Exit Poll Results 2023 Highlights: ಪಂಚ ರಾಜ್ಯ ಮತಗಟ್ಟೆ ಸಮೀಕ್ಷೆ ಫಲಿತಾಂಶ: ಇಲ್ಲಿದೆ ಹೈಲೈಟ್ಸ್

Ganapathi Sharma
|

Updated on:Nov 30, 2023 | 8:43 PM

5 State election exit Poll Results 2023 Highlights: ತೆಲಂಗಾಣ ಸೇರಿದಂತೆ ದೇಶದ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಕೊನೆಗೊಂಡ ಬೆನ್ನಲ್ಲೇ ಎಕ್ಸಿಟ್ ಪೋಲ್‌ಗಳ (ಮತಗಟ್ಟೆ ಸಮೀಕ್ಷೆ) ಫಲಿತಾಂಶ ಪ್ರಕಟವಾಗಿವೆ. ಯಾವ ಪಕ್ಷಕ್ಕೆ ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳು ಸಿಗಲಿವೆ, ಅಲ್ಲಿ ಯಾರ ಸರ್ಕಾರ ರಚನೆಯಾಗಲಿದೆ ಎಂಬುದು ಎಕ್ಸಿಟ್ ಪೋಲ್ ನಲ್ಲಿ ಬಹುತೇಕ ಸ್ಪಷ್ಟವಾಗಲಿದೆ. ಆದರೆ, ಡಿಸೆಂಬರ್ 3 ರಂದು ಮತ ಎಣಿಕೆ ನಂತರ ಅಂತಿಮ ಫಲಿತಾಂಶ ಗೊತ್ತಾಗಲಿದೆ.

Exit Poll Results 2023 Highlights: ಪಂಚ ರಾಜ್ಯ ಮತಗಟ್ಟೆ ಸಮೀಕ್ಷೆ ಫಲಿತಾಂಶ: ಇಲ್ಲಿದೆ ಹೈಲೈಟ್ಸ್
ಪಂಚ ರಾಜ್ಯ ಮತಗಟ್ಟೆ ಸಮೀಕ್ಷೆ ಫಲಿತಾಂಶ ಲೈವ್​ ಅಪ್​ಡೇಟ್

ಮಧ್ಯಪ್ರದೇಶದಲ್ಲಿ (Madhya Pradesh) ಶಿವರಾಜ್ ಚೌಹಾಣ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆಯೇ ಅಥವಾ ಕಾಂಗ್ರೆಸ್ (C0ngress) ಪುನರಾಗಮನವಾಗಲಿದೆಯೇ? ಛತ್ತೀಸ್‌ಗಢ-ರಾಜಸ್ಥಾನದಲ್ಲಿ (Chattisgarh – Rajasthan) ಮತ್ತೆ ಸರ್ಕಾರ ರಚಿಸುವ ಮೂಲಕ ಕಾಂಗ್ರೆಸ್ ಇತಿಹಾಸವನ್ನು ಸೃಷ್ಟಿಸಬಹುದೇ ಅಥವಾ ಫಲಿತಾಂಶಗಳು ವಿಭಿನ್ನವಾಗಿರಬಹುದೇ? ತೆಲಂಗಾಣದಲ್ಲಿ ಈ ಬಾರಿ ರಾಜಕೀಯದಲ್ಲಿ ಏನಾದರೂ ಬದಲಾವಣೆಯಾಗಲಿದೆಯೇ? ಮಿಜೋರಾಂನಲ್ಲಿ ಯಾರಿಗೆ ಅಧಿಕಾರದ ಕಿರೀಟ? ಅದರ ಅಂದಾಜು ಚಿತ್ರಣ ಇನ್ನು ಸ್ವಲ್ಪ ಸಮಯದ ನಂತರ ಗೊತ್ತಾಗಲಿದೆ. ಸಂಜೆ 5.30ರ ನಂತರ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಬಯಸಿದೆ, ಆದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೊಂದು ಅವಧಿಯ ನಿರೀಕ್ಷೆಯಲ್ಲಿದೆ. ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ನೇತೃತ್ವದ ಪ್ರಸ್ತುತ ಭಾರತ್ ರಾಷ್ಟ್ರ ಸಮಿತಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಆಶಿಸುತ್ತಿವೆ. ಏತನ್ಮಧ್ಯೆ, ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಕಾಂಗ್ರೆಸ್ ಮತ್ತು ಜೋರಾಮ್ ಪೀಪಲ್ಸ್ ಮೂವ್ಮೆಂಟ್ ಎರಡರಿಂದಲೂ ಸವಾಲುಗಳನ್ನು ಎದುರಿಸುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳ ಎಕ್ಸಿಟ್ ಪೋಲ್‌ಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್​ಡೇಟ್ ಇಲ್ಲಿವೆ.

LIVE NEWS & UPDATES

The liveblog has ended.
  • 30 Nov 2023 08:42 PM (IST)

    Exit Poll Results 2023 LIVE: ಪಂಚರಾಜ್ಯಗಳಲ್ಲಿ ಮತದಾರರು ಮಣೆ ಹಾಕಿದ್ದು ಯಾರಿಗೆ?

    ಆಕ್ಸಿಸ್ ಇಂಡಿಯಾ ಟುಡೇ ಎಕ್ಸಿಟ್ ಪೋಲ್‌ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನಾಯಕತ್ವದಲ್ಲಿ ಕಾಂಗ್ರೆಸ್ ಬಿಜೆಪಿಯಿಂದ ಮುನ್ನಡೆ ಸಾಧಿಸಬಹುದು ಎಂದು ಭವಿಷ್ಯ ನುಡಿದಿದೆ. ಇತ್ತ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಗೆ ಆಘಾತ ನೀಡಬಹುದು, ಕೆಲವು ಸಮೀಕ್ಷೆಗಳು ಇಲ್ಲಿ ನಿಕಟ ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಿವೆ. ಎಕ್ಸಿಟ್​ಪೋಲ್​ ಪೂರ್ಣ ವಿವರಗಳಿಗೆ ಈ ಸುದ್ದಿ ಓದಿ: ಪಂಚರಾಜ್ಯಗಳಲ್ಲಿ ಮತದಾರರು ಮಣೆ ಹಾಕಿದ್ದು ಯಾರಿಗೆ? ಏನು ಹೇಳುತ್ತಿವೆ ಮತಗಟ್ಟೆ ಸಮೀಕ್ಷೆ?

  • 30 Nov 2023 07:51 PM (IST)

    Exit Poll Results 2023 LIVE: ಪೋಲ್‌ ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಹೇಳುವುದೇನು?

    ಪೋಲ್‌ ಸ್ಟ್ರಾಟ್ ಸಮೀಕ್ಷಾ ಸಂಸ್ಥೆಯ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಪೂರ್ಣ ವಿವರಗಳನ್ನು ಓದಲು ಈ ಬರಹ ಓದಿ: ಪಂಚರಾಜ್ಯಗಳ ಚುನಾವಣೆ: ಪೋಲ್‌ ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಏನು ಹೇಳುತ್ತಿದೆ?

  • 30 Nov 2023 06:53 PM (IST)

    Exit Poll Results 2023 LIVE: ಛತ್ತೀಸ್‌ಗಢದಲ್ಲಿ ಅತಂತ್ರ ಫಲಿತಾಂಶ

    ಛತ್ತೀಸ್‌ಗಢದಲ್ಲಿ ಸಿವೋಟರ್‌ ಸಮೀಕ್ಷೆಯಂತೆ ಅತಂತ್ರ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಗೆ 36-48, ಕಾಂಗ್ರೆಸ್‌ 41-53, ಇತರೆ 4 ಸ್ಥಾನ ಪಡೆದಿವೆ.

  • 30 Nov 2023 06:18 PM (IST)

    Exit Poll Results 2023 LIVE: ಛತ್ತೀಸ್‌ಗಢದಲ್ಲಿ ತೀವ್ರ ಪೈಪೋಟಿ

    ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಬಹುದು ಎಂದು ಎಕ್ಸಿಟ್​ ಪೋಲ್ ಸಮೀಕ್ಷೆಗಳು ಸುಳಿವು ನೀಡಿವೆ. ಎಕ್ಸಿಟ್ ಪೋಲ್ ಟ್ರೆಂಡ್‌ಗಳ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿ 35-45 ಮತ್ತು ಕಾಂಗ್ರೆಸ್ 40-50 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.

  • 30 Nov 2023 06:16 PM (IST)

    Exit Poll Results 2023 LIVE: ತೆಲಂಗಾಣ: ಕಾಂಗ್ರೆಸ್​ಗೇ ಜೈ ಎಂದ ಪೀಪಲ್ಸ್‌ ಪಲ್ಸ್‌ ಸಮೀಕ್ಷೆ

    ತೆಲಂಗಾಣದಲ್ಲಿ ಪೀಪಲ್ಸ್‌ ಪಲ್ಸ್‌ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಬಹುಮತ ದೊರೆಯಲಿದೆ. ಕಾಂಗ್ರೆಸ್‌ 62-72, ಬಿಆರ್‌ಎಸ್‌ 35-46, ಎಂಐಎಂ 6-7, ಬಿಜೆಪಿ 3-8 ಸ್ಥಾನ ಗಳಿಸಲಿವೆ. ಇದರೊಂದಿಗೆ ಮೂರು ಸಂಸ್ಥೆಗಳ ಸಮೀಕ್ಷೆಯಲ್ಲಿಯೂ ತೆಲಂಗಾಣದಲ್ಲಿ ಕಾಂಗ್ರೆಸ್​​ಗೇ ಬಹುಮತ ಎಂದಂತಾಗಿದೆ.

  • 30 Nov 2023 06:12 PM (IST)

    Exit Poll Results 2023 LIVE: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಬಹುಮತ

    ಸಿಎನ್‌ಎನ್‌ ಸಮೀಕ್ಷೆಯಂತೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆಯಲಿದೆ. ಬಿಜೆಪಿಗೆ ಗೆ 39 ಸ್ಥಾನ, ಕಾಂಗ್ರೆಸ್‌ 48 ಸ್ಥಾನ, ಇತರರಿಗೆ 3 ಸ್ಥಾನ ದೊರೆಯಲಿದೆ.

  • 30 Nov 2023 06:08 PM (IST)

    Exit Poll Results 2023 LIVE: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ: ಎಎನ್‌ಎಸ್‌ ಸರ್ವೆ

    ತೆಲಂಗಾಣದಲ್ಲಿ ಎಎನ್‌ಎಸ್‌ ಸರ್ವೆಯಂತೆ ಕಾಂಗ್ರೆಸ್‌ಗೆ ಬಹುಮತ ದೊರೆಯಲಿದೆ. ಕಾಂಗ್ರೆಸ್‌ 62-66, ಬಿಆರ್‌ಎಸ್‌ 43-47, ಎಂಐಎಂ 5-7, ಬಿಜೆಪಿ 2-5 ಸ್ಥಾನ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

  • 30 Nov 2023 06:03 PM (IST)

    Exit Poll Results 2023 LIVE: ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಬದಲಾಗಲಿದೆ ಸರ್ಕಾರ

    ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಲ್ಲಿಯವರೆಗಿನ ಎಕ್ಸಿಟ್ ಪೋಲ್ ಟ್ರೆಂಡ್‌ಗಳು ಪ್ರಕಟವಾಗಿವೆ. ಎರಡೂ ರಾಜ್ಯಗಳಲ್ಲಿ ಸರ್ಕಾರ ಬದಲಾವಣೆಯಾಗುವ ಸಾಧ್ಯತೆ ಇದೆ. ಶಿವರಾಜ್ ಸಿಂಗ್ ಸ್ಥಾನ ಕಳೆದುಕೊಳ್ಳಬಹುದು, ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎನ್ನಲಾಗಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಅಧಿಕಾರ ಕಳೆದುಕೊಳ್ಳಬಹುದು ಎಂದು ಎಕ್ಸಿಟ್​​ ಪೋಲ್​ಗಳು ಅಂದಾಜಿಸಿವೆ.

  • 30 Nov 2023 05:57 PM (IST)

    Exit Poll Results 2023 LIVE: ಛತ್ತೀಸ್‌ಗಢದಲ್ಲಿ ‘ಕೈ’ಗೆ ಮುನ್ನಡೆ ಎಂದ ಇಂಡಿಯಾ ಟುಡೆ-ಸಿಎನ್‌ಎಕ್ಸ್‌ ಸಮೀಕ್ಷೆ

    ಇಂಡಿಯಾ ಟುಡೆ-ಸಿಎನ್‌ಎಕ್ಸ್‌ ಸಮೀಕ್ಷೆ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿಗೆ 30-40, ಕಾಂಗ್ರೆಸ್‌ 46-56, ಇತರೆ 3-5 ಸ್ಥಾನ ಗಳಿಸಲಿವೆ.

  • 30 Nov 2023 05:53 PM (IST)

    Exit Poll Results 2023 LIVE: ರಾಜಸ್ಥಾನದಲ್ಲಿ ಬಿಜೆಪಿಗೆ ಬಹುಮತ

    ರಾಜಸ್ಥಾನದಲ್ಲಿ ಜನಕೀಬಾತ್‌ ಸಮೀಕ್ಷೆಯಂತೆ ಬಿಜೆಪಿಗೆ ಬಹುಮತ ದೊರೆಯಲಿದೆ. ಈ ಸಮೀಕ್ಷೆಯ ಪ್ರಕಾರ, ಬಿಜೆಪಿ 100-122, ಕಾಂಗ್ರೆಸ್‌ 62-85, ಇತರೆ 14-15 ಸ್ಥಾನ ಗಳಿಸಲಿವೆ.

  • 30 Nov 2023 05:51 PM (IST)

    Exit Poll Results 2023 LIVE: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ

    ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆಯಬಹುದೆಂದು ಜನಕೀಬಾತ್‌ ಸಮೀಕ್ಷೆ ಅಂದಾಜಿಸಿದೆ. ಇದರ ಪ್ರಕಾರ, ಕಾಂಗ್ರೆಸ್ 56, ಬಿಆರ್‌ಎಸ್‌ 48, ಎಂಐಎಂ 5 ಬಿಜೆಪಿ 10, ಇತರೆ 0 ಸ್ಥಾನ ಗಳಿಸಲಿವೆ.

  • 30 Nov 2023 05:50 PM (IST)

    Exit Poll Results 2023 LIVE: ಮಧ್ಯ ಪ್ರದೇಶ ಬಲಾಬಲ

    ಮಧ್ಯಪ್ರದೇಶದಲ್ಲಿ 230 ವಿಧಾನಸಭಾ ಸ್ಥಾನಗಳಿವೆ. ಇಲ್ಲಿ ಬಹುಮತಕ್ಕೆ ಬೇಕಿರುವ ಸ್ಥಾನ 116 ಆಗಿದೆ. ಅಂದರೆ, ಯಾವ ಪಕ್ಷವು 116 ಶಾಸಕರ ಬೆಂಬಲವನ್ನು ಪಡೆಯುತ್ತದೆಯೋ ಅದು ರಾಜ್ಯದಲ್ಲಿ ಸರ್ಕಾರ ರಚಿಸಲಿದೆ.

  • 30 Nov 2023 05:48 PM (IST)

    Exit Poll Results 2023 LIVE: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಾಧ್ಯತೆ

    ಇಂಡಿಯಾ ಟುಡೆ-ಆಕ್ಸಿಸ್‌ ಮೈಇಂಡಿಯಾ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಾಧ್ಯತೆ ಇದೆ. ಕಾಂಗ್ರೆಸ್‌ 40-50, ಬಿಜೆಪಿ 36-46, ಇತರೆ 1-5 ಸ್ಥಾನ ಸಿಗುವ ಸಾಧ್ಯತೆ ಇದೆ.

  • 30 Nov 2023 05:41 PM (IST)

    Exit Poll Results 2023 LIVE: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್​​ಗೆ ಮುನ್ನಡೆ

    ಎಕ್ಸಿಟ್ ಪೋಲ್‌ನ ಮೊದಲ ಟ್ರೆಂಡ್ ಹೊರಬಿದ್ದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಇಲ್ಲಿ ಕಾಂಗ್ರೆಸ್ 111-121 ಸ್ಥಾನಗಳನ್ನು ಪಡೆಯಬಹುದು. ಬಿಜೆಪಿ 106-116 ಸ್ಥಾನಗಳನ್ನು ಪಡೆಯಬಹುದು ಎಂದು ಪೋಲ್​​ಸ್ಟ್ರಾಟ್ ಎಕ್ಸಿಟ್​ಪೋಲ್ ಸಮೀಕ್ಷೆ ಫಲಿತಾಂಶ ತಿಳಿಸಿದೆ.

  • 30 Nov 2023 05:30 PM (IST)

    Exit Poll Results 2023 LIVE: ಮಧ್ಯ ಪ್ರದೇಶದಲ್ಲಿ ಕಳೆದ ಚುನಾವಣೆಯ ಬಲಾಬಲ ಹೀಗಿತ್ತು…

    ಮಧ್ಯಪ್ರದೇಶದಲ್ಲಿ ಒಟ್ಟು 230 ವಿಧಾನಸಭಾ ಸ್ಥಾನಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿಗೆ 109, ಕಾಂಗ್ರೆಸ್‌ಗೆ 114, ಬಿಎಸ್‌ಪಿಗೆ 2 ಮತ್ತು ಇತರರಿಗೆ 7 ಸ್ಥಾನಗಳು ಬಂದಿದ್ದವು.

  • 30 Nov 2023 05:28 PM (IST)

    Exit Poll Results 2023 LIVE: 5 ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯ

    5 ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದೆ. 5 ರಾಜ್ಯಗಳ ಮತಗಟ್ಟೆ ಸಮೀಕ್ಷೆ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ಮಿಜೋರಾಂ, ತೆಲಂಗಾಣ ರಾಜ್ಯದಲ್ಲಿ ಯಾವ ಪಕ್ಷಕ್ಕೆ ದಕ್ಕಲಿದೆ ಅಧಿಕಾರ ಎಂಬ ಕುತೂಹಲ ಈಗ ಜನರಲ್ಲಿ ಮನಮಾಡಿದೆ. ರಾಜಸ್ಥಾನದಲ್ಲಿ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್​ನ ಗ್ಯಾರಂಟಿ ಭೇದಿಸಿ ಅಧಿಕಾರ ಹಿಡಿಯುತ್ತಾ ಬಿಜೆಪಿ? ರಾಜಕೀಯ ಚತುರ ಸಿಎಂ ಗೆಹ್ಲೋಟ್​ಗೆ ಟಾಂಗ್ ಕೊಡುತ್ತಾ ಬಿಜೆಪಿ? ಕಳೆದ 30 ವರ್ಷಗಳಲ್ಲಿ ಒಂದೇ ಪಕ್ಷ 2ನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ. ಈ ಬಾರಿ ಹೊಸ‌ ನಾಯಕತ್ವದ ನಿರೀಕ್ಷೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಇವೆ. ವಸುಂದರಾ ರಾಜೇ ಹೊರತಾದ ನಾಯಕತ್ವಕ್ಕೆ ಬಿಜೆಪಿ ಒಲವು, ಹೈಕಮಾಂಡ್ ನಾಯಕರ ಜೊತೆಗಿನ ವಂಸುಧಾರ ಮುನಿಸು ಬಿಜೆಪಿಗೆ ಕೊಡುತ್ತಾ ಏಟು ಎಂಬ ಪ್ರಶ್ನೆಯೂ ವ್ಯಕ್ತವಾಗಿದೆ. ಅಶೋಕ್ ಗೆಹ್ಲೋಟ್, ಸಚಿನ್ ಪೈಲೆಟ್ ಒಳಬೇಗುದಿ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕುತ್ತಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ರಾಜಸ್ಥಾನದ ಜನಭಿಪ್ರಾಯ ಯಾರ ಕಡೆಗೆ ಎಂಬುದು ಕುತೂಹಲ ಮೂಡಿದೆ.

  • 30 Nov 2023 05:14 PM (IST)

    Exit Poll Results 2023 LIVE: ಯಾರಿಗೆ ಒಲಿಯಲಿದೆ ಮಿಜೋರಾಂ ರಾಜ್ಯದ ಗದ್ದುಗೆ?

    ಚಿಕ್ಕ ರಾಜ್ಯವಾಗಿರುವ ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೆ ಮೇಲುಗೈ. ಮಣಿಪುರ ಜನಾಂಗೀಯ ಸಂಘರ್ಷದ ನೇರ ಪರಿಣಾಮ ಹೊಂದಿರುವ ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್, ಕಾಂಗ್ರೆಸ್‌, ಜೋರಾಮ್ ಪೀಪಲ್ಸ್ ಮೂವ್ಮೆಂಟ್ ಹಾಗೂ ಬಿಜೆಪಿ ನಡುವೆ ಫೈಟ್ ಇದೆ. ಆಮ್‌ ಆದಿ ಪಕ್ಷದಿಂದಲೂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳು ನೆಪಮಾತ್ರಕ್ಕೆ ಫೈಟ್ ನೀಡಲಿದ್ದು, ಪ್ರಾದೇಶಿಕ ಪಕ್ಷಗಳದೇ ಅಸಲಿ ಹೋರಾಟ ಇರಲಿದೆ. ಮಿಜೋ ನ್ಯಾಷನಲ್ ಫ್ರಂಟ್, ಜೋರಾಮ್ ಪೀಪಲ್ಸ್ ಮೂವ್ಮೆಂಟ್ ನಡುವೆ ನೇರ ಪೈಪೋಟಿ ಇದೆ. ಈ ರಾಜ್ಯದಲ್ಲಿ ಸ್ಥಳೀಯ ವಿಷಯ ಮುಂದಿಟ್ಟು MNF ಅಧಿಕಾರಕ್ಕೆ ಬಂದಿತ್ತು. ಇಲ್ಲಿನ ಜನರು ಸಹ ಪ್ರಾದೇಶಿಕ ಪಕ್ಷಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕಳೆದ ಬಾರಿ 26 ಸ್ಥಾನ MNF ಗೆದ್ದಿದ್ದು, 8 ಸ್ಥಾನಗಳನ್ನು ZPM ಗೆದ್ದಿತ್ತು. ಕಾಂಗ್ರೆಸ್ 5, ಬಿಜೆಪಿ 1 ಸ್ಥಾನವನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದ್ದವು. ಈ ಬಾರಿಯೂ ಸ್ಥಳೀಯ ವಿಷಯಗಳ ಮೇಲೆಯೇ ಪ್ರಾದೇಶಿಕ ಪಕ್ಷಗಳ ನಡುವೆ ಹೋರಾಟ ನಡೆದಿದೆ.

  • 30 Nov 2023 05:04 PM (IST)

    Exit Poll Results 2023 LIVE: ಕೆಲವೇ ನಿಮಿಷಗಳಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ

    ಐದು ರಾಜ್ಯಗಳಲ್ಲಿ ಈ ಬಾರಿ ಯಾರು ಅಧಿಕಾರ ಹಿಡಿಯಲಿದ್ದಾರೆ? ಕೆಲವೇ ನಿಮಿಷಗಳಲ್ಲಿ ಹೊರಬೀಳಲಿರುವ ಎಕ್ಸಿಟ್ ಪೋಲ್ ಫಲಿತಾಂಶಗಳಿಂದ ಇದರ ಸುಳಿವು ಲಭ್ಯವಾಗಲಿವೆ.

  • 30 Nov 2023 05:03 PM (IST)

    Exit Poll Results 2023 LIVE: ತೆಲಂಗಾಣದಲ್ಲಿ ಶೇ 51.89 ರಷ್ಟು ಮತದಾನ

    ಮಧ್ಯಾಹ್ನ 3 ಗಂಟೆಯವರೆಗೆ ತೆಲಂಗಾಣದಲ್ಲಿ ಶೇ.51.89 ರಷ್ಟು ಮತದಾನವಾಗಿದೆ. ತೆಲಂಗಾಣದಲ್ಲಿ ಮತದಾನ ಮುಗಿದ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತಿದೆ.

  • 30 Nov 2023 04:34 PM (IST)

    Exit Poll Results 2023 LIVE: ಮತಗಟ್ಟೆ ಸಮೀಕ್ಷೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯ

    ಪ್ರಮುಖ ಏಜೆನ್ಸಿಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕ್ಷಣಕ್ಷಣದ ಮಾಹಿತಿ ಲಭ್ಯವಾಗಲಿದೆ.

  • 30 Nov 2023 04:27 PM (IST)

    Exit Poll Results 2023 LIVE: ತೆಲಂಗಾಣದಲ್ಲಿ ಮತದಾನದ ನಂತರ ಎಕ್ಸಿಟ್ ಪೋಲ್

    ತೆಲಂಗಾಣದಲ್ಲಿ ಮತದಾನ ಮುಂದುವರಿದಿದೆ. ಇಲ್ಲಿ 119 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಮುಗಿದ ಬಳಿಕ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ.

  • 30 Nov 2023 04:25 PM (IST)

    Exit Poll Results 2023 LIVE: ಕೆಲವೇ ಕ್ಷಣಗಳಲ್ಲಿ ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ

    ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ ಬರಲು ಕೇವಲ ಕೆಲವೇ ಕ್ಷಣಗಳು ಬಾಕಿ ಇವೆ. ತೆಲಂಗಾಣದಲ್ಲಿ ಸಂಜೆ 5 ಗಂಟೆಗೆ ಚುನಾವಣೆ ಮುಗಿದ ನಂತರ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಹೊರಬೀಳಲಿದೆ. ಯಾವ ಪಕ್ಷಕ್ಕೆ ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳು ಸಿಗಲಿವೆ, ಅಲ್ಲಿ ಯಾರ ಸರ್ಕಾರ ರಚನೆಯಾಗಲಿದೆ ಎಂಬುದು ಎಕ್ಸಿಟ್ ಪೋಲ್ ನಲ್ಲಿ ಬಹುತೇಕ ಸ್ಪಷ್ಟವಾಗಲಿದೆ. ಆದರೆ, ಡಿಸೆಂಬರ್ 3 ರಂದು ಮತ ಎಣಿಕೆ ನಂತರ ಅಂತಿಮ ಫಲಿತಾಂಶ ಬರಲಿದೆ.

  • Published On - Nov 30,2023 4:24 PM

    Follow us