AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WISE Emerging Leaders 2023: ಇಟಲಿ, ಕತಾರ್​ನಲ್ಲಿ ಉಚಿತ ಫೆಲೋಶಿಪ್ ಕೋರ್ಸ್ ; ಇಲ್ಲಿದೆ ಸಂಪೂರ್ಣ ಮಾಹಿತಿ

ವೈಸ್ ಎಂಬ ಕತಾರ್ ಫೌಂಡೇಶನ್ ಇದೀಗ ಒಂಬತ್ತು ತಿಂಗಳ ಎಮರ್ಜಿಂಗ್ ಲೀಡರ್ಸ್ ಎಂಬ ಫೆಲೋಶಿಪ್ ಕೋರ್ಸ್ ಅನ್ನು ಹಮ್ಮಿಕೊಂಡಿದೆ. ಇದಕ್ಕೆ ಸಂಪೂರ್ಣ ಹಣವನ್ನು ವೈಸ್ ಫೌಂಡೇಶನ್ ನೀಡುತ್ತದೆ. ಈ ಕೋರ್ಸ್ ಕತಾರ್ ಮತ್ತು ಇಟಲಿ, ಈ 2 ಸುಂದರ ಸ್ಥಳಗಳಿಗೆ ಪ್ರಯಾಣಿಸಲು ನಿಮಗೆ ಅವಕಾಶ ನೀಡುತ್ತದೆ. ಈ ಫೆಲೋಶಿಪ್ ಹೈಬ್ರಿಡ್ ಮೋಡ್ ಆಗಿರುತ್ತದೆ.

WISE Emerging Leaders 2023: ಇಟಲಿ, ಕತಾರ್​ನಲ್ಲಿ ಉಚಿತ ಫೆಲೋಶಿಪ್ ಕೋರ್ಸ್ ; ಇಲ್ಲಿದೆ ಸಂಪೂರ್ಣ ಮಾಹಿತಿ
ವೈಸ್ ಎಮರ್ಜಿಂಗ್ ಲೀಡರ್ಸ್ ಫೆಲೋಶಿಪ್ Image Credit source: WISE Foundation
ನಯನಾ ಎಸ್​ಪಿ
ನಯನಾ ಎಸ್​ಪಿ|

Updated on: Feb 19, 2023 | 6:44 PM

Share

ನಿಮಗೆ ಬೇರೆ ಬೇರೆ ದೇಶಗಳನ್ನು ಸುತ್ತುತ್ತ ಸುಂದರ ಸ್ಥಳಗಳನ್ನು ನೋಡಲು ಆಸಕ್ತಿ ಇದ್ದರೆ ನಿಮಗಿದೊಂದು ಅದ್ಬುತ ಅವಕಾಶ. ಈಗ ನೀವು ವಿದೇಶಕ್ಕೆ ಪ್ರಯಾಣಿಸಲೂಬಹುದು, ಏಕಕಾಲದಲ್ಲಿ ಜ್ಞಾನದ ಜೊತೆ  ಸಂಭಾವನೆಯನ್ನೂ ಪಡೆಯುವಬಹುದು. ನಿಮ್ಮ ಮುಂದಿನ ಒಂಬತ್ತು ತಿಂಗಳುಗಳನ್ನು ಕತಾರ್ (Qatar) ಮತ್ತು ಇಟಲಿಯಲ್ಲಿ (Italy) ಕಳೆಯುವುದರ ಜೊತೆಗೆ ಸಂಭಾವನೆ ಪಡೆಯುವ ಮಾರ್ಗ ಇಲ್ಲಿದೆ. ವೈಸ್ (WISE) ಎಂಬ ಕತಾರ್ ಫೌಂಡೇಶನ್ ಇದೀಗ ಒಂಬತ್ತು ತಿಂಗಳ ಎಮರ್ಜಿಂಗ್ ಲೀಡರ್ಸ್ ಎಂಬ ಫೆಲೋಶಿಪ್ ಕೋರ್ಸ್ ಅನ್ನು ಹಮ್ಮಿಕೊಂಡಿದೆ. ಇದಕ್ಕೆ ಸಂಪೂರ್ಣ ಹಣವನ್ನು ವೈಸ್ ಫೌಂಡೇಶನ್ ನೀಡುತ್ತದೆ. ಈ ಕೋರ್ಸ್ ಕತಾರ್ ಮತ್ತು ಇಟಲಿ, ಈ 2 ಸುಂದರ ಸ್ಥಳಗಳಿಗೆ ಪ್ರಯಾಣಿಸಲು ನಿಮಗೆ ಅವಕಾಶ ನೀಡುತ್ತದೆ. ಈ ಫೆಲೋಶಿಪ್ ಹೈಬ್ರಿಡ್ ಮೋಡ್ ಆಗಿರುತ್ತದೆ.

ವೈಸ್ ಎಮರ್ಜಿಂಗ್ ಲೀಡರ್ಸ್ ಫೆಲೋಶಿಪ್ (WISE Emerging Leaders Fellowship) ಮುಂದಿನ ಪೀಳಿಗೆಯ ನಾಯಕರಿಗಾಗಿ ಮೀಸಲಾಗಿದೆ. ಇದು ಒಂಬತ್ತು ತಿಂಗಳ ಫೆಲೋಶಿಪ್ ಕಾರ್ಯಕ್ರಮವಾಗಿದ್ದು, ಸಮಾಜವನ್ನು ಅಭಿವೃದ್ಧಿಪಡಿಸಲು, ಬೆಳೆಸಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಲು ಅಗತ್ಯವಾದ ಕೌಶಲ್ಯಗಳು ಮತ್ತು ತಂತ್ರಗಳನ್ನು ಅಭ್ಯರ್ಥಿಗಳಿಗೆ ಕಲಿಸಲು ಪ್ರಯತ್ನಿಸುತ್ತದೆ. ವೈಸ್ ಎಮರ್ಜಿಂಗ್ ಲೀಡರ್ಸ್ ಫೆಲೋಶಿಪ್ ಕೋರ್ಸ್ ಇದೀಗ ಸತತ ಐದನೇ ವರ್ಷಕ್ಕೆ ಕಾಲಿಡುತ್ತಿದೆ.

ವೈಸ್ ಎಮರ್ಜಿಂಗ್ ಲೀಡರ್ಸ್ ಫೆಲೋಶಿಪ್ ಏನೆಲ್ಲಾ ವ್ಯವಸ್ಥೆಗಳನ್ನು ನೀಡುತ್ತದೆ

  • ಉಚಿತ ವಸತಿ
  • ಪ್ರಯಾಣ ಮತ್ತು ಊಟದ ವೆಚ್ಚವನ್ನು ಭರಿಸಲಾಗುವುದು.
  • ದೇಶದೊಳಗೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು.
  • ಉತ್ತಮ ಕಲಿಕೆ ಮತ್ತು ಹಲವಾರು ಕಾರ್ಯಾಗಾರಗಳು ನಡೆಸುತ್ತದೆ
  • ಕತಾರ್ ಮತ್ತು ಇಟಲಿಗೆ ಪ್ರಯಾಣಿಸಲು ಅವಕಾಶ ಸಿಗುತ್ತದೆ

ಅರ್ಹತಾ ಮಾನದಂಡಗಳು:

  • 25 ಮತ್ತು 33 ವರ್ಷದೊಳಗಿನ ಅಭ್ಯರ್ಥಿಗಳು.
  • ಇಂಗ್ಲಿಷ್ ನಲ್ಲಿ ಪ್ರವೀಣರಾಗಿರಬೇಕು.
  • ಮಾನ್ಯವಾದ ಪಾಸ್‌ಪೋರ್ಟ್ ಹೊಂದಿರಿ.
  • ಬಲವಾದ ಶೈಕ್ಷಣಿಕ ಹಿನ್ನೆಲೆ, ಬೆಳವಣಿಗೆಯ ಮನಸ್ಥಿತಿ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಹೊಂದಿರಬೇಕು.

ನಿಮ್ಮ ನಾಯಕತ್ವದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಜ್ಞಾನದ ಜೊತೆಗೆ ಸಂಭಾವನೆ ಕೂಡ ನಿಮಗೆ ಸಿಗುತ್ತದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ.

ಇದನ್ನೂ ಓದಿ: ಬೆಂಗಳೂರು ಡಿಸಿ ಆಫೀಸ್​ನಲ್ಲಿ ಲೋಡರ್, ಕ್ಲೀನರ್ ಹುದ್ದೆಗಳು ಖಾಲಿ; 17,000-28,950 ರೂ. ತಿಂಗಳ ವೇತನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 1, 2023. ಈ ಕೂಡಲೇ ಅರ್ಜಿಯನ್ನು ಅರ್ಜಿ ಸಲ್ಲಿಸಿ. ಕೆಳಗೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೀವು ವೈಸ್ ಫೌಂಡೇಶನ್​ನ ವೆಬ್​ಸೈಟ್​ನ ಹೋಂ ಪೇಜ್​ಗೆ ಹೋಗುತ್ತೀರಿ. ಅಲ್ಲಿ ನೋಮಿನೇಟ್ ಕ್ಯಾಂಡಿಡೇಟ್ ಆಯ್ಕೆಯನ್ನು ಒತ್ತಿ, ಲಾಗಿನ್ ಮಾಡಿ. ನಂತರ ಅರ್ಜಿಯನ್ನು ಭರ್ತಿ ಮಾಡಿ. ನಿಮ್ಮ ಉತ್ತರ ಅವರಿಗೆ ಇಷ್ಟವಾಗಿ, ನಿಮ್ಮಿಂದ ಅವರು ಪ್ರಭಾವಿತಯರಾಗಿ, ನಿಮ್ಮಲ್ಲಿರುವ ನಾಯಕತ್ವದ ಗುಣವನ್ನು ಗಮನಿಸಿದರೆ ನಿಮಗೆ ಇಮೇಲ್ ಕಲಿಸುವ ಮೂಲಕ ನಿಮ್ಮನ್ನ ಸಂಪರ್ಕಿಸುತ್ತಾರೆ.

ಸಂಪೂರ್ಣ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್ ಅನ್ನು ಪರಿಶೀಲಿಸಿ: wise-qatar.org/wise-works/wise-emerging-leaders/

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ಎಸ್​ಪಿ
ನಯನಾ ಎಸ್​ಪಿ

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ