ಮಹಾ ವಂಚನೆ ಬೆಳಕಿಗೆ ಬರುತ್ತಿದ್ದಂತೆ ಆರ್ಕಿಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಶಿಕ್ಷಣ ಇಲಾಖೆ

ಆರ್ಕಿಡ್ ಶಾಲೆಯ ಕಳ್ಳಾಟ ಬಯಲು ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ , ಈಗಾಗಲೇ ಮೂರು ಜನರ ಕಮೀಟಿ ರಚಿಸಿದ್ದು, ಬಿಇಎಗಳು ಹಾಗೂ ಸಿಆರ್​ಪಿಗಳಿಂದ ಶಾಲೆಗೆ ಭೇಟಿ ನೀಡಿ ಮಾಹಿತಿಯನ್ನ ಕಲೆ ಹಾಕಿ ಆಯುಕ್ತರಿಗೆ ವರದಿ ನೀಡುವಂತೆ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಉಪನೀರ್ದೇಶಕರುಗಳಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಮಹಾ ವಂಚನೆ ಬೆಳಕಿಗೆ ಬರುತ್ತಿದ್ದಂತೆ ಆರ್ಕಿಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಶಿಕ್ಷಣ ಇಲಾಖೆ
ಆರ್ಕಿಡ್ ಶಾಲೆ (ಎಡ ಚಿತ್ರ) ಮತ್ತು ವಂಚನೆ ವಿರುದ್ಧ ಪೋಷಕರ ಪ್ರತಿಭಟನೆ (ಬಲ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Feb 02, 2023 | 6:47 PM

ಬೆಂಗಳೂರು: ಮಕ್ಕಳ ಬದುಕು ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡುತ್ತಿವೆ. ದಿನದಿಂದ ದಿನಕ್ಕೆ ಆರ್ಕಿಡ್ ಶಾಲೆಯ ಮಹಾ ವಂಚನೆ ಹೊರಕ್ಕೆ ಬರ್ತಿದ್ದಂತೆ ಶಿಕ್ಷಣ ಇಲಾಖೆ ಆರ್ಕಿಡ್ ಶಾಲೆಗಳ (Orchid School) ಅಂಗಳಕ್ಕೆ ಎಂಟ್ರೀ ಕೊಟ್ಟಿದ್ದು ಆರ್ಕಿಡ್ ಕಳ್ಳಾಟದ ಮಾಹಿತಿ ಹೊರ ಹಾಕಲು ಮುಂದಾಗಿದೆ. ಕಳೆದ ಒಂದು ವಾರದಿಂದ ಸಾಲು ಸಾಲು ಆರ್ಕಿಡ್ ಶಾಲೆಯ ಕಳ್ಳಾಟ ಬಯಲಾಗಿದ್ದು, ಸರ್ಕಾರ ಶಿಕ್ಷಣ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಪೋಷಕರಿಗೆ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಅಂತಾ ಪೋಷಕರು ಶಿಕ್ಷಣ ಇಲಾಖೆಯ ವಿರುದ್ಧ ವಿರೋಧ ಹೊರ ಹಾಕುತ್ತಿದ್ದಂತೆ ಅಲರ್ಟ್ ಆಗಿರುವ ಶಿಕ್ಷಣ ಇಲಾಖೆ, ಬೆಂಗಳೂರಿನ ಆರ್ಕಿಡ್ ಶಾಲೆಯ ಕಳ್ಳಾಟ ಹೊರ ಹಾಕಲು ಮುಂದಾಗಿದೆ. ಪೋಷಕರ ವಂಚನೆ ಮಾಡಿರುವ ಆರ್ಕಿಡ್ ಸಂಸ್ಥೆಯ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದ್ದು ಆರ್ಕಿಡ್ ಶಾಲೆಯ ಮಾಹಿತಿ ಕಲೆ ಹಾಕಲು ಇಲಾಖೆ ಮುಂದಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಪ್ರತಿಷ್ಠಿತ ಸಂಸ್ಥೆ ಅಂತಾ ಹೇಳಿಕೊಳ್ಳುವ ಆರ್ಕಿಡ್ ಮಹಾ ಮೋಸವನ್ನೆ ಪೋಷಕರಿಗೆ ಮಾಡಿದೆ. ನಮ್ದು CBSE ಇಂಟರ್ ನ್ಯಾಷನಲ್ ಶಾಲೆ ಅಂತ ಪೋಷಕರಿಗೆ ವಂಚಿಸಿ ಲಕ್ಷ ಲಕ್ಷ ಹಣ ಪೋಷಕರಿಂದ ಸುಲಿಗೆ ಮಾಡಿರುವ ಆರ್ಕಿಡ್ ನಿಜ ಬಣ್ಣ ಬಯಲಾಗ್ತೀದ್ದಂತೆ ಸ್ಟೇಟ್ ಸಿಲೆಬಸ್ ಅಲ್ಲಿಯೇ ಮಕ್ಕಳ ಬಳಿ ಶಾಲಾ ಆಡಳಿತ ಮಂಡಳಿ ಪಬ್ಲಿಕ್ ಎಕ್ಸಾಂ ಬರೆಸಲು ಮುಂದಾಗಿದೆ. ಸದ್ಯ ಪೋಷಕರ ಆಕ್ರೋಶದ ಬಳಿಕ ನವರಂಗಿ ನಾಟಕಕ್ಕೆ ಅರ್ಕಿಡ್ ಮುಂದಾಗಿತ್ತು. ಹೀಗಾಗಿ ಶಿಕ್ಷಣ ಇಲಾಖೆಯೇ ಆರ್ಕಿಡ ಶಾಲೆಯ ಕಂಪ್ಲೀಟ್ ಮಾಹಿತಿ ಕಲೆ ಹಾಕಲು ಮುಂದಾಗಿದೆ.

ಇದನ್ನೂ ಓದಿ: ಕೊನೆಗೂ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ ಬೋರ್ಡ್​ ಬದಲಾವಣೆ: ಮತ್ತೊಂದೆಡೆ ಪೋಷಕರಿಂದ ಕಾನೂನು ಹೋರಾಟಕ್ಕೆ ಪ್ಲ್ಯಾನ್

ಬೆಂಗಳೂರಿನಲ್ಲಿ ಎಷ್ಟು ಆರ್ಕಿಡ್ ಶಾಲೆಗಳಿವೆ? ಇದರಲ್ಲಿ ಸಿಬಿಎಸ್​​ಇ ಪಠ್ಯಕ್ರಮದ ಶಾಲೆಗಳೆಷ್ಟು ? ರಾಜ್ಯ ಪಠ್ಯಕ್ರಮ ಶಾಲೆ ಎಷ್ಟು? ಎಲ್ಲೆಲ್ಲಿ ಪೊಷಕರಿಗೆ ಸಿಬಿಎಸ್ಇ ಶಾಲೆ ಅಂತಾ ಸುಳ್ಳು ಹೇಳಿವಂಚನೆ ಮಾಡಿದೆ ಅಂತಾ ಬಿಇಎ ಹಾಗೂ ಡಿಡಿಪಿಐಗಳ ಬಳಿ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಬಿಇಎ ಹಾಗೂ ಡಿಡಿಪಿಐ ನೀಡುವ ವರದಿ ಪಡೆದು ಆರ್ಕಿಡ್ ಮೇಲೆ ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

ಆರ್ಕಿಡ್ ಶಾಲೆಗಳ ವಂಚನೆ ಬಯಲಾಗುತ್ತಿದ್ದಂತೆ ಶಿಕ್ಷಣ ಇಲಾಖೆಗೆ ದೂರು ಬಂದಿದ್ದು ಬೆಂಗಳೂರಿನಲ್ಲಿ ಎಷ್ಟು ಆರ್ಕಿಡ್ ಶಾಲೆಗಳಿವೆ ಇದರಲ್ಲಿ ಸಿಬಿಎಸ್ ಇ ಪಠ್ಯಕ್ರಮದ ಶಾಲೆಗಳೆಷ್ಟು ? ರಾಜ್ಯ ಪಠ್ಯಕ್ರಮ ಶಾಲೆ ಎಷ್ಟು? ಎಲ್ಲೆಲ್ಲಿ ಪೊಷಕರಿಗೆ ಸಿಬಿಎಸ್ಇ ಶಾಲೆ ಅಂತಾ ಸುಳ್ಳು ಹೇಳಿ ವಂಚನೆ ಮಾಡಿದೆ ಅಂತಾ ಬಿಇಎ ಹಾಗೂ ಸಿಆರ್​್ಪಿಸಿ ಮೂಲಕ ಮಾಹಿತಿ ಪಡೆದು ಆಯುಕ್ತರಿಗೆ ವರದಿ ನೀಡಲಿದ್ದೇವೆ ಎಂದು ದಕ್ಷಿಣ ವಿಭಾಗದ ಡಿಡಿಪಿಐ ಬೈಯಲಾಂಜನಪ್ಪ ಹೇಳಿದ್ದಾರೆ.

ಬೆಂಗಳೂರು ಉತ್ತರದಲ್ಲಿಯೂ ಆರ್ಕಿಡ್ ಮಹಾ ಮೋಸ

ಈಗಾಗಲೇ ಬೆಂಗಳೂರು ದಕ್ಷಿಣ ವಿಭಾಗದ ಉಪನಿರ್ದೇಶಕರ ಸಲ್ಲಿಸಿರುವ ವರದಿಯಲ್ಲಿ ದಕ್ಷಿಣ ಬೆಂಗಳೂರಿನಲ್ಲಿ 11 ಆರ್ಕಿಡ್ ಶಿಕ್ಷಣ ಸಂಸ್ಥಗಳು ಕಾರ್ಯ ನರ್ವಹಿಸುತ್ತಿದ್ದು, ಇದರಲ್ಲಿ 4ಕ್ಕೆ ಮಾತ್ರ ಸಿಬಿಎಸ್​​ಇ ಮಾನ್ಯತೆ ಸಿಕ್ಕಿದೆ. ಇನ್ನು ಏಳು ಆರ್ಕಿಡ್ ಶಾಲೆಗಳು ಸ್ಟೇಸ್ ಸಿಲೆಬಸ್​ನಲ್ಲಿ ಶಾಲೆ ನಡೆಸಲಾಗುತ್ತಿರುವ ಮಾಹಿತಿ ಸಿಕ್ಕಿದೆ. ಆರ್ಕಿಡ್ ಕೂಡಾ ಶಿಕ್ಷಣ ಇಲಾಖೆಯ ಸ್ಟ್ಯಾಟ್ಸ್ ನಲ್ಲಿ ಕೂಡಾ ಈ ಮಾಹಿತಿ ಉಲ್ಲೇಖ ಮಾಡಿದೆ. ಬೆಂಗಳೂರು ಉತ್ತರದಲ್ಲಿಯೂ ಆರ್ಕಿಡ್ ಈ ಕಳ್ಳಾಟವಾಡಿದ್ದು ಈ ವರದಿಯು ಇಲಾಖೆ ಸಲ್ಲಿಕೆಯಾಗಿದೆ. ಈ ವರದಿ ಪಡೆದು ಶಿಕ್ಷಣ ಇಲಾಖೆ ಆರ್ಕಿಡ್ ಶಿಕ್ಷಣ ಸಂಸ್ಥೆಯ ಮೇಲೆ ಬ್ಲಾಕ್ ಲಿಸ್ಟ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಹೆಚ್ಚುವರಿ ಪೋಷಕರ ಶುಲ್ಕ ವಸೂಲಾತಿಗೂ ಇಲಾಖೆ ಚಿಂತಿಸುತ್ತಿದೆ.

ಆರ್ಕಿಡ್ ಶಾಲೆಯ ಮಹಾಮೋಸಕ್ಕೆ ಪೋಷಕರು ಕಂಗಾಲಾಗಿದ್ದು, ಮಕ್ಕಳ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡು ಹೈರಾಣಾಗಿದ್ದಾರೆ. ನಮಗೆ ಆದ ಅನ್ಯಾಯ ಬೇರೆ ಪೋಷಕರಿಗೆ ಆಗೋದು ಬೇಡಾ, ಹೀಗಾಗಿ ಖಾಸಗಿ ಶಾಲೆಗಳು ತಮ್ಮ ಶಾಲೆಯ ಹೊರ ಭಾಗದಲ್ಲಿಯೇ ಸಿಬಿಎಸ್ಇ ಮಾನ್ಯತೆಯಾ ಅಥವಾ ಸ್ಟೇಟ್ ಸಿಲೆಬಸ್ ಶಾಲೆ ಅಂತಾ ಬೋರ್ಡ್ ಹಾಕಬೇಕು. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಸೂಕ್ತಕ್ರಮ ವಹಿಸಬೇಕು ಅಂತಾ ಇಲಾಖೆಗೆ ಒತ್ತಾಯ ಮಾಡಿದ್ದಾರೆ.

ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ