Aerospace Education and research: ಏರೋಸ್ಪೇಸ್ ಶಿಕ್ಷಣ, ಸಂಶೋಧನೆಯಲ್ಲಿ ಏರ್‌ಬಸ್‌ನೊಂದಿಗೆ ಸೇರಿದ IISc
ಈ ಪಾಲುದಾರಿಕೆಯು ಭಾರತದಲ್ಲಿ ಏರೋಸ್ಪೇಸ್ ಕ್ಷೇತ್ರದ ಭವಿಷ್ಯಕ್ಕೆ ಶಕ್ತಿ ತುಂಬಬಲ್ಲ ಸಮರ್ಥ ಕಾರ್ಯಪಡೆಯನ್ನು ಕಲ್ಪಿಸುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ಶುಕ್ರವಾರ (ಫೆಬ್ರವರಿ 17) ತಿಳಿಸಲಾಗಿದೆ.
ಬೆಂಗಳೂರು: ವಿದ್ಯಾರ್ಥಿಗಳಿಗೆ ಏರೋಸ್ಪೇಸ್ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಇನ್ನು ಹೆಚ್ಚಿನ ಅವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಏರ್‌ಬಸ್‌ನೊಂದಿಗೆ (Airbus) ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಈ ಪಾಲುದಾರಿಕೆಯು ಭಾರತದಲ್ಲಿ ಏರೋಸ್ಪೇಸ್ ಕ್ಷೇತ್ರದ ಭವಿಷ್ಯಕ್ಕೆ ಶಕ್ತಿ ತುಂಬಬಲ್ಲ ಉತ್ತಮ ಕಾರ್ಯಪಡೆಯನ್ನು ಕಲ್ಪಿಸುತ್ತದೆ ಎಂದು ಶುಕ್ರವಾರ (ಫೆಬ್ರವರಿ 17) ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಏರೋ ಇಂಡಿಯಾ 2023 ರಲ್ಲಿ IISc ಪ್ರತಿನಿಧಿಗಳು ಮತ್ತು ಹಿರಿಯ ಏರ್‌ಬಸ್ ನಿರ್ವಾಹಕರ ಸಮ್ಮುಖದಲ್ಲಿ ಈ ಪಾಲುದಾರಿಕೆಯನ್ನು ಒಳಗೊಂಡ ಒಂದು ಎಂಒಯುಗೆ ಸಹಿ ಹಾಕಲಾಯಿತು. ಪಠ್ಯಕ್ರಮ, ತರಬೇತಿ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಏರೋ ಸೈನ್ಸ್ ವಿಷಯಗಳ ಕುರಿತು ಸಂಶೋಧನೆಯನ್ನು ಉತ್ತೇಜಿಸಲು IISc ಮತ್ತು ಏರ್‌ಬಸ್ ಸಹಕರಿಸುತ್ತವೆ. ಇದರಲ್ಲಿ ಸುಸ್ಥಿರತೆ, ಇಂಜಿನಿಯರಿಂಗ್, ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ ಮತ್ತು ದೊಡ್ಡ ಡೇಟಾ ಸೇರಿದಂತೆ ಇನ್ನು ಹಲವು ವಿಷಯಗಳೂ ಸೇರಿವೆ.
ಈ ಯೋಜನೆಯು ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆಯಲ್ಲಿ ಮಾರ್ಗದರ್ಶನ ಬೇಕಾದಲ್ಲಿ ಏರ್‌ಬಸ್ ತಜ್ಞರೊಂದಿಗೆ ತಮ್ಮನು ತಾವು ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 1,300 ಕ್ಕೂ ಹೆಚ್ಚು ಅನಧಿಕೃತ ಖಾಸಗಿ ಶಾಲೆಗಳು ಪತ್ತೆ!
ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮಾನವ ಸಂಪನ್ಮೂಲ ನಿರ್ದೇಶಕ ಸೂರಜ್ ಚೆಟ್ರಿ, “ಈ ಪಾಲುದಾರಿಕೆಯು ಏರೋನಾಟಿಕಲ್ ಕ್ಷೇತ್ರದಲ್ಲಿ ಸಂಭಾವ್ಯ ಸಿನರ್ಜಿಗಳನ್ನು ಉತ್ತೇಜಿಸುತ್ತದೆ, ಇದು ದೇಶದ ಮುಂದಿನ ಪೀಳಿಗೆಗೆ ಏರೋಸ್ಪೇಸ್ ವೃತ್ತಿಪರರನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ