Unauthorised Schools: ಕರ್ನಾಟಕದಲ್ಲಿ 1,300 ಕ್ಕೂ ಹೆಚ್ಚು ಅನಧಿಕೃತ ಖಾಸಗಿ ಶಾಲೆಗಳು ಪತ್ತೆ!
ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳು ನಡೆಸಿದ ವರದಿಯ ಪ್ರಕಾರ 485 ಅನಧಿಕೃತ ಶಾಲೆಗಳೊಂದಿಗೆ ಬೆಂಗಳೂರು ಉತ್ತರ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ದಕ್ಷಿಣದಲ್ಲಿ 386, ತುಮಕೂರು 109 ಮತ್ತು ಬೆಂಗಳೂರು ಗ್ರಾಮಾಂತರ 66 ಶಾಲೆಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಅನಧಿಕೃತ ಖಾಸಗಿ ಶಾಲೆಗಳನ್ನು (Unauthorised Private Schools) ಗುರುತಿಸಲು ಸಮೀಕ್ಷೆಗೆ ಆದೇಶಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯದಲ್ಲಿ ಒಟ್ಟು 1,316 ಖಾಸಗಿ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆ ಮಾಡಿದೆ. ಉಲ್ಲಂಘನೆಗಳಲ್ಲಿ ನೋಂದಣಿ ಇಲ್ಲದೆ ಶಾಲೆಗಳನ್ನು ನಡೆಸುವುದು, ಅನಧಿಕೃತ ಪಠ್ಯಕ್ರಮವನ್ನು ಬೋಧಿಸುವುದು, ಅನುಮೋದನೆಯಿಲ್ಲದೆ ಹೆಚ್ಚುವರಿ ವಿಭಾಗಗಳನ್ನು ಅನುಮತಿಸುವುದು ಸೇರಿವೆ.
ಬೆಂಗಳೂರಿನ ಖಾಸಗಿ ಶಾಲೆಗಳು ಸಿಬಿಎಸ್‌ಇ ಬೋರ್ಡ್‌ಗೆ (CBSE Board) ಸಂಬಂಧಿಸಿವೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿವಾದದ ಹಿನ್ನೆಲೆಯಲ್ಲಿ ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳು ರಾಜ್ಯಾದ್ಯಂತ ಸಮೀಕ್ಷೆ ನಡೆಸಿದ್ದಾರೆ. ಕರ್ನಾಟಕದಲ್ಲಿ ನೋಂದಣಿ ಇಲ್ಲದೆ ಒಟ್ಟು 63 ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅಕ್ರಮವಾಗಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ.
ಒಟ್ಟು 74 ಶಾಲೆಗಳು ಅನುಮೋದನೆಯಿಲ್ಲದೆ ವಿದ್ಯಾರ್ಥಿಗಳನ್ನು ಪ್ರೌಢಶಾಲೆಗೆ ಸೇರಿಸಿಕೊಂಡಿವೆ ಮತ್ತು ಒಟ್ಟು 95 ಶಾಲೆಗಳು ವಿದ್ಯಾರ್ಥಿಗಳಿಗೆ ಕಾನೂನುಬಾಹಿರವಾಗಿ CBSE ಅಥವಾ ICSE ಪಠ್ಯಕ್ರಮವನ್ನು ಕಲಿಸುತ್ತಿದೆ ಆದರೆ ಈ ಶಾಲೆಗಳಿಗೆ ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ಮಾತ್ರ ಕಲಿಸಲು ಅನುಮತಿ ನೀಡಲಾಗಿದೆ. ಬೋಧನಾ ಮಾಧ್ಯಮದ ನಿಯಮವನ್ನು ಉಲ್ಲಂಘಿಸಿದ ಒಟ್ಟು 294 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಿಗೆ ಕನ್ನಡ ಮಾಧ್ಯಮದಲ್ಲಿ ಮಾತ್ರ ಕಲಿಸಲು ಅನುಮೋದನೆ ಮಾಡಲಾಗಿತ್ತು, ಆದರೆ ಇವುಗಳು ಆಂಗ್ಲ ಮಾಧ್ಯಮವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಸುಮಾರು 620 ಶಾಲೆಗಳು ಅನುಮೋದನೆ ಇಲ್ಲದೆ ಹೆಚ್ಚು ವಿಭಾಗಗಳನ್ನು ಅಕ್ರಮವಾಗಿ ಸೇರಿಸಿವೆ.
ಅನೇಕ ಖಾಸಗಿ ಶಾಲೆಗಳು ಒಂದು ವಿಭಾಗಕ್ಕೆ ಅನುಮತಿ ಕೋರಿದ್ದು ಈಗ ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆ ಎರಡು ಅಥವಾ ಹೆಚ್ಚಿನ ವಿಭಾಗಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ವರದಿ ತಿಳಿಸಿದೆ. ಒಂದೇ ಕಟ್ಟಡದಲ್ಲಿ ನಿಮವನ್ನು ಉಲ್ಲಂಘಿಸಿ ಬಹು ಬೋರ್ಡ್‌ಗಳನ್ನು ಹೊಂದಿದ ಒಟ್ಟು 21 ಶಾಲೆಗಳನ್ನು ಗುರುತಿಸಲಾಗಿದೆ.
ಶಿಕ್ಷಣ ಅಧಿಕಾರಿಗಳಿಂದ ಅನುಮತಿ ಪಡೆಯದೆ ಸ್ಥಳಾಂತರಗೊಂಡ ಸುಮಾರು 141 ಖಾಸಗಿ ಶಾಲೆಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. 485 ಅನಧಿಕೃತ ಶಾಲೆಗಳೊಂದಿಗೆ ಬೆಂಗಳೂರು ಉತ್ತರ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ದಕ್ಷಿಣದಲ್ಲಿ 386, ತುಮಕೂರು 109 ಮತ್ತು ಬೆಂಗಳೂರು ಗ್ರಾಮಾಂತರ 66 ಶಾಲೆಗಳೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ಮೈಸೂರು ಬೆಂಗಳೂರು ದಶಪಥ; ಸರ್ವಿಸ್ ರಸ್ತೆ ಆಗುವವರೆಗೂ ಟೋಲ್ ಬೇಡವೆಂದ ಡಿಕೆ ಶಿವಕುಮಾರ್
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್, “ನಾವು ಅನಧಿಕೃತ ಶಾಲೆಗಳ ಡೇಟಾವನ್ನು ಕ್ರೋಢೀಕರಿಸಿದ್ದೇವೆ, ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಕ್ರಮವನ್ನು ಮತ್ತಷ್ಟು ಜಾರಿಗೆ ತರಲು ಸರ್ಕಾರ ಈಗ ಕರೆ ತೆಗೆದುಕೊಳ್ಳಬೇಕಾಗಿದೆ.” ಎಂದು ಹೇಳಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ