ಪಿಯುಸಿ ವಿದ್ಯಾರ್ಥಿಗಳಿಗೆ ಗೂಡ್ ನ್ಯೂಸ್ : ಸಿಇಟಿ, ನೀಟ್, ಐಐಟಿ ಪರೀಕ್ಷೆ ಸಿದ್ಧತೆಗೆ Dr.CNA Learning App ಬಿಡುಗಡೆ
ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ಫೌಂಡೇಷನ್ ವತಿಯಿಂದ, Scholar's Wing ಸಹಯೋಗದಲ್ಲಿ Dr CNA Learning APP ಲೋಕಾರ್ಪಣೆ ಮಾಡಲಾಯಿತು. CET, NEET, IIT-JEE ಮತ್ತಿತರ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಲು ನೆರವಾಗಲಿದೆ.
ಡಾ.ಸಿಎನ್‌ಎ ಲರ್ನಿಂಗ್ ಅಪ್ಲಿಕೇಶನ್’ (Dr.CNA Learning App) ಬಿಡುಗಡೆಯಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ (Dr CN Ashwath narayan)ಆ್ಯಪ್ನ್ನು ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್ ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಲ್ಲೇಶ್ವರ ವ್ಯಾಪ್ತಿಯಲ್ಲಿ 17 ಸರ್ಕಾರಿ ಮತ್ತು ಖಾಸಗಿ ಪಿಯುಸಿ ವಿಜ್ಞಾನ ಕಾಲೇಜುಗಳು ಇದ್ದು ಅಲ್ಲಿನ ಎಲ್ಲ ವಿದ್ಯಾರ್ಥಿಗಳು ಈ ಆ್ಯಪ್ ಮೂಲಕ ಕಲಿಯಬಹುದಾಗಿದೆ.
ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅಶ್ವತ್ಥನಾರಾಯಣ, ‘ 24×7 ಲಭ್ಯವಿರುವ 2ಡಿ ಮತ್ತು 3ಡಿ ಅನಿಮೇಟೆಡ್ ವಿಡಿಯೋ ರೂಪದ ಉಪನ್ಯಾಸಗಳಿವೆ. ಇದರ ಜತೆಗೆ 30 ಸಾವಿರಕ್ಕೂ ಹೆಚ್ಚು ಬಹುಆಯ್ಕೆಯ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿ ಕೊಡಲಾಗಿದೆ. ಈ ಆ್ಯಪ್ ಬಳಸಿಕೊಂಡು ವಿದ್ಯಾರ್ಥಿಗಳು ಸುಲಭವಾಗಿ ಪಿಯುಸಿ ಪರೀಕ್ಷೆ, ಸಿಇಟಿ, ನೀಟ್, ಐಐಟಿ ಪರೀಕ್ಷೆಗಳಿಗೆ ಸಿದ್ಧವಾಗಬಹುದು. ಜತೆಗೆ ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಕ್ರಾಶ್ ಕೋರ್ಸುಗಳೂ ಇವೆ. ಮಲ್ಲೇಶ್ವರ ಕ್ಷೇತ್ರದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ, ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ಫೌಂಡೇಷನ್ ವತಿಯಿಂದ, Scholar’s Wing ಸಹಯೋಗದಲ್ಲಿ Dr CNA Learning APP ಲೋಕಾರ್ಪಣೆ ಮಾಡಲಾಯಿತು.
CET, NEET, IIT-JEE ಮತ್ತಿತರ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಲು ನೆರವಾಗಲಿದೆ.
Download Android APP:https://t.co/XnCNuYJFaU
1/2 pic.twitter.com/cmDwfX8O7i
— Dr. Ashwathnarayan C. N. (@drashwathcn) March 2, 2023
ಇನ್ನು ಈ ಆ್ಯಪ್ ಹೇಗೆ ಡೌನ್ ಮಾಡಿಕೊಳ್ಳಬೇಕೆಂದು ಆಯಾ ಕಾಲೇಜುಗಳಲ್ಲಿನ ಉಪನ್ಯಾಸಕರ ಸಹಾಯದಿಂದ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.