾಲಿ ಚಾಲ್ತಿಯಲ್ಲಿರುವ ಉದ್ಯೋಗ ಪ್ರವೃತ್ತಿಗಳ ಬಗ್ಗೆ ಆಳವಾದ ನೋಟವನ್ನು ನೀಡುವ ಮೂಲಕ ಮಾರ್ಗದರ್ಶನ ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ’’ ಎಂದರು.