Exit Poll Results 2023 LIVE Streaming: ಪಂಚರಾಜ್ಯಗಳ ಮತಗಟ್ಟೆ ಸಮೀಕ್ಷೆ ಫಲಿತಾಂಶ ಏನು ಹೇಳುತ್ತದೆ?

|

Updated on: Nov 30, 2023 | 5:06 PM

Exit Poll Results 2023 LIVE Streaming Today: ತೆಲಂಗಾಣದಲ್ಲಿ ಇಂದು ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಇದಾಗಿ ಅರ್ಧ ಗಂಟೆಯ ನಂತರ ವಿವಿಧ ಸುದ್ದಿ ಮಾಧ್ಯಮ, ಸಂಸ್ಥೆಗಳು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಪ್ರಕಟಿಸಲಿವೆ.

Exit Poll Results 2023 LIVE Streaming: ಪಂಚರಾಜ್ಯಗಳ ಮತಗಟ್ಟೆ ಸಮೀಕ್ಷೆ ಫಲಿತಾಂಶ ಏನು ಹೇಳುತ್ತದೆ?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು ನವೆಂಬರ್ 30: ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ (Telangana), ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳಿಗೆ ಮತದಾನ ಮುಗಿದ್ದು, ಇಂದು (ನವೆಂಬರ್ 30) ಸಂಜೆ5.30ಕ್ಕೆ ಮಾಧ್ಯಮಗಳು ಮತ್ತು ಸಮೀಕ್ಷೆ ನಡೆಸಿದ ಸಂಸ್ಥೆಗಳು ತಮ್ಮ ಮತಗಟ್ಟೆ ಸಮೀಕ್ಷೆ (Exit Poll) ಫಲಿತಾಂಶವನ್ನು ಪ್ರಕಟಿಸಲಿವೆ. ಐದು ರಾಜ್ಯಗಳು ಚುನಾವಣಾ ಫಲಿತಾಂಶ (Election Reuslts) ಡಿಸೆಂಬರ್ 3 ರಂದು ಪ್ರಕಟವಾಗಲಿದೆ. ಇಂದು ಸಂಜೆ 5 ಗಂಟೆಗೆ ತೆಲಂಗಾಣದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡು ಅರ್ಧ ಗಂಟೆಯ ನಂತರ ಮತಗಟ್ಟೆ ಸಮೀಕ್ಷೆ ಹೊರಬರಲಿದೆ. ತೆಲಂಗಾಣ ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ನವೆಂಬರ್ 7 ಮತ್ತು ನವೆಂಬರ್ 30 ರ ನಡುವೆ ಮತದಾನ ನಡೆದಿದೆ. ಎಕ್ಸಿಟ್ ಪೋಲ್‌ಗಳು ಸಂಭವನೀಯ ಫಲಿತಾಂಶಗಳ ಸೂಚನೆಯನ್ನು ನೀಡುತ್ತವ. ಕೆಲವೊಮ್ಮೆ ಇದು ತಪ್ಪಾಗುವುದೂ ಉಂಟು.

ಟಿವಿ9 ಸುದ್ದಿವಾಹಿನಿಯಲ್ಲಿ ಎಕ್ಸಿಟ್ ಪೋಲ್ ಪ್ರಸಾರವಾಗಲಿದ್ದು, ವಾಹಿನಿಯಲ್ಲಿ ನೇರ ಪ್ರಸಾರವನ್ನು ನೋಡಬಹುದು.

ಪರಿಷ್ಕೃತ ಅಧಿಸೂಚನೆಯಲ್ಲಿ, ಗುರುವಾರ ಸಂಜೆ 5.30 ರ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ರಾಜಸ್ಥಾನದಲ್ಲಿ ಯಾರು? ಏನಂತಾರೆ ಗೆಹ್ಲೋಟ್?

ಈ 5 ರಾಜ್ಯಗಳಲ್ಲಿ ಬಿಜೆಪಿ ಎಲ್ಲಿಯೂ ಗೆಲ್ಲುತ್ತಿಲ್ಲ ಎಂದು ನಂಬಲು ಮೂರು ಕಾರಣಗಳಿವೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. “ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಜನರೊಂದಿಗೆ ಮಾತನಾಡಿದ ನಂತರ ನಾನು ಸಂಗ್ರಹಿಸಿದ್ದು ಇದನ್ನೇ. “ಬಿಜೆಪಿಯ ಮತದಾರರೂ ನಾವು ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಸೋಲಲು ಮೂರನೇ ಕಾರಣ ಇಲ್ಲಿ ಪ್ರಚಾರಕ್ಕೆ ಬಂದ ಬಿಜೆಪಿ ನಾಯಕರು ಬಳಸಿದ ಭಾಷೆ. ಪಿಎಂ ಮೋದಿ ಮತ್ತು ಇತರ ಎತ್ತರದ ಬಿಜೆಪಿ ನಾಯಕರು ಕೋಪ, ಬೆದರಿಕೆಯ ಭಾಷೆಯನ್ನು ಬಳಸಿದರು ಎಂದು ಗೆಹ್ಲೋಟ್ ಹೇಳಿದ್ದಾರೆ

2018 ರ ಎಕ್ಸಿಟ್ ಪೋಲ್​​ನಲ್ಲಿ ಏನು ಭವಿಷ್ಯ ನುಡಿದಿತ್ತು?

2018 ರಲ್ಲಿ, ಎಕ್ಸಿಟ್ ಪೋಲ್‌ಗಳು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಕಾಂಗ್ರೆಸ್ ವಿಜಯಿಯಾಗಿ ಹೊರಹೊಮ್ಮಿತು. ರಾಜಸ್ಥಾನದಲ್ಲಿ, ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದು ,ತೆಲಂಗಾಣದಲ್ಲಿ ಟಿಆರ್‌ಎಸ್ (ಈಗ ಬಿಆರ್‌ಎಸ್) ಗೆಲುವು ಸಾದಿಸುತ್ತದೆ ಎಂದು ಹೇಳಿದ್ದು ಸರಿಯಾಗಿತ್ತು. ಛತ್ತೀಸ್‌ಗಢದಲ್ಲಿ ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟವನ್ನು ಭವಿಷ್ಯ ನುಡಿದಿದ್ದವು. ಮಿಜೋರಾಂನಲ್ಲಿ ಕಾಂಗ್ರೆಸ್ ಮತ್ತು ಎಂಎನ್‌ಎಫ್ ನಡುವೆ ನಿಕಟ ಪೈಪೋಟಿ ನಡೆಯಲಿದೆ ಎಂದು ಭವಿಷ್ಯ ನುಡಿದಿತ್ತು.

ಇದನ್ನೂ ಓದಿ: Exit Poll Results 2023 LIVE: ಪಂಚ ರಾಜ್ಯ ಮತಗಟ್ಟೆ ಸಮೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ

ಛತ್ತೀಗಢದ ಮೇಲೆ ಎಲ್ಲರ ಕಣ್ಣು

90-ಕ್ಷೇತ್ರಗಳ ರಾಜ್ಯವಾದ ಛತ್ತೀಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17ರಂದು ಎರಡು ಹಂತಗಳಲ್ಲಿ ಚುನಾವಣೆಗಳನ್ನು ನಡೆದಿದೆ. ಮತಗಟ್ಟೆ ಸಮೀಕ್ಷೆಗಳು ಪ್ರಸ್ತುತ ಭೂಪೇಶ್ ಬಘೇಲ್ ಸರ್ಕಾರವು ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ ಎಂಬುಜದರ ಬಗ್ಗೆ ಭವಿಷ್ಯ ನುಡಿಯಲಿದೆ

ಮಧ್ಯಪ್ರದೇಶದಲ್ಲಿ ಯಾರು ಗೆಲ್ಲುತ್ತಾರೆ?

2018 ರಲ್ಲಿ, ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿತು ಆದರೆ ಬಂಡಾಯದಿಂದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿತು. 2020 ರಲ್ಲಿ ಬಿಜೆಪಿ ಸರ್ಕಾರ ರಚಿಸಿತು. 2023 ರ ಮಧ್ಯಪ್ರದೇಶ ಚುನಾವಣಾ ಎಕ್ಸಿಟ್ ಪೋಲ್ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Thu, 30 November 23