Engineering: ಸೆಮಿಕಂಡಕ್ಟರ್ ವಿಷಯದ 2 ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದ AICTE
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (AICTE) ಎರಡು ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಅಶ್ವಿನಿ ವೈಷ್ಣವ್ ಎಎನ್ಐ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನವದೆಹಲಿ: ಭಾರತದಲ್ಲಿ ತಂತ್ರಜ್ಞಾನಗಳು ಹೆಚ್ಚಿನ ಬೆಳವಣಿಗೆಗೆ ಹಲವುಯೋಜನೆಗಳನ್ನು ತರಲಾಗುತ್ತಿದೆ.ದೇಶವು ಸೆಮಿಕಂಡಕ್ಟರ್ ಗಳ ಅದ್ಭುತ ವಿನ್ಯಾಸಕಾರನ್ನು ಹೊಂದಿದೆ. ಇಂದು ಪ್ರಪಂಚದ 20% ರಷ್ಟು ಸೆಮಿಕಂಡಕ್ಟರ್ ವಿನ್ಯಾಸಗಳನ್ನು ಭಾರತೀಯ ಇಂಜಿನಿಯರ್‌ಗಳೇ ಮಾಡುತ್ತಿದ್ದಾರೆ. ಇದೀಗ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (AICTE) ಎರಡು ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
“ಪ್ರಧಾನ ಮಂತ್ರಿ ಸೆಮಿಕಾನ್ ಇಂಡಿಯಾವನ್ನು 1 ಜನವರಿ 2022 ರಂದು ಪ್ರಾರಂಭಿಸಿದರು. ಪ್ರಮುಖ ಅಂಶವೆಂದರೆ ಭಾರತವು 10 ವರ್ಷಗಳಲ್ಲಿ 85,000 ಸೆಮಿಕಂಡಕ್ಟರ್ ವೃತ್ತಿಪರರನ್ನು ನೀಡಿದೆ. ಹೊಸ ಕೋರ್ಸ್ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಂದು ಶಿಕ್ಷಣ ಸಚಿವಾಲಯದೊಳಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (AICTE) ಎರಡು ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದೆ” ಎಂದು ಎಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದರು.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ!
“ಹೊಸ ಕೋರ್ಸ್ಗಳಲ್ಲಿ ಮೊದಲನೆಯದು ಸೆಮಿಕಂಡಕ್ಟರ್‌ಗಳಲ್ಲಿ ಬಿಟೆಕ್ ಪ್ರೋಗ್ರಾಂ ಮತ್ತು ಎರಡನೆಯದು ಸೆಮಿಕಂಡಕ್ಟರ್‌ಗಳಲ್ಲಿ ಡಿಪ್ಲೊಮಾ ಪ್ರೋಗ್ರಾಂ. ಈ ಎರಡು ಕೋರ್ಸ್ಗಳು ಇಂಜಿನಿಯರಿಂಗ್ನಲ್ಲಿರುವ ಉತ್ತಮ ಪ್ರತಿಭೆಯನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಸಚಿವರು ಹೇಳಿದರು.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ