AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಪಿ ಪೇಸ್ಟ್ ಆಗುತ್ತಿರುವ ಶಿಕ್ಷಣ! ವಿದ್ಯಾರ್ಥಿಗಳನ್ನು ಕವಲುದಾರಿಗೆ ತಳ್ಳುತ್ತಿರುವ ಚ್ಯಾಟ್ ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

Chat GPT: ಇಂಟರ್ನೆಟ್‌ ಸರ್ಚ್ ಇಂಜಿನ್‌ನಲ್ಲಿ ಚ್ಯಾಟ್ ಜಿಪಿಟಿ ಎಂದು ಸರ್ಚ್ ಮಾಡಿದ ಕೊಡಲೆ ವೆಬ್ ಪೇಜೊಂದು ಓಪನ್ ಆಗುತ್ತೆ. ಇಲ್ಲಿ ಚ್ಯಾಟ್ ವಿಭಾಗದಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಿದ್ರು ಅದಕ್ಕೆ ತಕ್ಕುದಾದ ಉತ್ತರವನ್ನು ಚ್ಯಾಟ್ ಜಿಪಿಟಿ ಕಳುಹಿಸಿಕೊಡುತ್ತೆ.

ಕಾಪಿ ಪೇಸ್ಟ್ ಆಗುತ್ತಿರುವ ಶಿಕ್ಷಣ! ವಿದ್ಯಾರ್ಥಿಗಳನ್ನು ಕವಲುದಾರಿಗೆ ತಳ್ಳುತ್ತಿರುವ ಚ್ಯಾಟ್ ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ
ಕಾಪಿ ಪೇಸ್ಟ್ ಆಗುತ್ತಿರುವ ವಿದ್ಯಾರ್ಥಿ ಜೀವನ: ಚ್ಯಾಟ್ ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ
TV9 Web
| Updated By: ಸಾಧು ಶ್ರೀನಾಥ್​|

Updated on: Feb 16, 2023 | 11:06 AM

Share

ಆಧುನಿಕತೆ ಬೆಳೆದಂತೆ ಹೊಸ ಹೊಸ ತಂತ್ರಜ್ಞಾನಗಳ ಅನ್ವೇಷಣೆಯಾಗುತ್ತಿದೆ. ಆದ್ರೆ ಈ ನೂತನ ಟೆಕ್ನಾಲಜಿಯಿಂದಾಗಿ ಪಾಸಿಟಿವ್ ಜೊತೆ ನೆಗೆಟಿವ್ ಅಂಶವೂ ಹ್ಯೂಮನ್ ಲೈಫ್‌ಗೆ ಎಫೆಕ್ಟ್ ಆಗುತ್ತಿದೆ. ಇಂತಹ ಸಾಲಿಗೆ ಇದೀಗ ಚ್ಯಾಟ್ ಜಿಪಿಟಿ ತಂತ್ರಜ್ಞಾನ ಸೇರ್ಪಡೆಯಾಗಿದೆ. ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿಯಿಂದಾಗಿ (Artificial intelligence) ಮಕ್ಕಳ ಆಲಸ್ಯ ಇನ್ನಷ್ಟು ಹೆಚ್ಚಾಗಿರುತ್ತಿರುವುದಲ್ಲದೆ ದುಷ್ಕೃತ್ಯ ಎಸಗುವವರಿಗೆ ಮಾರ್ಗದರ್ಶನ ಮಾಡುವಂತಿದೆ. ಹೌದು.. ಸ್ಟೂಡೆಂಟ್ಸ್ ಜೀವನದಲ್ಲಿ ಶೈಕ್ಷಣಿಕ ಚಟುವಟಿಕೆಯಾಗಿ ಲೆಕ್ಚರರ್ಸ್ ಅಸೈನ್ಮೆಂಟ್‌ಗಳನ್ನು ಕೊಡೋದು ಸಾಮಾನ್ಯ. ಈ ಹಿಂದೆ ಈ ರೀತಿ ಅಸೈನ್ಮೆಂಟ್ಸ್ ಹೆಸರಲ್ಲಿ ಪ್ರಬಂಧ ಬರೆಯೋದಕ್ಕೋ ಅಥವಾ ಪ್ರಾಜೆಕ್ಟ್ ವರ್ಕ್ ಕೊಟ್ಟಾಗ ಲೈಬ್ರರಿಯಲ್ಲಿ ಸಿಗುವ ಪುಸ್ತಕಗಳನ್ನು ಜಾಲಾಡಿ, ಅಂತರ್ಜಾಲದಲ್ಲಿ ಗೂಗಲ್‌ ಜಾಲಾಡಿ ಸಿಗುವ ಹತ್ತಾರು ವಿಷಯಗಳನ್ನು ಒಟ್ಟು ಸೇರಿಸಿ ಅಸೈನ್ಮೆಂಟ್‌‌ನ್ನು ವಿದ್ಯಾರ್ಥಿಗಳು ಕಂಪ್ಲೀಟ್ ಮಾಡ್ತಿದ್ದರು. ಇದು ಸ್ವಲ್ಪವೇ ಹಿಂದಿನ ಕಾಲದ ಟ್ರೆಂಡ್​ ಆಗಿತ್ತು. ಆದ್ರೆ ಈಗ ಆ ರೀತಿಯಲ್ಲ. ಲೇಟೆಸ್ಟ್​ ಸ್ಟೂಡೆಂಟ್ಸ್ ತುಂಬಾ ಲೇಟೆಸ್ಟಾಗಿದ್ದಾರೆ. ವಿದ್ಯಾರ್ಥಿಗಳು (students) ಈ ರೀತಿಯ ಅಸೈನ್ಮೆಂಟ್ಸ್‌ಗಳನ್ನು ಮುಗಿಸೋದಕ್ಕೆ ಚ್ಯಾಟ್ ಜಿಪಿಟಿ ತಂತ್ರಜ್ಞಾನದ ಮೊರೆ ಹೋಗುತ್ತಿರುವುದು ಗೊತ್ತಾಗಿದೆ. ಕಡಲನಗರಿಯಲ್ಲಿಯು ಈ ಆರ್ಟಿಫಿಶಿಯಲ್ ತಂತ್ರಜ್ಞಾನ ಬಳಸಿ ವರ್ಕ್ ಆಗುವ ಚ್ಯಾಟ್ ಜಿಪಿಟಿಯನ್ನು ಬಳಸಿ (ChatGPT – a Cybersecurity Threat) ವಿದ್ಯಾರ್ಥಿಗಳು ಇನ್ನಷ್ಟು ಆಲಸ್ಯರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಡಾ ಅನಂತ್ ಪ್ರಭು, ಸೈಬರ್ ಭದ್ರತಾ ತಜ್ಞ, ಮಂಗಳೂರು.

ಚ್ಯಾಟ್ ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವಾಗಿದ್ದು ಓಪನ್-ಎಐ ಎಂಬ ಕಂಪೆನಿ ಇದನ್ನು ಪ್ರಾರಂಭಿಸಿದೆ. ಇಂಟರ್ನೆಟ್‌ ಸರ್ಚ್ ಇಂಜಿನ್‌ನಲ್ಲಿ ಚ್ಯಾಟ್ ಜಿಪಿಟಿ ಎಂದು ಸರ್ಚ್ ಮಾಡಿದ ಕೊಡಲೆ ವೆಬ್ ಪೇಜೊಂದು ಓಪನ್ ಆಗುತ್ತೆ. ಇಲ್ಲಿ ಚ್ಯಾಟ್ ವಿಭಾಗದಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಿದ್ರು ಅದಕ್ಕೆ ತಕ್ಕುದಾದ ಉತ್ತರವನ್ನು ಚ್ಯಾಟ್ ಜಿಪಿಟಿ ಕಳುಹಿಸಿಕೊಡುತ್ತೆ.

ಈ ಹಿಂದೆ ಗೂಗಲ್‌ನಲ್ಲಿ ಯಾವುದಾದರು ವಿಚಾರದ ಬಗ್ಗೆ ಸರ್ಚ್ ಮಾಡಿದ್ರೆ ಅದಕ್ಕೆ ಸಂಬಂಧಿಸಿ ಹತ್ತಾರು ಇನ್ಫಾರ್ಮೇಶನ್ ಬರ್ತಿತ್ತು. ಆದ್ರೆ ಚ್ಯಾಟ್ ಜಿಪಿಟಿಯಲ್ಲಿ ಕೇಳಿದ ಪ್ರಶ್ನೆಗೆ ಎಷ್ಟು ಬೇಕೋ ಅಷ್ಟೇ ನಿಖರವಾದ ಮಾಹಿತಿಯನ್ನು ನೀಡುತ್ತೆ. ಹೀಗಾಗಿ ವಿದ್ಯಾರ್ಥಿಗಳು ಇಲ್ಲಿ ಪ್ರಶ್ನೆಯನ್ನು ಕೇಳಿ ತಮಗೆ ಬೇಕಾದ ಉತ್ತರವನ್ನು ಪಡೆದುಕೊಂಡು ಕಾಪಿ ಪೇಸ್ಟ್ ಮಾಡುತ್ತಿದ್ದಾರೆ. ಇದರ ಜೊತೆ ದೇಶದ ಭದ್ರತೆಗೆ ಸವಾಲೊಡ್ಡುವ ಸಂಗತಿಗಳು ಸಹ ಇದರಲ್ಲಿ ಸಿಗುತ್ತಿದೆ. ಉದಾಹರಣೆಗೆ ದುಷ್ಕೃತ್ಯ ಎಸಗುವುದಕ್ಕೆ ಏನೇನು ಮಾಡಬಹುದು ಎಂದು ಕೇಳಿದ್ರೆ ಅದು ಸಹ ಲಭ್ಯವಾಗುತ್ತೆ!

ಇದನ್ನೂ ಓದಿ:

Water contamination: ಗುರುಮಠಕಲ್ -ಕಲುಷಿತ ನೀರಿಗೆ ಮತ್ತೆ ಮೂವರು ಬಲಿ, ಕುಡಿಯಲು ಯೋಗ್ಯವಲ್ಲದ ನೀರು ಎಂದ ಲ್ಯಾಬ್

2022ರ ನವೆಂಬರ್ ತಿಂಗಳಿನಲ್ಲಿ ಈ ಚ್ಯಾಟ್ ಜಿಪಿಟಿ ಬಳಕೆಗೆ ಲಭ್ಯವಾಗಿದ್ದು, ಕೇವಲ ಮೂರೇ ತಿಂಗಳಲ್ಲಿ 100 ಮಿಲಿಯನ್ ಜನ ಇದನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಮಾನವ ಶ್ರಮ ಕಡಿಮೆಯಾಗಿ ಕೆಲಸ ಕಡಿತವಾಗುತ್ತಿದ್ದು ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇದನ್ನು ಬಳಸದಂತೆ ತಾಕೀತು ಮಾಡಲಾಗಿದೆ. ಒಟ್ಟಿನಲ್ಲಿ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದಾಗಿ ಪಾಸಿಟಿವ್ ಜೊತೆ ನೆಗೆಟಿವ್ ಪ್ರಭಾವವು ಸಹ ಇರೋದು ಸುಳ್ಳಲ್ಲ.

ವರದಿ: ಅಶೋಕ್, ಟಿವಿ 9, ಮಂಗಳೂರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ