What Next PU?: ಪಿಯುಸಿ ನಂತರ ಕಲೆಗೆ ಸಂಬಂಧಪಟ್ಟ ಯಾವ ಕೋರ್ಸ್ಗಳು ಉತ್ತಮ?
ಪದವಿ ಪೂರ್ವ ಕಲೆ 3 ವರ್ಷದ ಪೂರ್ಣ ಸಮಯ ಕೋರ್ಸ್ ಆಗಿರುತ್ತದೆ. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರಿ ಸುಮಾರು 2.5-8 ಲಕ್ಷ ರೂ. ವರೆಗೂ ವಾರ್ಷಿಕ ವೇತನ ಸಿಗುವ ಸಾಧ್ಯತೆಗಳಿವೆ. ಇಂಟಿಗ್ರೇಟೆಡ್ ಲಾ ಕೋರ್ಸ್ ಅಥವಾ ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಮುಗಿಸಿದವರಿಗೆ ಸುಮಾರು 3-14 ಲಕ್ಷ ರೂ. ವರೆಗೂ ವಾರ್ಷಿಕ ವೇತನ ಇರುವ ಸಾಧ್ಯತೆ ಇರುತ್ತದೆ.
ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಕಲಾ (Arts) ವಿಭಾಗದಲ್ಲಿ ಪಿಯು ಅಥವಾ ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಇತಿಹಾಸ (History), ಸಂಸ್ಕೃತಿಗಳು (Culture), ಭಾಷೆ (Language), ಸಂಗೀತ (Music), ದೃಶ್ಯ ಕಲೆಗಳು (Visual Arts), ತತ್ತ್ವಶಾಸ್ತ್ರ (Philosophy) ಮತ್ತು ಮಾನವಿಕ (Humanities) ವಿಷಯಗಳು ಅವರು ಆಯ್ಕೆಮಾಡಬಹುದಾದ ಅಧ್ಯಯನದ ಕ್ಷೇತ್ರಗಳಾಗಿವೆ. ಕಲೆಯನ್ನು ಆರಿಸಿಕೊಳ್ಳುವ ವಿದ್ಯಾರ್ಥಿಗೆ ವಿಶ್ಲೇಷಣಾತ್ಮಕ ಮತ್ತು ಪರಿಶೋಧನಾ ಕೌಶಲ್ಯಗಳನ್ನು ಬಳಸಲು ಕಲಿಸಲಾಗುತ್ತದೆ. ಕಲೆಯಲ್ಲಿ ಸ್ನಾತಕೋತ್ತರ ಆಯ್ಕೆಯ ಪ್ರಮುಖ ಪ್ರಯೋಜನವೆಂದರೆ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಲೆಯನ್ನು ಆರಿಸಿಕೊಳ್ಳುವ ಅಗತ್ಯವಿಲ್ಲ, ನೀವು ವಿಜ್ಞಾನ, ವಾಣಿಜ್ಯ ಅಥವಾ ಕಲೆಯ ಯಾವುದೇ ಹಿನ್ನೆಲೆಯಿಂದ ಬರಬಹುದು.
ಪಿಯುಸಿಯಲ್ಲಿ ಕಲೆಯಲ್ಲಿ ತಮ್ಮ ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳು, ಬ್ಯಾಂಕ್‌ಗಳು (ಪಿಒ) ಮತ್ತು ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗಳಿಗೆ ಸಹ ತಯಾರಿ ಮಾಡಿಕೊಳ್ಳಬಹುದು. ಆದರೆ ಸರಿಯಾದ ವಿಷಯವನ್ನು ಆಯ್ಕೆ ಮಾಡುವುದು ಮುಖ್ಯ, ಸರಿಯಾದ ವಿಷಯವನ್ನು ಆಯ್ಕೆ ಮಾಡದಿದ್ದರೆ ಅವರು ಹೆಚ್ಚಿನ ಸಂಭಾವನೆ ಪಡೆಯುವ ಉದ್ಯೋಗಗಳನ್ನು ಪಡೆಯುವುದು ಕಷ್ಟ.
ಪಿಯುಸಿ ನಂತರ ಭಾಷಾಶಾಸ್ತ್ರ, ರಾಜಕೀಯ, ವಿಜ್ಞಾನ, ಕಾನೂನು, ಸಮೂಹ ಸಂವಹನ, ಅರ್ಥಶಾಸ್ತ್ರ, ಭೂವಿಜ್ಞಾನ, ಮನೋವಿಜ್ಞಾನ, ಇತಿಹಾಸ, ಹಿಂದಿ ಅಥವಾ ಇಂಗ್ಲಿಷ್ ಇತ್ಯಾದಿಗಳಂತಹ ಹಲವು ಕೋರ್ಸ್ಗಳುನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ಇರುತ್ತದೆ.
ವಿದ್ಯಾರ್ಥಿಗಳು ತಮ್ಮ ಪಿಯುಸಿಯನ್ನು ಕಲಾ ವಿಭಾಗದಲ್ಲಿ ಪೂರ್ಣಗೊಳಿಸಿ ಪದವಿ ಪೂರ್ವ ಶಿಕ್ಷಣ ಪಡೆದ ನಂತರ ಹಲವಾರು ಉದ್ಯೋಗಾವಕಾಶಗಳಿರುತ್ತದೆ. ವಿದ್ಯಾರ್ಥಿಗಳು ತಮ್ಮ ಪಿಯುಸಿ ಶಿಕ್ಷಣವನ್ನು ಕಲಾ ಸ್ಟ್ರೀಮ್‌ನಲ್ಲಿ ಮುಗಿಸಿದ ನಂತರ ಬಿಎಫ್‌ಎ ಕೋರ್ಸ್ ಅನ್ನು ಮುಂದುವರಿಸಲು ಪರಿಗಣಿಸಬಹುದು. ಸಮಾಜಶಾಸ್ತ್ರ, ಕಾನೂನು, ಸಮೂಹ ಮಾಧ್ಯಮ, ಶಿಕ್ಷಣ, ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಅಧ್ಯಯನದ ಆಯ್ಕೆಗಳು ಸಹ ಲಭ್ಯವಿದೆ. ಕಲಾ ವೃತ್ತಿಯ ಆಯ್ಕೆಗಳ ಕುರಿತು ನಿಮಗೆ ರಚನಾತ್ಮಕ ಮಾರ್ಗಸೂಚಿಗಳನ್ನು ನೀಡಲು, ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪಿಯುಸಿ ನಂತರದ ಕೆಲವು ಅತ್ಯುತ್ತಮ ಕೋರ್ಸ್ಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ.
ಪಿಯುಸಿ ಕಲೆಯ ನಂತರ ಕೆಲವು ಅತ್ಯುತ್ತಮ ಕೋರ್ಸ್ಗಳ ಆಯ್ಕೆಗಳು ಇಲ್ಲಿವೆ:
- ಸಮಾಜಶಾಸ್ತ್ರ (Sociology)
- ಅರ್ಥಶಾಸ್ತ್ರ (Economics)
- ಆಂಗ್ಲ (English)
- ವಿನ್ಯಾಸದಲ್ಲಿ ಬಿಎಸ್ಸಿ (BSc in Design)
- ರಾಜಕೀಯ ವಿಜ್ಞಾನ (Political Science)
- ಬ್ಯಾಚುಲರ್ ಆಫ್ ಆರ್ಟ್ಸ್ (Bachelors of Arts)
- ಕಾರ್ಯಕ್ರಮ ನಿರ್ವಹಣೆ (Event Management)
- ಶಿಕ್ಷಣದಲ್ಲಿ ಡಿಪ್ಲೊಮಾ (Diploma in Education)
- ಲಲಿತಕಲೆಗಳ ಪದವಿ (B.F.A)
- ಬ್ಯಾಚುಲರ್ ಆಫ್ ಮಾಸ್ ಮೀಡಿಯಾ (BMM)
- ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ
- ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ
- ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ
- ಇಂಟಿಗ್ರೇಟೆಡ್ ಲಾ ಕೋರ್ಸ್ (B.A + L.L.B)
- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ (Bachelors of Journalism and Mass Communication)
ಇದನ್ನೂ ಓದಿ: ಪಿಯುಸಿ ನಂತರ ವಾಣಿಜ್ಯಕ್ಕೆ ಸಂಬಂಧ ಪಟ್ಟ ಉತ್ತಮ ಕೋರ್ಸ್ಗಳು ಯಾವುವು?
ಪದವಿ ಪೂರ್ವ ಕಲೆ 3 ವರ್ಷದ ಪೂರ್ಣ ಸಮಯ ಕೋರ್ಸ್ ಆಗಿರುತ್ತದೆ. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರಿ ಸುಮಾರು 2.5-8 ಲಕ್ಷ ರೂ. ವರೆಗೂ ವಾರ್ಷಿಕ ವೇತನ ಸಿಗುವ ಸಾಧ್ಯತೆಗಳಿವೆ. ಇಂಟಿಗ್ರೇಟೆಡ್ ಲಾ ಕೋರ್ಸ್ ಅಥವಾ ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಮುಗಿಸಿದವರಿಗೆ ಸುಮಾರು 3-14 ಲಕ್ಷ ರೂ. ವರೆಗೂ ವಾರ್ಷಿಕ ವೇತನ ಇರುವ ಸಾಧ್ಯತೆ ಇರುತ್ತದೆ. ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಹಲವಾರು ಸ್ನಾತಕೋತ್ತರ ಕೋರ್ಸ್ಗಳು ಮತ್ತು ವೃತ್ತಿಪರ ಕೋರ್ಸ್ಗಳು ಮಾಡುವ ಅವಕಾಶ ಇದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ