ಬಡವರ ಸರ್ಕಾರ ಬರಲಿದೆ, ಅದಾನಿಯದ್ದಲ್ಲ: ಛತ್ತೀಸ್‌ಗಢದಲ್ಲಿ ರಾಹುಲ್ ಗಾಂಧಿ

|

Updated on: Sep 02, 2023 | 7:21 PM

ಪಿಎಂ ಮೋದಿ ಅವರು ಅದಾನಿ ಗ್ರೂಪ್ ಬಗ್ಗೆ ತನಿಖೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ವಿಚಾರಣೆಯ ನಂತರ ನಷ್ಟವು ಅದಾನಿಗೆ ಮಾತ್ರ ಅಲ್ಲ, ಅದು ಬೇರೆಯರ ಮೇಲೂ ಪರಿಣಾಮ ಬೀರುತ್ತದೆ. ಪ್ರತಿ ಚುನಾವಣೆಗೂ ಮುನ್ನ ಬಿಜೆಪಿ ಹಲವಾರು ಅಂಕಿ-ಅಂಶಗಳನ್ನು ನೀಡುತ್ತದೆ, ಅವರು 230-250 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಆದರೆ ಕರ್ನಾಟಕದ ಪ್ರತಿಯೊಬ್ಬ ಬಡವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದ ರಾಹುಲ್ ಗಾಂಧಿ

ಬಡವರ ಸರ್ಕಾರ ಬರಲಿದೆ, ಅದಾನಿಯದ್ದಲ್ಲ: ಛತ್ತೀಸ್‌ಗಢದಲ್ಲಿ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ರಾಯ್ಪುರ್ ಸೆಪ್ಟೆಂಬರ್ 02:  ಚುನಾವಣೆಗೆ ಸಿದ್ಧವಾಗಿರುವ ಛತ್ತೀಸ್‌ಗಢದಲ್ಲಿ (Chhattisgarh) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದಲ್ಲಿ ‘ಎರಡು ಅಥವಾ ಮೂರು ಬಿಲಿಯನೇರ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅದಾನಿ ಕುಟುಂಬವು ತನ್ನದೇ ಕಂಪನಿಗಳ ಷೇರುಗಳಲ್ಲಿ ರಹಸ್ಯ ಹೂಡಿಕೆ ಮಾಡುವ ಮೂಲಕ ಅದಾನಿ ಸಮೂಹಕದ ಷೇರುಗಳ ಮೌಲ್ಯದಲ್ಲಿ ಭಾರೀ ಏರಿಕೆ ಕಾಣುವಂತೆ ಮಾಡಿದೆ ಎಂದು ತನಿಖಾ ಪತ್ರಕರ್ತರ ಸಂಘಟನೆಯಾದ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚರ ವರದಿ ಯೋಜನೆ (ಒಸಿಸಿಆರ್ ಪಿ) ಆರೋಪ ಮಾಡಿತ್ತು. ಇದೆಲ್ಲವೂ ಆಗಿದ್ದು 2013- 2018ರ ನಡುವೆ ಎಂದು ವರದಿ ಹೇಳಿದೆ. ಈ ವರದಿಯನ್ನು ಉಲ್ಲೇಖಿಸಿ ರಾಹುಲ್, ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಫೈನಾನ್ಷಿಯಲ್ ಟೈಮ್ಸ್‌ನ ವರದಿಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ವಿಶ್ವದ ಅತಿದೊಡ್ಡ ಹಣಕಾಸು ಪತ್ರಿಕೆಯ ಲೇಖನದಲ್ಲಿ ಬಿಲಿಯನೇರ್ ಗೌತಮ್ ಅದಾನಿ ಭಾರತದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಕಳುಹಿಸಿದ್ದು ಮತ್ತು ಷೇರುಗಳ ಬೆಲೆಗಳನ್ನು (ತನ್ನದೇ ಆದ ಸಂಸ್ಥೆಗಳ) ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.


“ಕರ್ನಾಟಕ, ಛತ್ತೀಸ್‌ಗಢ, ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ (ಕಾಂಗ್ರೆಸ್ ನೇತೃತ್ವದ) ಸರ್ಕಾರಗಳು ಅಥವಾ ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಮುಂಬರುವ ಸರ್ಕಾರಗಳು ಬಡವರ ಸರ್ಕಾರವಾಗಿರಲಿದೆ, ಅದಾನಿ ಸರ್ಕಾರವಲ್ಲ” ಎಂದು  ಛತ್ತೀಸ್‌ಗಢದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಹೇಳಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢ ಚುನಾವಣೆಗೆ ಮುನ್ನ, ಬಘೇಲ್ ಸರ್ಕಾರದ ವಿರುದ್ಧ ‘ಆರೋಪ ಪತ್ರ’ ಬಿಡುಗಡೆ ಮಾಡಿದ ಅಮಿತ್ ಶಾ

ಪಿಎಂ ಮೋದಿ ಅವರು ಅದಾನಿ ಗ್ರೂಪ್ ಬಗ್ಗೆ ತನಿಖೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ವಿಚಾರಣೆಯ ನಂತರ ನಷ್ಟವು ಅದಾನಿಗೆ ಮಾತ್ರ ಅಲ್ಲ, ಅದು ಬೇರೆಯರ ಮೇಲೂ ಪರಿಣಾಮ ಬೀರುತ್ತದೆ. ಪ್ರತಿ ಚುನಾವಣೆಗೂ ಮುನ್ನ ಬಿಜೆಪಿ ಹಲವಾರು ಅಂಕಿ-ಅಂಶಗಳನ್ನು ನೀಡುತ್ತದೆ, ಅವರು 230-250 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಆದರೆ ಕರ್ನಾಟಕದ ಪ್ರತಿಯೊಬ್ಬ ಬಡವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಬಗ್ಗೆ ಮಾತನಾಡುತ್ತಾ ಹೇಳಿದರು.

ಬಲಪಂಥೀಯರು ‘ಭಾರತದ ಆರ್ಥಿಕ ಬೆನ್ನೆಲುಬನ್ನು ಮುರಿಯುತ್ತಿದ್ದಾರೆ ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ. “ಜಿಎಸ್​​ಟಿ ಮತ್ತು ನೋಟು ಅಮಾನ್ಯೀಕರಣವು ಸಣ್ಣ ಉದ್ಯಮಿಗಳನ್ನು ನಾಶಮಾಡಿದೆ ಮತ್ತು ಅದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ