ಪಿಯುಸಿ ನಂತರ ವಾಣಿಜ್ಯಕ್ಕೆ ಸಂಬಂಧ ಪಟ್ಟ ಉತ್ತಮ ಕೋರ್ಸ್​ಗಳು ಯಾವುವು?

ಪದವಿ ಪೂರ್ವ ವಾಣಿಜ್ಯ 3 ವರ್ಷದ ಪೂರ್ಣ ಸಮಯ ಕೋರ್ಸ್ ಆಗಿರುತ್ತದೆ. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರಿ ಸುಮಾರು 2.5-18 ಲಕ್ಷ ರೂ. ವರೆಗೂ ವಾರ್ಷಿಕ ವೇತನ ಸಿಗುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣ ಪಡೆಯುವವರಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ- ಬಹಳಷ್ಟು ಅವಕಾಶಗಳಿವೆ.

ಪಿಯುಸಿ ನಂತರ ವಾಣಿಜ್ಯಕ್ಕೆ ಸಂಬಂಧ ಪಟ್ಟ ಉತ್ತಮ ಕೋರ್ಸ್​ಗಳು ಯಾವುವು?
ವಾಣಿಜ್ಯ
Follow us
TV9 Web
| Updated By: ನಯನಾ ಎಸ್​ಪಿ

Updated on: Feb 15, 2023 | 6:40 PM

ಪಿಯುಸಿ ಬೋರ್ಡ್ ಪರೀಕ್ಷೆಯ ನಂತರ ಯಾವ ಕೋರ್ಸ್ ಮಾಡಬೇಕು ಅನ್ನುವ ಗೊಂದಲ ವಿದ್ಯಾರ್ಥಿಗಳಲ್ಲಿರುವುದು ಸಹಜ. ಬಹಳಷ್ಟು ಸಲ ಪಿಯುಸಿ (PUC) ನಂತರ ಯಾವ ವಿಷಯವನ್ನು ಅಥವಾ ಕೋರ್ಸ್ ಅನ್ನು ಆಯ್ಕೆ ಮಾಡುತ್ತಿರೋ ಅದೇ ಕ್ಷೇತ್ರದಲ್ಲಿ ನಿಮ್ಮ ವೃತ್ತಿ ಜೀವನವನ್ನೂ ಕಟ್ಟಿಕೊಳ್ಳುತ್ತೀರಿ. ಹಾಗಾಗಿ ಪುಯುಸಿ ಬಳಿಕ ಯಾವ ವಿಷಯದಲ್ಲಿ ನಿಮಗೆ ಆಸಕ್ತಿ ಇದೆಯೋ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ವಿಜ್ಞಾನ (Science), ವಾಣಿಜ್ಯ (Commerce), ಕಲೆ (Arts), ಅಥವಾ ಯಾವುದೇ ಇತರ ವಿಷಯವಾಗಿರಲಿ, ಪ್ರತಿಯೊಂದು ಆಯ್ಕೆಯು ವೃತ್ತಿ ಮಾರ್ಗಗಳ ವ್ಯಾಪ್ತಿಯನ್ನು ತೆರೆಯುತ್ತದೆ.

ಈ ಕೆಳಗೆ ಪಿಯುಸಿ ನಂತರ ವಾಣಿಜ್ಯಕ್ಕೆ ಸಂಬಂಧಪಟ್ಟ ಯಾವ ಕೋರ್ಸ್ ಮಾಡಿದರೆ ಹೆಚ್ಚು ಸಂಬಳ ಸಿಗಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳನ್ನು ನೋಡಬಹುದು. ವಾಣಿಜ್ಯ ವಿಷಯವನ್ನು ನೀವು ಆಯ್ಕೆ ಮಾಡಿದರೆ ಮುಂದೆ ನಿಮಗೆ ಸಿಎ, ಸಿಎಸ್ ನಂತಹ ವೃತ್ತಿಪರ ಕೋರ್ಸ್ ಕೂಡ ಮಾಡುವ ಅವಕಾಶ ಇರುತ್ತದೆ.

ಪಿಯುಸಿ ವಾಣಿಜ್ಯದ ನಂತರ ಸರಿಯಾದ ಕೋರ್ಸ್ ಅನ್ನು ಹೇಗೆ ಆಯ್ಕೆ ಮಾಡುವುದು?

ವಾಣಿಜ್ಯ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು, ಪಿಯುಸಿ ವಾಣಿಜ್ಯದ ನಂತರ ಆಯ್ಕೆ ಮಾಡಲು ಲಭ್ಯವಿರುವ ವಿವಿಧ ಕೋರ್ಸ್‌ಗಳ ಬಗ್ಗೆ ನೀವು ತಿಳಿದಿರಬೇಕು. 2023 ರಲ್ಲಿ ವಿದ್ಯಾರ್ಥಿಗಳಿಗೆ ಬಹಳಶ್ಟಿ ಆಯ್ಕೆ ಮತ್ತು ಅವಕಾಶಗಳು ಲಭ್ಯವಿವೆ. ಅಗತ್ಯವಿರುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಹಾಯ ಮಾಡುತ್ತದೆ.

  • ಸಂಬಂಧಿತ ಕೋರ್ಸ್ ಅನ್ನು ಹುಡುಕಲು ನಿಮ್ಮ ಆಸಕ್ತಿಯನ್ನು ಗುರುತಿಸಿ.
  • ಪಠ್ಯಕ್ರಮ ಮತ್ತು ವಿಷಯಗಳನ್ನು ಪರಿಶೀಲಿಸಿ.
  • ವಾಣಿಜ್ಯ, ಅರ್ಹತೆ, ಕೋರ್ಸ್ ಅವಧಿ ಮತ್ತು ಶುಲ್ಕಕ್ಕಾಗಿ ಉತ್ತಮ ಕೋರ್ಸ್ ಅನ್ನು ಪರಿಶೀಲಿಸಿ.

ಪಿಯುಸಿ ವಾಣಿಜ್ಯದ ನಂತರದ ಟಾಪ್ 20 ಕೋರ್ಸ್‌ಗಳ ಪಟ್ಟಿ ಇಲ್ಲಿದೆ

  • ಬ್ಯಾಚುಲರ್ ಆಫ್ ಕಾಮರ್ಸ್ (B.Com)
  • ಬ್ಯಾಚುಲರ್ ಆಫ್ ಎಕನಾಮಿಕ್ಸ್ (BE)
  • ಬ್ಯಾಚುಲರ್ ಆಫ್ ಅಕೌಂಟಿಂಗ್ ಅಂಡ್ ಫೈನಾನ್ಸ್ (BAF)
  • ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಬ್ಯಾಂಕಿಂಗ್ ಅಂಡ್ ಇನ್ಶೂರೆನ್ಸ್ (BBI)
  • ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಫೈನಾನ್ಸಿಯಲ್ ಮಾರ್ಕೆಟ್ (BFM)
  • ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA)
  • ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ – ಇಂಟರ್ನ್ಯಾಷನಲ್ ಬಿಸಿನೆಸ್ (BBA-IB)
  • ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ – ಕಂಪ್ಯೂಟರ್ ಅಪ್ಲಿಕೇಶನ್ (BBA-CA)
  • ಇಂಡಸ್ಟ್ರಿ ಓರಿಎಂಟೆಡ್ ಇಂಟಿಗ್ರೇಟೆಡ್ ಕೋರ್ಸಿಸ್
  • ಚಾರ್ಟರ್ಡ್ ಅಕೌಂಟೆನ್ಸಿ
  • ಕಂಪನಿ ಸೆಕ್ರೆಟರಿ (CS)
  • ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್
  • ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಷನ್
  • ಬಿಕಾಂ
  • ಬಿಕಾಂ ಮಾರ್ಕೆಟಿಂಗ್
  • ಬಿಕಾಂ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್ಮೆಂಟ್
  • ಬಿಎ ಇನ್ ಹುಮಾನಿಟೀಸ್ ಅಂಡ್ ಸೋಶಿಯಲ್ ಸೈನ್ಸ್
  • ಬಿಎ ಎಲ್ ಎಲ್ ಬಿ
  • ಬಿಡೆಸ್ ಇನ್ ಡಿಸೈನ್
  • ಡಿಪ್ಲೋಮ ಇನ್ ಎಜುಕೇಶನ್ (DEd)

ವಾಣಿಜ್ಯ ಕೋರ್ಸ್​ಗಳು ವಿದ್ಯಾರ್ಥಿಗಳಿಗೆ ವ್ಯವಸ್ಥಾಪಕ ಕೌಶಲ್ಯಗಳನ್ನು ನೀಡಲು ವಾಣಿಜ್ಯ, ಅರ್ಥಶಾಸ್ತ್ರ, ವ್ಯಾಪಾರ ಕಾನೂನು, ಲೆಕ್ಕಪತ್ರ ನಿರ್ವಹಣೆ, ತೆರಿಗೆ ಮತ್ತು ಹಣಕಾಸು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಬಿಕಾಮ್ ಆಕಾಂಕ್ಷಿಗಳು ಸಾಮಾನ್ಯ ವ್ಯವಹಾರ ತತ್ವಗಳ ಬಗ್ಗೆ ಕಲಿಯುತ್ತಾರೆ. ಬಿಕಾಂ ಕೋರ್ಸ್‌ಗಳಿಗೆ ಅರ್ಹತೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 50% ಅಂಕಗಳು. ಬಿಕಾಂ ಕೋರ್ಸ್ ವಾಣಿಜ್ಯ ವಿದ್ಯಾರ್ಥಿಗಳ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಕೋರ್ಸ್ ಆಗಿದೆ. ಬಿಕಾಂ ಪಠ್ಯಕ್ರಮವು ತೆರಿಗೆ, ಅರ್ಥಶಾಸ್ತ್ರ, ಖಾತೆಗಳು ಇತ್ಯಾದಿ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ: ಪಿಯುಸಿ ನಂತರ ವಿಜ್ಞಾನಕ್ಕೆ ಸಂಬಂಧ ಪಟ್ಟ ಯಾವ ಕೋರ್ಸ್ ಮಾಡಿದರೆ ಅತೀ ಹೆಚ್ಚು ಸಂಬಳ ಪಡೆಯಬಹುದು?

ಪದವಿ ಪೂರ್ವ ವಾಣಿಜ್ಯ 3 ವರ್ಷದ ಪೂರ್ಣ ಸಮಯ ಕೋರ್ಸ್ ಆಗಿರುತ್ತದೆ. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರಿ ಸುಮಾರು 2.5-18 ಲಕ್ಷ ರೂ. ವರೆಗೂ ವಾರ್ಷಿಕ ವೇತನ ಸಿಗುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣ ಪಡೆಯುವವರಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ- ಬಹಳಷ್ಟು ಅವಕಾಶಗಳಿವೆ. ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಹಲವಾರು ಸ್ನಾತಕೋತ್ತರ ಕೋರ್ಸ್​ಗಳು ಮತ್ತು ವೃತ್ತಿಪರ ಕೋರ್ಸ್​ಗಳು ಮಾಡುವ ಅವಕಾಶ ಇದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ