ನಿಮಗೆ ಬೇರೆ ಬೇರೆ ದೇಶಗಳನ್ನು ಸುತ್ತುತ್ತ ಸುಂದರ ಸ್ಥಳಗಳನ್ನು ನೋಡಲು ಆಸಕ್ತಿ ಇದ್ದರೆ ನಿಮಗಿದೊಂದು ಅದ್ಬುತ ಅವಕಾಶ. ಈಗ ನೀವು ವಿದೇಶಕ್ಕೆ ಪ್ರಯಾಣಿಸಲೂಬಹುದು, ಏಕಕಾಲದಲ್ಲಿ ಜ್ಞಾನದ ಜೊತೆ ಸಂಭಾವನೆಯನ್ನೂ ಪಡೆಯುವಬಹುದು. ನಿಮ್ಮ ಮುಂದಿನ ಒಂಬತ್ತು ತಿಂಗಳುಗಳನ್ನು ಕತಾರ್ (Qatar) ಮತ್ತು ಇಟಲಿಯಲ್ಲಿ (Italy) ಕಳೆಯುವುದರ ಜೊತೆಗೆ ಸಂಭಾವನೆ ಪಡೆಯುವ ಮಾರ್ಗ ಇಲ್ಲಿದೆ. ವೈಸ್ (WISE) ಎಂಬ ಕತಾರ್ ಫೌಂಡೇಶನ್ ಇದೀಗ ಒಂಬತ್ತು ತಿಂಗಳ ಎಮರ್ಜಿಂಗ್ ಲೀಡರ್ಸ್ ಎಂಬ ಫೆಲೋಶಿಪ್ ಕೋರ್ಸ್ ಅನ್ನು ಹಮ್ಮಿಕೊಂಡಿದೆ. ಇದಕ್ಕೆ ಸಂಪೂರ್ಣ ಹಣವನ್ನು ವೈಸ್ ಫೌಂಡೇಶನ್ ನೀಡುತ್ತದೆ. ಈ ಕೋರ್ಸ್ ಕತಾರ್ ಮತ್ತು ಇಟಲಿ, ಈ 2 ಸುಂದರ ಸ್ಥಳಗಳಿಗೆ ಪ್ರಯಾಣಿಸಲು ನಿಮಗೆ ಅವಕಾಶ ನೀಡುತ್ತದೆ. ಈ ಫೆಲೋಶಿಪ್ ಹೈಬ್ರಿಡ್ ಮೋಡ್ ಆಗಿರುತ್ತದೆ.
ವೈಸ್ ಎಮರ್ಜಿಂಗ್ ಲೀಡರ್ಸ್ ಫೆಲೋಶಿಪ್ (WISE Emerging Leaders Fellowship) ಮುಂದಿನ ಪೀಳಿಗೆಯ ನಾಯಕರಿಗಾಗಿ ಮೀಸಲಾಗಿದೆ. ಇದು ಒಂಬತ್ತು ತಿಂಗಳ ಫೆಲೋಶಿಪ್ ಕಾರ್ಯಕ್ರಮವಾಗಿದ್ದು, ಸಮಾಜವನ್ನು ಅಭಿವೃದ್ಧಿಪಡಿಸಲು, ಬೆಳೆಸಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಲು ಅಗತ್ಯವಾದ ಕೌಶಲ್ಯಗಳು ಮತ್ತು ತಂತ್ರಗಳನ್ನು ಅಭ್ಯರ್ಥಿಗಳಿಗೆ ಕಲಿಸಲು ಪ್ರಯತ್ನಿಸುತ್ತದೆ. ವೈಸ್ ಎಮರ್ಜಿಂಗ್ ಲೀಡರ್ಸ್ ಫೆಲೋಶಿಪ್ ಕೋರ್ಸ್ ಇದೀಗ ಸತತ ಐದನೇ ವರ್ಷಕ್ಕೆ ಕಾಲಿಡುತ್ತಿದೆ.
ನಿಮ್ಮ ನಾಯಕತ್ವದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಜ್ಞಾನದ ಜೊತೆಗೆ ಸಂಭಾವನೆ ಕೂಡ ನಿಮಗೆ ಸಿಗುತ್ತದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ.
ಇದನ್ನೂ ಓದಿ: ಬೆಂಗಳೂರು ಡಿಸಿ ಆಫೀಸ್ನಲ್ಲಿ ಲೋಡರ್, ಕ್ಲೀನರ್ ಹುದ್ದೆಗಳು ಖಾಲಿ; 17,000-28,950 ರೂ. ತಿಂಗಳ ವೇತನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 1, 2023. ಈ ಕೂಡಲೇ ಅರ್ಜಿಯನ್ನು ಅರ್ಜಿ ಸಲ್ಲಿಸಿ. ಕೆಳಗೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೀವು ವೈಸ್ ಫೌಂಡೇಶನ್ನ ವೆಬ್ಸೈಟ್ನ ಹೋಂ ಪೇಜ್ಗೆ ಹೋಗುತ್ತೀರಿ. ಅಲ್ಲಿ ನೋಮಿನೇಟ್ ಕ್ಯಾಂಡಿಡೇಟ್ ಆಯ್ಕೆಯನ್ನು ಒತ್ತಿ, ಲಾಗಿನ್ ಮಾಡಿ. ನಂತರ ಅರ್ಜಿಯನ್ನು ಭರ್ತಿ ಮಾಡಿ. ನಿಮ್ಮ ಉತ್ತರ ಅವರಿಗೆ ಇಷ್ಟವಾಗಿ, ನಿಮ್ಮಿಂದ ಅವರು ಪ್ರಭಾವಿತಯರಾಗಿ, ನಿಮ್ಮಲ್ಲಿರುವ ನಾಯಕತ್ವದ ಗುಣವನ್ನು ಗಮನಿಸಿದರೆ ನಿಮಗೆ ಇಮೇಲ್ ಕಲಿಸುವ ಮೂಲಕ ನಿಮ್ಮನ್ನ ಸಂಪರ್ಕಿಸುತ್ತಾರೆ.
ಸಂಪೂರ್ಣ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿ: wise-qatar.org/wise-works/wise-emerging-leaders/
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ