ಕೊನೆಗೂ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ ಬೋರ್ಡ್​ ಬದಲಾವಣೆ: ಮತ್ತೊಂದೆಡೆ ಪೋಷಕರಿಂದ ಕಾನೂನು ಹೋರಾಟಕ್ಕೆ ಪ್ಲ್ಯಾನ್

ಸಿಬಿಎಸ್​ಇ ಅನುಮೋದನೆ ಪಡೆಯದಿದ್ದರೂ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಮಕ್ಕಳ ಪ್ರವೇಶಾತಿ ವೇಳೆ CBSE ಪಠ್ಯಕ್ರಮವೆಂದು ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಾರೆ. ಈಗ ಸ್ಟೇಟ್ ಸಿಲಬಸ್​​ನಲ್ಲೇ ಪರೀಕ್ಷೆ ಬರೆಸಲು ಶಾಲೆ ಮುಂದಾಗಿದೆ.

ಕೊನೆಗೂ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ ಬೋರ್ಡ್​ ಬದಲಾವಣೆ: ಮತ್ತೊಂದೆಡೆ ಪೋಷಕರಿಂದ ಕಾನೂನು ಹೋರಾಟಕ್ಕೆ ಪ್ಲ್ಯಾನ್
ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ ಬೋರ್ಡ್​ ಬದಲಾವಣೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 30, 2023 | 5:16 PM

ಬೆಂಗಳೂರು: ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸು ಕಂಡು ಶಾಲೆಗೆ ಸೇರಿಸಿದ್ದ ಪೋಷಕರು ರಸ್ತೆಯಲ್ಲಿ ನಿಂತು ನ್ಯಾಯಕ್ಕಾಗಿ ಆಗ್ರಹ ಮಾಡಿದ್ದರು. CBSE ಮಾನ್ಯತೆ ಪಡೆದ ಶಾಲೆ ಅಂತಾ ಹೇಳಿ ಪೋಷಕರಿಂದ ಲಕ್ಷಾಂತರ ರೂ. ಹಣ ಕಟ್ಟಿಸಿಕೊಂಡಿದ್ದ ನಾಗರಬಾವಿ ಬ್ರ್ಯಾಂಚ್​ನ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆ (Orchid International School) ಮಕ್ಕಳ ಭವಿಷ್ಯಕ್ಕೆ ತಣ್ಣೀರು ಎರಚಿತ್ತು. ಸದ್ಯ ಪೋಷಕರು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಇದರ ಮಧ್ಯೆ ಆರ್ಕಿಡ್ ಇಂಟರ್​ನ್ಯಾಷನಲ್ ತಮ್ಮ ಬೋರ್ಡ್​ ಬದಲಾವಣೆ ಮಾಡಿದೆ. CBSE ಮಾನ್ಯತೆ ಪಡೆದ ಶಾಲೆ ಅಂತಾ ಇದ್ದ ಬೋರ್ಡ್​ನ್ನು ಕೊನೆಗೂ ಕೆಳಗಿಸಿದ ಶಾಲಾ ಆಡಳಿತ ಮಂಡಳಿ, 1-8ನೇ ತರಗತಿಗೆ ಕರ್ನಾಟಕದಿಂದ ಮಾನ್ಯತೆ ಪಡೆದ ಶಾಲೆ​ ಅಂತಾ ನಾಮಫಲಕ ಅಳವಡಿಕೆ ಮಾಡಿದೆ. ಮತ್ತೊಂದೆಡೆ ಶಾಲಾ ಮಕ್ಕಳ ಪೋಷಕರಿಂದ ಕಾನೂನು ಹೋರಾಟಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ.

ಮಹಾಲಕ್ಷ್ಮೀಲೇಔಟ್​ನ ಆರ್ಕಿಡ್ ಇಂಟರ್​ ನ್ಯಾಷನಲ್ ಶಾಲೆ ಮುಂದೆ ಮತ್ತೆ ಪೋಷಕರು ಜಮಾಯಿಸಿದ್ದು, ಶಾಲಾ ಆಡಳಿತ ಮಂಡಳಿ ಸಂಜೆ ಪೋಷಕರ ಸಭೆ ಕರೆದಿದೆ. ಆದರೆ ಸಭೆಗೆ ಆಹ್ವಾನಿಸಿದ ಆಡಳಿತ ಮಂಡಳಿ ಗೇಟ್ ಹೊರಗಡೆ ನಿಲ್ಲಿಸಿದ್ದು, ಮಂಡಳಿ ವರ್ತನೆಗೆ ಪೋಷಕರು ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ಸಿಬಿಎಸ್​ಸಿ ಸಿಲೆಬಸ್ ಪಾಠ ಮಾಡಿ, ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ: ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ

ಟ್ ಸಿಲಬಸ್​​ನಲ್ಲೇ ಪರೀಕ್ಷೆ ಬರೆಸಲು ಮುಂದಾದ ಶಾಲೆ

ಸಿಬಿಎಸ್​ಇ ಅನುಮೋದನೆ ಪಡೆಯದಿದ್ದರೂ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಮಕ್ಕಳ ಪ್ರವೇಶಾತಿ ವೇಳೆ CBSE ಪಠ್ಯಕ್ರಮವೆಂದು ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಾರೆ. ಈಗ ಸ್ಟೇಟ್ ಸಿಲಬಸ್​​ನಲ್ಲೇ ಪರೀಕ್ಷೆ ಬರೆಸಲು ಶಾಲೆ ಮುಂದಾಗಿದೆ. ಸ್ಟೇಟ್ ಸಿಲಬಸ್​ನಲ್ಲೇ ಪರೀಕ್ಷೆ ಬರೆಯುವಂತಿದ್ದರೆ ಯಾಕೆ ಫೀಸ್​ ಕಟ್ಬೇಕು. ನಾವ್ಯಾಕೆ ಲಕ್ಷ ಲಕ್ಷ ಫೀಸ್​ ಕಟ್ಟಬೇಕೆಂದು ಶಾಲೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ದಿನದಿಂದ ದಿನಕ್ಕೆ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆ​ಯ ಕಳ್ಳಾಟ ಬಯಲಾಗುತ್ತಿದೆ. ಬೆಂಗಳೂರಿನ 17 ಆರ್ಕಿಡ್ ಶಾಲೆಗಳಿಗೆ ಸಿಬಿಎಸ್​ಇ ಮಾನ್ಯತೆ ಇಲ್ಲ.

ಇದನ್ನೂ ಓದಿ: Orchid International School: ಬೆಂಗಳೂರಿನಲ್ಲಿ 17 ಆರ್ಕಿಡ್ ಶಾಲೆಗಳಿಗೆ CBSE ಮಾನ್ಯತೆ ಇಲ್ಲ, ಶಾಲೆಗಳ ಪಟ್ಟಿ ಬಹಿರಂಗ, ಪೋಷಕರ ಆಕ್ರೋಶ ಸ್ಫೋಟ

ಕೆರಳಿದ ಪೋಷಕರು ಶಾಲೆ ಮುಂದೆ ಪ್ರತಿಭಟನೆ

ಮಕ್ಕಳಿಗೆ ಎಲ್‌ಕೆಜಿಯಿಂದ 12th ಸ್ಟ್ಯಾಂಡರ್ಡ್‌ವರೆಗೂ ಬೆಸ್ಟ್ ಎಜುಕೇಷನ್ ಕೊಡ್ತೀವಿ ಅಂತಾ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿರೋ ಆರ್ಕಿಡ್ ಇಂಟರ್‌ ನ್ಯಾಷನಲ್ ಶಾಲೆ ಸುಳ್ಳು ಹೇಳಿದೆ. ಆದ್ರೆ ಸರ್ಕಾರ ಐದು ಮತ್ತು 8ನೇ ತರಗತಿಗೆ ಪಬ್ಲಿಕ್ ಎಕ್ಸಾಂ ಮಾಡ್ತೀವಿ ಅಂತಿದ್ದಂಗೆ ಈ ಶಾಲೆಯ ಬಣ್ಣ ಬಯಲಾಗಿದೆ. ಈ ಶಾಲೆಯಲ್ಲಿರೋದು ಸಿಬಿಎಸ್‌ಇ ಅಲ್ಲ. ಸ್ಟೇಟ್ ಸಿಲೆಬಸ್ ಅಂತಾ ಅನ್ನೋದು ಜಗಜ್ಜಾಹೀರಾಗಿದೆ. ಇದರಿಂದ ಕೆರಳಿದ ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ರು. ಆದ್ರಿಗ ಈ ಒಂದು ಶಾಲೆಯಲ್ಲ. ಇದೀಗ 17 ಶಾಲೆಗಳ ನಿಜ ಬಣ್ಣ ಪೋಷಕರ ನಿದ್ದೆಗೆಡಿಸಿದೆ.

ಕಳ್ಳಾಟದ ಬಳಿಕ ಪೋಷಕರಿಂದ ರಿಕ್ವೇಸ್ಟ್ ಪತ್ರ

ಶಾಲೆಯ ಕಳ್ಳಾಟದ ಬಳಿಕ ಈಗ ಪೋಷಕರ ಬಳಿ ರಿಕ್ವೇಸ್ಟ್ ಮಾಡಿ ಪತ್ರದಲ್ಲಿ ಸಹಿ ಪಡೆಯುತ್ತಿದ್ದಾರೆ. ಸಿಬಿಎಸ್​ಸಿ ಶಾಲೆ ಅಂತಾ ಬೇರೆ ಬೇರೆ ರಾಜ್ಯದಿಂದ ಬಂದಿರುವ ಪೋಷಕರ ಮಕ್ಕಳ ದಾಖಲಾತಿ ಮಾಡಿದ್ದಾರೆ. ಆದ್ರೆ ಈಗ ರಾಜ್ಯ ಪಠ್ಯಕ್ರಮ ಅಂದ್ರೆ ನಮ್ಮ ಮಕ್ಕಳ ಭವಿಷ್ಯ ಏನು ಅಂತಾ ಗಲಾಟೆ ಮಾಡುತ್ತಿದ್ದಾರೆ. ಸಿಬಿಎಸ್​ಸಿಗೂ ರಾಜ್ಯ ಪಠ್ಯಕ್ರಮದ ಶಿಕ್ಷಣಕ್ಕೂ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾ ಹೇಳುತ್ತಿದ್ದಾರೆ. ಈ ಶಾಲಾ ಆಡಳಿತ ಮಂಡಳಿ ವಂಚನೆ ಮಾಡುವ ಮೂಲಕ ಪೋಷಕರನ್ನ ಪೂಲ್ ಮಾಡಿದೆ. ನಮ್ಗೆ ದುಡ್ಡು ಮುಖ್ಯ ಇಲ್ಲ. ಮಕ್ಕಳ ಭವಿಷ್ಯದ ಗತಿ ಏನು? ಇಷ್ಟು ವರ್ಷದಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗಿದೆ ಇದನ್ನ ಯಾರೂ ಕೊಡ್ತಾರೆ ಎಂದು ಪೋಷಕರು ತಮ್ಮ ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ