‘ಸಹೋದರ-ಸಹೋದರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ’? 300 ಪದ ಮೀರದಂತೆ ಪ್ರಬಂಧ ಬರೆಯಿರಿ: ಪ್ರಶ್ನೆ ಪತ್ರಿಕೆ ವೈರಲ್

|

Updated on: Feb 21, 2023 | 12:00 AM

ಉಪನ್ಯಾಸಕನೊಬ್ಬ ಸಹೋದರ ಮತ್ತು ಸಹೋದರಿಯ ನಡುವಿನ ಅನೈತಿಕ ಸಂಬಂಧದ ಬಗ್ಗೆ ಪ್ರಬಂಧ ಬರೆಯುವಂತೆ ಪ್ರಶ್ನೆ ಕೇಳಿದ್ದಾನೆ. 300 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ ಎಂದು ಕೇಳಿರುವ ಪ್ರಶ್ನೆ ಪತ್ರಿಕೆ ಇದೀಗ ಫುಲ್ ವೈರಲ್ ಆಗಿದೆ.

ಸಹೋದರ-ಸಹೋದರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ? 300 ಪದ ಮೀರದಂತೆ ಪ್ರಬಂಧ ಬರೆಯಿರಿ: ಪ್ರಶ್ನೆ ಪತ್ರಿಕೆ ವೈರಲ್
ಪ್ರಶ್ನೆ ಪತ್ರಿಕೆ
Follow us on

ಇಸ್ಲಾಮಾಬಾದ್: ಪ್ರೌಢಶಾಲಾ ಹಂತದಿಂದ ಸ್ನಾತಕೋತ್ತರ ಮತ್ತು ಅದಕ್ಕೂ ಮುಂದಿನ ವಿದ್ಯಾಭ್ಯಾಸದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವ ರಚನಾ ಕಲೆಯೆಂದರೆ ಪ್ರಬಂಧ(essay) ಬರೆಯುವುದು.ಅದರಂತೆ ಶಾಲಾ-ಕಾಲೇಜುಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಪಿಡುಗುಗಳ ವಿಷಯಗಳ ಮೇಲೆ ಪ್ರಬಂಧ ಬರೆಯಲು ಶಿಕ್ಷಕರಾದವರು ಹೇಳುತ್ತಾರೆ. ಆದ್ರೆ, ಇಲ್ಲೋರ್ವ ಲೆಕ್ಚರರ್​ ‘ಸಹೋದರ ಹಾಗೂ ಸಹೋದರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ’ ಎನ್ನುವ ಬಗ್ಗೆ ಪ್ರಬಂಧ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ (Students) ಹೇಳಿದ್ದಾನೆ. ಆದ್ರೆ, ಇದೀಗ ಆತನ ಕೆಲಸಕ್ಕೆ ಕುತ್ತು ಬಂದಿದೆ.

ಹೌದು…’ಸಹೋದರ ಹಾಗೂ ಸಹೋದರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ’ ಎನ್ನುವ ಬಗ್ಗೆ ಪ್ರಬಂಧ ಬರೆಯಿರಿ ಎಂದಿದ್ದ ಉಪನ್ಯಾಸಕನನ್ನು ವಿಶ್ವವಿದ್ಯಾಲಯವು ವಜಾ ಮಾಡಿದೆ. ಇಸ್ಲಾಮಾಬಾದ್​ನಲ್ಲಿರುವ Comsats ವಿಶ್ವವಿದ್ಯಾಯಲದ ಬಿಇಇ ಮೊದಲ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಟೆಸ್ಟ್ (ಕಿರು ಪರೀಕ್ಷೆ) ತೆಗೆದುಕೊಂಡಿದ್ದು, ಸಹೋದರ ಮತ್ತು ಸಹೋದರಿ ಪ್ರೀತಿ ಮಾಡಬಹುದೇ? ಅಲ್ಲದೇ ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ ಎನ್ನುವ ಕುರಿತು 300 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ ಎಂದು ಪ್ರಶ್ನೆ ಕೇಳಿದ್ದಾನೆ. ಈ ಪ್ರಶ್ನೆಗಳನ್ನು ನೋಡಿದ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ.


ಬಳಿಕ ಈ ವಿಚಾರ ವಿವಿಯ ಹೆಚ್ಚುವರಿ ರಿಜಿಸ್ಟ್ರರ್ ನವೀದ್ ಅಹ್ಮದ್ ಖಾನ್ ಗಮನಕ್ಕೆ ಬಂದಿದ್ದು ಕೂಡಲೇ ಉಪನ್ಯಾಸಕನನ್ನು ​ಕರೆದು ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಲೆಕ್ಚರರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹಾಗೂ ಪ್ರಶ್ನೆಯನ್ನು ಗೂಗಲ್‌ನಿಂದ ಕೃತಿಚೌರ್ಯ ಮಾಡಿರುವುದಾಗಿ ಹೇಳಿದ್ದಾನೆ. ಅಂತಿಮವಾಗಿ ಸಹೋದರ ಮತ್ತು ಸಹೋದರಿಯ ನಡುವಿನ ಅನೈತಿಕ ಸಂಬಂಧದ ಬಗ್ಗೆ ಪ್ರಬಂಧವನ್ನು ಬರೆಯಲು ಹೇಳಿದ್ದ ಉಪನ್ಯಾಸಕ ವಜಾಗೊಂಡಿದ್ದಾನೆ. ಇದೀಗ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್​ ಆಗಿದೆ.

ಅಲ್ಲದೇ ಈ ರೀತಿಯ ಪ್ರಶ್ನೆ ಪ್ರತಿಕ್ರೆ ವೈರಲ್ ಆಗಿತ್ತಿದ್ದಂತೆಯೇ ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.

Published On - 11:21 pm, Mon, 20 February 23