UGC NET Admit Card: ಯುಜಿಸಿ NET ಫೇಸ್ 3 ಪ್ರವೇಶ ಪತ್ರ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ

|

Updated on: Mar 02, 2023 | 11:58 AM

ಯಾವುದೇ ಅಭ್ಯರ್ಥಿಯು UGC NET ಡಿಸೆಂಬರ್ 2022- ಹಂತ III ಪರೀಕ್ಷೆಯ ಸಿಟಿ ಇಂಟಿಮೇಷನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಲು/ಪರಿಶೀಲಿಸುವಲ್ಲಿ ತೊಂದರೆಯನ್ನು ಎದುರಿಸಿದರೆ, 011-40759000 ಅನ್ನು ಸಂಪರ್ಕಿಸಬಹುದು ಅಥವಾ ugcnet@nta.ac.in ಗೆ ಇ-ಮೇಲ್ ಮಾಡಬಹುದು

UGC NET Admit Card: ಯುಜಿಸಿ NET ಫೇಸ್ 3 ಪ್ರವೇಶ ಪತ್ರ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ
UGC NET Admit Card 2023
Follow us on

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) 2022 ಯುಜಿಸಿ NET (ರಾಷ್ಟ್ರೀಯ ಪ್ರವೇಶ ಪರೀಕ್ಷೆ) ಹಂತ 3ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಫೇಸ್ 3 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯುಜಿಸಿ ನೆಟ್​ನ ಅಧಿಕೃತ ಸೈಟ್ ugcnet.nta.nic.in ನಲ್ಲಿ ಅಡ್ಮಿಟ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಯುಜಿಸಿ ನೆಟ್ ಡಿಸೆಂಬರ್ 2022, ಹಂತ-III ಅನ್ನು 03 ಮತ್ತು 06 ಮಾರ್ಚ್ ನಡುವೆ ನಡೆಸಲಾಗುತ್ತದೆ. ಒಟ್ಟು 8 ವಿಷಗಳ ಪರೀಕ್ಷೆಯನ್ನು ಯುಜಿಸಿ ನೆಟ್ ಹೊಂದಿದೆ.ಯುಜಿಸಿ ನೆಟ್ ಹಂತ 3 ಪ್ರವೇಶ ಪಾತ್ರದ ಲಿಂಕ್ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ (ugcnet.nta.nic.in) ಒದಗಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಯುಜಿಸಿ ನೆಟ್ ಪ್ರವೇಶ ಪಾತ್ರವನ್ನು ಡೌನ್‌ಲೋಡ್ ಮಾಡಬಹುದು.

UGC NET ಹಂತ 3 ಪ್ರವೇಶ ಕಾರ್ಡ್ ಡೌನ್‌ಲೋಡ್ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ

2023 UGC NET ಪರೀಕ್ಷಾ ದಿನಾಂಕ

ಒಟ್ಟು 8 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಪರೀಕ್ಷೆಯ ವೇಳಾಪಟ್ಟಿಯನ್ನು ಇಲ್ಲಿ ಪರಿಶೀಲಿಸಿ:

Subject Code Subject Shift
80 Geography 03 March 2023 in Shift- I & II
63 Mass Communication and Journalism 03 March 2023 in Shift- I
8 Commerce 04 March 2023 in Shift- I & II
20 Hindi 05 March 2023 in Shift- I & II
21 Kannada 05 March 2023 in Shift- I & II
26 Tamil 05 March 2023 in Shift- I & II
38 Marathi 05 March 2023 in Shift- I & II
2 Political Science 06 March 2023 in Shift- I & II

ಪರೀಕ್ಷಾ ಕೇಂದ್ರವನ್ನು ತಲುಪುವ ಮೊದಲು ಅಭ್ಯರ್ಥಿಗಳು ತಮ್ಮ ಭಾವಚಿತ್ರ ಮತ್ತು ಎಡಗೈ ಹೆಬ್ಬೆರಳಿನ ಗುರುತನ್ನು ಘೋಷಣೆ/ಅಂಡರ್‌ಟೇಕಿಂಗ್‌ನ ಬುಡದಲ್ಲಿ ಲಗತ್ತಿಸಬೇಕು, ಜೊತೆಗೆ ತಮ್ಮ ಪೋಷಕರ ಸಹಿಯನ್ನು ಪಡೆಯಬೇಕು.

2023 UGC NET ಹಂತ 3 ಪ್ರವೇಶ ಪಾತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್​ನಲ್ಲಿ UGC NET ಹಂತ 3 ರ ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಲು ಹಂತಗಳನ್ನು ಪರಿಶೀಲಿಸಬಹುದು:

  1. ಹಂತ 1: UGC NET ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ – ugcnet.nta.nic.in
  2. ಹಂತ 2: ‘UGC NET ಡಿಸೆಂಬರ್ 2022-ಹಂತ-III ರ ಅಡಿನೈಟ್ ಕಾರ್ಡ್ ಬಿಡುಗಡೆ’ ಮೇಲೆ ಕ್ಲಿಕ್ ಮಾಡಿ
  3. ಹಂತ 3: ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ
  4. ಹಂತ 4: NTA UGC NET ಡಿಸೆಂಬರ್ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ
  5. ಹಂತ 5: ಪ್ರವೇಶ ಪತ್ರದ ಪ್ರಿಂಟ್ ಔಟ್ ತೆಗೆದುಕೊಳ್ಳಿ

ಯಾವುದೇ ಅಭ್ಯರ್ಥಿಯು UGC NET ಡಿಸೆಂಬರ್ 2022- ಹಂತ III ಪರೀಕ್ಷೆಯ ಸಿಟಿ ಇಂಟಿಮೇಷನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಲು/ಪರಿಶೀಲಿಸುವಲ್ಲಿ ತೊಂದರೆಯನ್ನು ಎದುರಿಸಿದರೆ, 011-40759000 ಅನ್ನು ಸಂಪರ್ಕಿಸಬಹುದು ಅಥವಾ ugcnet@nta.ac.in ಗೆ ಇ-ಮೇಲ್ ಮಾಡಬಹುದು