ಬೆಂಗಳೂರಿನಲ್ಲಿ ಅನಧಿಕೃತ ಶಾಲೆಗಳ ಕರ್ಮಕಾಂಡ ಹೊರ ಬೀಳುತ್ತಿದ್ದಂತೆ ಮಾನ್ಯತೆ ಹೊಂದಿದ ಸಿಬಿಎಸ್ಇ ಶಾಲೆಗಳಿಗೆ ಹೆಚ್ಚಿದ ಬೇಡಿಕೆ
ಸಿಬಿಎಸ್ಇ ಮಾನ್ಯತೆ ಇಲ್ಲದೆ ಸಿಬಿಎಸ್ಇ ಪಾಠ ಹೇಳಿ ಕೊಡುತ್ತಿದ್ದ ಸುಮಾರು 200 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಕೊಡುತ್ತಿದ್ದಂತೆ ಶಾಲೆಗಳ ಕರ್ಮಕಾಂಡದಿಂದ ಬೇಸತ್ತ ಪೋಷಕರು ಅನಧಿಕೃತ ಶಾಲೆಗಳಿಂದ ಮಕ್ಕಳ ದಾಖಲಾತಿ ಬದಲಾಯಿಸಲು ಮುಂದಾಗಿದ್ದು, ಪರಿಣಾಮವಾಗಿ ಬೆಂಗಳೂರಿನಲ್ಲಿ ಸಿಬಿಎಸ್ಇ ಮಾನ್ಯತೆ ಹೊಂದಿರುವ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ಬೆಂಗಳೂರು: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಹೈಟೆಕ್ ಫೆಸಿಲಿಟಿ ಲಭ್ಯ ಇರಬೇಕು ಅಂತಾ ನೂರಾರು ಕನಸು ಆಸೆ ಹೊತ್ತು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇತ್ತಿಚ್ಚಿನ ದಿನಗಳಲ್ಲಿ ಸುಲಿಗೆಯ ಜೊತೆಗೆ ಕಳ್ಳಾಟ ಶುರು ಮಾಡಿಕೊಂಡಿದ್ದು ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ. ಹೈಟೆಕ್ ಅ್ಯಂಡ್ ಇಂಟರ್ ನ್ಯಾಷನಲ್ ಸಿಬಿಎಸ್ಇ (CBSE) ಸಿಲೆಬಸ್ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಲಕ್ಷ ಲಕ್ಷ ಫೀಸ್ ಇದ್ದರೂ ಪರವಾಗಿಲ್ಲ ಅಂತಾ ಹಿಂದೆ ಮುಂದೆ ನೋಡದೆ ಶಾಲೆಗೆ ಮಕ್ಕಳನ್ನ ದಾಖಲಾತಿ ಮಾಡಿರುವ ಪೋಷಕರು ಅಕ್ಷರಶಃ ಇಂದು ಪರದಾಡುವ ಸ್ಥಿತಿ ಎದುರಾಗಿದೆ. ಆರ್ಕಿಡ್ (Orchid School) ಸೇರಿದಂತೆ ಬೆಂಗಳೂರಿನ 200ಕ್ಕೂ ಹೆಚ್ಚು ಶಾಲೆಗಳ ಈ ಕಳ್ಳಾಟ ಹೊರ ಬರ್ತಿದ್ದಂತೆ ಪೋಷಕರು ಕಂಗಲಾಗಿದ್ದಾರೆ. ಇದೀಗ ಪೋಷಕರು ಮಾನ್ಯತೆ ಪಡೆದ ಸಿಬಿಎಸ್ಇ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದು, ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.
ಸಿಬಿಎಸ್ಇ ಮಾನ್ಯತೆ ಇಲ್ಲದೆ ಸಿಬಿಎಸ್ಇ ಪಾಠ ಹೇಳಿ ಕೊಡುತ್ತಿದ್ದ ಸುಮಾರು 200 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಕೊಡುತ್ತಿದ್ದಂತೆ ಶಾಲೆಗಳ ಕರ್ಮಕಾಂಡದಿಂದ ಬೇಸತ್ತ ಪೋಷಕರು ಅನಧಿಕೃತ ಶಾಲೆಗಳಿಂದ ಮಕ್ಕಳ ದಾಖಲಾತಿ ಬದಲಾಯಿಸಲು ಮುಂದಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಸಿಬಿಎಸ್ಇ ಮಾನ್ಯತೆ ಹೊಂದಿರುವ ಶಾಲೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.
ಲಕ್ಷ ಲಕ್ಷ ಫೀಸ್ ಕೊಡುತ್ತೇವೆ ಅಂದರೂ ಸಿಬಿಎಸ್ಇ ಮಾನ್ಯತೆ ಹೊಂದಿರುವ ಶಾಲೆಗಳಲ್ಲಿ ಮಕ್ಕಳಿಗೆ ಅಡ್ಮಿಷನ್ ಸಿಗುತ್ತಿಲ್ಲ. ಇಷ್ಟಕ್ಕೆಲ್ಲ ಕಾರಣ ಅಂದರೆ ಬೆಂಗೂರಿನಲ್ಲಿ ತಲೆ ಎತ್ತಿರುವ ಅನಧಿಕೃತ ಶಾಲೆಗಳ ಹಾವಳಿ. ಹೌದು, ಕಳೆದ ಹದಿನೈದು ದಿನಗಳಿಂದ ಆರ್ಕಿಡ್ ಶಿಕ್ಷಣ ಸಂಸ್ಥೆ ಸೇರಿದಂತೆ ಸಾಲು ಸಾಲು ಅನಧಿಕೃತ ಶಾಲೆಗಳ ಬಣ್ಣ ಬಯಲಾಗುತ್ತಿದ್ದಂತೆ ಪೋಷಕರು ಪುಲ್ ಟೆನ್ಷನ್ ಆಗಿದ್ದಾರೆ.
ಇದನ್ನೂ ಓದಿ: ಸಿಬಿಎಸ್ಇ ಸುಳ್ಳು ನೆಪ ಹೇಳಿ ಲಕ್ಷಾಂತರ ಶುಲ್ಕ: ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಪೋಷಕರ ಪ್ರತಿಭಟನೆ
ಶಾಲೆ ನಮಗೆ ಸಿಬಿಎಸ್ಇ ಸಿಲೆಬಸ್ ಅಂತಾ ಇಷ್ಟು ದಿನ ಮೋಸ ಮಾಡಿದೆ ಅಂತಾ ಬೇಸತ್ತು ಅನಧಿಕೃತ ಶಾಲೆಗಳಿಂದ ಟಿಸಿ ಪಡೆದು ಸಿಬಿಎಸ್ಇ ಮಾನ್ಯತೆ ಹೊಂದಿರುವ ಶಾಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಶಾಲೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಇನ್ನು ಈಗಾಗಲೇ ಬಹುತೇಕ ಸಿಬಿಎಸ್ಇ ಶಾಲೆಗಳಲ್ಲಿ ದಾಖಲಾತಿ ಮುಗಿದ ಹಿನ್ನಲೆ ಪೋಷಕರು ದಾಖಲಾತಿಗೆ ಪರದಾಡು ಸ್ಥಿತಿ ಎದುರಾಗಿದೆ. ಮಕ್ಕಳ ಭವಿಷ್ಯ ಕಲಿಕೆ ಮುಖ್ಯ ಅಂತಾ ಲಕ್ಷ ಲಕ್ಷ ಶುಲ್ಕವಾದರೂ ಪರವಾಗಿಲ್ಲ ಅಂತಾ ಸಿಬಿಎಸ್ಇ ಶಾಲೆಗಳನ್ನ ಹುಡುಕುತ್ತಿದ್ದಾರೆ. ಆದರೆ ಎಲ್ಲೂ ಶಾಲೆಗಳು ಸಿಗುತ್ತಿಲ್ಲ. ಹೀಗಾಗಿ ಪರದಾಡುವ ಸ್ಥಿತಿ ಪೋಷಕರಿಗ ಎದುರಾಗಿದೆ. ಇನ್ನು ಕೆಲವು ಸಿಬಿಎಸ್ಇ ಶಾಲೆಗಳು ಇದನ್ನೇ ಬಂಡವಾಳ ಮಾಡಿಕೊಂಡು ಮುಂದಿನ ವರ್ಷದ ಅಡ್ಮಿಷನ್ಗೂ ಈಗಲೇ ಶುಲ್ಕ ಪಡೆದು ದಾಖಲಾತಿ ಪಡೆಯುತ್ತಿರುವುದರಿಂದ ಸಿಬಿಎಸ್ಇ ಶಾಲೆಗಳು ಇಲ್ಲದೆ ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ಪೋಷಕಿ ಅರ್ಚನಾ ಹೇಳುತ್ತಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಕೆಲವು ಖಾಸಗಿ ಶಾಲೆಗಳ ಬಣ್ಣ ಬಯಲಾಗುತ್ತಿದ್ದಂತೆ ಪೇಕ್ ಸಿಬಿಎಸ್ಇ ಶಾಲೆಗಳ ಕರ್ಮಕಾಂಡದ ಬಳಿಕ ಪೋಷಕರು ಮಾನ್ಯತೆ ಹೊಂದಿರುವ ಶಾಲೆಗಳನ್ನ ಪರಶೀಲಿಸಿ ದಾಖಲಾತಿಗೆ ಮುಂದಾಗಿರೊದರಿಂದ ಏಕಾಏಕಿ ಮಾನ್ಯತೆ ಹೊಂದಿರುವ ಸಿಬಿಎಸ್ಇ ಶಾಲೆಗಳಿಗೆ ಬೇಡಿಕೆ ಹೆಚ್ಚಾದಂತಾಗಿದೆ.
ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:08 pm, Thu, 16 February 23