JEE Main 2023: ಸೆಷನ್ 2 ನೋಂದಣಿ ಪ್ರಾರಂಭ; ನೋಂದಣಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ
JEE Main 2023 Session 2 Registration Process: ಜೆಇಇ ಮೇನ್ 2023 ಸೆಷನ್ 2 ನೋಂದಣಿ ಪ್ರಾರಂಭವಾಗಿದೆ. ಜೆಇಇ ಅಧಿಕೃತ ವೆಬ್ಸೈಟ್ನಲ್ಲಿ ನೊಂದಣಿ ಪ್ರಕ್ರಿಯೆ ತೆರೆದಿದೆ. ಅರ್ಜಿ ಸಲ್ಲಿಸಲು ಅರ್ಹರಾಗಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ jeemain.nta.nic.in ಭೇಟಿ ನೀಡಿ ನೋಂದಣಿ ಮತ್ತು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೆಇಇ ಮೇನ್ 2023 ಸೆಷನ್ 2 (JEE Main 2023 Session 2) ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಏಪ್ರಿಲ್ 2023 ರಲ್ಲಿ ಜೆಇಇ ಮೇನ್ 2023 ಸೆಷನ್ 2 ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಎನ್ಟಿಎ-ಜೆಇಇ ಮೇನ್ 2023 (NTA-JEE Main 2023) ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮತ್ತು ಅರ್ಜಿಯನ್ನು ಪೂರ್ಣಗೊಳಿಸಬಹುದು. ಅಧಿಕೃತ ಸೂಚನೆಯ ಪ್ರಕಾರ ಜೆಇಇ ಮೇನ್ 2023 ಸೆಷನ್ 2 ನೋಂದಣಿ ಲಿಂಕ್ ಮಾರ್ಚ್ 12, 2023 ರವರೆಗೆ ತೆರೆದಿರುತ್ತದೆ.
ಜೆಇಇ ಮೇನ್ 2023 ಸೆಷನ್ 2 ಪರೀಕ್ಷೆಗಳನ್ನು ಏಪ್ರಿಲ್ 6, 7, 8, 9, 10, 11 ಮತ್ತು 12 ರಂದು ನಡೆಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳು ಜೆಇಇ ಮೇನ್ 2023 ಸೆಷನ್ 2 ನೋಂದಣಿ ವಿಂಡೋ ಮೂಲಕ ಲಾಗಿನ್ ಮಾಡಬಹುದು ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಅಧಿಕೃತ ಸೂಚನೆಯ ಪ್ರಕಾರ, ಪರೀಕ್ಷಾ ಕೇಂದ್ರ, ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಪರೀಕ್ಳ್ಷಾ ಫಲಿತಾಂಶವನ್ನು ಇನ್ನು ಮುಂದಿನ ದಿನಗಳಲ್ಲಿ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುವುದು. ಸದ್ಯಕ್ಕೆ ಜೆಇಇ ಮೇನ್ 2023 ಸೆಷನ್ 2 ಅರ್ಜಿಗಳು ಲಭ್ಯವಿದ್ದು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ ಅರ್ಜಿ ಸಲ್ಲಿಸಬೇಕು. ಜೆಇಇ ಮೇನ್ 2023 ಸೆಷನ್ 2 ನೋಂದಣಿಗಳನ್ನು ಪೂರ್ಣಗೊಳಿಸುವ ಮೊದಲು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಮತ್ತು ನಮೂದಿಸಿದ ವಿವರಗಳನ್ನು ಓದುವುದು ಉತ್ತಮ.
ಜೆಇಇ ಮೇನ್ 2023 ಸೆಷನ್ 2 ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ
ಜೆಇಇ ಮೇನ್ 2023 ಸೆಷನ್ 2 ನೋಂದಣಿ ಪ್ರಕ್ರಿಯೆ:
ಜೆಇಇ ಮೇನ್ 2023 ಸೆಷನ್ 2 ನೋಂದಣಿ ಲಿಂಕ್ ಆನ್‌ಲೈನ್‌ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ಇಲ್ಲಿ ಒದಗಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ಜೆಇಇ ಮೇನ್ 2023 ಸೆಷನ್ ೨ ನೋಂದಣಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
- ಹಂತ 1: ಜೆಇಇ ಮೇನ್ 2023 ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಹಂತ 2: ಪಬ್ಲಿಕ್ ನೋಟೀಸ್ ಕೆಳಗಿರುವ ಜೆಇಇ ಮೇನ್ 2023 ಸೆಷನ್ 2 ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ
- ಹಂತ 3: ಲಾಗಿನ್ ಆದ ಬಳಿಕ ಕೇಳುವ ಮಾಹಿತಿಗಳನ್ನು ತುಂಬಿ ಮತ್ತು ಜೆಇಇ ಮೇನ್ 2023 ಸೆಷನ್ 2 ಅಪ್ಲಿಕೇಶನ್‌ಗಳನ್ನು ಪೂರ್ಣಗೊಳಿಸಿ
- ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅಂತಿಮ ಸಲ್ಲಿಕೆ ಲಿಂಕ್ ಅನ್ನು ಕ್ಲಿಕ್ ಮಾಡಿ
ಇದನ್ನೂ ಓದಿ: Scholarship 2023: UG, PG ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಫೆ.16 ಕೊನೆಯ ದಿನ
ಜೆಇಇ ಮೇನ್ 2023 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಪಟ್ಟಿ:
ಜೆಇಇ ಮೇನ್ 2023 ಅರ್ಜಿಗಳನ್ನು ಸಲ್ಲಿಸುವಾಗ, ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ದಾಖಲೆಗಳ ಸೆಟ್ ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಜೆಇಇ ಮೇನ್ 2023 ಸೆಷನ್ 2 ಅರ್ಜಿ ಸಲ್ಲಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ.
- ಅಭ್ಯರ್ಥಿಯ ಭಾವಚಿತ್ರ
- ಅಭ್ಯರ್ಥಿಯ ಸಹಿ ಮತ್ತು ಸ್ಕ್ಯಾನ್ ಮಾಡಿದ ಭಾವಚಿತ್ರ
- ಜಾತಿ ಪ್ರಮಾಣ ಪತ್ರ
- ಇತರ ಅಂಗವೈಕಲ್ಯ ಪ್ರಮಾಣಪತ್ರಗಳು ಇದ್ದರೆ
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ