ಛತ್ತೀಸ್​ಗಢ: ಸರ್ಕಾರ ರಚನೆಯಾದ್ರೆ ಸಿಎಂ ಸ್ಥಾನ ಖಚಿತ ಎಂದು ಅಮಿತ್​ ಶಾ ಭರವಸೆ ನೀಡಿದ್ದ ಅಭ್ಯರ್ಥಿ ಭವಿಷ್ಯ ಇಂದು ನಿರ್ಧಾರ

|

Updated on: Dec 03, 2023 | 7:55 AM

ಛತ್ತೀಸ್​ಗಢದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಒಪಿ ಚೌಧರಿಯವರಿಗೆ ಮುಖ್ಯಮಂತ್ರಿ ಸ್ಥಾನ ಖಚಿತ ಎನ್ನುವ ಅಮಿತ್​ ಶಾ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಒಪಿ ಚೌಧರಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇಂದು ಛತ್ತೀಸ್​ಗಢ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬರಲಿದೆ. ಐದು ರಾಜ್ಯಗಳಲ್ಲಿ ನವೆಂಬರ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಮತದಾನ ನಡೆದಿದ್ದು, ಇಂದು ಮತ ಎಣಿಕೆ ನಡೆಯಲಿದೆ. ಗೃಹ ಸಚಿವ ಅಮಿತ್ ಶಾ ಕೂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಇವರಲ್ಲಿ ಛತ್ತೀಸ್‌ಗಢದ ಬಿಜೆಪಿ ಅಭ್ಯರ್ಥಿ ಒಪಿ ಚೌಧರಿ ಅವರು ರಾಜ್ಯದ ವಿಐಪಿ ರಾಯಗಢದಿಂದ ಸ್ಪರ್ಧಿಸಿದ್ದಾರೆ.

ಛತ್ತೀಸ್​ಗಢ: ಸರ್ಕಾರ ರಚನೆಯಾದ್ರೆ ಸಿಎಂ ಸ್ಥಾನ ಖಚಿತ ಎಂದು ಅಮಿತ್​ ಶಾ ಭರವಸೆ ನೀಡಿದ್ದ ಅಭ್ಯರ್ಥಿ ಭವಿಷ್ಯ ಇಂದು ನಿರ್ಧಾರ
ಒಪಿ ಚೌಧರಿ
Follow us on

ಛತ್ತೀಸ್​ಗಢ(Chhattisgarh)ದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಒಪಿ ಚೌಧರಿ(OP Chaudhary)ಯವರಿಗೆ ಮುಖ್ಯಮಂತ್ರಿ ಸ್ಥಾನ ಖಚಿತ ಎನ್ನುವ ಅಮಿತ್​ ಶಾ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಒಪಿ ಚೌಧರಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇಂದು ಛತ್ತೀಸ್​ಗಢ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬರಲಿದೆ. ಐದು ರಾಜ್ಯಗಳಲ್ಲಿ ನವೆಂಬರ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಮತದಾನ ನಡೆದಿದ್ದು, ಇಂದು ಮತ ಎಣಿಕೆ ನಡೆಯಲಿದೆ. ಗೃಹ ಸಚಿವ ಅಮಿತ್ ಶಾ ಕೂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಇವರಲ್ಲಿ ಛತ್ತೀಸ್‌ಗಢದ ಬಿಜೆಪಿ ಅಭ್ಯರ್ಥಿ ಒಪಿ ಚೌಧರಿ ಅವರು ರಾಜ್ಯದ ವಿಐಪಿ ರಾಯಗಢದಿಂದ ಸ್ಪರ್ಧಿಸಿದ್ದಾರೆ.

ಒಪಿ ಚೌಧರಿ ಪರ ಮತ ಯಾಚಿಸುವ ವೇಳೆ ಅಮಿತ್ ಶಾ ಅವರು ಚೌಧರಿ ಅವರನ್ನು ಗೆಲ್ಲಿಸಿಕೊಡಿ, ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇನೆ ಎಂದು ಅಮಿತ್ ಶಾ ಹೇಳಿದ್ದರು.

ಮತ್ತಷ್ಟು ಓದಿ: ಇಂದು 4 ರಾಜ್ಯಗಳ ಚುನಾವಣಾ ಫಲಿತಾಂಶ, ಎಲ್ಲೆಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ, ಮ್ಯಾಜಿಕ್ ನಂಬರ್ ಏನು?

ಖಾರ್ಸಿಯಾ ಕ್ಷೇತ್ರದಿಂದ ರಾಯಗಢದಿಂದ ಕಣಕ್ಕಿಳಿಸುವ ಬಿಜೆಪಿ ನಿರ್ಧಾರ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಇಂದು ತಿಳಿಯಲಿದೆ.
ಇಲ್ಲಿ ಕಾಂಗ್ರೆಸ್‌ನ ಪ್ರಕಾಶ್ ನಾಯಕ್ ವಿರುದ್ಧ ಒಪಿ ಚೌಧರಿ ಸ್ಪರ್ಧಿಸಿದ್ದಾರೆ. ಪ್ರಕಾಶ್ ನಾಯಕ್ ಹಾಲಿ ಶಾಸಕರಾಗಿದ್ದು, ಮತ್ತೊಮ್ಮೆ ಶಾಸಕರಾಗಿ ಗೆಲ್ಲುವ ಅವಕಾಶವಿದೆ.

2018 ರ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ, OP ಚೌಧರಿ ಅವರು ಖಾರ್ಸಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ದಿವಂಗತ ಕಾಂಗ್ರೆಸ್ ನಾಯಕ ನಂದಕುಮಾರ್ ಪಟೇಲ್ ಅವರ ಪುತ್ರ ಉಮೇಶ್ ಪಟೇಲ್ ಅವರ ಎದುರೇ ಕ್ಷೇತ್ರದಲ್ಲಿದ್ದರು. ಈ ಚುನಾವಣೆಯಲ್ಲಿ ಒಪಿ ಚೌಧರಿ ಸೋಲನ್ನು ಎದುರಿಸಬೇಕಾಯಿತು. ಒಪಿ ಚೌಧರಿ 77,234 ಮತಗಳನ್ನು ಪಡೆದರೆ, ಉಮೇಶ್ ಪಟೇಲ್ 94,201 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಒಪಿ ಚೌಧರಿ 16,967 ಮತಗಳಿಂದ ಪರಾಭವಗೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ